ಬೆಳಗಾವಿ: ಜಿಲ್ಲಾ ವಿಭಜನೆಗೆ ನಾವು ಬದ್ದ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲಾ ವಿಭಜನೆ ಆಗಲೇಬೇಕು ಅದರಲ್ಲಿ ಪ್ರಶ್ನೆ ಇಲ್ಲಾ. ನಾವು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ, ಒತ್ತಡ ಮಾಡುತ್ತೇವೆ. ಬಹಳದ ದೊಡ್ಡ ಜಿಲ್ಲೆ ಇದು, ಆಡಳಿತ ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದ್ರೂ, ಚಿಕ್ಕೋಡಿ ಆದ್ರೂ ಮೂರು ಜಿಲ್ಲೆಯಾದ್ರೂ ನಂದು ಎಂಟ್ರಿ ಇದೆ. ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದ್ರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.
Author: Prajatv Kannada
ಬಾಲಿವುಡ್ ನಟ ಅರ್ಜುನ್ ಕಪೂರ್ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರವಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ. ತನಗಿಂತ ಹಿರಿಯ ನಟಿಯೊಂದಿಗೆ ಓಡಾಡುತ್ತಿರುವ ಅರ್ಜುನ್ ಕಪೂರ್ ಸದಾ ಟ್ರೋಲ್ ಆಗುತ್ತಿದ್ದಾರೆ. ತಮ್ಮ ಬ್ಯೂಟಿಯಿಂದಲೇ ಸಖತ್ ಸದ್ದು ಮಾಡುತ್ತಿರುವ ನಟಿ ಮಲೈಕಾ ಅರೋರ ಸದ್ಯ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ರ ಖಾಸಗಿ ಫೋಟೋ ಶೇರ್ ಮಾಡಿದ್ದು ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ. ಇದೀಗ ‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು…
ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾ ಸೆಟ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಭಾನುವಾರ ತಡರಾತ್ರಿ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಶೂಟಿಂಗ್ ಗಾಗಿ ಹಾಕಿದ್ದ 6 ಕೋಟಿ ರೂಪಾಯಿಯ ಸೆಟ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸೆಟ್ ಸಂಪೂರ್ಣವಾಗಿ ಸೆಟ್ ಸುಟ್ಟು ಭಸ್ಮವಾಗಿದ್ದು ಘಟನೆ ತಡರಾತ್ರಿ ನಡೆದ ಕಾರಣದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದ ಎಚ್ಚೆತ್ತ ಮಂದಿ ತಕ್ಷಣವೇ ಬೆಂಕಿ ನಂದಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಸೆಟ್ ಹಾಗೂ ಶೂಟಿಂಗ್ ಗಾಗಿ ಬಳಸುತ್ತಿದ್ದ ಪರಿಕರಗಳು ಕೂಡ ಬೆಂಕಿಗೆ ಆಹುತಿಯಾಗಿವೆ ಎಂದು ಚಿತ್ರತಂಡ ತಿಳಿಸಿದೆ. ಹರಿಹರ ವೀರ ಮಲ್ಲು ಸಿನಿಮಾಗಾಗಿ ತೆಲಂಗಾಣದ ದುಂಡಿಗಲ್ ನ ಬೀರಂಪೇಟೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿತ್ತು. ಸಿನಿಮಾದ ಬಹುತೇಕ ಶೂಟಿಂಗ್ ಇದೇ ಸೆಟ್ ನಲ್ಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಶೇಕಡಾ 75ರಷ್ಟು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಿದ್ದು, ಬಾಕಿ ಉಳಿದ ಚಿತ್ರೀಕರಣಕ್ಕಾಗಿ ಮತ್ತೆ ಸೆಟ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.…
ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭವಾಗಿದೆ ಎಂದು ಮಾಜಿ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾ ಇದ್ದಂತೆ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ. ಈಗ ಮತ್ತೆ ಚಿಕ್ಕಮಗಳೂರು ಭಾಗದಲ್ಲಿ ಇನ್ನು ಕೆಲವೆಡೆ ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಛತ್ತಿಸಘಡದಲ್ಲಿ ಚಟುವಟಿಕೆ ಆದಂತೆ ಇಲ್ಲಿ ಹಾಗೆ ಆಗಬಹುದು. ಈಗ ಅವರು ಹೊರ ಬಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡು ಇದ್ರು. ಅವರಿಗೆ ಬುಲೆಟ್ ಮೇಲೆ ನಂಬಿಕೆ ಬ್ಯಾಲೆಟ್ ಮೇಲೆ ಅಲ್ಲ. ಈಗ ಪಠ್ಯ ಬದಲಾವಣೆ ಮಾಡಿ ಎಂದು ಮುಂದೆ ಬಂದಿದ್ದಾರೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅನುಭವದ ಆಧಾರದ ಮೇಲೆ ಆಡಳಿತ ಮಾಡ್ತಾರೆ ಎಂದು ನಂಬಿದ್ದೇವೆ. 2018 ರಲ್ಲಿ ಮಾಡಿದಂತೆ ಮಾಡಿದ್ರೆ, 2024 ರಿಸಲ್ಟ್ ಉತ್ತರ ನೀಡತ್ತೆ. ಮಿದುಳನ್ನೇ…
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಇಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಅಕ್ಕಿ ಉಚಿತ ವಿತರಣೆ ಮಾಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಸಭೆಯನ್ನು ನಾಳೆ ವಿಧಾನಸೌಧದಲ್ಲಿ ಕರೆದಿದ್ದಾರೆ. ಸಚಿವರ ಸಭೆಗೆ ಹಾಜರಾಗುವ ಮುನ್ನ ಪೂರ್ವಸಿದ್ಧತೆ ಎಂಬಂತೆ ಸಚಿವ ಮುನಿಯಪ್ಪ ಅವರು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಪಡಿತರ ವ್ಯವಸ್ಥೆ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ.ಅಕ್ಕಿ ನೀಡುವುದರಿಂದ ಸರ್ಕಾರಕ್ಕೆ ಆಗುವ ಹೆಚ್ಚುವರಿ ಹೊರೆ, ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದು ಅಕಾರಿಗಳಿಗೆ ಸಲಹೆ- ಸೂಚನೆಯನ್ನು ಸಚಿವರು ನೀಡಿದರು. ಸಭೆಯಲ್ಲಿದ್ದ ಅಧಿಕಾರಿಗಳು ಸಚಿವರಿಗೆ ಅಂಕಿ ಅಂಶಗಳ…
ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಬಹುದೊಡ್ಡ ಹೊಡೆತವನ್ನು ಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ನಿಟ್ಟಿನಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡಿರುವ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿದೆ. ಆದರೆ ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರಾಭವಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಈಗ ಮಾಜಿ ಸಿಎಂ ಮುಂದಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ನಿಜಕ್ಕೂ ಹೈ ವೋಲ್ಟೇಜ್ ಕಣವಾಗಿ ಪರಿಣಮಿಸಿತ್ತು. ಶಿಷ್ಯನ ವಿರುದ್ಧವೇ ಗುರುವಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲನ್ನು ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹುಬ್ಬಳ್ಳಿಯ ರಾಯ್ಕರ್ ಗೇಸ್ಟ್ ಹೌಸ್ ನಲ್ಲಿ ಕಾರ್ಯಕ್ರಮ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸೋಲಿನ ಕಾರಣವನ್ನು ಪರಾಮರ್ಶೆ ಮಾಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯವನ್ನು ಮಾಡಲಾಯಿತು. ಇನ್ನೂ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿರಿಯ ನಾಯಕರಾದ ಪ್ರಫುಲ್ ಚಂದ್ರ…
ಬೆಂಗಳೂರು: ನಮ್ಮ ಸರ್ಕಾರದ ಅವಧಿಯ ಯಾವುದೇ ರೀತಿ ತನಿಖೆಗೆ ನಾವು ಸಿದ್ಧ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಮಾಡಬಹುದು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ ಸಿಐಡಿ ತನಿಖೆಗೆ ನಾನೇ ಹಿಂದೆ ದೂರು ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಎಫ್‌ಐಆರ್ ಆಗಿರಲಿಲ್ಲ. ಹೊಸ ಸರ್ಕಾರ ಬಂದಿದೆ, ಯಾವುದೇ ರೀತಿ ತನಿಖೆ ನಡೆಸಲಿ, ಎದುರಿಸಲು ನಾವು ಸಿದ್ಧ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು, ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದರು. ಇನ್ನೂ ಎನ್.ಇ.ಪಿ ರದ್ದು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಈಗ ಮಕ್ಕಳು ಅಧ್ಯಯನ ಶುರು ಮಾಡಿದ್ದಾರೆ. ಎನ್.ಇ.ಪಿ ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಎಲ್ಲ…
ಆನೇಕಲ್ : ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೂರ್ಯ ನಗರ ಪೊಲೀಸ್ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಮರ್ ಬಂಧಿತ ಆರೋಪಿ. ಇದೇ ತಿಂಗಳು 23 ನೇ ತಾರೀಕು ನಂದು ಚಂದಾಪುರದ ಜಿಪಿಆರ್ ಲೇಔಟ್ ನಲ್ಲಿ ಅಮರ್ ತನ್ನ ಎರಡನೇ ಪತ್ನಿಯಾದ ನಿಷಾಳನ ಮೊದಲ ಪತ್ನಿ,ತನ್ನ ಇಬ್ಬರು ಮಕ್ಕಳ ಮುಂದೆಯೇ ಕುತ್ತಿಗಗೆ ವೈರ್ನಿಂದ ಸುತ್ತಿ ಕೊಲೆ ಮಾಡಿ ಬಳಿಕ ಮಕ್ಕಳನ್ನು ಅತ್ತೆ ಮನೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದ ಇನ್ನೂ ಈ ಬಗ್ಗೆ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಟ್ಟಿದ್ದಾರೆ ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಬೆಂಗಳೂರು: ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತಿದೆ, ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ. ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಮೇಷ ಎಂದರೆ ಜನ ಒಪ್ಪುವರೇ? ಎಂದು ಹೇಳಿದ್ದಾರೆ. ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಅವರ ಅಕ್ಕಪಕ್ಕದವರ ಹೇಳಿಕೆಗಳನ್ನು ಜನರು ನಂಬುತ್ತಿಲ್ಲ. ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ ಎಂದು ಟೀಕಿಸಿದ್ದಾರೆ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೊಟ್ಟ ‘ಗ್ಯಾರಂಟಿ ಜಾಹೀರಾತು’ಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ. ಅದೇ ರೀತಿ, ಸ್ವತಃ ಮುಖ್ಯಮಂತ್ರಿಗಳೇ ಜೂನ್ 1ಕ್ಕೆ ಜಾರಿ…
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಗರದಲ್ಲಿಂದು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಮನೆಯೊಂದರಲ್ಲಿ ಅತ್ತೆ ಮತ್ತು ಸೊಸೆ ಜೊತೆಯಾಗಿ ಜೀವನ ನಡೆಸುತ್ತಿದ್ದರೆ, ಆ ಮನೆಯ ಯಜಮಾನಿ ಯಾರಾಗುತ್ತಾರೆ ಮತ್ತು ಗೃಹಲಕ್ಷ್ಮಿ ಯೋಜನೆಯಡಿ (Grihalakshmi scheme) ಯಾರಿಗೆ ರೂ. 2,000 ನೀಡಲಾಗುವುದು ಎಂದು ಕೇಳಿದ ಪ್ರಶ್ನೆಗೆ ಸಚಿವರಿಬ್ಬರೂ ಅತ್ತೆಯೇ ಮನೆ ಯಜಮಾನಿ ಅನಿಸಿಕೊಳ್ಳುತ್ತಾಳೆ ಮತ್ತು ಹಣ ಆಕೆಯ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು. ಒಂದು ಪಕ್ಷ ಅತ್ತೆ ಸ್ವಯಂಪ್ರೇರಿತಳಾಗಿ ಹಣ ಸೊಸೆಗೆ ನೀಡಿ ಅಂತ ಹೇಳಿದರೆ, ಆಕೆಯಿಂದ ಸಹಿ ಪಡೆದು ಸೊಸೆಗೆ ನೀಡಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.