ಚಿಕ್ಕಬಳ್ಳಾಪುರ: ಹೆಂಡತಿಯ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಚಿಂತಾಮಣಿ ತಾಲೂಕು ಮುರಗಮಲ್ಲದ ಎಂ.ಗೊಲ್ಲಪಲ್ಲಿ ಗ್ರಾ.ಪಂ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ವಿನೋದಮ್ಮ ಮೃತ ಮಹಿಳೆ. ಈಕೆ ಪತಿ ಕೆಎಸ್ ಸುರೇಶ್ ಕೊಲೆ ಆರೋಪಿಯಾಗಿದ್ದಾನೆ. ಚಿಂತಾಮಣಿ ತಾಲೂಕು ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಕುರುಬ ಜನಾಂಗಕ್ಕೆ ಸೇರಿದ ಕೆ.ಎಸ್ ಸುರೇಶ್, ಆದೇ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ವಿನೋದಮ್ಮ ಎಂಬ ಮಹಿಳೆಯನ್ನು ಕಳೆದ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ 14 ವರ್ಷದ ಹೆಣ್ಣು ಮಗಳು ಕೂಡ ಇದ್ದಾಳೆ. ಹತ್ತು ವರ್ಷಗಳಿಂದ ಸುಖವಾಗಿದ್ದ ಇವರು. ಇತ್ತೀಚೆಗೆ ಸುರೇಶ್ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಿಡಿಸುತ್ತಿದ್ದನು ಎಂಬ ಆರೋಪನ್ನು ವಿನೋದಮ್ಮಳ ಪೋಷಕರಿಂದ ಕೇಳಿ ಬರುತ್ತಿದೆ. ಹೆಂಡತಿ ಬೇರೆಯವರೊಂದಿಗೆ ಆಕ್ರಮ ಸಂಬಂಧ ಹೊಂದಿದ್ದಳು ಎಂಬ ಅನುಮಾನದ ಮೇಲೆ ವಿನೋದಮ್ಮಳನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸುರೇಶ್ ಮಾಹಿತಿ…
Author: Prajatv Kannada
ಮೈಸೂರು: ಹಾವುಗಳು ಅಲ್ಲಿ…ಇಲ್ಲಿ ಅವಿತುಕೊಳ್ಳೋದನ್ನ ನೋಡಿದ್ದೀವಿ..ಹೆಲ್ಮೆಟ್ ಧರಿಸಿದ್ದನ್ನು ಎಲ್ಲಾದರೂ ನೋಡಿದ್ಷೀರಾ…ಹೌದು ಸಾಂಸ್ಕೃತಿಕ ನಗರಿಯಲ್ಲಿ ನಾಗಪ್ಪ ಹೆಲ್ಮೆಟ್ ಧರಿಸಿ ಬೈಕ್ ಓಡಿಸೋಕೆ ತಯಾರಿ ಮಾಡಿದ್ದ…ಅಷ್ಟರಲ್ಲಿ ಉರಗಮಿತ್ರ ಸ್ನೇಕ್ ಶ್ಯಾಮ್ ನಾಗಪ್ಪನನ್ನ ಜೋಪಾನವಾಗಿ ಹೆಲ್ಮೆಟ್ ನಿಂದ ಮುಕ್ತಿಗೊಳಿಸಿದರು. ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕಚೇರಿ ಮುಂದೆ ಬೈಕ್ ನಿಲ್ಲಿಸಿ, ಬೈಕ್ ನಲ್ಲೆ ಹೆಲ್ಮೆಟ್ ಗ್ಲಾಸ್ ನ್ನು ಅರ್ಧದಷ್ಟು ಓಪೆನ್ ಮಾಡಿ ಇಟ್ಟಿದ್ದರು. Video Player 00:00 02:10 ಅದು ಎಲ್ಲಿತ್ರೋ ನಾಗರಹಾವು ಓಡಿ ಬಂದು ಹೆಲ್ಮೆಟ್ ಒಳಗೆ ಸೇರಿಕೊಳ್ಳಬೇಕೆ..ಇನ್ನು ಹೆಲ್ಮೆಟ್ ಒಳಗಿಂದಲೇ ಜನರ ನೋಡಿ ಹೆಡೆ ಬಿಚ್ಚಿದ್ದ ನಾಗಪ್ಲನನ್ನು ನೋಡಿ ಬೈಕ್ ಸವಾರ ದಂಗಾಗಿ ಹೋದ. ತಕ್ಷಣ ಸ್ನೇಕ್ ಶ್ಯಾಮ್ ಕರೆ ಮಾಡಿದ್ದರು. ತಕ್ಚಣವೇ ಬಂದ ಸ್ನೇಕ್ ಶ್ಯಾಮ್ ನಾಗಪ್ಪನ ಅವತಾರ ನೋಡಿ ಆಶ್ಚರ್ಯ ಗೊಂಡರು. ಹೆಲ್ಮೆಟ್ ಗಳನ್ನು ಓಪೆನ್ ಮಾಡಿ ಇಡಬೇಡಿ. ಹಾಗೆ ಇಟ್ಟರೆ ಇಂತಹ ಅಚಾತೂರ್ಯಗಳಾಗುತ್ತೆ ಅಂತಾ ಬುದ್ದಿವಾದ ಹೇಳಿ, ನಾಗರಹಾವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಸ್ಥಳದಲ್ಲಿದ್ದವರನ್ನು ನಿರಾಳ ಮಾಡಿದರು.
ಮಡಿಕೇರಿ: ರಾಜ್ಯದ ಜನ ಕಾಂಗ್ರೆಸ್ ನಾಯಕರ ಮುಖ ನೋಡಿ ಮತ ಹಾಕಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನೋಡಿ ಮತಹಾಕಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ(Pratap Simha) ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಜನರಿಗೆ ನೀಡಿದ ಗ್ಯಾರಂಟಿ ಭರವಸೆ ಈಡೇರಿಸಲಿ. ಗ್ಯಾರಂಟಿ ಘೋಷಿಸುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ಗ್ಯಾರಂಟಿ ಜಾರಿ ಸಂದರ್ಭದಲ್ಲೂ ಯಾವುದೇ ಷರತ್ತು ವಿಧಿಸಬಾರದು ಎಂದು ಆಗ್ರಹಿಸಿದ್ದಾರೆ. ಗ್ಯಾರಂಟಿ ಜಾರಿಗೆ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ, ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ. ನಾಲ್ಕು ನಿಗಮಗಳ ವ್ಯವಸ್ಥಾಪಕ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಘೋಷಣೆ ಮಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ದಾರರು ಎಂದು ಹೇಳಿಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.
ದಾವಣಗೆರೆ: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಅವರು, ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ (MP Renukachary) ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸುವಂತೆ ಅಭಿಯಾನ ಆರಂಭಿಸಿದ್ದೇನೆ. ಜೂನ್ 1ರಿಂದ ಯಾರೂ 200 ಯೂನಿಟ್ ವರೆಗಿನ ವಿದ್ಯುತ್ ಬಿಲ್ ಕಟ್ಟಬೇಡಿ. ಒಂದು ವೇಳೆ ಏನಾದರೂ ಹಣ ಕೇಳಿದರೆ ನನಗೆ ಫೋನ್ ಮಾಡಿ ಎಂದು ಹೇಳಿದ್ದಾರೆ. ಜತೆಗೆ, ಮನೆ ಮನೆಗೆ ತೆರಳಿ ಗ್ಯಾರಂಟಿ ಅಭಿಯಾನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಪಾರವಾದ ಗೌರವ ಇದೆ. ಆದರೆ ಸಿಎಂ, ಡಿಸಿಎಂ ಗ್ಯಾರಂಟಿ ಕಾರ್ಡ್ ಮೇಲೆ ಸಹಿಮಾಡಿದ್ದಾರೆ. ಅದ್ದರಿಂದ ಯಾವುದೇ ಕಂಡೀಷನ್ ಇಲ್ಲದೆ ಯೋಜನೆ ಜಾರಿಗೊಳಿಸಬೇಕು. ಜೂನ್ 1ರೊಳಗೆ ಜಾರಿಗೊಳಿಸದಿದ್ದರೆ ಮತ್ತೆ ಅಭಿಯಾನ ಆರಂಭಿಸುತ್ತೇವೆ ಎಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿ: ಸಂಬಂಧಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿರುವ Rape) ಘಟನೆ ಬೆಳಗಾವಿಯ(Belagavi) ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಮೇಶ ವಿಠ್ಠಲ್ ಕೋಳಿ(22) ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುರುಳ. ಜಾತ್ರೆಗೆಂದು ತಮ್ಮ ಸಂಬಂಧಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ, ನಿನ್ನೆ (ಮೇ 29) ರಾತ್ರಿ ಮನೆಯ ಹೊರಗಡೆ ಮಲಗಿದ್ದಾಗ ರಮೇಶ ವಿಠ್ಠಲ್ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ಬಾಲಕಿ ಪೋಷಕರ ಮುಂದೆ ವಿವರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಖಡಕಲಾಟ ಪೊಲೀಸ್ ಠಾಣೆಯಲ್ಲಿ (ಪೋಸ್ಕೋ ಅಡಿಯಲ್ಲಿ) ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರು ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇದೊಂದು ಫೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಸಂತ್ರಸ್ತೆ ಬಾಲಕಿಯ ಹೆಸರು ಹಾಗೂ ವಿವರ ಬಹಿರಂಗಪಡಿಸುವಂತಿಲ್ಲ. ಹೀಗಾಗಿ ಈ ಸುದ್ದಿಯಲ್ಲಿ ನಾವು ಸಹ ಬಾಲಕಿ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ.
ಮಂಗಳೂರು: ತ್ರಿವಳಿ ತಲಾಖ್(Triple Talaq) ನಿಷೇಧಿಸಲ್ಪಟ್ಟಿದ್ದರೂ. ಇದೀಗ ಮತ್ತೆ ಮಂಗಳೂರಿ(Mangalore)ನಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹೌದು ಮದುವೆಯಾದ ಆರೇ ತಿಂಗಳಲ್ಲಿ ಪತ್ನಿಗೆ ಮಾರಣಾಂತಕ ಹಲ್ಲೆ ನಡೆಸಿ ತಲಾಖ್ ನೀಡಿ ಮನೆಯಿಂದ ಹೊರದಬ್ಬಿದ್ದಾನೆ. ಹಲ್ಲೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಮಹಿಳೆ ಶಬಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ತಿಂಗಳ ಹಿಂದೆ ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ ಶಬಾನಾ ಎಂಬವರನ್ನು ಮದುವೆಯಾಗಿದ್ದ. ಇದೀಗ ಆಕೆಯ ಮೇಲೆ ಹಲ್ಲೆ ನಡೆಸಿ ತಲಾಖ್ ಕೊಟ್ಟು, ಮನೆಯಿಂದ ಹೊರದಬ್ಬಿದ್ದಾನೆ. ತ್ರಿವಳಿ ತಲಾಖ್ ನಿಷೇಧವಾದರೂ ಮಂಗಳೂರಿನಲ್ಲಿ ಬೆಳಕಿಗೆ ಇನ್ನು ತಲಾಖ್ ನೀಡಿದ ಗಂಡ ಮಹಮ್ಮದ್ ಹುಸೇನ್ ಹಣ್ಣು ತರಕಾರಿ ವ್ಯಾಪಾರಿಯಾಗಿದ್ದಾನೆ. ತ್ರಿವಳಿ ತಲಾಖ್ ನಿಷೇಧವಾದರೂ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದೀಗ ಗಂಡನ ಅನ್ಯಾಯಕ್ಕೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೌದು ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇನ್ನು ಪತಿರಾಯ ಶಬಾನಾ ಎಂಬುವವರನ್ನು ಎರಡನೇ ಮದುವೆಯಾಗಿದ್ದ. ಮೊದಲ ಮದುವೆಯಿಂದ 2 ಮಕ್ಕಳನ್ನು ಹೊಂದಿದ್ದ ಹುಸೇನ್ ಆಕೆಯಿಂದ ಹಣ ಪೀಕಿಸಿ ಬಳಿಕ ತಲಾಖ್ ನೀಡಿದ್ದ. ನಂತರ…
ಮೈಸೂರು: ಜಿಲ್ಲೆಯ 32 ಸರ್ಕಾರಿ ಶಾಲೆಗಳು ಶೇಕಡಾ ನೂರಕ್ಕೆ ನೂರರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ ಪಡೆದಿರುವುದು ಸರ್ಕಾರಿ ಶಾಲೆಗಳ ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು ಹಾಗೂ ಅತಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 32 ಸರ್ಕಾರಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಬಂದಿದೆ. ಅತಿ ಹೆಚ್ಚು ಅಂಕ ಗಳಿಸಿದ 10 ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಪೋಷಕರಿಗೆ ಉತ್ತಮ ಹೆಸರು ತನ್ನಿ ಎಂದರು. ಶೇ.100 ರಷ್ಟು ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರು ಉತ್ತಮ ಪ್ರಯತ್ನ ಹಾಕಿ ಫಲಿತಾಂಶ ಬಂದಿದೆ. ಮುಂದಿನ ವರ್ಷಗಳಲ್ಲಿಯೂ ಉತ್ತಮ ಫಲಿತಾಂಶ ಬರುವಲ್ಲಿ ಶ್ರಮಿಸಿ. ನಮ್ಮ ಜಿಲ್ಲೆಯೂ ಟಾಪ್…
ಮಂಡ್ಯ: ಬಿರುಗಾಳಿ, ಮಳೆಗೆ ಪ್ರಸಿದ್ಧ ಪ್ರವಾಸಿ ತಾಣವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನದಲ್ಲಿ ಮರಗಳು ಉರುಳಿ ಬಿದ್ದ ಘಟನ ನಡೆದಿದೆ. ಉತ್ತರ ಬೃಂದಾವನ ಹಾಗೂ ದೋಣಿ ವಿವಾಹ ಕೇಂದ್ರ ಬಳಿ ಮರಗಳು ಬಿದ್ದ ಪರಿಣಾಮ ಅಂಗಡಿಗಳು ಹಾಗೂ ತಡೆಗೋಡೆಗೆ ಹಾನಿಯಾಗಿದೆ. ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದಿದ್ರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಅದಲ್ಲದೆ ಬೃಹತ್ ಗಾತ್ರದ ಮರಗಳು ಉರುಳಿರೋದ್ರಿಂದ ಇಂದು ಬೃಂದಾವನ ಪ್ರವಾಸಿಗ ಪ್ರವೇಶ ನಿರ್ಬಂಧಿಸಿ ಕಾವೇರಿ ನೀರಾವರಿ ನಿಗಮ ಆದೇಶ ಹೊರಡಿಸಿದ್ದಾರೆ. ಸದ್ಯ ಸಿಬ್ಬಂದಿಯಿಂದ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.
ತುಮಕೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಇಂದು (ಮಂಗಳವಾರ) ಸಿದ್ದಗಂಗಾ ಮಠ (Siddaganga Mutt Tumakuru) ಕ್ಕೆ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಗಳ ಆಶೀರ್ವಾದ ಪಡೆದರು. ಬಳಿಕ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಚಿವರು ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸಿದ್ದಲಿಂಗ ಸ್ವಾಮೀಜಿಯವರು ಮಠದ ಅನುದಾನ ತಡೆಹಿಡಿದ ಬಗ್ಗೆ ವಸತಿ ಸಚಿವರ ಬಳಿ ಪ್ರಸ್ತಾಪ ಮಾಡಿದರು. ಶ್ರೀ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಹಿಡಿದು ಬರುತ್ತಿದ್ದಾರೆ. ಆದರೆ ಕಟ್ಟಡ ಕೊರತೆಯಿಂದ ಅಡ್ಮಿಷನ್ ನಿಲ್ಲಿಸಲಾಗಿದೆ. ಹಿಂದಿನ ಸರ್ಕಾರ ಮಂಜೂರು ಮಾಡಿದ ಬಿಲ್ಡಿಂಗ್ ರೆಡಿಯಾದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಸಚಿವರ ಬಳಿ ಶ್ರೀಗಳು ಹೇಳಿಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಂತ್ರಿ ಆದಾಗೆಲ್ಲ ಸಿದ್ದಗಂಗಾ ಮಠಕ್ಕೆ ಬಂದು ನಾನು ಆಶೀರ್ವಾದ ಪಡೆಯುತ್ತೇನೆ. ಇಂದು ಕೂಡ ಬಂದು ಶ್ರೀಗಳ…
ಮೈಸೂರು: ಚುನಾವಣಾ ಪ್ರಣಾಳಿಕೆ ರಾಜಕೀಯ ಪಕ್ಷಗಳಿಗೆ ಬೈಬಲ್ ಇದ್ದ ಹಾಗೆ ಎಂದು ನೂತನ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೊಟ್ಟ ಭರವಸೆಗಳನ್ನು ಸಿದ್ದರಾಮಯ್ಯ (Siddaramaiah) ನೆರೆವೇರಿಸಿದ್ದಾರೆ. ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಇಲ್ಲದ ಭರವಸೆ ಸೇರಿದಂತೆ ರೈತರಿಗೆ ಸಾಕಷ್ಟು ಸಹಾಯ ಮಾಡಿದೆ. ಕಾಂಗ್ರೆಸ್ (Congress) ನುಡಿದಂತೆ ನಡೆಯುವ ಪಕ್ಷ. 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅದರಿಂದ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು. ಬಿಜೆಪಿ (BJP) ಪ್ರತಿಯೊಬ್ಬರಿಗೆ 15 ಲಕ್ಷ ರೂ. ಹಾಗೂ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಅದನ್ನು ನೆರವೇರಿಸಿಲ್ಲ. ನಾವು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿ (Guarantee Scheme) ಜಾರಿ ಮಾಡಿಯೇ ಮಾಡುತ್ತೇವೆ. ಜುಲೈನಲ್ಲಿ ಬಜೆಟ್ ಮಾಡುತ್ತೇವೆ. 5 ಗ್ಯಾರಂಟಿ ಕೊಡಲು ಎಲ್ಲಾ ಇಲಾಖೆಗಳಲ್ಲಿ ಹಣವನ್ನು ಹೊಂದಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನ ಹಾಗೇ ನಡೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಬಿಜೆಪಿ ದುರಾಡಳಿತ…