ಬೆಂಗಳೂರಿನಲ್ಲಿ ಮಧ್ಯಾಹ್ನವೇ ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಗುಡುಗು ಸಿಡಿಲು ಸಮೇತ ಅಬ್ಬರಿಸುತ್ತಿರುವ ಮಳೆರಾಯ ರಸ್ತೆಯೇ ಕಾಣದ ಸ್ಥಿತಿಯಲ್ಲಿ ಸುರಿಯುತ್ತಿರುವ ವರುಣ. ಮಳೆ ನಿಲ್ಲುವವರೆಗೂ ವಾಹನ ಸವಾರರು ಪ್ರಯಾಣ ಮಾಡದಿರುವುದು ಒಳ್ಳೆಯದು ಮಳೆಯ ವೇಳೆ ಸುರಕ್ಷಿತ ಪ್ರದೇಶದಲ್ಲಿ ಇದ್ದರೆ ಸೇಫ್ ಎಂದು ಜನ ಭಾವಿಸಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗಲಿದೆ.
Author: Prajatv Kannada
ಬೆಂಗಳೂರು: ಐದು ಗ್ಯಾರಂಟಿಗಳನ್ನು ಈಡೇರಿಸುವುದು ಆರ್ಥಿಕವಾಗಿ ಕಷ್ಟಕರ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆ, ಪ್ರಚಾರ ಭಾಷಣದಲ್ಲಿ ಐದು ಗ್ಯಾರಂಟಿಗಳ ಕುರಿತು ಜನರಿಗೆ ಆಶ್ವಾಸನೆ ಕೊಡುವಾಗ ಕಾಂಗ್ರೆಸ್ನವರಿಗೆ ಸ್ಪಷ್ಟತೆಯಿತ್ತು. ಅಧಿಕಾರಕ್ಕೆ ಬಂದ ಮೇಲೆ ಅನುಷ್ಠಾನಕ್ಕೆ ಅಸ್ಪಷ್ಟತೆ ಕಾಡತೊಡಗಿದೆ ಎಂದರು. ಐದು ಗ್ಯಾರಂಟಿಗಳನ್ನು ಈಡೇರಿಸುವುದು ಆರ್ಥಿಕವಾಗಿ ಕಷ್ಟಕರ, ಕಾರ್ಯಸಾಧುವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಹತಾಶರಾಗಿ ಜನರನ್ನು ಯಾಮಾರಿಸಲು ನನಗೂ ನಿನಗೂ ಎಲ್ಲರಿಗೂ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕರು ಅಬ್ಬರಿಸಿದರು ಎಂದು ತಿವಿದರು. ಗ್ಯಾರಂಟಿಗಳ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಆರ್ಥಿಕ ಹೊರೆ ಹೆಚ್ಚಲಿದೆ, ಕೆಲವೊಂದು ಅಭಿವೃದ್ಧಿ ಕೆಲಸ ನಿಲ್ಲಿಸಬೇಕಾಗುತ್ತದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾದ ಮಾಹಿತಿಯಿದೆ. ಕರಾರು, ಇತಿಮಿತಿ, ಮಾನದಂಡ ವಿಧಿಸುವ ಮಾತುಗಳು ಕೇಳಿಬರುತ್ತಿವೆ. ಇವೆಲ್ಲವುಗಳ ಒಟ್ಟು ಫಲಶೃತಿಯೆಂದರೆ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆಯುವುದು ಅನುಮಾನ. ಜೂ.1ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದಿದ್ದಾರೆ, ಅನುಷ್ಠಾನದ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಶಿವಣ್ಣ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಚಿತ್ರದಲ್ಲಿ ಶಿವಣ್ಣನ ಎದುರು ಬಾಲಿವುಡ್ ನಟ ರಾಹುಲ್ ಬೋಸ್ ನಟಿಸುತ್ತಿದ್ದಾರೆ. ನರ್ತನ್ ನಿರ್ದೇಶನ, ಗೀತಾ ಪಿಕ್ಚರ್ ನಿರ್ಮಾಣದಲ್ಲಿ ‘ಭೈರತಿ ರಣಗಲ್’ ಪ್ರೀಕ್ವೆಲ್ ಮೂಡಿ ಬರುತ್ತಿದೆ. ಇದು ‘ಮಫ್ತಿ’ಸಿನಿಮಾ ಹಿನ್ನೆಲೆ ಚಿತ್ರವಾಗಿ ಮೂಡಿ ಬರಲಿದೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಘರ್ಜಿಸಲು ಬಹುಭಾಷಾ ನಟ ರಾಹುಲ್ ಬೋಸ್ ರೆಡಿಯಾಗಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಎದುರು ವಿಲನ್ ಆಗಿ ರಾಹುಲ್ ಬೋಸ್ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿರುವ ರಾಹುಲ್ ಬೋಸ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. 8 ವರ್ಷಗಳ ಹಿಂದೆ ‘ನಿರುತ್ತರ’ ಎಂಬ ಸಿನಿಮಾದಲ್ಲಿ ರಾಹುಲ್ ಬೋಸ್ ನಟಿಸಿದ್ದರು. 8 ವರ್ಷಗಳ ಬಳಿಕ ‘ಭೈರತಿ ರಣಗಲ್’ ಮೂಲಕ ರಾಹುಲ್…
ಇಂದು ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ರವಿಚಂದ್ರನ್ ನಟನೆಯ ಎರಡು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಆ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ ದ ಜಡ್ಜ್ ಮೆಂಟ್ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದು ಆ ಸಿನಿಮಾ ತಂಡ ಕೂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಿದೆ. ಕೆಲ ತಿಂಗಳ ಹಿಂದೆಯಷ್ಟೇ ರವಿಚಂದ್ರನ್ ಅವರ ಫಸ್ಟ್ ಲುಕ್ ಅನ್ನು ಕೆಡಿ ಟೀಮ್ ರಿಲೀಸ್ ಮಾಡಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಇದೇ ಮೊದಲ ಭಾರಿಗೆ ರವಿಚಂದ್ರನ್ ಈ ರೀತಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್ ಸಿನಿಮಾ `ಕೆಡಿ’ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ…
ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಹೊಸ ವೀಡಿಯೋ ಒಂದನ್ನು ಹೊರ ತಂದಿದ್ದಾರೆ. ಈ ವಿಡಿಯೋದಲ್ಲಿ ಅಭಿಷೇಕ್ ಅಂಬರೀಶ್ ಅವರ ಭಾವಿ ಪತ್ನಿ ಅವಿವಾ ಬಿದ್ದಪ್ಪ ಕೂಡ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವಿವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಅಂಬರೀಶ್ ಅವರ ಸಿನಿಮಾದ ಜನಪ್ರಿಯ ಗೀತೆಗಳಾದ ‘ಒಲವಿನ ಉಡುಗೊರೆ’, ‘ಚಳಿ ಚಳಿ ತಾಳೆನು ಈ ಚಳಿಯ’, ‘ಮಂಡ್ಯದ ಗಂಡು’ ಹಾಗೂ ‘ಹೇ ಜಲೀಲಾ, ಕನ್ವರ್ ಲಾಲಾ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಾಲ್ಕು ಗೀತೆಗಳಿಗೆ ಅಭಿ ಮತ್ತು ಅವಿವಾ ಜೋಡಿ ಹೆಜ್ಜೆ ಹಾಕಿದೆ. ಒಲವಿನ ಉಡುಗೊರೆಯಿಂದ ಶುರುವಾಗುವ ವಿಡಿಯೋ…
ಶಿಕಾರಿಯಾದ್ರೆ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವ ಯುವಕರು ಹೃದ್ರೋಗದ ಅಪಾಯವನ್ನು ಹೊಂದಿರಬಹುದು. ಹೊಸ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಖಿನ್ನತೆ ಮತ್ತು ಹತಾಶೆಯಿಂದ ಬಳಲುತ್ತಿರುವ ಯುವಕರಲ್ಲಿ ಹೃದಯದ ಆರೋಗ್ಯವು ಉತ್ತಮವಾಗಿರುವುದಿಲ್ಲ ಎಂದು ಅಧ್ಯಯನವು ಹೇಳಿದೆ. ಅಧ್ಯಯನದ ಪ್ರಕಾರ, ಖಿನ್ನತೆಯಿಂದ ಬಳಲುತ್ತಿರುವ ಅಥವಾ ಮಾನಸಿಕ ಅಸ್ವಸ್ಥತೆ ಹೊಂದಿರುವ ಯುವಕರು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್‌ನ ಸಂಶೋಧಕರು ತಮ್ಮ ಅಧ್ಯಯನದಲ್ಲಿ 18 ರಿಂದ 49 ವರ್ಷದೊಳಗಿನ 5 ಲಕ್ಷಕ್ಕೂ ಹೆಚ್ಚು ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನಲ್ಲಿ ಪ್ರಕಟಿಸಲಾಗಿದೆ. ಯುವ ಮತ್ತು ಮಧ್ಯವಯಸ್ಕರಲ್ಲಿ ಖಿನ್ನತೆ ಮತ್ತು ಹೃದ್ರೋಗದ ನಡುವೆ ಸಂಬಂಧವಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ. ಈ ಎರಡು ಪರಿಸ್ಥಿತಿಗಳ ನಡುವಿನ ಸಂಬಂಧವು ಪ್ರೌಢಾವಸ್ಥೆಯಲ್ಲಿಯೇ ಪ್ರಾರಂಭವಾಗಬಹುದು ಎಂದು ಅಧ್ಯಯನವು ಸೂಚಿಸಿದೆ. ಖಿನ್ನತೆ ಮತ್ತು ಹೃದ್ರೋಗದ ನಡುವಿನ ಸಂಬಂಧವೇನು? ಪಿಟಿಐ ವರದಿಯ ಪ್ರಕಾರ, ನೀವು ಒತ್ತಡದಲ್ಲಿರುವಾಗ ಅಥವಾ ಆತಂಕ ಮತ್ತು ಖಿನ್ನತೆಯಿಂದ…
ಮಾಸ್ಕೊ: ರಶ್ಯ ಪ್ರವಾಸದಲ್ಲಿದ್ದ ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಸಭೆಯ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲೆಕ್ಸಾಂಡರ್ ಅವರಿಗೆ ವಿಷಪ್ರಾಶನವಾಗಿರುವ ಸಾಧ್ಯತೆಯಿದೆ ಎಂದು ಬೆಲಾರಸ್ನ ವಿಪಕ್ಷ ಮುಖಂಡರನ್ನು ಉಲ್ಲೇಖಿಸಿ ಅಮೆರಿಕದ `ನ್ಯೂಸ್ವೀಕ್’ ವರದಿ ಮಾಡಿದೆ. ಪುಟಿನ್ ಜೊತೆ ಸಭೆ ನಡೆಸಿದ ಬಳಿಕ ಲುಕಶೆಂಕೊ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಮಾಸ್ಕೊದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು 2020ರಲ್ಲಿ ಬೆಲಾರಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ವಿಪಕ್ಷ ಮುಖಂಡ ವಲೆರಿ ಸೆಕಾಲೊ ಮಾಹಿತಿ ನೀಡಿದ್ದಾರೆ. `ಲುಕಶೆಂಕೊಗೆ ಚಿಕಿತ್ಸೆ ಒದಗಿಸಲು ಅತ್ಯುತ್ತಮ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ರಶ್ಯದ ಪ್ರತಿಷ್ಟೆಗೆ ಹಾನಿಯಾಗದಂತೆ, ರಶ್ಯ ಆರೋಪಿ ಸ್ಥಾನದಲ್ಲಿ ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ’ ಎಂದು ಸೆಕಾಲೊ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮೇ 9ರಂದು ಮಾಸ್ಕೋದಲ್ಲಿ…
ವಿಶ್ವಸಂಸ್ಥೆ: ಯುದ್ಧ, ಸಂಘರ್ಷ ಮತ್ತು ಜನರ ಹಾಗೂ ಸರಕುಗಳ ಚಲನವಲನಕ್ಕೆ ತೀವ್ರ ಅಡ್ಡಿಯ ಕಾರಣದಿಂದ ಸುಡಾನ್ ಸೇರಿದಂತೆ ವಿಶ್ವದ 4 ದೇಶಗಳಲ್ಲಿ ಆಹಾರದ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ಎರಡು ಏಜೆನ್ಸಿಗಳು ಎಚ್ಚರಿಕೆ ನೀಡಿವೆ. ಸುಡಾನ್, ಹೈಟಿ, ಬುರ್ಕಿನಾ ಫಾಸೊ ಮತ್ತು ಮಾಲಿ ದೇಶಗಳು ಹಸಿವಿನ ಬಿಕ್ಕಟ್ಟು ಉಲ್ಬಣಗೊಂಡಿರುವ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಅಫ್ಘಾನಿಸ್ತಾನ, ನೈಜೀರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್ ದೇಶಗಳು ಈಗಾಗಲೇ ಹಸಿವಿನ ಬಿಕ್ಕಟ್ಟಿನ ಅಪಾಯದಲ್ಲಿದೆ ಎಂದು ವಿಶ್ವ ಆಹಾರ ಯೋಜನೆ(ಡಬ್ಯ್ಲೂಎಫ್ಪಿ) ಹಾಗೂ `ಆಹಾರ ಮತ್ತು ಕೃಷಿ ಸಂಘಟನೆ(ಎಫ್‌ಒಎ)ಯ ವರದಿಯಲ್ಲಿ ಎಚ್ಚರಿಸಲಾಗಿದೆ. ಈ 9 ದೇಶಗಳಲ್ಲದೆ, ತೀವ್ರ ಆಹಾರದ ಅಭದ್ರತೆ ಪರಿಸ್ಥಿತಿ ಇರುವ 22 ದೇಶಗಳನ್ನು ಗುರುತಿಸಲಾಗಿದ್ದು ಈ ದೇಶಗಳಿಗೆ ತಕ್ಷಣದ ಆಹಾರ ನೆರವು ಒದಗಿಸುವ ಅಗತ್ಯವಿದೆ ಎಂದು ವರದಿ ತಿಳಿಸಿದೆ. `ಎಲ್ಲರಿಗೂ ಜಾಗತಿಕ ಆಹಾರ ಭದ್ರತೆ ಸಾಧಿಸಬೇಕಿದ್ದರೆ, ಯಾರೊಬ್ಬರೂ ನೆರವಿನಿಂದ ವಂಚಿತರಾಗಿಲ್ಲ ಎಂಬುದನ್ನು ಖಾತರಿಪಡಿಸಬೇಕಿದ್ದರೆ ತ್ವರಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಹಸಿವಿನ ಬಿಕ್ಕಟ್ಟಿನ ಅಪಾಯದಿಂದ ಜನರನ್ನು ತಪ್ಪಿಸಲು,…
ದುಬೈ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವು ಗಲ್ಫ್ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ಉಂಟು ಮಾಡಿದೆ. ಭಾರತ ಸರ್ಕಾರದ ಈ ನೀತಿಯ ಕುರಿತು ಗಲ್ಫ್ ದೇಶದ ಬ್ಯಾಂಕ್‌ಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದ್ದು ಇದೇ ಕಾರಣದಿಂದಾಗಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ ಎಂದು ಯುಎಇನಲ್ಲಿ ಇರುವ ಹಲವು ಭಾರತೀಯರು ಸಂಕಷ್ಟು ತೋಡಿಕೊಂಡಿದ್ದಾರೆ. ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಬೇಕು. ಜೊತೆಗೆ, ಈ ನೋಟುಗಳನ್ನು ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್‌ಗಳಿಗೂ ಸೂಚಿಸಿದೆ. ಈ ನಡುವೆ ‘ಸೌದಿ ಅರೇಬಿಯಾದ ನೋಟು ವಿನಿಮಯ ಕೇಂದ್ರದಲ್ಲಿ ಭಾರತದ ಎರಡು ಸಾವಿರ ಮುಖಬೆಲೆಯ ನೋಟು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಾವು ಈಗ ರಜಾ ಅವಧಿಯ ಮಧ್ಯದಲ್ಲಿದ್ದೇವೆ. ಇಲ್ಲಿಗೆ…
ಶ್ರೀನಗರ: ಒಟ್ಟು 75 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ (Jammu Bus Accident) ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 55 ಮಂದಿ ಗಾಯಗೊಂಡಿರವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಅಪಘಾತಕ್ಕೀಡಾದ ಬಸ್ ಅಮೃತಸರ (Amritsar) ದಿಂದ ಕತ್ರಾಕ್ಕೆ ತೆರಳುತ್ತಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಮೂಲತಃ ಬಿಹಾರ (Bihar) ದವರಾಗಿದ್ದಾರೆ. ಕುಟುಂಬದಲ್ಲಿ ಮಗುವಿಗೆ ‘ಮುಂಡನಾ’ ಕಾರ್ಯಕ್ರಮವಿದ್ದರಿಂದ ಎಲ್ಲಾ ಕುಟುಂಬ ಸದಸ್ಯರು ಮತ್ತು ಆತ್ಮೀಯರು ಸಮಾರಂಭಕ್ಕೆಂದು ಕತ್ರಾಗೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ವೈಷ್ಣೋದೇವಿ (Vaishno Devi) ದೇಗುಲಕ್ಕೆ ಯಾತ್ರೆಯನ್ನು ಕೈಗೊಂಡಿದ್ದ ಸಂದರ್ಭ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. https://twitter.com/ANI/status/1663412969521426433?ref_src=twsrc%5Etfw%7Ctwcamp%5Etweetembed%7Ctwterm%5E1663412969521426433%7Ctwgr%5Ec05c59b30075784db6ab4312002765293fcd7e45%7Ctwcon%5Es1_&ref_url=https%3A%2F%2Fpublictv.in%2F10-dead-as-bus-with-bihar-pilgrims-to-vaishno-devi-falls-into-jammu-gorge%2F ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜಜ್ಜರ್ ಕೋಟ್ಲಿ ಬಳಿ ಘಟನೆ ನಡೆದಿದೆ. ರಕ್ಷಣಾ ಕಾರ್ಯಚರಣೆ ಬಹುತೇಕ ಪೂರ್ಣ ಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಮ್ಮುವಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬಸ್‍ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಜನ ಪ್ರಯಾಣಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಎಸ್‍ಎಸ್‍ಪಿ…