ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಸರ್ಜರಿ ಬೆಂಗಳೂರು ಕಮೀಷನರ್ ವರ್ಗಾವಣೆಪ್ರತಾಪ ರೆಡ್ಡಿ ವರ್ಗಾವಣೆ ಮಾಡಿ ಆದೇಶ ಆಂತರಿಕ ಭದ್ರತಾ ವಿಭಾಗಕ್ಕೆ ಡಿಜಿಪಿಯಾಗಿ ಪ್ರತಾಪ ರೆಡ್ಡಿ ವರ್ಗಾವಣೆ. ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಬಿ ದಯಾನಂದ ನೇಮಕ ಸಂಚಾರಿ ಸ್ಪೆಷಲ್ ಕಮಿಷನರ್ ಆಗಿದ್ದ ಎಂ ಎ ಸಲೀಂ ಅವರನ್ನು ಸಿಐಡಿ ಡಿಜಿಪಿ (ಕ್ರಿಮಿನಲ್ ತನಿಖೆ) ವಿಭಾಗಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
Author: Prajatv Kannada
ಬೆಂಗಳೂರು: ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಮುಂದುವರಿಸಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತಾಯಿಯಂತೆ ಪೊರೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಿಮ್ಮಕ್ಕನವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರೆಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ ಅವರನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಜಾರಿಗೆ ಶೀಘ್ರದಲ್ಲೇ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಅನುಷ್ಠಾನ ಸಮಿತಿ ರಚಿಸುವುದಾಗಿ ತಿಳಿಸಿದ್ದೆವು, ಇದೀಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅನುಷ್ಠಾನ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆಂದು. ಸಮಿತಿ ರಚನೆಗೊಂಡರೆ ಅಲ್ಪಾವಧಿ ಮತ್ತು ದೀರ್ಘಾವಧಿ ಕಾಮಗಾರಿಗಳ ಅನುಷ್ಟಾನಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸುವ ಮುನ್ನ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಬೇಕು. ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಭರವಸೆಗಳಿಗೆ ಸಂಪನ್ಮೂಲ ಕ್ರೋಢೀಕರಣದಂತಹ ಅಂಶಗಳನ್ನು ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಬೇಕಿದೆ ಎಂದು ಹೇಳಿದರು.
ಬೆಂಗಳೂರು: ರಾಜಗೋಪಾಲನಗರದ ಕಸ್ತೂರಿ ಬಡಾವಣೆಯಲ್ಲಿ ತಡರಾತ್ರಿ ಕರ್ನಾಟಕ ಬಹುಜನ ಕ್ರಾಂತಿದಳದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮನೆ ಮುಂದೆ ಲಾಂಗು, ಮಚ್ಚುಗಳಿಂದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳ ಮೇಲೆ ನಾಲ್ಕೈದು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಕಾರಿನಲ್ಲಿ ಎಂಟ್ರಿ ಕೊಟ್ಟ 4-5 ದುಷ್ಕರ್ಮಿಗಳ ಗ್ಯಾಂಗ್ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ. ಕೆಬಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮತ್ತು ಮಧುಕರ್ ಎಂಬುವರಿಗೆ ಸೇರಿದ ಕಾರುಗಳು. ಪುಡಿರೌಡಿಗಳ ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈದ್ರಾಬಾದ್ : ಮನೆಗೆ ಯಜಮಾನ ಎಷ್ಟು ಮುಖ್ಯವೋ, ಪ್ರತಿ ಕ್ರೀಡಾ ತಂಡವೊಂದಕ್ಕೆ ಅಂತಹಾ ನಾಯಕ ಅತ್ಯಗತ್ಯ. 41 ವರ್ಷದ ಧೋನಿಯಲ್ಲಿ ಕೃಷ್ಣನ ತಂತ್ರಗಾರಿಕೆ, ಭೀಮನ ಶಕ್ತಿ, ಅರ್ಜುನನ ತೀಕ್ಷ್ಣತೆ, ಯುಧಿಷ್ಠಿರನ ಯಜಮಾನಿಕೆ, ನಕುಲನ ಕತ್ತಿವರಸೆಯ ಸೊಗಸು, ಸಹದೇವನಂತೆ,ವಿರೋಧಿಗಳಿಗೂ ಯುದ್ಧ ಮಾಡುವ ಸರಿಯಾದ ಸಮಯವನ್ನು ನಿಗದಿ ಮಾಡಿಕೊಡುವ ಉದಾರಿಯಾಗಿ, ಜ್ಞಾನಿಯಾಗಿ ಧೋನಿ ನಮಗೆ ಕಾಣುತ್ತಾನೆ. ತನ್ನ ಇಷ್ಟು ಉದ್ದದ ಕ್ರಿಕೆಟ್ ಬದುಕಿನಲ್ಲಿ ಧೋನಿ ಬರೊಬ್ಬರಿ 250 IPL ಮ್ಯಾಚ್ ಆಡಿದ್ದಾನೆ. ಐದು ಬಾರಿ ತಂಡಕ್ಕೆ ಟ್ರೋಪಿ ಕೊಡಿಸಿದ್ದಾನೆ. ಬಹುಶಃ ತನ್ನ ಸುದೀರ್ಘ ಗೆಲುವಿನ ಪಯಣದಲ್ಲಿ ಧೋನಿ ಗೆದ್ದಾಗ ಕುಣಿದಿದ್ದು ಮೂರು ಬಾರಿ. ಮೊದಲ ಬಾರಿ 2007 ರಲ್ಲಿ ಟಿ -20 ವಿಶ್ವಕಪ್ ಗೆ ಉದ್ದಕೂದಲಿನ ನವ ಯುವಕ ತಂಡಕ್ಕೆ ಸಾರಥಿಯಾಗಿ ವಿಶ್ವಕಪ್ ಗೆದ್ದಾಗ ತನ್ನ ಬಿಸಿ ರಕ್ತದೊಡ್ಡವನ್ನು ಶರ್ಟ್ ಬಿಚ್ಚಿ ಪ್ರದರ್ಶನ ಮಾಡಿದ್ದ. ಅದಾದ ಮೇಲೆ ಚೆನೈ ತಂಡದ ಮೇಲೆ ಫಿಕ್ಸಿಂಗ್ ಭೂತ ವಕ್ಕರಿಸಿಕೊಂಡು ಧೋನಿಯನ್ನೂ ಖಳನಾಯಕನಂತೆ ಕೆಲವರು ನೋಡುತ್ತಿದ್ದ ಸಮಯದಲ್ಲಿ ಅದೇ ವರ್ಷ…
ಮಂಡ್ಯ : ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮದ್ದೂರು ವಿಧಾನ ಸಭಾ ಕ್ಷೇತ್ರದ ಸರ್ಕಾರಿ ಶಾಲೆಯ ( 1 ರಿಂದ 10 ನೇ ತರಗತಿವರೆಗಿನ ) ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಟ್ರಸ್ಟ್ ವತಿಯಿಂದ ಮಾರ್ಚ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳ ಶಾಲಾ ಶುಲ್ಕವನ್ನು ಟ್ರಸ್ಟ್ ವತಿಯಿಂದ ಭರಿಸಲಾಗುವುದು. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗಳಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಅಧಿಕಾರವಧಿಯಲ್ಲಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ,…
ಹುಬ್ಬಳ್ಳಿ: ಚುನಾವಣಾ ಸಂದರ್ಭದಲ್ಲಿ ನಾವು ನೀಡಿದ ಐದು ಗ್ಯಾರಂಟಿಗಳ ಕುರಿತು ಗ್ಯಾರಂಟಿ ಬಗ್ಗೆ ಗುರುವಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ಆಗುತ್ತದೆ ಇನ್ನೂ ಎರಡು ಮೂರು ದಿನಗಳ ಸಿಹಿ ಸುದ್ದಿ ಸಿಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಇನ್ನು ಇಂದು ಕಲಘಟಗಿ, ಅಳ್ನಾವರ ಮತ್ತು ಹುಬ್ಬಳ್ಳಿ ಧಾರವಾಡ ಪ್ರವಾಸ ಮಾಡುತ್ತಿರುವೆ. ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಅಳ್ನಾವರ ಕ್ಷೇತ್ರದ ಜನತೆಗೆ ಗೌರವ ಮತ್ತು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದ ಅವರು ಅವರಿಗೆ ಪ್ರೀತಿಯಿಂದ ಗೌರವಿಸಬೇಕಾಗಿದೆ ಎಂದರು. ಇನ್ನು ಈ ಕೇವಲ 20 ತಿಂಗಳ ಕಾಲ ನಾನು ಕಾರ್ಮಿಕ ಸಚಿವನಾಗಿದ್ದಾಗ ಕಡಿಮೆ ಸಮಯ ಸಿಕ್ಕಿತ್ತು ಈಗ ಮತ್ತೆ ಅದೆ ಖಾತೆ ಸಿಕ್ಕೆದೆ ಹೆಚ್ಚಿನ ಕೆಲಸ ಮಾಡುವ ಗುರಿಯಿದೆ ಸಾಕಷ್ಟು ಹೊಸ ಹೊಸ ಯೋಜನೆ ತರುವ ಆಶೆ ಇದೆ ಸಾಕಷ್ಟು ಒಳ್ಳೆಯ ಕೆಲಸ ಮಾಡುವೆ ಎಂದರು. ಕಾರ್ಮಿಕ ಕಲ್ಯಾಣ ನಿಧಿಯನ್ನು ಬಿಜೆಪಿ…
ಗಂಗಾ ದಶಹರಾ ಸೂರ್ಯೋದಯ: 05.52 AM, ಸೂರ್ಯಾಸ್ತ : 06.42 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ದಶಮಿ 01:07 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಉತ್ತರ ಫಾಲ್ಗುಣಿ 04:29 AM ತನಕ ನಂತರ ಹಸ್ತ ಯೋಗ: ಇವತ್ತು ಸಿದ್ಧಿ 08:55 PM ತನಕ ನಂತರ ವ್ಯತೀಪಾತ ಕರಣ: ಇವತ್ತು ತೈತಲೆ 12:33 AM ತನಕ ನಂತರ ಗರಜ 01:07 PM ತನಕ ನಂತರ ವಣಿಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 11.37 PM to 01.19 AM (ಮರುದಿನ) ಅಭಿಜಿತ್ ಮುಹುರ್ತ: ಬೆಳಗ್ಗೆ.11:47 ನಿಂದ ಮ.12:39 ವರೆಗೂ ಮೇಷ ರಾಶಿ ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ನಡೆಸಲಾಗಿದೆ. ತಡರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಿಟಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡ್ತಿದ್ದ ಆನಂದ್ ಎಂಬಾತನ ಕತ್ತು ಸೀಳಿ ಕೊಲೆ ಮಾಡಿರುವ ಹಂತಕರು ಕಾರಣ ಇನ್ನೂ ತಿಳಿದುಬಂದಿಲ್ಲ. ನಿನ್ನೆ ರಾತ್ರಿ ಜಗಳ ನಡೆದು ಹತ್ಯೆ ನಡೆದಿರುವ ಶಂಕೆ ವ್ಯಕ್ತಪಡಿಲಾಗಿದ್ದು ಕೆ.ಆರ್ ರಸ್ತೆಯ ಮೆಟ್ರೋ ನಿಲ್ದಾಣ ಬಳಿ ಇರುವ ಬಸ್ ನಿಲ್ದಾಣದಲ್ಲಿ ಶವ ಪತ್ತೆಯಾಗಿದ್ದು ಸ್ಥಳಕ್ಕೆ ವಿವಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಸೋರುತ್ತಿರುವ ಮಳೆ ನೀರು ಹಿನ್ನೆಲೆ ಇದೇನಾ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಕೊಟ್ಟ ಕೊಡುಗೆ ಅಂತೀರೋ ನೆಟ್ಟಿಗರು ಇದು ಹೊಸದಾಗಿ ಉದ್ಘಾಟನೆಗೊಂಡ ವೈಟ್ ಫೀಲ್ಡ್ ನಾ ಕಾಡುಗೋಡಿ ಮೆಟ್ರೋ ಹಣೆಬರಹ. ಟ್ವಿಟರ್ ನಲ್ಲಿ ಮೆಟ್ರೊ ಕಾಮಗಾರಿಯ ಪ್ರಶ್ನೆ ಮಾಡ್ತಿರುವ ಸಾರ್ವಜನಿಕರು ಮೆಟ್ರೋ ನಿಲ್ದಾಣದ ಮೇಲ್ಛಾವಣಿಯಿಂದ ನೆಲದ ಮೇಲೆ ಮಳೆ ನೀರು ಬೀಳುವ ವಿಡಿಯೋ ಫುಲ್ ವೈರೆಲ್ ಮಳೆಯಿಂದ ವೈಟ್‌ಫೀಲ್ಡ್ ಕಾಡುಗೋಡಿ ನಿಲ್ದಾಣದ ಒಳಗೆ ನಿಲ್ದಾಣದಲ್ಲಿ ಸೋರುತ್ತಿರುವ ದೃಶ್ಯ ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿ ಬಂದು ಉದ್ಘಾಟನೆ ಮಾಡಿ ಹೋದ ಮೆಟ್ರೋ ಡಬಲ್ ಇಂಜಿನ್ ಸರ್ಕಾರದ ಎಫೆಕ್ಟ್ ಮೆಟ್ರೋ ಮೇಲೆ ಅಂತ ಜನ ಕಿಡಿ ಈಗಲೇ ಹೀಗಾದ್ರೆ ಮುಂಗಾರು ಆರಂಭ ಆದ ಮೇಲೆ ಸಿಲಿಕಾನ್ ಸಿಟಿ ಜನರಿಗೆ ಸೇಫ್ಟಿ ಇದ್ಯಾ ಅಂತ ಪ್ರಶ್ನೆ.ಈ ಭಾರಿಯೂ ಮಳೆಯಿಂದ ರಾಷ್ಟ್ರ ಮಟ್ಟದಲ್ಲಿ ಸಿಲಿಕಾನ್ ಸಿಟಿ ಮಾನ ಮರ್ಯಾದೆ ಹರಾಜು ಫಿಕ್ಸ್ ಅಂತಾರೆ ನೆಟ್ಟಿಗರು