ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದ 5 ಆನೆಗಳು ಗುರುವಾರ ಕಾಡಿನಿಂದ ನಾಡಿಗೆ ಹೊರಟಿವೆ. ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್ ಆಗಿದ್ದು, ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ತಂಡಕ್ಕೆ ಇಂದು ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮಿ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ. ವೀರನಹೊಸಹಳ್ಳಿಯಲ್ಲಿ ಆ.21ರಂದು ವಿದ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮಿ ಮತ್ತು ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಸೆ.5ರ ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗಜಪಡೆಗೆ ಮರಳು ಮೂಟೆ ತಾಲೀಮು: ಈಗಾಗಲೆ ಅರಮನೆ ಅಂಗಳದಲ್ಲಿರುವ ಮೊದಲ ಬ್ಯಾಚ್‌ನ ಆನೆಗಳಿಗೆ ಮರಳು ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ,…
Author: Prajatv Kannada
ಬೆಂಗಳೂರು:- ಪಿಎಸ್ಐ ಪರಶುರಾಮ ಸಾವು ಕೇಸ್ ಗೆ ಸಂಬಧಪಟ್ಟಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ. https://youtu.be/c-lxEPsEV7g?si=hyJqwhLVNtT1Obp_ ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ ಎಂದು ಸಚಿವೆ ಶೋಭಾ ಇತ್ತೀಚೆಗೆ ಆರೋಪ ಮಾಡಿದ್ದರು. ಜೊತೆಗೆ ಪತ್ರ ಕೂಡ ಬರೆದಿದ್ದರು. ಸದ್ಯ ಸಚಿವೆ ಶೋಭಾ ಕರಂದ್ಲಾಜೆ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ಮಾಹಿತಿ ನೀಡುವಂತೆ ಸೂಚಿಸಿದೆ. ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಗೃಹ ಸಚಿವಾಲಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದ ಬೆನ್ನೆಲ್ಲೇ ಇದೀಗ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ಬೆಂಗಳೂರು:- ಶೆಡ್ನಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಎಂಥವರಿಗೂ ಕರುಳು ಚುರುಕ್ ಎನ್ನುವಂತೆ ಮಾಡಿದೆ https://youtu.be/tui9OWWAST8?si=E-0EIiUX7DBcZ4LK ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ದರ್ಶನ್ ಹಾಗೂ ಗ್ಯಾಂಗ್ ಮೇಲೆ ಈಗ ಕೊಲೆ ಆರೋಪ ಬಂದಿದೆ. ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಲಾಗಿತ್ತು. ಈ ಟಾರ್ಚ್ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ನೋಡಿ ಅನೇಕರಿಗೆ ದುಃಖ ಆಗಿದೆ. ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದರು. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ದರ್ಶನ್ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿಯೂ ಬಗೆಹರಿಸಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಇದರಿಂದ ಅವರಿಗೆ ಸಂಕಷ್ಟ ಆಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಅಂತದ್ದೇ ಬಿರುಗಾಳಿ ಏಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ರಚನೆಯಾದ ಹಾಗೇ ನಮ್ಮಲ್ಲೂ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬಂದಿದೆ. ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ಮಾಡಲು ಒತ್ತಾಯ ಕೇಳಿಬಂದ ಬೆನ್ನಲ್ಲೇ ‘ಫೈರ್’ ಟೀಂ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿದ್ದಾರೆ. ಈ ವೇಳೆ ನಟ ಚೇತನ್ ಅಹಿಂಸಾ, ಕವಿತಾ ಲಂಕೇಶ್, ಕವಿತಾ ಲಂಕೇಶ್, ನಟಿ ನೀತು, ಶೃತಿ ಹರಿಹರನ್ ಸೇರಿದಂತೆ ಇನ್ನೂ ಕೆಲವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸೆಟ್ನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಸೌಲಭ್ಯ ಒದಗಿಸಬೇಕು. ಹೆಣ್ಣು ಎಂಬ ಕಾರಣಕ್ಕೇ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನ ಮೊದಲು ತಪ್ಪಿಸಬೇಕು. ನಟಿಯರೂ ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾನತೆ. ಸುರಕ್ಷಿತ ವ್ರತ್ತಿಪರ ವಾತಾವರಣ ನಿರ್ಮಿಸುವ…
ಜೈಪುರ: ರಾಜಸ್ಥಾನ ಪೊಲೀಸ್ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ರಷ್ಟು ಮೀಸಲಾತಿ ನೀಡಲು ರಾಜಸ್ಥಾನ ಕ್ಯಾಬಿನೆಟ್ ನಿರ್ಧರಿಸಿದೆ. ಮೀಸಲಾತಿ ಸಂಬಂಧ ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು 1989ಕ್ಕೆ ತಿದ್ದುಪಡಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ಮತ್ತು ಇತರ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಹೆಚ್ಚುವರಿ ಮೀಸಲಾತಿಯನ್ನು ಸರ್ಕಾರ ಘೋಷಿಸಿತು. ನೌಕರರ ಕಲ್ಯಾಣಕ್ಕೆ ಸಂಬಂಧಿಸಿದಂತೆ, ರಾಜ್ಯ ನೌಕರರಿಗೆ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯನ್ನು 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಇದಲ್ಲದೆ, ಕುಟುಂಬ ಪಿಂಚಣಿಯನ್ನು ಈಗ ಕೇಂದ್ರ ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿ 10 ವರ್ಷಗಳವರೆಗೆ ವರ್ಧಿತ ದರದಲ್ಲಿ ಒದಗಿಸಲಾಗುತ್ತದೆ. ಅತ್ಯುತ್ತಮ ಅಭ್ಯರ್ಥಿಗಳು ರಾಜಸ್ಥಾನ ಭಾಷೆ ಮತ್ತು ಗ್ರಂಥಾಲಯ ಮತ್ತು ರಾಜಸ್ಥಾನ ಅಬಕಾರಿ ಪ್ರಯೋಗಾಲಯ ಇಲಾಖೆಗಳು ನಡೆಸುವ ನೇಮಕಾತಿಯಲ್ಲಿ 2% ಮೀಸಲಾತಿಯನ್ನು ಸಹ ಪಡೆಯಲಿದ್ದಾರೆ. ಈ ಹಿಂದೆ, ರಾಜಸ್ಥಾನ ಸರ್ಕಾರ ಗ್ರೇಡ್ 3 ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು 30% ರಿಂದ 50% ಕ್ಕೆ ಹೆಚ್ಚಿಸಿತ್ತು. ಚುನಾವಣಾ…
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ ಮತ್ತು ಒಕ್ಕೂಟವು ಸಾಮೂಹಿಕ ನಾಯಕತ್ವದಲ್ಲಿ ಸ್ಪರ್ಧಿಸಲಿದೆ ಎಂದು ಶರದ್ ಪವಾರ್ ಹೇಳಿದ್ದಾರೆ. ಸಿಎಂ ಮುಖ ಘೋಷಿಸುವಂತೆ ಉದ್ಧವ್ ಠಾಕ್ರೆ ಒತ್ತಾಯಿಸಿರುವ ನಡುವೆ ಈ ಮಹತ್ವದ ಹೇಳಿಕೆ ಹೊರಬಂದಿದೆ. ಈ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರ ಆಧಾರದ ಮೇಲೆ ಮುಖ್ಯಮಂತ್ರಿಯಾಗುತ್ತಾರೆ. ಸಿಎಂ ಮುಖವನ್ನು ಪ್ರಕಟಿಸದೇ ಚುನಾವಣೆ ಹೋಗುವುದು ಯಾವುದಕ್ಕೂ ಅಡ್ಡಿಯಾಗುವುದಿಲ್ಲ. ಒಕ್ಕೂಟ ಗೆಲುವು ಸಾಧಿಸಿದ ಬಳಿಕ ಯಾರು ನೇತೃತ್ವ ವಹಿಸಬೇಕು ಎಂಬುದು ಸಂಖ್ಯಾಬಲದ ಮೇಲೆ ನಿರ್ಧಾರವಾಗಬೇಕು ಎಂದರು. ಇದಕ್ಕೆ ಪೂರಕವಾಗಿ ಉದಾಹರಣೆ ನೀಡಿದ ಅವರು, ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅವರ ಹೆಸರು ಘೋಷಣೆಯಾಯಿತು. ಚುನಾವಣೆಯಲ್ಲಿ ಮತ ಕೇಳುವಾಗ ಅವರ ಹೆಸರನ್ನು ಎಲ್ಲೂ ಘೋಷಿಸಿರಲಿಲ್ಲ. ಹೀಗಾಗಿ ಈಗ ಸಿಎಂ ಮುಖಕ್ಕೆ ಬೇಡಿಕೆ ಇಡುವ ಅಗತ್ಯವಿಲ್ಲ. ಜನರ ಬೆಂಬಲ ಪಡೆದ ನಂತರ ನಾವು ಒಟ್ಟಾಗಿ ಕೂತು ನಿರ್ಧಾರ…
ಸೂರ್ಯೋದಯ: 06:06, ಸೂರ್ಯಾಸ್ತ : 06:23 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ಪಾಡ್ಯಾ, ನಕ್ಷತ್ರ: ಉತ್ತರ ಪಾಲ್ಗುನಿ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ರಾ .10:07 ನಿಂದ ರಾ .11:55 ತನಕ ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ: ಚಲನಚಿತ್ರ ನಿರ್ಮಾಪಕರಿಗೆ ಆರ್ಥಿಕ ತೊಂದರೆ ಕಾಡಲಿದೆ, ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಎಚ್ಚರಿಕೆಯಿಂದ ನಿರ್ವಹಿಸಿ, ಕಾಂಡಿಮೆಂಟ್ಸ್ ವ್ಯಾಪಾರಸ್ಥರಿಗೆ ಆದಾಯ ಉತ್ತಮ, ಕಲಾವಿದರಿಗೆ ಹಣಕಾಸಿನಲ್ಲಿ ತೊಂದರೆ, ಪ್ಲಿವುಡ್ಸ, ಬಂಗಾರ ಆಭರಣ ತಯಾರಿ ಮಾಡುವವರಿಗೆ ಧನಲಾಭ, ಸಂತಾನ ನಿರೀಕ್ಷಣೆ ಶೀಘ್ರ ಸಿಹಿ ಸುದ್ದಿ , ಮದುವೆ ಚರ್ಚೆ ಭರದಿಂದ ನಡೆಯಲಿದೆ, ಕಚೇರಿ ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದೊಂದಿಗೆ ತೃಪ್ತಿದಾಯಕ ಬದುಕು, ವ್ಯಾಪಾರದಲ್ಲಿ ಹಣಕಾಸಿನ ಪ್ರಗತಿ, ಉದ್ಯೋಗ ಭಾಗ್ಯ, ಉನ್ನತ…
ದರ್ಶನ್ ರನ್ನು ನೋಡಲು ಬಳ್ಳಾರಿ ಜೈಲಿಗೆ ಬಂದಿದ್ದ ಮಹಿಳಾ ಅಭಿಮಾನಿಯೊಬ್ಬಕೆ ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗ ಹೈ ಡ್ರಾಮಾ ನಡೆಸಿದ್ದಾರೆ. ವಿಜಯಲಕ್ಷ್ಮಿ ತರ ನಾನು ದರ್ಶನ್ ರನ್ನು ಮದುವೆ ಆಗ್ತೀನಿ, ನನಗೆ ದರ್ಶನ್ ಇಷ್ಟ ಎಂದು ರಂಪ ಮಾಡಿದ್ದಾಳೆ. ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿಯಾಗಿದ್ದು ದರ್ಶನ್ ನನ್ನು ನೊಡಲೇಬೇಕು ಅಂತಾ ಬಳ್ಳಾರಿ ಸೆಂಟ್ರಲ್ ಜೈಲ್ ಬಳಿ ಬಂದಿದ್ದಾರೆ. ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್ ಕಾರ್ಡ್ ಹಿಡಿದು ಬಂದಿದ್ದಾರೆ. ಈ ವೇಳೆ ಜೈಲು ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಮಾಧ್ಯಮದವರ ಮುಂದೆ ಮಾತನಾಡಿದ ಮಹಿಳಾ ಅಭಿಮಾನಿ, ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಹಣ್ಣು ಕೊಟ್ಟು ನೋಡಿ ಹೋಗುವೆ. ಚಿಕನ್ ಬೇಕು ಎಂದರೆ ಮಾಡಿ ತರುವೆ ಎಂದು ಮಹಿಳಾ ಅಭಿಮಾನಿ ಪಟ್ಟು ಹಿಡಿದು ಕೂತಿದ್ದಾರೆ. ದರ್ಶನ್ ಏನ್ ತಪ್ಪು ಮಾಡಿದ್ದಾರೆ. ಬೇಕು ಅಂತಾ…
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರ ಶವವಾಗಿ ಪತ್ತೆಯಾಗಿರುವ ಘಟನೆ ಜರುಗಿದೆ. ವಿಜಯನಗರ ಜಿಲ್ಲೆ ಏಣಗಿ ಬಸಾಪುರ ಗ್ರಾಮದ ನಿವಾಸಿ 32 ವರ್ಷದ ರವಿಕುಮಾರ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ವ್ಯಕ್ತಿ. ಬೈಕ್ ಮೂಲಕ ಇಬ್ಬರು ಸವಾರರು ಸೇತುವೆ ದಾಟುತ್ತಿದ್ದರು. ಈ ವೇಳೆ ಕಾಲುಜಾರಿ ನೀರಿನ ರಭಸಕ್ಕೆ ಓರ್ವ ಸವಾರ ಕೊಚ್ಚಿ ಹೋಗಿದ್ದಾರೆ. ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನ ನೀರಿನಿಂದ ಮೇಲೆತ್ತಲು ಮತ್ತೋರ್ವ ಸವಾರ ಪ್ರಯತ್ನ ಪಟ್ಟಿದ್ದಾನೆ. ಆದರೆ ನೀರಿನ ರಭಸಕ್ಕೆ ಮೇಲೆ ಬರಲಾಗದೇ ರವಿಕುಮಾರ ಕೊಚ್ಚಿ ಹೋಗಿದ್ದು, ಇದೀಗ ಮೃತದೇಹ ಸಿಕ್ಕಿದೆ. ತಡರಾತ್ರಿ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಹಳ್ಳದಲ್ಲಿ ಕೊಚ್ಚಿ ಹೋಗಿರೋ ರವಿಕುಮಾರ್ ಗಾಗಿ ಶೋಧ ನಡೆಸಿದರು. ಕಾರ್ಯಚರಣೆಯಿಂದಾಗಿ ಇದೀಗ ರವಿಕುಮಾರ್ ಶವ ಪತ್ತೆಯಾಗಿದೆ. ಸೇತುವೆ ಕಿರಿದಾದದ ಹಿನ್ನೆಲೆ ಹಲವು ವರ್ಷಗಳಿಂದ ಅವಘಡ ಸಂಭವಿಸುತ್ತಿವೆ. ಹಲವಾರು ಬಾರಿ ಸೇತುವೆ…
ಸ್ಯಾಂಡಲ್‌ವುಡ್‌ನ ನವ ಜೋಡಿ ತರುಣ್ ಮತ್ತು ಸೋನಲ್ ತಿಂಗಳು ಕಳೆಯೋದ್ರಲ್ಲಿ ಎರಡನೇ ಸಲ ಮದುವೆ ಆಗಿದ್ದಾರೆ. ಈ ಮೊದಲು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಜೋಡಿ ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗಿದ್ದಾರೆ. ಮಂಗಳೂರಿನ ಚರ್ಚ್ ನಲ್ಲಿ ವಿವಾಹ ಆಗಿದ್ದಾರೆ. ಎರಡನೇ ಸಲ ಮದುವೆ ಆದ ಸಿನಿರಂಗದ ಎರಡನೇ ಜೋಡಿ ಇದಾಗಿದೆ. ಈ ಹಿಂದೆ ಚಿರಂಜೀವಿ ಮತ್ತು ಮೇಘನಾ ಎರಡು ಸಲ ಮದುವೆ ಆಗಿದ್ರು. ತರುಣ್ ಸುಧೀರ್ ಮತ್ತು ಸೋನಲ್ ಕಳೆದ ಆಗಸ್ಟ್ ತಿಂಗಳ 10 ಮತ್ತು 11 ರಂದು ಬೆಂಗಳೂರಿನಲ್ಲಿ ಸಾಕಷ್ಟು ಅದ್ದೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಇದೀಗ ಮಂಗಳೂರಿನ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರು ಬದಲಾಯಿಸಿಕೊಂಡಿದ್ದಾರೆ. ತರುಣ್ ಸುಧೀರ್ ವೈಟ್ ಆ್ಯಂಡ್ ಬ್ಲ್ಯಾಕ್ ಕಾಂಬಿನೇಷನ್ ಬ್ಲೆಜರ್ ತೊಟ್ಟಿದ್ದಾರೆ. ಸೋನಲ್ ಬಿಳಿ ಬಣ್ಣದ ಗೌನ್ ತೊಟ್ಟಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದಂತೇನೂ ಈ ಜೋಡಿ ಇದೀತ ಸತಿ-ಪತಿ ಆಗಿದ್ದಾರೆ. ತರುಣ್ ಮತ್ತು…