ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಯುವ ರಾಜಕಾರಣಿ ರಾಘವ್ ಚಡ್ಡಾ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಪರಿಣಿತಿ- ರಾಘವ್ ಮದುವೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೇ 13ರಂದು ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಪರಿಣಿತಿ ಹಾಗೂ ರಾಘವ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆ ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉದಯ್‌ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ ಮದುವೆ ಸ್ಥಳ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಅದ್ದೂರಿ ಮದುವೆಯಾಗಲು ಈ ಜೋಡಿ ನಿರ್ಧಾರ ಮಾಡಿದ್ದಾರೆ.
Author: Prajatv Kannada
ಬೆಂಗಳೂರು: ಪಂಚಮಸಾಲಿಗೆ 2 ಎ ಮೀಸಲಾತಿ ನೀಡದಂತೆ ಕೋರಿ ರಾಘವೇಂದ್ರ ಡಿ.ಜಿ. ಎಂಬುವರು ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಇಂದು ಬೆಂಗಳೂರಿನ ಹೈಕೋರ್ಟ್ ನ ವಿಭಾಗೀಯ ಪೀಠದಲ್ಲಿ ನಡೆಯಿತು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಸರ್ಕಾರದ ನಿಲುವು ತಿಳಿಸಲು ರಾಜ್ಯ ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾಲಾವಕಾಶ ಕೋರಿದರು. ಹೀಗಾಗಿ ಅರ್ಜಿದಾರರು ಹಾಗೂ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮಕುಮಾರ್ ಇನ್ನೂ ಹಿಂದುಳಿದ ವರ್ಗಗಳ ಆಯೋಗದ ವರದಿಯ ಪ್ರತಿಯನ್ನು ಸರ್ಕಾರ ತಮಗೆ ಒದಗಿಸಿಲ್ಲ. ಆಯೋಗ ವರದಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರ 2 ಸಿ, 2 ಡಿ ಮೀಸಲಾತಿ ನೀಡಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಮಾಹಿತಿ ಇದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಪ್ರತಿಯನ್ನು ತಮಗೆ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಪ್ರಸನ್ನ ಬಿ ವರಾಳೆ, ಮುಚ್ಚಿದ ಲಕೋಟೆಯಲ್ಲಿನ ವರದಿ ತೆರೆಯಲು…
ಬೆಂಗಳೂರು: ಗಣೇಶ ಮೂರ್ತಿ( ganesh idol) ಧ್ವಂಸಗೊಳಿಸಿದ ಘಟನೆ ಭಾನುವಾರ ತಡರಾತ್ರಿ ಬೆಂಗಳೂರಿನ(Bengaluru) ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಜೂರು ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಹೊಡೆದು ಧ್ವಂಸ ಮಾಡಿದ್ದಾರೆ. ಸುತ್ತಿಗೆಯಿಂದ ಗಣೇಶ ಮೂರ್ತಿಯ ಕುತ್ತಿಗೆ ಭಾಗಕ್ಕೆ ಹೊಡೆದು ಧ್ವಂಸ ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಗಣೇಶ ಮೂರ್ತಿಯನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. Video Player 00:00 00:41 ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಭಾನುವಾರ ತಡರಾತ್ರಿ ಹನ್ನೆರಡು ಗಂಟೆಗೆ ಕಿಡಿಗೇಡಿಯೊಬ್ಬ ಗುಂಜೂರು ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಣೇಶ ವಿಗ್ರಹಕ್ಕೆ ಸುತ್ತಿಗೆಯಿಂದ ಹೊಡೆದು ಹಾನಿಗೊಳಿಸಿದ್ದಾನೆ. 9 ಬಾರಿ ಸುತ್ತಿಗೆಯಿಂದ ಹೊಡೆದು ಮೂರ್ತಿಯ ಮುಖವನ್ನು ವಿರೂಪಗಳಿಸಿದ್ದಾನೆ. ಇದೀಗ ಸಿಸಿ ಟಿವಿಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರವಾಗಿದೆ.
ಬೆಂಗಳೂರು: ಅನರ್ಹರಿಗೆ BPL ಕಾರ್ಡ್ ಮಾಡಿಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸಿಎಂ ಗೆ ಪತ್ರ ಬರೆದಿರುವ ಅವರು, ದಿನಾಂಕ 14/05/2023 ರಿಂದೀಚೆಗೆ ಕರ್ನಾಟಕ ರಾಜ್ಯಾದ್ಯಂತ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರೂ ಸಹ BPL ಕಾರ್ಡುಗಳನ್ನು ಮಾಡಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದ್ದು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ / ನೌಕರರು ಪ್ರತಿಯೊಬ್ಬರಿಂದ ತಲಾ 05 ಸಾವಿರ ರೂಪಾಯಿಗಳಿಂದ 08 ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆದು BPL ಕಾರ್ಡುಗಳನ್ನು ಮಾಡಿಕೊಟ್ಟಿರುವುದು / ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ದಿನಾಂಕ 14/05/2023 ರಿಂದೀಚೆಗೆ BPL ಕಾರ್ಡುಗಳನ್ನು ನೀಡಿರುವಂತಹ ದಾಖಲೆಗಳನ್ನು ತಾವು ಕೂಡಲೇ ಖುದ್ದಾಗಿ ಪರಿಶೀಲಿಸಿದರೆ ಇದರ ಬಗೆಗಿನ ಸತ್ಯಾಂಶ ತಮಗೆ ಅರಿವಾಗುತ್ತದೆ ಎಂದಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವ 05 ಉಚಿತ ಯೋಜನೆಗಳನ್ನು ಪಡೆದುಕೊಳ್ಳಬೇಕೆಂಬ ದುರುದ್ದೇಶದಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜನರೂ ಸಹ ಆಹಾರ ಮತ್ತು,…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಸ್ಕೀಂ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದ್ದು, ಈ ಸಂಬಂಧ ಗಾಬರಿಯಾಗುವುದು ಬೇಡ. ಯಾರೂ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಮದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗ್ಯಾರಂಟಿ ಸ್ಕೀಂ (Guarantee Scheem) ಜಾರಿ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಯಾರು ಗಾಬರಿ ಆಗೋದು ಬೇಡ, ಊಹಾಪೋಹಗಳಿಗೆ ಕಿವಿಗೊಡೋದು ಬೇಡ. ನಾವು ಏನ್ ಹೇಳಿದ್ದೇವೆ ಅದನ್ನ ಮಾಡ್ತೀವಿ ಎಂದು ಭರವಸೆ ನೀಡಿದರು. ಅಲ್ಲದೆ ಯಾರು ಬೇಕಾದರೂ ಚರ್ಚೆ ಮಾಡಲಿ. ಬೈಯೋರು ಬೈಯಲಿ. ಎಲ್ಲರಿಗೂ ಮಾತಾಡೋಕೆ ವಾಕ್ ಸ್ವಾತಂತ್ರ್ಯ ಇದೆ ಎಂದು ಡಿಕೆಶಿ ಹೇಳಿದರು.
ಬೆಂಗಳೂರು: ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೆ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಿಳೆಯರಿಗೆ ಪಾಸ್ (Free Bus pass) ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಗ್ಗೆ ಜೂನ್ 1 ರಂದು ಕ್ಯಾಬಿನೆಟ್ ನಲ್ಲಿ ನಿರ್ಧಾರ ಆಗುತ್ತೆ. ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೇ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ. ಆದರೆ ಎಷ್ಟು ಜನ ಓಡಾಡ್ತಾರೆ ಅನ್ನೋ ಬಗ್ಗೆ ಮಾಹಿತಿ ಕೇಳಿದ್ದೇವೆ. ಸ್ಕೂಲ್ ಬಸ್ ಪಾಸ್ ನಂತೆ ಮಹಿಳೆಯರ ಬಸ್‍ಪಾಸ್‍ಗೂ ಇಲಾಖೆಗಳಿಗೆ ಹಣ ಕೊಡ್ತೇವೆ ಎಂದರು. ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಮಕ್ಕಳಿಗೆ ಬಸ್ ಪಾಸ್ ನಂತೆ ಮಹಿಳೆಯರ ಲೆಕ್ಕದಂತೆ ದುಡ್ಡು ಕೊಡಬೇಕಾಗುತ್ತದೆ. ವಿರೋಧ ಪಕ್ಷದವರು ರಚನಾತ್ಮಕವಾಗಿ ಟೀಕೆ ಮಾಡಲಿ. ಒಟ್ಟಿನಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟೆ ಕೊಡುತ್ತೇವೆ. ರಾಜ್ಯದ ಮಹಿಳೆಯರಿಗೆ ಮಾತ್ರ ಕೊಡುತ್ತೇವೆ ಎಂದು ತಿಳಿಸಿದರು.
ಒಟ್ಟಾವ: ಮದುವೆ ಸಮಾರಂಭದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ (Punjab Origin Gangster) ಬಲಿಯಾಗಿರುವ ಘಟನೆ ಕೆನಡಾದ (Canada) ವ್ಯಾಂಕೋವರ್ ನಗರದಲ್ಲಿ ನಡೆದಿದೆ. ತಡರಾತ್ರಿ ಸುಮಾರು 1:30ರ ವೇಳೆಗೆ ಗುಂಡಿನ ದಾಳಿ (Shotout) ನಡೆದಿದ್ದು, 28 ವರ್ಷದ ಅಮರ್ ಪ್ರೀತ್ (ಚುಕ್ಕಿ) ಬಲಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ಗಳಾಗಿದ್ದ ಅಮರ್ ಪ್ರೀತ್ ಸಹೋದರರಾದ ಸಮ್ರಾ ಮತ್ತು ರವೀಂದರ್ ಇಬ್ಬರೂ ಮದುವೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಾರಂಭಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳೂ ಸೇರಿದಂತೆ 60 ಮಂದಿ ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಉದ್ದೇಶಿತ ಗ್ಯಾಂಗ್ ವಾರ್ ಆಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಹಾಯವಾಣಿ ಮೊ.ಸಂ. 6047172500ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. 2022ರ ಆಗಸ್ಟ್‌ನಲ್ಲಿ ಕೆನಡಾ ಪೊಲೀಸರು ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದ 11 ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಅವರಲ್ಲಿ ಅಮರ್ ಪ್ರೀತ್ ಮತ್ತು ಸಹೋದರ ರವೀಂದರ್…
ನವದೆಹಲಿ: 9 ಸಾಲ್ (ಒಂಬತ್ತು ವರ್ಷ) – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಸಾಮಾನ್ಯ ಜನರ ಜೀವನ ನಾಟಕೀಯ ಬದಲಾವಣೆಯನ್ನು ಕಂಡಿದೆ. ಸರ್ಕಾರದ ಸಾಧನೆಗಳು ಜನರ ನಿರೀಕ್ಷೆಗಳನ್ನು ಮೀರಿದೆ ಎಂದು ಹೇಳಿದರು. ಭಾರತವು ಹಿಂದೆ ಭ್ರಷ್ಟಾಚಾರದಿಂದ ಕೂಡಿದ ದುರ್ಬಲ ಆರ್ಥಿಕತೆಯಿಂದ ಕೂಡಿತ್ತು.ಆದರೆ ಇಂದು ಅದು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಕೆಲವರಿಗೆ ಮಾತ್ರ ತಲುಪುತ್ತಿದ್ದವು, ಇಂದು ಸರ್ಕಾರ ಅಂತ್ಯೋದಯ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಕಟ್ಟಕಡೆಯ ವ್ಯಕ್ತಿಯ ಉನ್ನತಿಗೆ ಸರ್ಕಾರ ಬದ್ಧವಾಗಿದೆ.ಶೇ 27 ಜನರನ್ನು ಬಡತನದಿಂದ ಮೇಲೆತ್ತಿರುವ ನಮ್ಮ ಪ್ರಯತ್ನಗಳ ರಹಸ್ಯ ಇಲ್ಲಿದೆ ಎಂದು ಅವರು ಹೇಳಿದರು. ಸೇವೆಯ ಪ್ರಜ್ಞೆ, ದೊಡ್ಡ ಆಲೋಚನೆಗಳು, ಉತ್ತಮ ಆಡಳಿತ, ತಂತ್ರಜ್ಞಾನದ ಒಳಹರಿವು, ಮತ್ತು ವಿತರಣಾ ಕಾರ್ಯವಿಧಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ನಿರ್ಮಿಸುವುದು, ಸಾರ್ವಜನಿಕ…
ವಾಷಿಂಗ್ಟನ್: ಅಮೆರಿಕದ ನ್ಯೂಮೆಕ್ಸಿಕೋ ರಾಜ್ಯದಲ್ಲಿ ಶನಿವಾರ ಬೈಕ್ ರ್ಯಾಲಿ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನ್ಯೂಮೆಕ್ಸಿಕೋದ ರೆಡ್ ರಿವರ್ ನಗರದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಸುಮಾರು 20,000 ಬೈಕ್ ಸವಾರರು ಪಾಲ್ಗೊಂಡಿದ್ದರು. ಸ್ಥಳೀಯ ಕಾಲಮಾನ ಸಂಜೆ 5 ಗಂಟೆಯ ವೇಳೆ ಪ್ರೇಕ್ಷಕರ ಗುಂಪಿನಲ್ಲಿ ಏಕಾಏಕಿ ಗದ್ದಲ ಕಾಣಿಸಿಕೊಂಡಿದ್ದು ಜನ ಗಾಭರಿಗೊಂಡು ಓಡಿದ್ದಾರೆ. ಅಷ್ಟರಲ್ಲಿ ಗುಂಡು ಹಾರಿಸಿದ ಸದ್ದೂ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ದಾಖಲಾಗಿದೆ. ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರದ ಮೇಯರ್ ಲಿಂಡಾ ಕಲ್ಹಾನ್ ತಿಳಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಭಾನುವಾರ ಎರಡು ಭಾರಿ ಭೂಕಂಪಗಳು ಸಂಭವಿಸಿದ್ದು, ಪರಿಣಾಮ ಖೈಬರ್ ಪಖ್ತುಂಕ್ವಾದ ಬಟ್ಟಗ್ರಾಮ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಹವಾಮಾನ ಇಲಾಖೆ ಪ್ರಕಾರ, ಭಾನುವಾರ ಬೆಳಗ್ಗೆ 10:50 ಕ್ಕೆ ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶದಲ್ಲಿ 6.0 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಬಳಿಕ ಸಂಜೆ 5:57 ಕ್ಕೆ ಅಫ್ಘಾನಿಸ್ತಾನದ ಜಲಾಲಾಬಾದ್ ಬಳಿ 15 ಕಿಮೀ ಆಳದಲ್ಲಿ 4.7 ರ ತೀವ್ರತೆಯ ಭೂಕಂಪ ಸಂಭವಿಸಿತು ಎಂದು ಪಿಡಿಎಂ ತಿಳಿಸಿದೆ. ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಖೈಬರ್ ಪಖ್ತುಂಖ್ವಾದ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಬಟ್ಟಗ್ರಾಮ್‌ನ ಬಟ್‌ಕೋಲ್‌ನ ಹಾಡೋ ಪ್ರದೇಶದಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಭೂಕಂಪದ ವೇಳೆ ಕುಸಿದು ಬಿದ್ದ ದನದ ಕೊಟ್ಟಿಗೆಯ ಛಾವಣಿಯ ಮೇಲೆ ಮಕ್ಕಳು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.