Author: Prajatv Kannada

ಮೈಸೂರು: ಖಾಸಗಿ ಬಸ್ (Private Bus) ಹಾಗೂ ಇನ್ನೋವಾ (Innova Car) ನಡುವೆ ನಡೆದ ಅಪಘಾತದಲ್ಲಿ 8 ಮಂದಿ ದುರ್ಮರಣಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಕೊಳ್ಳೇಗಾಲದ ಟಿ.ನರಸೀಪುರ (T- Narasipura) ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಗುರುತಿ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಗು ಸೇರಿ ಹಲವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರ್ ನಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನರಸೀಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ..

Read More

ಚಿಕ್ಕೋಡಿ: ಮನುಷ್ಯನಿಗೆ ದೂರದೃಷ್ಟಿ ಮತ್ತು ತಾಳ್ಮೆ ರಾಜಕೀಯದಲ್ಲಿ ಬಹಳ ಮುಖ್ಯ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗಂತೂ ನಿರಾಸೆ ಆಗಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ. ಅಥಣಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಸವದಿ, ನಿರೀಕ್ಷೆ ಯಾರಿಗೆ ಇರಲ್ಲ, ಎಲ್ಲರಿಗೂ ಸಹ ನಿರೀಕ್ಷೆ ಇದ್ದೇ ಇರುತ್ತದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಸಚಿವರಾಗಬೇಕು, ನಂತರ ಡಿಸಿಎಂ ಆಗಬೇಕು, ಬಳಿಕ ಸಿಎಂ ಆಗಬೇಕು ಎಂದು ನಿರೀಕ್ಷೆ ಇಟ್ಟಿರುತ್ತಾರೆ. ಆಸೆಗಳಿಗೆ ಕೊನೆ ಯಾವತ್ತೂ ಇರುವುದಿಲ್ಲ. ಅದು ಮನುಷ್ಯನ ಸ್ವಾಭಾವಿಕ ಮನಸ್ಥಿತಿ ಎಂದರು. ಎರಡೂವರೆ ವರ್ಷ ಮಾತ್ರ ಸಿದ್ದರಾ ಮಯ್ಯ ಸಿಎಂ ಆಗಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಹೈಕಮಾಂಡ್‌ನಲ್ಲಿ ಯಾವ ರೀತಿ ಚರ್ಚೆ ಆಗಿದೆ ಗೊತ್ತಿಲ್ಲ. ಅವು 4 ಗೋಡೆಗಳ ಮಧ್ಯೆ ನಡೆದಿರುವಂತದ್ದು. ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರ ನಡುವೆ ನಡೆದ ಚರ್ಚೆಯನ್ನು ಬಹಿರಂಗಪಡಿಸಿಲ್ಲ. ಹೊರಗಡೆ ಕೇವಲ ಊಹಾಪೋಹಗಳು ಮಾತ್ರ ಇವೆ. ಅವುಗಳಿಗೆ ರೆಕ್ಕೆಪುಕ್ಕ…

Read More

ಉಡುಪಿ: ಉದ್ಯೋಗ (Job) ಸಿಗದೆ ಬೇಸತ್ತು ಖಿನ್ನತೆಗೆ ಒಳಗಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ನಡೆದಿದೆ. ಕಾಲ್ತೋಡು ಗ್ರಾಮದ ಗೌತಮಿ (22) ಆತ್ಮಹತ್ಯೆಗೆ ಶರಣಾದ ಯುವತಿ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ ಕಾಮ್ (M.Com) ಮುಗಿಸಿ ಬ್ಯಾಂಕಿಂಗ್ ಪರೀಕ್ಷೆ (Banking Exam) ಹಾಗೂ ಇತರೆ ಕಂಪನಿ ನೇಮಕಾತಿಗೆ ಪರೀಕ್ಷೆ ಬರೆದಿದ್ದರೂ ಗೌತಮಿಗೆ ಉದ್ಯೋಗ ಸಿಕ್ಕಿರಲಿಲ್ಲ. ಮನನೊಂದು ಡೆತ್ ನೋಟ್ ಬರೆದಿಟ್ಟು ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read More

ಬೆಳಗಾವಿ: ಚುನಾವಣೆಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್ (Guarantee Card) ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೆ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿವೆ. ನಾವು ಜಾರಿಗೊಳಿಸುತ್ತೇವೆ ಎಂದರು. ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬೈಲೂರು ಮಠಕ್ಕೆ ಬಂದಿರುವೆ. ನಿಜಗುಣಾನಂದ ಸ್ವಾಮೀಜಿ ಹಾಗೂ ನಮ್ಮ ಹೋರಾಟ ಒಂದೇ ಇದೆ. ಸ್ವಾಮೀಜಿಗಳ ಜೊತೆಗೂಡಿ ಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ಸ್ವಾಮೀಜಿಗೆ…

Read More

ಶಿವಮೊಗ್ಗ: ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ಹೊರಡಿಸಿದ ಮಾದರಿಯಲ್ಲಿ ಅತಿಥಿಗಳಿಗೆ ಆಹ್ವಾನ ನೀಡಿರುವ ಕುವೆಂಪು ವಿಶ್ವವಿದ್ಯಾ ನಿಲಯದ (Kuvempu University) ಕುಲಪತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ರಾಜಕಾರಣಿ ಆಗಿರಲಿ, ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು, ಸರ್ಕಾರದ ಲೆಟರ್‌ಹೆಡ್‌ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದರೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸರ್ಕಾರದ ಲೆಟರ್‌ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿ ಆಹ್ವಾನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ವಿವಿಯ ಕುಲಪತಿ‌ ಹೊರಡಿಸಿರುವ ಸುತ್ತೋಲೆ ಪತ್ರ ಎಲ್ಲೆಡೆ ವೈರಲ್ ಆಗಿದ್ದು, ಪರ-ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ  ಮೂಲಕ ಕುಲಪತಿಯವರು ಎಡವಟ್ಟು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಕುವೆಂಪು ವಿಶ್ವವಿದ್ಯಾನಿಲಯದ ಲೋಗೋ ಇರುವ ಸರ್ಕಾರಿ ಲೆಟರ್‌ನಲ್ಲಿ ಸುತ್ತೋಲೆ ಹೊರಡಿಸಿರುವ ಅವರು ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ಸಿಬ್ಬಂದಿ ತಮ್ಮ ಮನೆಯ ಖಾಸಗಿ ಸಮಾರಂಭಕ್ಕೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ಧಾರೆ. ಇದು ಫರ್ಮಾನು ಹೊರಡಿಸಿದ…

Read More

ಹಿರೇಹರಕುಣಿ ದಲಿತರಿಗೆ ಸ್ಮಶಾನ‌ ಭೂಮಿ ನೀಡಲು ಅಗ್ರಹಿಸಿ ಧಾರವಾಡದಲ್ಲಿ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ದಲಿತ ನಿವಾಸಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ ಹಲವು ದಶಕಳಿಂದ ಹಿಂದೂ ಸಮುದಾಯದ ಎಲ್ಲರೂ ಒಂದೇ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಕಾರ್ಯ ಮಾಡಿಕೊಂಡು ಬರಲಾಗುತಿತ್ತು. ಆದರೆ ಇತ್ತೀಚೆಗೆ ಈ ಹಿಂದೆ ಅಂತ್ಯಕ್ರಿಯೆ ನಡೆಸಲಾಗುತ್ತಿದ್ದ ಜಾಗ, ನಮ್ಮದು ಎಂದು ಬೇರೆ ಹಿಂದೂ ಸಮುದಾಯದ ಮುಖಂಡರು ದಲಿತರಿ ಅಂತ್ಯಕ್ರಿಯೆ ಕಾರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದರಿಂದಾಗಿ ದಲಿತರಿಗೆ ಹಿರೇಹರಕುಣಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದಲಾಗಿದೆ. ಹಾಗಾಗಿ ಈ ಕೂಡಲೇ ರಾಜ್ಯ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಮ್ಮಗೆ ರುದ್ರಭೂಮಿ ನೀಡಬೇಕು ಎಂದು ಅಗ್ರಹಿಸಿ. ಒಂದು ವೇಳೆ ಇದರಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಇದೇವೇಳೆ ಎಚ್ಚರಿಕೆ ನೀಡಿದರು.

Read More

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2023) ತೆರೆಬೀಳುತ್ತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಗುಜರಾತ್ ಟೈಟಾನ್ಸ್ (CSK vs GT) ಪೈಕಿ ಒಂದು ತಂಡ ಚಾಂಪಿಯನ್ ಆಗಿರುತ್ತಿತ್ತು. ಆದರೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗದೆ ಪಂದ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಅಲ್ಲದೆ ಸೋಮವಾರ ಮೀಸಲು ದಿನಕ್ಕೆ ಐಪಿಎಲ್ 2023 ಫೈನಲ್ (IPL Final) ಪಂದ್ಯವನ್ನು ಮುಂದುಡಲಾಯಿತು. ಅದರಂತೆ ಇಂದು ಸಿಎಸ್​ಕೆ- ಜಿಟಿ ನಡುವೆ ಅಂತಿಮ ಕಾದಾಟವನ್ನು ಆಯೋಜಿಸಲಾಗಿದೆ. ಸಿಎಸ್​ಕೆ ತಂಡ ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಕ್ವಾಲಿಫೈಯರ್-1 ರಲ್ಲಿ ಇದೇ ಗುಜರಾತ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್​ಗೆ ಪ್ರವೇಶ ಪಡೆದಿರುವುದು ಪ್ಲಸ್ ಪಾಯಿಂಟ್. ಚೆನ್ನೈ ಓಪನರ್​ಗಳಾದ ರುತುರಾಯ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಭರ್ಜರಿ ಫಾರ್ಮ್​ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸಿಎಸ್​ಕೆ ಪರ ಶಿವಂ ದುಬೆ ಪ್ರತಿ…

Read More

ಜೈಪುರ: ಮಹಿಳೆಯೊಬ್ಬಳನ್ನು ಕೊಂದು ಬಳಿಕ ಆಕೆಯನ್ನು ಮಾಂಸವನ್ನು ತಿಂದ ಪ್ರಕರಣ ಸಂಬಂಧ 24 ವರ್ಷದ ಯುವಕನೊಬ್ಬನನ್ನು ರಾಜಸ್ಥಾನ (Rajasthan) ದ ಪೊಲೀಸರು ಬಂಧಿಸಿದ್ದಾರೆ. ಈ ಅಚ್ಚರಿಯ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಯುವಕನನ್ನು ಸುರೇಂದ್ರ ಠಾಕೂರ್ (Surendra Thakur) ಎಂದು ಗುರುತಿಸಲಾಗಿದ್ದು, ಈತ ಹೈಡ್ರೋಫೋಬಿಯಾದಿಂದ ಬಳಲುತ್ತಿರುವುದಾಗಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ವಿಚಾರಣೆಯ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸುರೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುರೇಂದ್ರ ಆರೋಗ್ಯದ ಬಗ್ಗೆ ಬಂಗಾರ್ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯಿಸಿ, ಸುರೇಂದ್ರ ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದಾನೆ. ಆತನಿಗೆ ಈ ಹಿಂದೆ ನಾಯಿಯೊಂದು ಕಚ್ಚಿರಬೇಕು. ಬಳಿಕ ಸರಿಯಾದ ಚಿಕಿತ್ಸೆ ಪಡೆದಿಲ್ಲ ಅನಿಸ್ತದೆ. ಹೀಗಾಗಿ ಸದ್ಯ ಆತ ಕೊನೆಯ ಹಂತದ ರೇಬಿಸ್‍ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ.  ಮಹಿಳೆಯ ಕೊಲೆಗೈಯುವ ದೃಶ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಮಾತನಾಡಿ, 65 ವರ್ಷದ ಶಾಂತಿ ದೇವಿಯವರು ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸುರೇಂದ್ರ ಏಕಾಏಕಿ…

Read More

ನವದೆಹಲಿ: ನೂತನ ಸಂಸತ್‌ ಭವನ (New Parliament Building) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಟ್ಟಾಭಿಷೇಕದಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಟೀಕಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಸಂಸತ್‌ ಜನರ ಧ್ವನಿ. ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ಮಹಾಮಸ್ತಕಾಭಿಷೇಕ ಎಂದು ಪರಿಗಣಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. https://twitter.com/RahulGandhi/status/1662711995660107778?ref_src=twsrc%5Etfw%7Ctwcamp%5Etweetembed%7Ctwterm%5E1662711995660107778%7Ctwgr%5E2f724d6e92c13fefc19cec1270f47d4a731f3ae3%7Ctwcon%5Es1_&ref_url=https%3A%2F%2Fpublictv.in%2Ftreating-inauguration-like-coronation-rahul-gandhi-rips-into-pm-modi-over-new-parliament-house%2F ಹೊಸ ಸಂಸತ್‌ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದ ಕುಸ್ತಿಪಟುಗಳ ಬಂಧನ ಖಂಡಿಸಿ ಟ್ವೀಟ್‌ ಮಾಡಿರುವ ಅವರು, ಪಟ್ಟಾಭಿಷೇಕ ಮುಗಿಯಿತು. ಬೀದಿಗಿಳಿದು ಸಾರ್ವಜನಿಕರ ದನಿಯನ್ನು ತುಳಿಯುತ್ತಿರುವ ‘ಅಹಂಕಾರಿ ರಾಜ’ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿರೋಧ ಪಕ್ಷಗಳ ಬಹಿಷ್ಕಾರದ ಕರೆ ನಡುವೆ ಭಾನುವಾರ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸಂಸತ್‌ ಭವನದಲ್ಲಿ ಪೂಜೆ, ಹೋಮ-ಹವನ ಸೇರಿದಂತೆ ಕಾರ್ಯಕ್ರಮ ನಡೆಯಿತು.

Read More

ಬೆಂಗಳೂರು: ನಗರದಲ್ಲಿ ಬಿರುಗಾಳಿ, ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ (Heavy Rain) ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಸಿದೆ. ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ (Bengaluru City), ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಮಂಡ್ಯ (Mandya) ಜಿಲ್ಲೆ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಲಿದೆ ಎಂದೂ ಹೇಳಿದೆ. ಈಗಾಗಲೇ ಮಳೆ ಆವರಿಸಿದ್ದು, ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ ಸೇರಿದಂತೆ ಹಲವೆಡೆ ಕಳೆದ ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿಯುತ್ತಿದ್ದು, ಸೋಮವಾರದಿಂದ (ಮೇ 29) ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಕರಾವಳಿ, ದಕ್ಷಿಣ ಒಳನಾಡಿನ ಕೆಲವಡೆ ಧಾರಾಕಾರ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರ ವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆಯಿದೆ. ಇನ್ನೂ ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು,…

Read More