ಇತ್ತೀಚೆಗೆ ಅದ್ದೂರಿಯಾಗಿ ಹಸೆಮಣೆ ಏರಿರುವ ನಟಿ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ದಾರ್ಥ್ ಮೆಲ್ಹೋತ್ರಾ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಹಾಯಾಗಿ ವಿದೇಶ ಪ್ರವಾಸ ಮಾಡುತ್ತಾ, ಸಿನಿಮಾದ ಕೆಲಸಗಳನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಇದೀಗ ನಟಿ ಕಿಯಾರಾ ಅಡ್ವಾಣಿ ದುಬಾರಿ ಕಾರು ಖರಿದಿಸುವ ಮೂಲಕ ಸದ್ದು ಮಾಡ್ತಿದ್ದಾರೆ. ಕಿಯಾರಾ ಮರ್ಸೀಡಿಸ್ ಬೆಂಜ್ ಮೆಬ್ಯಾಕ್ ಕಾರನ್ನು ಖರೀದಿ ಮಾಡಿದ್ದಾರೆ. ಇದರಲ್ಲೇ ಅವರು ಪ್ರಯಾಣ ಬೆಳೆಸಿದ್ದು, ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಕಿಯಾರಾ ಖರೀದಿಸಿರುವ ಕಾರಿನ ಬೆಲೆ 3.40 ಕೋಟಿ ರೂ ಆಗಿದೆ. ಮಂಗಳವಾರ (ಮೇ 30) ಕಿಯಾರಾ ಅವರು ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಕಾರಿನಲ್ಲೇ ಆಗಮಿಸಿದ್ದರು. ಅಲ್ಲಿದ್ದ ಪಾಪರಾಜಿಗಳ ಕ್ಯಾಮೆರಾದಲ್ಲಿ ಈ ಕಾರಿನ ಫೋಟೋ, ವಿಡಿಯೋ ಸೆರೆಯಾಗಿದೆ.
Author: Prajatv Kannada
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಸದ್ಯ ಭಾರತ ಕಂಡ ಅಪ್ರತಿಮ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಕುರಿತಾಗಿ ಬಯೋಪಿಕ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ನಾಯಕನಾಗಿ, ಬಿಸಿಸಿಐನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ದಾದಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಪ್ರೀಪ್ರೊಡಕ್ಷನ್ ಹಂತದಲ್ಲಿ ಇದ್ದು, ಸದ್ಯದಲ್ಲೇ ಸೆಟ್ಟೇರಲಿದೆ. ಸೌರವ್ ಗಂಗೂಲಿ ಪಾತ್ರಕ್ಕೆ ನಟ ಆಯುಷ್ಮಾನ್ ಖುರಾನ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆಯುಷ್ಮಾನ್ ಖುರಾನಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಆಯುಷ್ಮಾನ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ.ಹೀಗಾಗಿ ಆಯುಷ್ಮಾನ್ ಸಿನಿಮಾಗೆ ಬಂಡವಾಳ ಹೂಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಆಯುಷ್ಮಾನ್ ಈಗ ದಾದಾ ಬಯೋಪಿಕ್ನಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆ ನಿರ್ಮಾಪಕರು ಈಗಾಗಲೇ ಕೆಲವು ಹಂತದ ಮಾತುಕತೆ ನಡೆಸಿದ್ದಾರೆ. ಕಳೆದ ಕೆಲ ತಿಂಗಳಿಂದ ಚರ್ಚೆ ನಡೆಯುತ್ತಿದೆ. ಆಯುಷ್ಮಾನ್ ಅವರು ಹಲವು ರೀತಿಯ ಪಾತ್ರಗಳ ಮೂಲಕ ಗಮನ…
ಕಿರುತೆರೆಯ ಖ್ಯಾತ ಜೊತೆ ಜೊತೆಯಲಿ ಮೂಲಕ ಧಾರವಾಹಿ ಅನು ಸಿರಿಮನೆ ಎಂದೇ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಮೇಘ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದ್ಯ ಜೊತೆ ಜೊತೆಯಲಿ ಧಾರವಾಹಿ ಮುಗಿದಿದ್ದು ಮೇಘಾ ಶೆಟ್ಟಿ ಫುಲ್ ಟೈಂ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟಿ ದಿನನಿತ್ಯ ಸಾಮಾಜಿಕ ಜಾಲಾ ತಾಣದಲ್ಲಿ ತರಹೇವಾರಿ ಫೋಟೋ ಹಂಚಿಕೊಳ್ಳುವ ಮೂಲಕ ಇಂಟರ್‌ನೆಟ್ ನಲ್ಲಿ ಸಂಚಲನ ಮೂಡಿಸಿದ್ದಾರೆ. ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ವೃತ್ತಿ ಬದುಕು ಆರಂಭಿಸಿದ ಕರಾವಳಿ ಬ್ಯೂಟಿ ನಟಿ ಮೇಘಾ ಶೆಟ್ಟಿ ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಮೇಘಾ ಶೆಟ್ಟಿ ಇದೀಗ ತಮ್ಮ ಮನಮೋಹಕ ಫೋಟೋಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ಬಿಳಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಮಿರಿ ಮಿರಿ ಮಿಂಚಿರುವ ನಟಿ ನೀರಿನ ಮಧ್ಯೆ ಬೆಡ್ ಹಾಕಿ, ಅದರ ಮೇಲೆ ಕುಳಿತು ಫೋಟೋ ಶೂಟ್ ಮಾಡಿಸಿದ್ದರು. ಫೋಟೋ…
ಬಾಲಿವುಡ್ ಬ್ಯೂಟಿ ನಟಿ ಬಿಪಾಶಾ ಬಸು ಕೆಲ ತಿಂಗಳುಗಳ ಹಿಂದಷ್ಟೇ ಮುದ್ದು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳು ದೇವಿಗಾಗಿ ಬಿಪಾಶಾ ದಂಪತಿ ದುಬಾರಿ ಕಾರನ್ನು ಖರೀದಿಸಿದ್ದಾರೆ. ಹಿಂದಿ ಸಿನಿಮಾ ರಂಗದಲ್ಲಿ ಕಿಚ್ಚು ಹಚ್ಚಿದ್ದ ನಟಿ ಬಿಪಾಶಾ ಬಸು ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ನಟ ಕರಣ್ ಗ್ರೋವರ್ ಅವರನ್ನ ಪ್ರೀತಿಸಿ ಮದುವೆಯಾದರು. ಮದುವೆಯಾದ ಸಾಕಷ್ಟು ವರ್ಷಗಳ ಬಳಿಕ ಮುದ್ದಾದ ಹೆಣ್ಣು ಮಗುವಿಗೆ ಬಿಪಾಶಾ ಜನ್ಮ ನೀಡಿದ್ದಾರೆ. ಸದ್ಯ ಬಿಪಾಶಾ ಬಸು ಹಾಗೂ ಕರಣ್ ಗ್ರೋವರ್ ದಂಪತಿ ಮಗಳಿಗಾಗಿ Audi Q7 ಕಾರನ್ನ ಖರೀದಿಸಿದ್ದಾರೆ. 90 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ‘ಅಡಿ ಕ್ಯೂ 7’ ಕಾರನ್ನ ಬಿಪಾಶಾ ದಂಪತಿ ಖರೀದಿಸಿದ್ದು ಕಾರಿನ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲವಂಗ ಎಂದರೆ ಅದನ್ನು ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ. ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ಕೆಲವೊಮ್ಮೆ ಅತಿಯಾದ ಆಯಾಸದಿಂದ ಆಲಸ್ಯ ಬಂದುಬಿಡುತ್ತದೆ. ಅತಿಯಾದ ಸೋಮಾರಿತನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಆ ಸಮಯದಲ್ಲಿ ಲವಂಗದೆಣ್ಣೆಯನ್ನು ನೀವು ಸೇವಿಸುವ ಆರೋಗ್ಯಕರ ಪಾನೀಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸಿ. ಇದರಿಂದ ಆಲಸ್ಯ ದೂರವಾಗಿ ಚೈತನ್ಯ ಮೂಡುತ್ತದೆ. ಲವಂಗದೆಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಮನೆ ಸುಗಂಧಭರಿತವಾಗುತ್ತದೆ. ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗದೆಇರುವುದರಿಂದ ಬರುವ ದುರ್ಗಂಧ ದೂರವಾಗುತ್ತದೆ. ಅಡುಗೆ ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆಗಳು ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುಡಿಸಿ ನೀರು ಆವಿಯಾದಂತೆಲ್ಲ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ. ಕಾಫಿ, ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ…
ಸಿಂಗಾಪುರ: ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಅರ್ಚಕ ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1 ಮಿಲಿಯನ್ ಮೌಲ್ಯದ ಚಿನ್ನಾಭರಣಗಳನ್ನು ಪದೇ ಪದೇ ಗಿರವಿ ಇಟ್ಟು ಹಣ ಪಡೆದ ಆರೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಸೌತ್ ಬ್ರಿಡ್ಜ್ ರೋಡ್‌ನಲ್ಲಿರುವ ಶ್ರೀ ಮಾರಿಯಮ್ಮನ್ ದೇವಸ್ಥಾನದ ಅರ್ಚಕ ಕಂದಸಾಮಿ ಸೇನಾಪತಿ ಅವರು ಆಭರಣಗಳನ್ನು ಗಿರವಿ ಇಡುವ ಮೂಲಕ $2.3 ಮಿಲಿಯನ್ (ಸಿಂಗಪೋರಿಯನ್) ಗಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು ಇದೀಗ ಆರು ವರ್ಷ ಜೈಲು ಶಿಕ್ಷೆಗೊಳಗಾಗಿದ್ದಾರೆ. ಕಂದಸಾಮಿ ಅವರು ಡಿಸೆಂಬರ್ 2013 ರಲ್ಲಿ ಹಿಂದೂ ದತ್ತಿ ಮಂಡಳಿ ನಲ್ಲಿ ಉದ್ಯೋಗಿಯಾಗಿದ್ದು, ಜುಲೈ 2018 ರಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬಡ್ತಿ ಪಡೆದರು ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನಿಸ್ ಸೀ ನ್ಯಾಯಾಲಯಕ್ಕೆ ತಿಳಿಸಿದ್ದರು. 2014 ರಲ್ಲಿ, ದೇವಾಲಯದ ಪವಿತ್ರ ಗರ್ಭಗುಡಿಯ…
12 ವರ್ಷದ ಅದ್ಭುತ ಪ್ರತಿಭೆ ಕ್ಲೋವಿಸ್ ಹಂಗ್ ಕ್ಯಾಲಿಫೋರ್ನಿಯಾದ ಫುಲ್ಲರ್ಟನ್ ಕಾಲೇಜಿನಿಂದ 5 ಪದವಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅತ್ಯಂತ ಕಿರಿಯ ಪದವೀಧರರಾಗಿದ್ದ 13 ವರ್ಷದ ಜ್ಯಾಕ್ ರಿಕೊ ಅವರು ನಿರ್ಮಿಸಿದ ಹಿಂದಿನ ದಾಖಲೆಯಿಂದ ಪ್ರೇರಿತರಾಗಿ 9 ನೇ ವಯಸ್ಸಿನಲ್ಲಿ ಕ್ಲೋವಿಸ್ ಹಂಗ್ ತಮ್ಮ ಕಾಲೇಜಿನ ಪ್ರಯಾಣ ಪ್ರಾರಂಭಿಸಿದರು ಎಂದು ಎನ್ಬಿಸಿ ವರದಿ ಮಾಡಿದೆ. ರಿಕೊ ಸಾಧನೆಯಿಂದ ಪ್ರೇರಿತರಾದ ಕ್ಲೋವಿಸ್ ಹಂಗ್, ರಿಕೊರಂತೆ ಹೆಚ್ಚು ಓದುವ ಆಸೆಯನ್ನು ಇಟ್ಟುಕೊಂಡ ಹಂಗ್ ಅವರ ಧಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆ ಎಂದು ಒಹಿಸಿರಲಿಲ್ಲ ಎಂದು ತಿಳಿಸಿದರು. ಪದವಿ ಪ್ರದಾನ ದಿನದಂದು, ಹಂಗ್ ಹೆಮ್ಮೆಯಿಂದ ಟೋಪಿ ಮತ್ತು ಗೌನ್ ಧರಿಸಿ ವೇದಿಕೆಯ ಮೇಲೆ ಅವರ ವಯಸ್ಸಿಗಿಂತ ದೊಡ್ಡವರಾದ ಸಹ ಪದವೀಧರರ ಜೊತೆ ಸಮಾರಂಭದಲ್ಲಿ ಭಾಗಿಯಾದರು. ಅವರು ಇತಿಹಾಸ, ಸಮಾಜ ವಿಜ್ಞಾನ, ಸಾಮಾಜಿಕ ನಡವಳಿಕೆ ಮತ್ತು ಸ್ವ-ಅಭಿವೃದ್ಧಿ, ಕಲೆ ಮತ್ತು ಮಾನವ ಅಭಿವ್ಯಕ್ತಿ, ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಐದು ಸಹಾಯಕ ಕಲಾ ಪದವಿಗಳನ್ನು…
ಲಂಡನ್ : ‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್ ಇದೀಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿದೆ. ಇದು ಸುಮಾರು ₹ 2.04 ಕೋಟಿ ಬೆಲೆಯದ್ದಾಗಿದ್ದು ಅದನ್ನು ರಫ್ತು ಮಾಡದಂತೆ ಬ್ರಿಟನ್ ಸರ್ಕಾರ ನಿಷೇಧ ಹೇರಿದೆ. ಭಾರತ ಮತ್ತು ಇಂಗ್ಲೆಂಡ್ ಇತಿಹಾಸ ಮತ್ತು ‘ಹೋರಾಟದ ಅವಧಿ’ಯ ಸಾರ್ವಜನಿಕ ಅಧ್ಯಯನದ ಉದ್ದೇಶಕ್ಕಾಗಿ ಬ್ರಿಟನ್ ಮೂಲದ ಸಂಸ್ಥೆಗೆ ಈ ಗನ್ ಅನ್ನು ಸ್ವಾಧೀನಕ್ಕೆ ಪಡೆಯಲು ಸಮಯಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ‘ಫ್ಲಿಂಟ್‌ಲಾಕ್ ಸ್ಪೋರ್ಟಿಂಗ್ ಗನ್’ನ ವಿಲೇವಾರಿಗೆ ನಿಷೇಧ ಹೇರುವ ತೀರ್ಮಾನವನ್ನು ಬ್ರಿಟನ್‌ನ ಕಲಾ ಮತ್ತು ಪಾರಂಪರಿಕ ಸಚಿವ ಲಾರ್ಡ್ ಸ್ಟೀಫನ್ ಪಾರ್ಕಿನ್‌ಸನ್ ಅವರು ಕಳೆದ ವಾರ ತೆಗೆದುಕೊಂಡಿದ್ದಾರೆ. ಸಾಂಸ್ಕೃತಿಕ ಮಹತ್ವದ ಕಲೆ ಮತ್ತು ಪರಿಕರಗಳ ರಫ್ತು ಕುರಿತ ಪರಿಶೀಲನಾ ಸಮಿತಿಯು (ಆರ್‌ಸಿಇಡಬ್ಲ್ಯುಎ) ಈ ಬಗ್ಗೆ ವರದಿ ಸಲ್ಲಿಸಿತ್ತು. 14 ಬೋರ್‌ನ ಈ ಗನ್ ಅನ್ನು 1793 ಮತ್ತು 1794ರ ನಡುವೆ ತಯಾರಿಸಲಾಗಿದೆ. ಹಕ್ಕಿಗಳನ್ನು ಶೂಟ್ ಮಾಡುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ.…
ಹೊಸದಿಲ್ಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರು. ಮೂರು ದಿನಗಳ ಮಣಿಪುರ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಶಾ ಅವರು ಮಂಗಳವಾರ ಬೆಳಗ್ಗೆ ಸಿಎಂ ಬಿರೇನ್ ಸಿಂಗ್, ರಾಜ್ಯ ಸಚಿವರು, ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಜತೆ ಮಹತ್ವದ ಸಭೆ ನಡೆಸಿದರು. ಕಳೆದ 27 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅದಕ್ಕೆ ಕಾರಣವಾದ ಅಂಶಗಳು, ಕ್ಷಿಪ್ರವಾಗಿ ಶಾಂತಿ ಸ್ಥಾಪನೆಯ ಸೂತ್ರಗಳ ಬಗ್ಗೆ ಅವಲೋಕಿಸಿದರು. ಈ ವೇಳೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು. ನಾಲ್ಕು ನಿರ್ಣಯಗಳು 1. ಶಾಂತಿ ಕದಡುವ ದಂಗೆಕೋರರು ಅಥವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಪೊಲೀಸ್…
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬಸ್ ಚಾಲಕನಿಂದ ಅವಘಡ ನಡೆದಿದ್ದು ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸರ್ಕಾರಿ ಬಸ್ ಪೆಟ್ರೋಲ್ ಬಂಕ್ಗೆ ನುಗ್ಗಿರುವ ಘಟನೆ ಜಿಲ್ಲೆಯ ಸಿಂದಗಿ ನಗರದಲ್ಲಿ ನಿನ್ನೆ (ಮೇ.30) ರಂದು ನಡೆದಿದೆ.