Author: Prajatv Kannada

ಹುಬ್ಬಳ್ಳಿ: ನಾಗಪುರದಿಂದ ಯಾರೇ ಬಂದರೂ ಅವರಿಂದ ಯಶಸ್ವಿ ಚುನಾವಣೆ ಮಾಡಲು ಆಗುವುದಿಲ್ಲ. ಸ್ಥಳೀಯವಾಗಿ ನಮಗೆ ಗುರುತಿರುತ್ತೆ, ಹೊರಗಿನಿಂದ ಬಂದವರಿಗೆ ಎಲ್ಲಾ ಮಾಹಿತಿ ಇರುವುದಿಲ್ಲ. ತಿಳಿದುಕೊಳ್ಳುವಷ್ಟರಲ್ಲಿ ಚುನಾವಣೆ ಮುಗಿದಿರುತ್ತೆ, ಅನುಭವದಲ್ಲಿ ಇದನ್ನೆಲ್ಲಾ ನೋಡಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಾಗಪುರದಿಂದ ನೂರಾರು ಜನರ ತಂಡ ಬಂದಿದೆ ಅಂತಾ ಹೇಳ್ತಾರೆ, ಆದರೆ ನಾನು ನೋಡಿಲ್ಲ. ಅಕಸ್ಮಾತ್ ಬಂದಿದ್ರೆ ನಾನೊಂದು ಹೇಳುತ್ತೇನೆ. ಇತ್ತೀಚೆಗೆ ನಾಗಪುರದಲ್ಲಿ ಪದವೀಧರರ ಕ್ಷೇತ್ರದ ಚುನಾವಣೆ ನಡೆಯಿತು, ಇಷ್ಟೆಲ್ಲಾ ಎಕ್ಸ್‌ಪರ್ಟ್ ಇರುವವರು ನಾಗಪುರದ ಪದವೀಧರರ ಚುನಾವಣೆಯಲ್ಲಿ ಯಾಕೆ ಸೋತರು ತಿಳಿಸಲಿ ಎಂದ ಅವರು, ನಾನು ಕಾನೂನುಬಾಹಿರ ಕೆಲಸ ಮಾಡಲ್ಲ, ನನ್ನ ಚಲನವಲನದ ಮೇಲೆ ಏನು ನಿಗಾ ಇಡುತ್ತಾರೆ ಎಂದು ಪ್ರಶ್ನಿಸಿದರು. ಲಿಂಗಾಯತರಿಗೆ ಈ ಬಾರಿ ಹೆಚ್ಚು ಟಿಕೆಟ್ ಕೊಡಲಾಗಿದೆ. ಕಾಂಗ್ರೆಸ್ (Congress) ಬಂಡಾಯ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಜೊತೆ ನಾನು ಮಾತಾಡುತ್ತೇನೆ. ಕಾಂಗ್ರೆಸ್ ವರಿಷ್ಠರು ಈಗಾಗಲೇ ಅವರ ಜೊತೆ ಮಾತಾಡಿದ್ದಾರೆ,…

Read More

ಧಾರವಾಡ: ತವನಪ್ಪ ಅಷ್ಟಗಿ ಅವರು ಇಂದು ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರ ಶಕ್ತಿಗನುಗುಣವಾಗಿ ಅವರಿಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ (Satish jarkiholi) ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ವರಿಷ್ಠರ ಸೂಚನೆ ಮೇರೆಗೆ ನಾನು ತವನಪ್ಪ ಅವರ ಮನೆಗೆ ಬಂದಿದ್ದೆ. ಇನ್ನು ಮುಂದೆ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ಪಕ್ಷೇತರರಾಗಿ ಅವರು ನಾಮಪತ್ರ ಸಲ್ಲಿಸಿದ್ದರು. ನಾಳೆ ಅದನ್ನು ವಾಪಸ್ ಪಡೆದು ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಲ್ಲುತ್ತಾರೆ ಎಂದರು. ಮೊದಲು ನಾವೇ ಅಷ್ಟಗಿ ಅವರನ್ನು ಸಂಪರ್ಕ ಮಾಡಿದ್ದೆವು. ಈಗ ನಾವು ಬಂದು ವಿನಂತಿ ಮಾಡಿದ್ದಕ್ಕ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅಷ್ಟಗಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಎಫೆಕ್ಟ್ ಕ್ಷೇತ್ರದ ಜೊತೆಗೆ ಬೇರೆ ಕಡೆಯೂ ಆಗಲಿದೆ. ತವನಪ್ಪ ಸಣ್ಣ ಸಮಾಜದವರಾದರೂ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ ಎಂದರು.

Read More

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಬಲ ಪಡಿಸುವ ಜೊತೆಗೆ ಅಭ್ಯರ್ಥಿಗಳ ಗೆಲುವಿಗೆ ಕೇಂದ್ರ ಸಚಿವ(Pralhad joshi) ಪ್ರಹ್ಲಾದ ಜೋಶಿ ಶತಾಯು ಗತಾಯು ಹೋರಾಟ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರ ಹಾಗೂ ಬಿಜೆಪಿ ನಾಯಕರ ಜೊತೆಗೆ ಸಭೆ ನಡೆಸುವ ಮೂಲಕ ಹೊಸ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಹೌದು.. ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯ, ಜೆ.ಸಿ.ನಗರದಲ್ಲಿರುವ ಮಾಧ್ಯಮದ ಕೇಂದ್ರದಲ್ಲಿ ಸಭೆ ನಡೆಸುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಒಂದಿಲ್ಲೊಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಿರ್ಧಾರ ಮಾಡಿದ್ದಾರೆ. ಅಲ್ಲದೇ ಹುಬ್ಬಳ್ಳಿಗೆ ಆಗಮಿಸಿದ ಜೋಶಿಯವರು, ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಇನ್ನೂ ಕಾರ್ಯಕರ್ತರಲ್ಲಿ ಜವಾಬ್ದಾರಿ ವಹಿಸುವ ಮೂಲಕ ಮತದಾರರನ್ನು ಜಾಗೃತರನ್ನಾಗಿ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮಹೇಶ ಟೆಂಗಿನಕಾಯಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಬಹುತೇಕ ನಾಯಕರು ಭಾಗವಹಿಸಿದ್ದರು.

Read More

ಅಲಚೂರು ಅರಸರ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವರು ಮತ್ತು ಸಾಮಾಜಿಕ ಸುಧಾರಕರಾಗಿದ್ದವರು ಬಸವಣ್ಣ.ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡದ ಕವಿಯಾಗಿದ್ದರು.ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಬಸವಣ್ಣ ಲಿಂಗ ಸಾಮಾಜಿಕ ತಾರತಮ್ಯ ಮೂಡನಂಬಿಕೆಗಳನ್ನು ನಿವಾಕರಿಸಿದರು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿ ಆಗಿ ಅವರ ಅನುಭವ ಮಂಟಪ ಅಥವಾ ಅಧ್ಯಾತ್ಮಿಕ ಅನುಭವದ ಭವನದ ಇಲ್ಲಿ ಎಲ್ಲಾ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರನ್ನು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತ ಕೋರಿದರು. ಬಾಲ್ಯದ ಜೀವನ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ ಬಸವಣ್ಣನವರು ತನಗಿಂತ ಹಿರಿಯರಾದ ಅಕ್ಕ ನಾಗಮ್ಮನಿಗೆ ಕೊಡಲು ಹೇಳುತ್ತಾರೆ. ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು. ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ ಬಸವಣ್ಣ ಪುರುಷ ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ. ಬಸವಣ್ಣ 12 ವರ್ಷಗಳ ಕಾಲ ಕೂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಲಕುಲಿಶಾ…

Read More

ರಾಯಚೂರು ಜಿಲ್ಲೆಯಲ್ಲಿ (Matka) ಮಟ್ಕಾ ಬುಕ್ಕಿಗಳ ಹಾವಳಿ ಹೆಚ್ಚಾಗಿದ್ದು. ಆದ್ದರಿಂದ  ಮೂವರು  ಮಟ್ಕಾ ಬುಕ್ಕಿಗಳನ್ನ  ಗಡಿಪಾರು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು  ಮಟ್ಕಾ ಬುಕ್ಕಿಗಳನ್ನ  ಗಡಿಪಾರು ಮಾಡಲಾಗಿದೆ. ನಿಂಗಪ್ಪ, ಆದಪ್ಪ, ಮತ್ತು ಶಾಸ್ತ್ರೀ ಎಂಬವರನ್ನ  ಗಡಿಪಾರು ಮಾಡಿ  ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್   ಆದೇಶ ಹೊರಡಿಸದ್ದಾರೆ.    ಇತ್ತಿಚಿಗೆ ಜಿಲ್ಲೆಯಲ್ಲಿ  ಜೂಜು, ಮಟ್ಕಾ ಬುಕ್ಕಿಗಳ ಹಾವಳಿ ಹೆಚ್ಚಾಗಿದೆ. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರು, ಕದ್ದುಮುಚ್ಚಿ ಮಟ್ಕಾ ದಂದೆ ನಡೆಸುತ್ತಿದ್ದ  ಮೂವರನ್ನ ಜಿಲ್ಲೆಯಿಂದ ಹೊರಗೆ ಹಾಕಲಾಗಿದೆ. ಚುನಾವಣೆಯ ಮುನ್ನವೇ  ಮಟ್ಕಾ ಚಟುವಟಿಕೆಯಲ್ಲಿ ಭಾಗಿಯಾದ ಜೂಜುಕೋರರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಮತ್ತೆ ಯಾರಾದರೂ ಈ ದಂದೆಯಲ್ಲಿ ಕಾಣಿಸಿಕೊಂಡರೆ ಅವರನ್ನು ಕೂಡ ಗಡಿ ಪಾರು ಮಾಡವುದಾಗಿ ಎಚ್ಚರಿಕೆ ಕೊಡಲಾಗಿದೆ

Read More

ಮಂಗಳೂರು: ಲಿಂಗಾಯಿತ ಸಿಎಂ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿ ಕಾರಿದ್ದು, ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel), ಲಿಂಗಾಯಿತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಸಿದ್ದರಾಮಯ್ಯ ರಾಜ್ಯದ 7 ಕೋಟಿ ಜನತೆಗೆ ಅಪಮಾನಿಸಿದ್ದಾರೆ. ತಕ್ಷಣ ಅವರು ಕ್ಷಮೆ ಕೋರಬೇಕು ಎಂದರು. ಲಿಂಗಾಯಿತ ಸಮುದಾಯ ಭ್ರಷ್ಟಾಚಾರಿ ಸಮುದಾಯ ಎಂದು ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಒಂದು ಮುಖ ಇಂದು ಬಹಿರಂಗವಾಗಿದೆ. ಪ್ರಧಾನಿ ಮೋದಿಯವರನ್ನು ಅವಮಾನ ಮಾಡಿದ್ದಕ್ಕೆ ರಾಹುಲ್ ಗಾಂಧಿಗೆ ಯಾವ ಸ್ಥಿತಿ ಬಂದಿದೆ. ಅದೇ ಸ್ಥಿತಿ ಸಿದ್ದರಾಮಯ್ಯನವರಿಗೂ ಬರಬೇಕು. ಜನರೇ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Read More

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, (DK Shivakumar)ಟೆಂಪಲ್ ರನ್ ಆರಂಭಿಸಿದ್ದಾರೆ. ಸಾಲು ಸಾಲು ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಿನ್ನೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ಹಾಗೂ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ತೆರಳಿದ್ದು, ಚಂಡಿಕಾಯಾಗ ನೆರವೇರಿಸಿದ್ದಾರೆ. 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್ ದಂಪತಿ ಚಂಡಿಕಾಯಾಗ ಮಾಡಿದ್ದಾರೆ. ಉಡುಪಿ ಜ್ಯೋತಿಷಿ ಸಿ.ಎಸ್. ದ್ವಾರಕಾನಾಥ್ ಸಲಹೆಯಂತೆ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆ ಚಂಡಿಕಾಯಾಗದ ಸಂಕಲ್ಪ ಮಾಡಿದ್ದರು. ಇಂದು ಚಂಡಿಕಾಯಾಗ ನೆರವೇರಿಸಿದ್ದು, ಶತ್ರು ನಾಶ, ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಈ ಯಾಗ ನಡೆಸಲಾಗುತ್ತದೆ.

Read More

ಮೈಸೂರು: ವರುಣಾ ವಿಧಾನಸಭಾ ಚುನಾವಣಾ(Assembly Election 2023) ಅಖಾಡ ರಂಗೇರಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವ ವಿ.ಸೋಮಣ್ಣ(V. Somanna )ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಸಚಿವ ವಿ.ಸೋಮಣ್ಣ ಪ್ರಚಾರಕ್ಕೆಂದು ವರುಣಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವರುಣಾ ತಾಲೂಕಿನಲ್ಲಿ ವಿ. ಸೋಮಣ್ಣ ಆಗಮಿಸುತ್ತಿದ್ದಂತೆ ಸೋಮಣ್ಣ ಕಾರನ್ನು ಅಡ್ಡಗಟ್ಟಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಪರ ಜಯ ಘೋಷಗಳನ್ನು ಕೂಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರ ವರ್ತನೆಗೆ ಸಚಿವ ವಿ. ಸೋಮಣ್ಣ ಕೆಲ ಕಾಲ ಕಂಗಾಲಾಗಿದ್ದಾರೆ. ಕಾರಿಗೆ ಮುತ್ತಿಗೆ ಹಾಕಿ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸಿದ್ದಾರೆ.

Read More

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವ ಭವನದ ಬಳಿ ಕಾಂಗ್ರೆಸ್ ನಾಯಕ (Rahul Gandhi)ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಪರಿಶೀಲನೆ ಮಾಡಲಾಗಿದೆ. ಹುಬ್ಬಳ್ಳಿಯಿಂದ(Rahul Gandhi) ರಾಹುಲ್ ಗಾಂಧಿ ಹೆಲಿಕಾಪ್ಟರ್ ನಲ್ಲಿ ಕೂಡಲಸಂಗಮಕ್ಕೆ ಬಂದ ವೇಳೆ ಪರಿಶೀಲನೆ ನಡೆಸಲಾಗಿದೆ. ಬಸವ ಜಯಂತಿ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದಾರೆ. ಕೂಡಲಸಂಗಮದ ಬಸವಭವನದ ಬಳಿ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ತಪಾಸಣೆ ನಡೆಸಲಾಗಿದೆ.(Election Officers)ಚುನಾವಣಾಧಿಕಾರಿಗಳು ತಪಾಸಣೆ ಮಾಡಿ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ.

Read More

ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ (Shashikala Jolle)ನಿಪ್ಪಾಣಿ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ೨ ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ನಮ್ಮ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಸಚಿವೆ ಹಾಗೂ ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು. ಇಂದು ಕ್ಷೇತ್ರದ ಅಪ್ಪಾಚಿವಾಡಿ, ಮತ್ತಿವಾಡೆ, ಸುಳಗಾಂವ, ಹದನಾಳ ಗ್ರಾಮಕ್ಕೆ ತೆರಳಿ ಬೂತ್ ಅಧ್ಯಕ್ಷರು, ಪೇಜ ಪ್ರಮುಖರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ  ಜೊತೆ ಸಭೆ ನಡೆಸಿ ಮಾತನಾಡಿದರು. ನಿಪ್ಪಾಣಿ ಮತಕ್ಷೇತ್ರದಲ್ಲಿ ೨ ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಸ್ತೆ, ನೀರು, ಚರಂಡಿ, ನೂರಕ್ಕು ಅಧಿಕ ಅಂಗನವಾಡಿ, ರೈತರಿಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ಕೃಷಿಗೆ ನೀರಾವರಿ ಸೌಲಭ್ಯ, ಗ್ರಾಮೀಣ ಜನರ ಸಭೆ ಸಮಾರಂಭಗಳಿಗೆ ಸಮುದಾಯ ಭವನಗಳ ನಿರ್ಮಾಣ ಮಾಡಲಾಗಿದೆ. ನಿಪ್ಪಾಣಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಹಂಬಲವಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು…

Read More