ನವದೆಹಲಿ: ನೂತನ ಸಂಸತ್ (New Parliament) ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾನುವಾರ ವಿಶೇಷ ಅಂಚೆ ಚೀಟಿ (Postage Stamp) ಮತ್ತು 75 ರೂ. ನಾಣ್ಯವನ್ನು (Rs 75 Coin) ಬಿಡುಗಡೆ ಮಾಡಿದ್ದಾರೆ. ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗಿದೆ. ಅಲ್ಲದೆ ಇದು 35 ಗ್ರಾಂ. ತೂಕ ಹೊಂದಿದೆ. ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆಯ ಚಿತ್ರವನ್ನು ಹೊಂದಿದೆ. ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ `ಭಾರತ್’ ಮತ್ತು ಇಂಗ್ಲಿಷ್‍ನಲ್ಲಿ `ಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಇಸವಿಯ ಉಲ್ಲೇಖ ಮಾಡಲಾಗಿದೆ. ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ…
Author: Prajatv Kannada
ಹಿರೇಹರಕುಣಿ ದಲಿತರಿಗೆ ಸ್ಮಶಾನ ಭೂಮಿ ನೀಡಲು ಅಗ್ರಹಿಸಿ ಧಾರವಾಡದಲ್ಲಿ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ದಲಿತ ನಿವಾಸಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ ಹಲವು ದಶಕಳಿಂದ ಹಿಂದೂ ಸಮುದಾಯದ ಎಲ್ಲರೂ ಒಂದೇ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಕಾರ್ಯ ಮಾಡಿಕೊಂಡು ಬರಲಾಗುತಿತ್ತು. ಆದರೆ ಇತ್ತೀಚೆಗೆ ಈ ಹಿಂದೆ ಅಂತ್ಯಕ್ರಿಯೆ ನಡೆಸಲಾಗುತ್ತಿದ್ದ ಜಾಗ, ನಮ್ಮದು ಎಂದು ಬೇರೆ ಹಿಂದೂ ಸಮುದಾಯದ ಮುಖಂಡರು ದಲಿತರಿ ಅಂತ್ಯಕ್ರಿಯೆ ಕಾರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದರಿಂದಾಗಿ ದಲಿತರಿಗೆ ಹಿರೇಹರಕುಣಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದಲಾಗಿದೆ. ಹಾಗಾಗಿ ಈ ಕೂಡಲೇ ರಾಜ್ಯ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಮ್ಮಗೆ ರುದ್ರಭೂಮಿ ನೀಡಬೇಕು ಎಂದು ಅಗ್ರಹಿಸಿ. ಒಂದು ವೇಳೆ ಇದರಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಇದೇವೇಳೆ ಎಚ್ಚರಿಕೆ ನೀಡಿದರು.
ಉಡುಪಿ: ಸೀರೆ ಜೋಕಾಲಿಯಲ್ಲಿ (Swing) ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾರ್ಕಳದಲ್ಲಿ (Karkala) ನಡೆದಿದೆ. ಕಾರ್ಕಳ ತಾಲೂಕು ನಿಟ್ಟೆ (Nitte) ಗ್ರಾಮ ಕೆಮ್ಮಣ್ಣುವಿನ ಲಕ್ಷ್ಮಿ ಪೂಜಾರಿ ಎಂಬವರ ಮಗಳು ಮಾನ್ವಿ (9) ಮೃತ ಬಾಲಕಿ. ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಘಟನೆ ನಡೆದಿದೆ. ಸಮೀಪದ ಮನೆಯ ಮತ್ತೊಬ್ಬ ಬಾಲಕಿಯ ಜೊತೆ ಚಿಕ್ಕಪ್ಪನ ಮನೆಯಲ್ಲಿ ಸೀರೆಯಲ್ಲಿ ಜೋಕಾಲಿ ಕಟ್ಟಿ ಆಡುತ್ತಿದ್ದರು. ಈ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದವರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಮೃತಪಟ್ಟಿದ್ದಾಳೆ. ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದಿದೊಯ್ದು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ನಗರದ ಹೊರವಲಯದಲ್ಲಿರುವ ನಾಗಸಮುದ್ರದ ದಂಡಿನ ದುರ್ಗಮ್ಮ ಜಾತ್ರೆ ಹಿನ್ನೆಲೆ ಗದಗ ಬೆಟಗೇರಿಯಲ್ಲಿ ಜವಾರಿ ಕೋಳಿ (ನಾಟಿ ಕೋಳಿ) ವ್ಯಾಪಾರ ಬಲು ಜೋರಾಗಿದ. ನಾಳೆ ಅದ್ಧೂರಿಯಾಗಿ ನಡೆಯುವ ಜಾತ್ರೆ ಹಿನ್ನಲೆ ನಗರದಲ್ಲಿ ಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತೆ. ಜಾತ್ರೆಗೆ ರಾಜ್ಯ- ಅಂತರಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸ್ತಿದ್ದಾರೆ. ಇನ್ನು ಸಹ ಕುಟುಂಬ ಸಮೇತರಾಗಿ ಆಗಮಿಸ್ತಿರೋ ಭಕ್ತಾಧಿಗಳು ದಂಡಿನ ದುರ್ಗಮ್ಮ ಆವರಣದಲ್ಲಿ ತಾತ್ಕಾಲಿಕ ಶೆಡ್ ಗಳನ್ನ ಹಾಕಿ ಎರಡ್ಮೂರು ದಿನಗಳ ಕಾಲ ಸ್ಥಳದಲ್ಲೇ ಬೀಡುಬಿಟ್ಟು ಶ್ರಧ್ಧಾ ಭಕ್ತಿಯಿಂದ ತಾಯಿಗೆ ಬೇಡಿಕೊಂಡು ಹೋಗ್ತಾರೆ. ಜಾತ್ರೆ ಹಿನ್ನೆಲೆ ಬೆಟಗೇರಿಯಲ್ಲಿ ಕೋಳಿ, ಹುಂಜಗಳ ಮಾರಾಟ ಬಲು ಜೋರಾಗಿದೆ. ಜಾತ್ರೆ ಹಿನ್ನೆಲೆ ನಾಟಿ ಕೋಳಿ ಹುಂಜಗಳಿಗೆ ಬೇಡಿಕೆ ಹೆಚ್ಚಾಗಿದೆ ಒಂದು ಸಾವಿರ ರೂಪಾಯಿದಿಂದ ಎರಡು ಸಾವಿರ ರೂಪಾಯಿ ವರೆಗೆ ಕೋಳಿ, ಹುಂಜಗಳನ್ನು ಮಾರಾಟ ಮಾಡ್ತಿದ್ದಾರೆ.
ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿಗಾಗಿ ಎಲ್ಲಿ ನೋಡಿದ್ರೂ ಹಾಹಾಕಾರ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ ಈ ಊರಲ್ಲಿ ಮಾತ್ರ ಜನರು ಕೆರೆ ನೀರು ಖಾಲಿ ಮಾಡಿಸ್ತಿದ್ದಾರೆ. ಅರೇ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಅಧಿಕಾರಿಗಳು ಬೇಡ ಬೇಡ ಅಂದ್ರೂ ಕೇಳದ ಜನ. ಕೆರೆಯಲ್ಲಿ ನೀರಿರೋದು ಬೇಡವೇ ಬೇಡ ಅನ್ನುತ್ತಿರೋ ಜನ. ಜನರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳು. ಕೆರೆ ನೀರನ್ನು ಯಂತ್ರಗಳ ಮೂಲಕ ಹೊರ ಚಲ್ಲುತ್ತಿರುವ ಪಂಚಾಯತಿ. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮ. ಹೌದು.. ಕೆರೆಯಲ್ಲಿ ಬಿದ್ದು, ವ್ಯಕ್ತಿಯೋರ್ವನ ಆತ್ಮಹತ್ಯೆಯೇ ಇಷ್ಟಕ್ಕೆಲ್ಲಾ ಕಾರಣ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿರೋ ಘಟನೆಯಿಂದ ಈಗ ಕೆರೆಯ ನೀರನ್ನು ಖಾಲಿ ಮಾಡಿಸಲಾಗುತ್ತಿದೆ. 500 ಕ್ಕೂ ಹೆಚ್ಚು ಮನೆಗಳಿರೋ ಉಮಚಗಿ ಗ್ರಾಮದಲ್ಲಿ 3500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರೋ ಗ್ರಾಮದಲ್ಲಿ ವ್ಯಕ್ತಿಯೋರ್ವನ ಆತ್ಮಹತ್ಯೆಯಿಂದ ಇಂತಹದೊಂದು ನಿರ್ಧಾರಕ್ಕೆ ಜನರು ಮುಂದಾಗಿದ್ದಾರೆ. ಇನ್ನೂ ಮಲ್ಲಿಗವಾಡ…
ಹೊಲದಲ್ಲಿ ರೂಟರ್ ಹೊಡೆಯುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಒಂದು ಹೊಲದಲ್ಲಿ ನಿಂತಿದ್ದ ಯುವಕನ ಮೇಲೆ ಪಲ್ಟಿಯಾದ ಪರಿಣಾಮ 19 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವೀಗಿಡಾದ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ತಬಕದ ಹೊನ್ನಳ್ಳಿ ಗ್ರಾಮದಲ್ಲಿ ಭೀಮಪ್ಪ ಭಮ್ಮನಹಳ್ಳಿ ಎಂಬ ಯುವಕ ತಮ್ಮ ಹೊಲದಲ್ಲಿ ರೂಟರ್, ಹೊಡೆಸುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಹೊಲದಲ್ಲಿ ನಿಂತಿದ್ದ ಭೀಮಪ್ಪನ ಮೇಲೆ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ನಡೆದ ಸಾವಯವ ಮೇಳ ಮತ್ತು ಹಲಸಿನ ಹಬ್ಬದ ಅಂಗವಾಗಿ ಪುರುಷ ಮತ್ತು ಮಹಿಳೆಯರಿಗಾಗಿ ಹಲಸಿನ ತೊಳೆ ತಿನ್ನುವ ಪ್ರತ್ಯೇಕ ಸ್ಪರ್ಧೆ ನಡೆಯಿತು. ಅದುವರೆಗೂ ವಿವಿಧ ಸಾವಯವ ವಸ್ತು ಮತ್ತು ಹಲಸಿನ ಉತ್ಪನ್ನ ಖರೀದಿಗೆಂದು ಅತ್ತಿತ್ತ ಓಡಾಡುತ್ತಿದ್ದವರೆಲ್ಲ ಸ್ಪರ್ಧೆ ಆರಂಭವಾಗುತ್ತಿದ್ದಂತೆ ಹಣ್ಣು ತಿನ್ನುವವರನ್ನು ನೋಡಲೆಂದು ವೇದಿಕೆಯ ಮುಂಭಾಗಕ್ಕೆ ಜಮಾಯಿಸಿದರು. ₹100 ಶುಲ್ಕ ನೀಡಿ ನೋಂದಣಿ ಮಾಡಿಕೊಂಡವರಿಗೆ ತಲಾ 350 ಗ್ರಾಂ ಹಲಸಿನ ತೊಳೆ ಕೊಡಲಾಗಿತ್ತು. ಬೀಜ ಬಿಡಿಸಿಕೊಂಡು ಮೊದಲು ಹಣ್ಣು ತಿಂದು ಖಾಲಿ ಮಾಡಿದವರು ನಗದು ಬಹುಮಾನ ಹಾಗೂ ಪ್ರಮಾಣಪತ್ರ ತಮ್ಮದಾಗಿ ಸಿಕೊಂಡರು. ಮೊದಲ ಬಹುಮಾನ ₹1,000, ದ್ವಿತೀಯ ಬಹುಮಾನ ₹ 800 ಮತ್ತು ತೃತೀಯ ಬಹುಮಾನ ₹ 600 ನೀಡಲಾಯಿತು.ಮಹಿಳೆಯರ ವಿಭಾಗದಲ್ಲಿ ಸಾವಿತ್ರಿ ಕೊಡ್ಲಿ ಪ್ರಥಮ, ಸೌಮ್ಯಾ ಕುಮಶೀಕರ್ ದ್ವಿತೀಯ ಮತ್ತು ಶೋಭಾ ಸಿ. ಹೊಳ್ಳಿ ಅವರು ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು. ಪುರುಷರ ವಿಭಾಗದಲ್ಲಿ ಬಸವರಾಜ ವಕ್ಕುಂದ ಪ್ರಥಮ, ನಾಗರಾಜ ಹುಲಗೂರ್ ದ್ವಿತೀಯ ಮತ್ತು ಗಿರೀಶ್…
ಧಾರವಾಡದ ಕಮಲಾಪೂರದಲ್ಲಿ ಕಳೆದ ಮೇ 25 ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಮಹ್ಮದ್ ಕುಡುಚಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ, ಕೊಲೆ ಪ್ರಕರಣದ ಎಲ್ಲಾ 6 ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಧಾರವಾಡ ಶಹರ ಉಪವಿಭಾಗದ ಎಸಿಪಿ ವಿಜಯಕುಮಾರ, ಹುಬ್ಬಳ್ಳಿ-ಧಾರವಾಡ ಸಂಚಾರ ಉಪವಿಭಾಗ ಎಸಿಪಿ ವಿನೋದ ಮುಕ್ತದಾರ ನೇತೃತ್ವದ ತಂಡವನ್ನು ನೇಮಿಸಲಾಗಿತ್ತು. ಕೊಲೆ ನಡೆದ ನಂತರ ಆರೊಪಿಗಳ ಜಾಡು ಹಿಡಿದ ಪೊಲೀಸರ ತಂಡ ಆರು ಜನ ಆರೋಪಿಗಳು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಇನ್ನೂ ಕೊಲೆಗೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿತರನ್ನು ಧಾರವಾಡದ ಕುಖ್ಯಾತ ರೌಡಿಶೀಟರ್ ಆಗಿದ್ದ ಮೃತ ಫೂಟ್ ಇರ್ಪಾನ್ ಅಲಿಯಾಸ್ ಸೈಯದ್ ಹಂಚಿನಾಳ ಮಗನಾದ ಅರ್ಬಾಜ್ ಹಂಚಿನಾಳ(24), ಮುಂಡಗೋಡ ಮೂಲದ ಅಲ್ಲಾವುದ್ದೀನ್ @ ರಹೀಂ ತಂದೆ ಮಹ್ಮದಜಾಫರ್ ರಜೇಬ್ (26), ಧಾರವಾಡ ಮೂಲದವರಾದ ಅಜಯ್ @ ಅಜ್ಯಾ ತಂದೆ ಫಕ್ಕೀರಪ್ಪ ಮಣ್ಣ (23) ಹಾಗೂ ಅಬೀದ್ @ ಅಬೀದಬೈ…
ರಾಯಚೂರು: ಕಲ್ಲಿದ್ದಲು ಸಾಗಿಸುವ ರೈಲಿನ (Train) ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ. ರಾಯಚೂರಿನ ಶಕ್ತಿನಗರದ (Shaktinagar) ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಗುತ್ತಿಗೆ ಕಾರ್ಮಿಕ ನಾಗರಾಜ್ (32) ರುಂಡ ಮುಂಡ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗರಾಜ್ ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸ ಮಾಡುತ್ತಿದ್ದು, ಕೆಲಸದ ವೇಳೆ ರೈಲಿಗೆ ಆಕಸ್ಮಿಕವಾಗಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಮಂಡ್ಯ: ಸರ್ಕಾರಿ ಶಾಲೆ (Government School) ಅಂದ್ರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲೊಂದು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಬೇಕೆಂದು ಪೋಷಕರು ಬೆಳಗ್ಗೆ 5 ಗಂಟೆಯಿಂದ ಟೋಕನ್‍ಗಾಗಿ ಕ್ಯೂ (Queue For Admission) ನಲ್ಲಿ ಕಾದು ಕುಳಿತಿದ್ದಾರೆ. ಸದ್ಯ ಇಂದಿನಿಂದ ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳ ಬಾಗಿಲು ಬೇಸಿಗೆ ರಜೆಯ ಬಳಿಕ ತೆರೆದಿವೆ. ಹೀಗಾಗಿ ಖಾಸಗಿ ಶಾಲೆಗಳ ಮುಂದೆ ಪೋಷಕರು ಕ್ಯೂ ನಿಲ್ಲೋದು ಸಾಮಾನ್ಯವಾಗುತ್ತಿತ್ತು. ಆದರೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಇದು ಉಲ್ಟಾ ಆಗಿದ್ದು, ಇಲ್ಲಿನ ಪೋಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಎಂಬ ಸರ್ಕಾರಿ ಶಾಲೆಯ ಎದುರು ಪೋಷಕರು ಕ್ಯೂ ನಿಂತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿವರ್ಷ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿರುವ ಕಾರಣ ಈ ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚಾಗಿದೆ. ದಾಖಲಾತಿಗೆ ಬೇಡಿಕೆ ಇರುವ ಕಾರಣ ಇಲ್ಲಿನ ಶಿಕ್ಷಕರು ದಾಖಲಾತಿಗೆ ಟೋಕನ್ ಪದ್ಧತಿ ಮಾಡಿದ್ದಾರೆ. ಮೊದಲು ಟೋಕನ್ ಪಡೆದವರಿಗೆ ದಾಖಲಾತಿಗೆ ಅವಕಾಶ ಇರುವ…