Author: Prajatv Kannada

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಭೇಟಿಯ ನಂತರ ಡಿಸಿಎಂ ಡಿಕೆ ಶಿವಕುಮಾರ್​  (DK Shivakumar)ಪ್ರತಿಕ್ರಿಯೆ ನೀಡಿದ್ದು, ಪಕ್ಷದ ತೀರ್ಮಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಬದ್ಧರಾಗಿರುತ್ತಾರೆ. ರಾಮಲಿಂಗಾ ರೆಡ್ಡಿ ಸತತ 8 ಬಾರಿ ಶಾಸಕರಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ, ನನಗೆ ಸಚಿವ ಸ್ಥಾನ ಇರಲಿಲ್ಲ. ನಾವೆಲ್ಲಾ ಪಕ್ಷ ಬಿಟ್ಟು ಹೋಗಿದ್ದರೆ ಏನೋನೋ ಆಗಿರುತ್ತಿದ್ದೆವು. ಕೆಲವೊಮ್ಮೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತೆ ಎಂದು ಹೇಳಿದರು. ಹೀಗಾಗಿ ಖಾತೆಗಳ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹಳಷ್ಟು ಬಾರಿ ನೋವು ತಿಂದಿದ್ದೇವೆ, ಪಕ್ಷವನ್ನೂ ಕಟ್ಟಿದ್ದೇವೆ. ಮನುಷ್ಯ ಅಂದ ಮೇಲೆ ರಾಜಕೀಯ ಅಂದ ಮೇಲೆ ಹಿರಿತನ ಬರುತ್ತೆ. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು ಅಷ್ಟೇ. ಇನ್ನೂ ನನಗೆ ಖಾತೆ ಹಂಚಿಕೆಯ ಪಟ್ಟಿಯೇ ಸಿಕ್ಕಿಲ್ಲ ಎಂದು ಹೇಳಿದರು.

Read More

ಬೆಂಗಳೂರು: ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ(portfolio allocation). ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಒಳಗೊಂಡು 34 ಮಂದಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಿದೆ. ಹಾಗಾದ್ರೆ, ಯಾರಿಗೆ ಯಾವ ಖಾತೆ ಎನ್ನುವುದು ಈ ಕೆಳಗಿನಂತಿದೆ ನೋಡಿ. ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಡಾ. ಜಿ.ಪರಮೇಶ್ವರ್- ಗೃಹ  ಹೆಚ್ ಕೆ‌ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ  ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ವ್ಯವಹಾರ ರಾಮಲಿಂಗರೆಡ್ಡಿ- ಸಾರಿಗೆ & ಮುಜರಾಯಿ ಎಂ.ಬಿ.ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೆ.ಜೆ.ಜಾರ್ಜ್‌- ಇಂಧನ ದಿನೇಶ್ ಗುಂಡೂರಾವ್: ಆರೋಗ್ಯ & ಕುಟುಂಬ ಕಲ್ಯಾಣ ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಕೃಷ್ಣ ಬೈರೇಗೌಡ- ಕಂದಾಯ…

Read More

ಬೆಂಗಳೂರು: ಬಿಜೆಪಿ (BJP) ಯವರು 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದ್ರಲ್ಲಾ?, ಹಾಕಿದ್ರಾ? ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಮಾಡ್ತೀವಿ ಅಂದ್ರು, ಏನಾಯ್ತು? ಮೊದಲು ಅವರು ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ನಾಯಕರ ಟೀಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಿಂದ ಟೀಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮಗು ಹುಟ್ಟಿ 15 ದಿನ ಆಗಿದೆ, ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಟಾಂಗ್​ ನೀಡಿದ್ದಾರೆ. ಜೂನ್ 1ರಂದು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. 5 ಗ್ಯಾರಂಟಿಗಳ ಜಾರಿ ಬಗ್ಗೆ ಗೈಡ್‌ಲೈನ್ಸ್‌ ಬರಲಿದೆ. ಸ್ಟ್ರೈಕ್ ಮಾಡೋರಿಗೆ ಬೇಡ ಅನ್ನಲ್ಲ, ಮಾಡಲಿ ಎಂದರು.

Read More

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್​ ಹೆಚ್ಚಾಗುವ ಸಾಧ್ಯತೆ ಇದೆ. ರಾಯಚೂರಿನಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತ್ಯಧಿಕ ಉಷ್ಣಾಂಶ ದಾಖಳಾಗಿದೆ, ಬೇಲೂರು, ಹುಣಸೂರು, ಕಳಸ, ಶಿರಾಲಿಯಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.1 ಡಿಗ್ರಿ ಸೆಲ್ಸಿಯಸ್​…

Read More

ಬೆಂಗಳೂರು: ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ, ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಇತ್ತೀಚೆಗೆ ಪ್ರಿಯಾಂಕ್ ಖರ್ಗೆ(Priyank kharge) ಎಚ್ಚರಿಕೆ ನೀಡಿದ್ದರು. ಆದ್ರೆ ಈಗ ಇದನ್ನೇ ಮತ್ತೊಮ್ಮೆ ಪುನರುಚ್ಚಾರಣೆ ಮಾಡಿದ್ದಾರೆ. ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ಆಗುತ್ತೆ ಎಂದು ಬೆಂಗಳೂರು ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ನಾನು ಮತ್ತೊಮ್ಮೆ ಪುನರುಚ್ಚಾರಣೆ ಮಾಡ್ತೇನೆ. ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆ ಆದರೂ ಕ್ರಮ ಆಗಲಿದೆ. ತಾಕತ್ತು ಇದ್ದರೆ ಬ್ಯಾನ್ ಮಾಡಿ ಎಂದು ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವ್ರಿಗೆ ತಾಕತ್ತಿದ್ರೆ ಕಾನೂನು ಉಲ್ಲಂಘಿಸಲಿ. ಬಾಬಾ ಅಂಬೇಡ್ಕರ್ ಅವರ ಸಂವಿಧಾನ ಏನು ಅಂತ ನಾವು ತೋರಿಸ್ತೀವಿ. ಬಿಜೆಪಿಯವ್ರು ಯಾಕೆ ಸಂವಿಧಾನ ಪಾಲನೆ ಮಾಡ್ತೀವಿ ಅಂತ ಹೇಳಲ್ಲ. ಬಿಜೆಪಿಯವರು ವಿವೇಕತನ ಇಲ್ಲದೆಯೇ ಮಾತನಾಡ್ತಾ ಇದ್ದಾರೆ. ಯಾವುದಾದರೂ ಸರ್ಕಾರದ ಯೋಜನೆಗಳು ಮಾನದಂಡ ಇಲ್ಲದೆಯೇ ನಡೆಯುತ್ತದೆಯಾ? ಅಷ್ಟೂ ಕೂಡ ವಿವೇಕ ಬಿಜೆಪಿಯವರಿಗೆ ಇಲ್ವಾ? ಎಂದು ಪ್ರಶ್ನಿಸಿದರು.

Read More

ಧಾರವಾಡ: ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಹೋದರು, ಆಗ ಅಧಿಕಾರ ಹಸ್ತಾಂತರ ಮಾಡಿದ್ದರು ಆ ಸಂದರ್ಭದಲ್ಲಿ ನಂದಿ ಲಾಂಛಿತ ಸುವರ್ಣ ದಂಡ ಕೊಟ್ಟಿದ್ದರಂತೆ, ಅದು ಈಗ ಬೆಳಕಿಗೆ ಬಂದಿದೆ ಎಂದು ಧಾರವಾಡದಲ್ಲಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಹೇಳಿದರು. ನೂತನ ಸಂಸತ್ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ದೇಶ ಸ್ವತಂತ್ರವಾದ ಮೇಲೆ ಹೊಸ ಸಂಸತ್ ಭವನ ಉದ್ಘಾಟನೆಯಾಗುತ್ತಿದೆ ಇದು ಇಡೀ ದೇಶವೇ ಹೆಮ್ಮೆ ಪಡುವಂತಹುದು. ಇಲ್ಲಿಯವರೆಗೆ ಅದು ಯಾರಿಗೂ ಗೊತ್ತಿರಲಿಲ್ಲ ಈಗ ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿ ಬೇಕು ಕಾರಣ ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ “ಅಹಂ ಅದಂಡಹ್ಯ” ಎನ್ನುತ್ತಿದ್ದನು ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎನ್ನುತ್ತಿದ್ದ,‌ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು ಇದು ಗೊತ್ತಿರಲಿ ಎಂದ ಅವರು ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ…

Read More

ಗಂಗಾವತಿ : – ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಗಂಗಾವತಿ ವಿಧಾನ ಸಭಾ ಕ್ಷೇತ್ರದ ನಾಲ್ಕು ಕಡೆ ಶಾಸಕರ ಕಚೇರಿಯನ್ನು ಆರಂಭಿಸಲಾಗುತ್ತದೆ ಎಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕಗಿರಿ ರಸ್ತೆಯಲ್ಲಿ ಇರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಅಭಿನಂದನ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಸರಕಾರದ ಕೆಲಸಗಳಿಗೆ ಜನರು ಪರದಾಡುವುದನ್ನು ತಪ್ಪಿಸಲು ಮತ್ತು ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಗಂಗಾವತಿ ತಾಲೂಕಿನ ಇರಕಲಗಡ, ಕಿನ್ನಾಳ,ಆನೆಗೊಂದಿ ಹಾಗೂ ವೆಂಕಟಗಿರಿ ಗ್ರಾಮಗಳಲ್ಲಿ ಶಾಸಕರ ಕಚೇರಿಯನ್ನು ಆರಂಭಿಸುತ್ತೇನೆ, ಈ ಮೂಲಕ ಜನರು ಪದೇ ಪದೇ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುತ್ತೇನೆ ಎಂದರು. ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಬಾಗದಲ್ಲಿ ನಮಗೆ ಹೆಚ್ಚಿನ ಮತಗಳು ಬಂದಿವೆ, ನಾನು ಗೆಲ್ಲಲು ಗ್ರಾಮೀಣ ಬಾಗದ ಮತಗಳೆ ಕಾರಣ, ನಗರದಲ್ಲಿ…

Read More

ಮೈಸೂರು ನಗರದ ಹೊರವಲಯದಲ್ಲಿ ಮಕ್ಕಳಿಗಾಗಿ ಸ್ಕೇಟಿಂಗ್ ರಿಂಗ್ ನಿರ್ಮಾಣಕ್ಕಾಗಿ ಸಂಸದ ಪ್ರತಾಪಸಿಂಹ ಇಂದು ಗುದ್ದಲಿಪೂಜೆ ನೆರವೇರಿಸಿದರು. ಈ ಸ್ಕೇಟಿಂಗ್ ರಿಂಗ್ ನ್ನು ಬೆಂಗಳೂರಿನ‌ ಮಾದರಿಯಲ್ಲಿ ನಿರ್ಮಿಸಲು ಯೋಜಿಸಿದ್ದು, ಸುಮಾರು ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳು ಮೊಬೈಲ್, ಟಿವಿ ನೋಡುವುದರ ಬದಲು ಪೋಷಕರ ಜತೆ ಇಲ್ಲಿ ಸ್ಕೇಟಿಂಗ್ ನಂತಹ ಆಟೋಟ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಹಕಾ ರಿಯಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಕೆ. ಹರೀಶ್ ಗೌಡ, ಮೇಯರ್ ಶಿವಕುಮಾರ್, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.

Read More

ಮೈಸೂರು: ಕರಕುಶಲ ನಗರದ ಸಮೀಪ ಮಳೆ ನೀರು ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾಮಗಾರಿಯನ್ನು ಮೇಯರ್ ಶಿವಕುಮಾರ್ ಪರಿಶೀಲಿಸಿದರು. ಬೆಂಗಳೂರಿನಲ್ಲಿ ಸಂಭವಿಸಿದ ಮಳೆ ಅನಾಹುತ ಮೈಸೂರಿನಲ್ಲಿ ಅಗಬಾರದು ಎಂಬ ಕಾರಣಕ್ಕೆ ಮುಂಗಾರು ಮಳೆ ಆರಂಭಕ್ಕೆ ನಗರದಲ್ಲಿರುವ ಎಲ್ಲಾ ಮಳೆ ನೀರು ಚರಂಡಿಗಳನ್ನು ಪಾಲಿಕೆಯ ಯಂತ್ರೋಪಕರಣ ಬಳಸಿಯೇ, ಸ್ವಚ್ಚತೆ ಮಾಡುವ ಕಾಮಗಾರಿ ಆರಂಭಿಸಲಾಗಿದೆ. ನಗರದ 65 ವಾರ್ಡ್ ಗಳಿಗೂ ತಲಾ ಒಂದು ಲಕ್ಷ ರೂ. ಬಿಡುಗಡೆ ಮಾಡಿದ್ಷು, ಸಣ್ಣ ಸಣ್ಣ ಚರಂಡಿಗಳನ್ನು ಸ್ವಚ್ಚತೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಹರಿದು‌ ಹೋಗುವಂತೆ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದರು.

Read More

ಬೀದರ್ (ಮೇ.28): ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ನೇಮಕಗೊಂಡ ಜಿಲ್ಲೆಯ ಶಾಸಕರಾದ ಈಶ್ವರ ಖಂಡ್ರೆರವರು ಹಾಗೂ ರಹಿಂಖಾನ್ ರವರು ಸೇರಿದಂತೆ ಇಬ್ಬರು ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಶುಭ ಹಾರೈಸಿದ್ದಾರೆ. ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ ಜಿಲ್ಲೆಯ ಶಾಸಕರಾದ ಈಶ್ವರ ಖಂಡ್ರೆ ಹಾಗೂ ರಹಿಂಖಾನ್ ರವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ತಿಳಿಸಿದ ಅವರು, ಈ ಇಬ್ಬರು ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಿ, ಇವರಿಂದ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ, ಕಾರ್ಯಗಳು ಆಗಲಿ ಎಂದು ಶುಭ ಕೋರಿದ್ದಾರೆ. “ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೀದರ್ ಜಿಲ್ಲೆಯ ಶಾಸಕರಾದ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆರವರು ಹಾಗೂ ಸನ್ಮಾನ್ಯ ಶ್ರೀ ರಹಿಂಖಾನ್ ರವರಿಗೆ ಅಭಿನಂದನೆಗಳು. ಈ ಇಬ್ಬರು ಸಚಿವರು ಜಿಲ್ಲೆಯ ಸಮಗ್ರ…

Read More