Author: Prajatv Kannada

ಬೆಂಗಳೂರು: ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್‌ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ ಎಂದು ಎಂಎಲ್‌ಸಿ ಎನ್.ರವಿಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮೇ 28ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರವು ಉದ್ಘಾಟನೆ  ಮಾಡುತ್ತಿದೆ. ಆದರೆ, ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್‌ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು. ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ ಅವರ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು, ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಕುಟುಂಬದ ಸುಪರ್ದಿಗೆ ನೀಡುವ ಮೂಲಕ ಸಂಸತ್ತನ್ನು ತಮ್ಮ ಕುಟುಂಬಕ್ಕೆ ಸೀಮಿತ…

Read More

ಬೆಂಗಳೂರು: ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ ತಲೆ ಎತ್ತುತ್ತಿದೆ. ನಮ್ಮ ಮೆಟ್ರೋ’ದ ಹೊಸ ಮಾರ್ಗಗಳು ಸೇರಿದಂತೆ ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ವಹಣೆಗಾಗಿ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ ತಲೆ ಎತ್ತುತ್ತಿದೆ. ಮೆಟ್ರೋ ಆರಂಭಗೊಂಡ ಸುಮಾರು 12 ವರ್ಷಗಳಿಂದ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಒಂದೇ ನಿರ್ವಹಣಾ ಕೇಂದ್ರದಿಂದ ರೈಲುಗಳನ್ನು ನಿಯಂತ್ರಿಸುತ್ತಿದೆ. ಈಗಿನ ನೇರಳೆ ಹಾಗೂ ಹಸಿರು ಮಾರ್ಗದ 57 ರೈಲುಗಳ ಸಂಚಾರವನ್ನು ಇಲ್ಲಿಂದ ನಿರ್ವಹಿಸಲಾಗುತ್ತಿದೆ. ಇದೀಗ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನ ಆಗಲಿರುವ ಕಾರಣ ಬೈಯಪ್ಪನಹಳ್ಳಿಯ ಮೆಟ್ರೋದ ಡಿಪೋದಲ್ಲಿರುವ ದುರಸ್ತಿ ಕೇಂದ್ರದ ಹಿಂಭಾಗದಲ್ಲಿ ಹೊಸ ನಿರ್ವಹಣಾ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಮೆಟ್ರೋದ ಮುಂಬರುವ ಗುಲಾಬಿ, ನೀಲಿ, ಹಳದಿ ಹೊಸ ಮಾರ್ಗಗಳ ನಿರ್ವಹಣೆಯಲ್ಲಿ ಈ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ.

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಫುಲ್ ವೈಲೆಂಟ್ ಆಗಿದ್ದಾರೆ ಮಾಜಿ ಸಚಿವ ಅಶೋಕ್ ಅವರು ಟೀಕಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸೈಲೆಂಟ್, ಡಿಸಿಎಂ ಡಿಕೆ ಶಿವಕುಮಾರ್ ವೈಲೆಂಟ್ ಆಗಿದ್ದಾರೆ.  ಡಿಕೆಶಿ ಸಭೆಯಲ್ಲಿ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಗಿಂತ ಮುಂಚೆ ಡಿಸಿಎಂ ಡಿಕೆಶಿಯೇ ಎಲ್ಲದಕ್ಕೂ ಮಾತನಾಡುತ್ತಾರೆ’ ಎಂದು ವಾಗ್ಧಾಳಿ ನಡೆಸಿದರು. ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಸರ್ಕಾರ ಜನರನ್ನು ಮೋಡಿ ಮಾಡಿದೆ, ರಾಹುಲ್, ಪ್ರಿಯಾಂಕಾ ಬಂದು ಗ್ಯಾರೆಂಟಿ ಘೋಷಣೆ ಮಾಡಿದರು. ಗ್ಯಾರೆಂಟಿ ಕಾರ್ಡ್ ಗೆ ಸಿದ್ದರಾಮಯ್ಯ. ಡಿಕೆಶಿ ಸಹಿ ಮಾಡಿದರು. ದಾರಿಯಲ್ಲಿ ಹೋಗುವರಿಗೂ ಗ್ಯಾರೆಂಟಿ ಕಾರ್ಡ್ ನೀಡಿದ್ದರು. ಆದರೆ ಈಗ ದಾರಿಯಲ್ಲಿ ಹೋಗುವವರಿಗೆ ಗ್ಯಾರೆಂಟಿ ಕಾರ್ಡ್ ಕೊಡೋಕೆ ಆಗುತ್ತಾ ಎಂದು ಡಿಕೆಶಿ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

Read More

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂ ಆರ್ ಕೊಡುಗಳುಳ್ಳ ಗಿಫ್ಟ್​ ಕೂಪನ್​ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ, ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್​ಗಳನ್ನು ಹೊಂದಿರುವ ಕೂಪನ್​ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್​ಗಳಿಂದಲೇ ನಾವು ಸೋಲಬೇಕಾಯಿತು. ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು. ಹೀಗೆ ಕೂಪನ್​ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ…

Read More

ಬೆಂಗಳೂರು: ದೆಹಲಿ ಮಾದರಿಯ ಗ್ಯಾರಂಟಿ ಈಡೇರಿಸಲು ನಮ್ಮ ಸಹಕಾರ ಇದ್ದೇ ಇದೆ ಎಂದು ಎಎಪಿ ಮುಖಂಡ ಬ್ರಿಜೇಶ್ ಕಾಳಪ್ಪ(Brijesh Kalappa) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಎಎಪಿ (AAP)ಕಚೇರಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್ ಆದ್ಮಿ ಪಕ್ಷದ ಶೇ 90 ನಕಲು ಆಗಿವೆ. ಇವುಗಳನ್ನು ರಾಜ್ಯದ ಜನತೆಗೆ ಸಂಪೂರ್ಣವಾಗಿ ತಲುಪಿಸಲು ನಾವು ಸದಾ ಸಿದ್ಧರಿದ್ದೇವೆ ಎಂದರು. ಇನ್ನೂ ರೈತರ ಆದಾಯ ದ್ವಿಗುಣ, ಸರ್ವರಿಗೂ ವಸತಿ, ವಿದೇಶಗಳಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15ಲಕ್ಷ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡಿಕೆ, ಐದು ಟ್ರಿಲಿಯನ್ ಆರ್ಥಿಕತೆ, ಬುಲೆಟ್ ಟ್ರೈನ್, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವಲ್ಲಿ ವೈಫಲ್ಯ, ಬೆಲೆ ಏರಿಕೆಯಂತಹ ಯಾವುದೇ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸದೇ ನೈತಿಕತೆ ಇಲ್ಲದೆ ಬಿಜೆಪಿಯವರು ಏಕಾಏಕಿ ರಾಜ್ಯದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಖಂಡಿಸಿದರು.

Read More

ಬೆಂಗಳೂರು: ಸೇವೆಯಿಂದ ವಜಾಗೊಂಡ ನೌಕರ ಮರು ನೇಮಕವಾದಲ್ಲಿ ಗಳಿಕೆ ರಜೆಗೆ ಅರ್ಹ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ (High Court)ಹೇಳಿದೆ. ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸುವಂತೆ ಸೂಚಿಸಿದೆ. ಸಿಬ್ಬಂದಿ ಸೇವೆಯಿಂದ ವಜಾಗೊಂಡಿದ್ದ ಅವಧಿಗೆ ಗಳಿಕೆ ರಜೆ ನಗದು ಪಡೆಯುವಂತಿಲ್ಲ ಎಂಬುದಾಗಿ ಕೆಎಸ್‌ಆರ್‌ಟಿಸಿ ಪರ ಮಂಡಿಸಿದ ವಕೀಲರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ. ಅಲ್ಲದೇ, ಕೆಎಸ್‌ಆರ್‌ಟಿಸಿ ನೀಡುತ್ತಿರುವ ಈ ಕಾರಣವನ್ನು ಒಪ್ಪಲಾಗದು. ಇದು ಕೃತಕವಾದದ್ದು ಎಂದು ಪೀಠ ತಿಳಿಸಿದೆ. ಜೊತೆಗೆ, ಒಮ್ಮೆ ಉದ್ಯೋಗಿ ಅಥವಾ ನೌಕರ ಗಳಿಕೆ ರಜೆ ಪಡೆಯಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಇದು ಅವರ ಖಾತೆಗೆ ಸೇರ್ಪಡೆಗೊಂಡಿರಲಿದೆ. ಹೀಗಾಗಿ, ಇದರ ನಗದೀಕರಣ ಮಾಡಿಕೊಳ್ಳಲು ಅವರಿಗೆ ಅವಕಾಶವಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

Read More

ಬೆಂಗಳೂರು: ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆ ಎಂದು ಸಲೀಂ ಅಹಮ್ಮದ್,(Salim Ahmed) ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನಗೂ ಸಚಿವ ಸ್ಥಾನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದೆ. ಪರಿಷತ್‌ನ ಮೂವರು ಸದಸ್ಯರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ ಯಾರನ್ನೂ ಸಚಿವಸ್ಥಾನಕ್ಕೆ ಪರಿಗಣಿಸಿಲ್ಲ. ಇದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ. ಇನ್ನೂ ಇದೇ ವೇಳೆ ಬಿಕೆ ಹರಿಪ್ರಸಾದ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದ ಬಿಕೆ ಹರಿಪ್ರಸಾದ್ ಬೇಸರಗೊಂಡು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ಮಾಧ್ಯಮಗಳಿಂದ ತಿಳಿಯಿತು. ಅವರು ನನಗೆ ಸಿಕ್ಕಿಲ್ಲ. ಬಿಕೆ ಹರಿಪ್ರಸಾದ್ ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನ ಮೆಟ್ರೋ-ಕ್ಯೂಆರ್‌ ಕೋಡ್‌(Namma metro) ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನವೆಂಬರ್‌ನಲ್ಲಿ ಶುರುವಾದ ಈ ಕ್ಯುಆರ್‌ ಕೋಡ್‌ ವ್ಯವಸ್ಥೆ ಬಳಕೆದಾರರು ಕೇವಲ 2.17 ಲಕ್ಷ ಜನ ಇದ್ದರು. ಈಗ ಅದು ಕೇವಲ 4 ತಿಂಗಳಲ್ಲಿ ನಾಲ್ಕುಪಟ್ಟು ಅಂದರೆ 8.25 ಲಕ್ಷಕ್ಕೆ ಏರಿಕೆಯಾಗಿದೆ. ನವೆಂಬರ್‌ನಿಂದ ಏಪ್ರಿಲ್‌ ಅಂತ್ಯಕ್ಕೆ ಕ್ಯುಆರ್‌ ಕೋಡ್‌ ಮತ್ತು ವಾಟ್ಸ್‌ಆಯಪ್‌ ಚಾಟ್‌ಬಾಟ್‌ ಮೂಲಕ ಪ್ರಯಾಣಿಸಿದವರ ಸಂಖ್ಯೆ 31.80 ಲಕ್ಷ ಆಗಿದೆ. ಇದರೊಂದಿಗೆ ಸರಾಸರಿ 25 ಸಾವಿರ ಜನ ಈ ಮಾದರಿಯನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ಇದು ಸುಧಾರಿತ ತಂತ್ರಜ್ಞಾನಕ್ಕೆ ಸಿಲಿಕಾನ್‌ ಸಿಟಿಯಲ್ಲಿ ದೊರೆಯುತ್ತಿರುವ ಸ್ಪಂದನೆಗೆ ಸಾಕ್ಷಿ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌)ದ ಅಧಿಕಾರಿಗಳು ತಿಳಿಸುತ್ತಾರೆ. ಈ ವ್ಯವಸ್ಥೆ ಪ್ರಾರಂಭವಾದ ಮೊದಲ ತಿಂಗಳು ಅಂದರೆ ನವೆಂಬರ್‌ನಲ್ಲಿ 2,17,708 ಜನ ಕ್ಯುಆರ್‌ ಕೋಡ್‌ ಬಳಸುತ್ತಿದ್ದು, ಡಿಸೆಂಬರ್‌ನಲ್ಲಿ 4,39,502ಕ್ಕೆ ಏರಿಕೆಯಾಯಿತು. ಅದೇ ರೀತಿ ಜನವರಿಯಲ್ಲಿ 5,21,320, ಫೆಬ್ರುವರಿ 5,21,320, ಮಾರ್ಚ್‌ 6,63,956 ಹಾಗೂ ಏಪ್ರಿಲ್‌ನಲ್ಲಿ 8,25,424 ಜನ ಕ್ಯುಆರ್‌…

Read More

ಬೆಂಗಳೂರು: ಬಿಜೆಪಿಗರು ‘ಗ್ಯಾರಂಟಿ’ ಜಾರಿಗಾಗಿ ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್(Congress) ಹೇಳಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆಗೆ ನಾವೂ ಭರವಸೆಗಳನ್ನು ಕೊಟ್ಟಿದ್ದೆವು. ಬಿಜೆಪಿಯೂ(BJP) ಭರಪೂರ ಭರವಸೆಗಳನ್ನು ಕೊಟ್ಟಿತ್ತು. ಆದರೆ ಇಂದು ಬಿಜೆಪಿ, ಜನತೆ ಕಾಂಗ್ರೆಸ್ಸಿನ (Congress) ಭರವಸೆಗಳಿಗೆ ಮತ ಹಾಕಿದ್ದಾರೆ ಎನ್ನುತ್ತಿದೆ. ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ, ಸುಳ್ಳಿನ ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ ಎನ್ನುವುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದೆ. ನಾವು ನೀಡಿದ ಭರವಸೆಗಳನ್ನು ಈಡೇರಿಸುವುದು ‘ಗ್ಯಾರಂಟಿ’ ಆದರೆ ಬಿಜೆಪಿ ನಾಯಕರು ಚುನಾವಣೆಗೂ ಮೊದಲು ಉಚಿತ ಯೋಜನೆಗಳನ್ನ ನೀಡಬಾರದು, ಉಚಿತ ಕೊಟ್ಟರೆ ಶ್ರೀಲಂಕಾ ಆಗತ್ತೆ, ಪಾಕಿಸ್ತಾನ್ ಆಗತ್ತೆ ಎಂದು ವಿರೋಧಿಸಿದ್ದವರು ಇಂದು ಗ್ಯಾರಂಟಿ ಜಾರಿಗಾಗಿ ಪ್ರತಿಭಟಿಸುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಗರಿಗೆ ಒಂದೇ ನಿಲುವು ಇಲ್ಲದಿರುವುದೇಕೆ?” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Read More

ಬೆಂಗಳೂರು: ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಇವತ್ತು ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅದೇ ಆದಿವಾಸಿ ಮಹಿಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿದ್ದಾಗ ಕಾಂಗ್ರೆಸ್ ನಾಯಕ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿದ್ದು ಯಾಕೆ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು. ರಾಷ್ಟ್ರಪತಿ ಆಮಂತ್ರಣ ವಿಚಾರವಾಗೇ ಮೇ 28 ರಂದು ಭಾನವಾರ ಸಂಸತ್ ಭವನ ಉದ್ಘಾಟನೆಯ್ನು 21 ಪಕ್ಷಗಳು ಬಹಿಷ್ಕಾರ ಮಾಡಿವೆ. ಅದು ಆಯಾ ಪಕ್ಷದ ನಿಲವು ಆಗಿದೆ. ಸಂಸತ್ ಭವನ ಯಾವುದೋ ಪಕ್ಷದ ಸಂಘಟನೆಗೆ ಸೀಮಿತವಾದ ಭವನ ಅಲ್ಲ. ದೇಶದ ಜನರ ತೆರಿಗೆ ಹಣದಿಂದ ಕಟ್ಟಿರುವ ಭವನ ಅದು ಎಂದು ತಿಳಿಸಿದರು. ಮಾನ್ಯ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಉದ್ಘಾಟನೆ ಆಗಬೇಕಿತ್ತು…

Read More