ಅಹಮ್ಮದಾಬಾದ್: ಐಪಿಎಲ್ 2023 ಟೂರ್ನಿ ಫೈನಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮೇ.28 ರಂದು ಅಹಮ್ಮದಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ಇದರ ನಡುವೆ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋದು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ 2016ರ ಐಪಿಎಲ್ ಅಂಕಿ ಅಂಶದ ಪ್ರಕಾರ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲಲಿದೆ. ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ 2023ರಲ್ಲಿ ಗುಜರಾತ್ ಟೈಟಾನ್ಸ್ ಫೈನಲ್ ಹಾದಿ ಬಹುತೇಕ ಒಂದೇ ರೀತಿ ಇದೆ. ಹೀಗಾಗಿ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನ ಪಡೆದುಕೊಂಡರೆ, ಸಿಎಸ್‌ಕೆ ಕಪ್ ಗೆಲ್ಲಲಿದೆ ಎಂದು ಐಪಿಎಲ್ ಇತಿಹಾಸ ಹೇಳುತ್ತಿದೆ. ಉಭಯ ತಂಡಗಳು ಟೇಬಲ್ ಟಾಪರ್ಸ್ ಆಗಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಆದರೆ ಚೆನ್ನೈ ನೇರವಾಗಿ ಫೈನಲ್ ಪ್ರವೇಶಿಸಿದರೆ, ಗುಜರಾತ್ 2ನೇ ಕ್ವಾಲಿಫೈಯರ್ ಪಂದ್ಯ ಆಡಿ ಫೈನಲ್ ತಲುಪಿದೆ. 2016ರಲ್ಲಿ ಫೈನಲ್ ತಲುಪಿದ ಆರ್‌ಸಿಬಿ ತಂಡ ಆರೇಂಜ್ ಕ್ಯಾಪ್ ಹೊಂದಿತ್ತು. ಅಂದು ನಾಯಕ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಿಡಿಸಿ ಆರೇಂಜ್ ಕ್ಯಾಪ್‌ನೊಂದಿಗೆ ಫೈನಲ್ ಪಂದ್ಯ ಆಡಿದ್ದರು. 2023ರಲ್ಲಿ ಗುಜರಾತ್ ಟೈಟಾನ್ಸ್ ಆಟಗಾರ ಶುಬಮನ್ ಗಿಲ್ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. 2016ರಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್, ಅಸಾಧರಣ ಚೇಸಿಂಗ್, ಗರಿಷ್ಠ ರನ್ ಟಾರ್ಗೆಟ್ ಸೆಟ್ ಮೂಲಕ ಅದ್ಭುತ ಆಟ ಪ್ರದರ್ಶಿಸಿತ್ತು. ಈ ಬಾರಿ ಗುಜರಾತ್ ಟೈಟಾನ್ಸ್ 8ನೇ ಕ್ರಮಾಂಕದ ವರೆಗೂ ಸ್ಫೋಟಕ ಬ್ಯಾಟ್ಸ್‌ಮನ್ ಹೊಂದಿದೆ. 2016ರಲ್ಲಿ ಆರ್‌ಸಿಬಿ ತಂಡ ತವರಿನಲ್ಲಿ(ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು) ನಡೆದ ಕ್ವಾಲಿಫೈರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ತಲುಪಿತ್ತು. ಇದೀಗ ಗುಜರಾತ್ ಟೈಟಾನ್ಸ್ ತನ್ನ ತವರಿನಲ್ಲಿ(ಅಹಮ್ಮದಾಬಾದ್)ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇಷ್ಟೇ ಅಲ್ಲ 2016ರಲ್ ಆರ್‌ಸಿಬಿ ಫೈನಲ್ ಪಂದ್ಯವನ್ನೂ ತವರು ನೆಲ ಬೆಂಗಳೂರಿನಲ್ಲಿ ಆಡಿತ್ತು. ಇದೀಗ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯವನ್ನ ಅಹಮ್ಮಾದಬಾದ್‌ನಲ್ಲಿ ಆಡುತ್ತಿದೆ. 2016ರಲ್ಲಿ ಆರ್‌ಸಿಬಿ 2023ರಲ್ಲಿ ಗುಜರಾತ್ ತನ್ನ ತವರಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿತ್ತು. ಇಷ್ಟೇ ಅಲ್ಲ ಗೆಲುವಿನ ಸರಾಸರಿಯಲ್ಲಿ ಗರಿಷ್ಠ ಪ್ರಮಾಣ ದಾಖಲಿಸಿತ್ತು. 2016ರಲ್ಲಿ ಆರ್‌ಸಿಬಿ ಫೈನಲ್ ಪಂದ್ಯಕ್ಕೂ ಮುನ್ನ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿತ್ತು. 2023ರಲ್ಲಿ ಗುಜರಾತ್ ಟೈಟಾನ್ಸ್ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿದೆ. 2016ರ ಅಂಕಿ ಅಂಶದ ಪ್ರಕಾರ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ. ಆದರೆ ಅಂಕಿ ಅಂಶ ಪ್ರಸಕ್ತ ಪಂದ್ಯಕ್ಕೆ ನೆರವು ನೀಡಿದ್ದು ತೀರಾ ಕಡಿಮೆ. ಅಂದಿನ ಪ್ರದರ್ಶನ, ಕಂಡೀಷನ್, ತಂತ್ರ, ಎದುರಾಳಿಗಳ ಮೇಲೆ ಹೇರುವ ಒತ್ತಡ ಸೇರಿದಂತೆ ಹಲವು ಕಾರಣಗಳು ಗೆಲುವಿನ ಹಿಂದೆ ಅಡಗಿರುತ್ತದೆ. ಹೀಗಾಗಿ ಚೆನ್ನೈ ಅಥವಾ ಗುಜರಾತ್, ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಗೆಲುವು ಸಾಧಿಸಲಿದೆ.
Author: Prajatv Kannada
ಸಂಸಾರ, ಸಿನಿಮಾ, ಮಗಳು ಎಂದು ಬ್ಯುಸಿಯಾಗಿರುವ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅನುಷ್ಕಾ, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟವಿದಿಲ್ಲ ಎಂದಿದ್ದಾರೆ. ಮಗುವಾದ ನಂತರ ಅನುಷ್ಕಾ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಪತಿ ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಹೀಗೆಯೇ ಇರುವುದಾಗಿ ಹೇಳಿದ್ದಾರೆ. ನನಗೆ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ. ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು. ನಟಿಸಲು ನನಗೇನೂ ಅವಸರವಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅನುಷ್ಕಾ, ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು ಇದೀಗ ಚಿತ್ರ ರಂಗದಿಂದ ಕ್ರಮೇಣ ದೂರವಾಗುವ ಕುರಿತು…
ಅದಾ ಶರ್ಮಾ ಮುಖ್ಯ ಭೂಮಿಕೆಯ ‘ದಿ ಕೇರಳ ಸ್ಟೋರಿ ’ ಸಿನಿಮಾ ಸಾಕಷ್ಟು ಕಲೆಕ್ಷನ್ ಮಾಡಿದೆ. ಆದರೂ ಈ ಸಿನಿಮಾ ಕೆಲವರಿಗೆ ಇಷ್ಟ ಆಗಿಲ್ಲ. ಇದೀಗ ಸಿನಿಮಾದ ಕುರಿತು ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ‘ಐಫಾ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಭಾಗಿ ಆಗಿದ್ದು, ಈ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ ’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಮಲ್, ‘ನಾನು ಆಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ’ ಎಂದು ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಮತಾಂತರ ಮತ್ತು ಐಸಿಸ್ ಉಗ್ರ ಸಂಘಟನೆಗಳ ನಡುವೆ ಇರುವ ನಂಟನ್ನು ಈ ಸಿನಿಮಾ ತೆರೆದಿಟ್ಟಿದೆ.…
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ 57 ವರ್ಷ ಕಳೆದಿದ್ದರು ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಹೆಸರು ಸಾಕಷ್ಟು ನಟಿಯರ ಜೊತೆ ಕೇಳಿ ಬಂದಿದ್ದರು ಯಾವುದು ಮದುವೆಯ ವರೆಗೂ ಬರಲಿಲ್ಲ. ಇದೀಗ ಸಲ್ಲು ಬಾಯ್ ಗೆ ನೇರವಾಗಿ ಪತ್ರಕರ್ತೆಯೊಬ್ಬರು ತಮ್ಮನ್ನು ಮದುವೆಯಾಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್ ಪತ್ರಕರ್ತೆಯೊಬ್ಬರು ನೇರವಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ‘ನಾನು ಹಾಲಿವುಡ್ ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ತಕ್ಷಣ ಫಿದಾ ಆದೆ. ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದ್ದಾರೆ. ಪತ್ರಕರ್ತೆಯ ಮಾತಿಗೆ ನಗುತ್ತಲೇ ಉತ್ತರಿಸಿರುವ ಸಲ್ಮಾನ್ ಖಾನ್, ‘ನೀವು ಶಾರುಖ್ ಖಾನ್ ಬಗ್ಗೆ ಹೇಳ್ತಾ ಇದ್ದೀರಿ. ಕನ್ಫ್ಯೂಸ್ ಮಾಡಿಕೊಂಡಿದ್ದೀರಿ’ ಎಂದು ಉತ್ತರಿಸುತ್ತಾರೆ. ‘ಇಲ್ಲ ನಾನು ನಿಮ್ಮನ್ನೇ ಕೇಳ್ತಾ ಇರೋದು. ಸಖತ್ ಹ್ಯಾಂಡ್ ಸಮ್ ಆಗಿದ್ದೀರಿ. ನೀವು ಒಪ್ಪಿದರೆ ನಾನು ಮದುವೆ ಆಗಲು ತಯಾರು’ ಎಂದು ಮತ್ತೆ ಪತ್ರಕರ್ತೆ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ…
ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ ಹಾಗೂ ಕ್ರಿಕೆಟಿಗ ಶುಭ್ ಮನ್ ಗಿಲ್ ಡೇಟಿಂಗ್ ಮಾಡ್ತಿರೋದು ಗೊತ್ತೇ ಇದೆ. ಈಗಾಗ್ಲೇ ಸಾಕಷ್ಟು ಭಾರಿ ಈ ಜೋಡಿ ಕ್ಲಬ್ಬು, ಪಬ್ಬು ಅಂತ ಓಡಾಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದರು. ಆದರೆ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶುಭ್ ಮನ್ ಗಿಲ್ ಮತ್ತು ಸಾರಾ ಅಲಿಖಾನ್ ಒಬ್ಬರನ್ನೊಬ್ಬರು ಫಾಲೋ ಮಾಡುತ್ತ, ಹಲವು ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದರು. ಇದೀಗ ಇಬ್ಬರೂ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಅನ್ ಫ್ರೆಂಡ್ ಮಾಡಿಕೊಂಡಿದ್ದು, ಇಬ್ಬರ ನಡುವಿನ ಪ್ರೀತಿಗೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದರು. ಮುಂಬೈ ಮತ್ತು ದೆಹಲಿಯಲ್ಲಿ ಶುಭ್ ಮನ್ ಗಿಲ್ ಮತ್ತು ಸಾರಾ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಲವ್ವಿ ಡವ್ವಿ ವಿಚಾರವನ್ನು…
ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧದಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸದ್ಯ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಮೇಲೆಯೂ ಎಫ್.ಐ.ಆರ್ ದಾಖಲಾಗಿತ್ತು. ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ಜಾಕ್ವೆಲಿನ್ ಬಾಯ್ ಫ್ರೆಂಡ್ ಎಂದು ಹೇಳಲಾದ ಚಂದ್ರಶೇಖರ್ ನನ್ನು ಬಂಧಿಸಿ, ಜಾಕ್ವೆಲಿನ್ ಮೇಲೆಯೂ ಆರೋಪ ಮಾಡಿದ್ದರು. ಇದೊಂದು ಬಹುಕೋಟಿ ವಂಚನೆ ಆರೋಪವಾಗಿದ್ದರಿಂದ ವಿದೇಶಕ್ಕೆ (Abroad) ತೆರಳ ಬಾರದು ಎನ್ನುವ ಷರತ್ತೂ ಸೇರಿದಂತೆ ಹಲವು ಷರತ್ತುಗಳನ್ನು ಹಾಕಿ ಜಾಕ್ವೆಲಿನ್ ಗೆ ಜಾಮೀನು ನೀಡಿತ್ತು. ಅಲ್ಲದೇ ಪಾಸ್ ಪೋರ್ಟ್ ಕೂಡ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಜಾಕ್ವೆಲಿನ್ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ಅಭುದಾಬಿಗೆ ಪ್ರವಾಸ ಮಾಡಬೇಕಿದೆ. ಹಾಗಾಗಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಜಾಕ್ವೆಲಿನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ನ್ಯಾಯಾಲಯವು ಮೇ 25 ರಿಂದ ಜೂನ್ 12ರವರೆಗೆ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಿದೆ. ಈ ಸಮಯದಲ್ಲಿ ಜಾಕ್ವೆಲಿನ್…
ನೀವು ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು (tea with biscuit) ಸೇವಿಸಿದರೆ, ಅದು ಉಂಟುಮಾಡಬಹುದಾದ ಹಾನಿಯ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಹೆಚ್ಚಿನ ಜನರಿಗೆ, ಹೆಚ್ಚು ತಿನ್ನುವುದು ಅವರ ದೈನಂದಿನ ಆಹಾರದ ಭಾಗವಾಗಿದೆ, ಆದರೆ ತಜ್ಞರ ಪ್ರಕಾರ, ಇದು ಆರೋಗ್ಯವನ್ನು ಹದಗೆಡಿಸಬಹುದು. ಬಿಸ್ಕತ್ತುಗಳು ಮತ್ತು ಕುಕೀಗಳನ್ನು (cookies) ತಯಾರಿಸಲು ಮೈದಾ ಹಿಟ್ಟು ಬಳಲಾಗುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಕರುಳಿಗೆ ಕೆಟ್ಟದು. ಮೈದಾ ಹಿಟ್ಟು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ, ಉರಿಯೂತ, ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಆದುದರಿಂದ ಬಿಸ್ಕಟ್ ಗಳನ್ನು ಕಡಿಮೆ ತಿನ್ನಬೇಕು. ಬೊಜ್ಜುಹೆಚ್ಚಾಗುತ್ತದೆ (obesity) ಸಿಹಿ ಬಿಸ್ಕತ್ತುಗಳು ಹೈಡ್ರೋಜಿನೇಟೆಡ್ ಕೊಬ್ಬುಗಳ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದ ನೀವು ಇದನ್ನು ದೀರ್ಘಕಾಲದವರೆಗೆ ಸೇವಿಸಿದರೆ, ಅದು ಬೊಜ್ಜು ಸಮಸ್ಯೆಗೆ ಕಾರಣವಾಗಬಹುದು ಮತ್ತು ಚರ್ಮದ ಸಮಸ್ಯೆಯೂ ಆಗಬಹುದು. ಬ್ಲಡ್ಶುಗರ್ (blood sugar) ಸಿಹಿ ಬಿಸ್ಕತ್ತುಗಳನ್ನು ಟೀ ಜೊತೆ ಹೆಚ್ಚು ಹೆಚ್ಚು ತಿನ್ನುವ ಅಭ್ಯಾಸ ಹೊಂದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದರಲ್ಲಿ ಸೋಡಿಯಮ್ ಅಂಶವೂ…
ಉತ್ತರ ಕೊರಿಯಾದಲ್ಲಿ ಬೈಬಲ್‌ನೊಂದಿಗೆ ಸಿಕ್ಕಿಬಿದ್ದ ಕ್ರೈಸ್ತರು ಮರಣದಂಡನೆಗೆ ಗುರಿಯಾಗುತ್ತಾರೆ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವರದಿಯು ಮಾಹಿತಿ ನೀಡಿದೆ. 2022 ರ ರಾಜ್ಯ ಇಲಾಖೆಯ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯು ಉತ್ತರ ಕೊರಿಯಾದಲ್ಲಿ ಇತರ ನಂಬಿಕೆಗಳ ಜನರೊಂದಿಗೆ 70,000 ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ ಎಂದು ಅಂದಾಜಿಸಿದೆ. ಸೆರೆಮನೆಗೆ ಕಳುಹಿಸಲ್ಪಟ್ಟ ಅನೇಕರಲ್ಲಿ ಎರಡು ವರ್ಷದ ಮಗುವೂ ಸೇರಿದೆ ಎಂದು ವರದಿಯು ತಿಳಿಸಿದ್ದು, ಮಗುವಿನ ಹೆತ್ತವರು ಬೈಬಲ್ ಅನ್ನು ಹೊಂದಿರುವುದನ್ನು ಕಂಡುಹಿಡಿದ ನಂತರ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಧಾರ್ಮಿಕ ಆಚರಣೆಗಳು ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಯಿತು. ಎರಡು ವರ್ಷದ ಮಗು ಸೇರಿದಂತೆ ಇಡೀ ಕುಟುಂಬಕ್ಕೆ 2009 ರಲ್ಲಿ ರಾಜಕೀಯ ಜೈಲು ಶಿಬಿರದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ಶಿಬಿರಗಳಲ್ಲಿ ಬಂಧಿಯಾಗಿರುವ ಕ್ರಿಶ್ಚಿಯನ್ನರು ಭೀಕರ ಪರಿಸ್ಥಿತಿಗಳು ಮತ್ತು ವಿವಿಧ ರೀತಿಯ ದೈಹಿಕ ದುರ್ವರ್ತನೆಗಳನ್ನು ವಿವರಿಸಿದ್ದಾರೆ. ಶಾಮನಿಕ್ ಅನುಯಾಯಿಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದಾಖಲಾದ 90% ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ರಾಜ್ಯ ಭದ್ರತಾ ಸಚಿವಾಲಯವು ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಉತ್ತರ ಕೊರಿಯಾದಲ್ಲಿ ‘ನ್ಯಾಯವನ್ನು ವೇಗಗೊಳಿಸಲು ಮತ್ತು ಹೊಣೆಗಾರಿಕೆಯನ್ನು ಬೆಂಬಲಿಸಲು ಕೆಲಸ ಮಾಡುವ’ ಲಾಭೋದ್ದೇಶವಿಲ್ಲದ…
ನವದೆಹಲಿ: ನೂತನ ಸಂಸತ್ ಭವನ (New Parliament) ಹಿರಿಮೆ ಹಾಗೂ ವಿಶ್ವಾಸದ ಸಂಕೇತವಾಗಿದೆ. ಈ ಐತಿಹಾಸಿಕ ಭವನ ಸಶಕ್ತ ಭಾರತದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಗೊಂಡ ಬಳಿಕ ಟ್ವೀಟ್ (Tweet) ಮಾಡಿದ ಪ್ರಧಾನಿ ಮೋದಿ, ದೇಶವನ್ನು ಹೊಸ ಅಭಿವೃದ್ಧಿ ಉತ್ತುಂಗಕ್ಕೆ ಉತ್ತೇಜಿಸಲಿದೆ. ಜನರ ಅಭಿನಂದನೆಗಳಿಗೆ ನಾನು ಆಭಾರಿಯಾಗಿದ್ದೇನೆ. ಈ ಪ್ರೀತಿಯೇ ನಮ್ಮ ಸಾಧನೆಗಳಿಗೆ ಪ್ರೇರಕ ಶಕ್ತಿ. ಜೊತೆಗೆ ಮತ್ತಷ್ಟು ಸಾಧಿಸಲು ನಮಗೆ ಶಕ್ತಿ ತುಂಬಲಿದೆ ಎಂದರು. ನಮ್ಮ ಹೃದಯಗಳು ಮತ್ತು ಮನಸ್ಸುಗಳು ಹೆಮ್ಮೆ, ಆತ್ಮವಿಶ್ವಾಸ ಮತ್ತು ಭರವಸೆಯಿಂದ ತುಂಬಿವೆ. ಈ ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಿರಲಿ, ಕನಸುಗಳನ್ನು ಸೃಷ್ಟಿಸಿ ಮತ್ತು ಅವುಗಳನ್ನು ಈಡೇರಿಸುವಂತಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಲಿ ಎಂದು ಆಶಿಸಿದ್ದಾರೆ. ಬೆಳಗ್ಗೆ ನಡೆದ ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿಯವರು ಬಳಿಕ ಐತಿಹಾಸಿಕ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ…
ನವದೆಹಲಿ: ನೂತನ ಸಂಸತ್ ಭವನದ (New Parliament) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಸನ್ಮಾನಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಿದ್ದಾರೆ. ಸುಂದರವಾಗಿ ಕಟ್ಟಲ್ಪಟ್ಟಿರುವ ನೂತನ ಸಂಸತ್ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಈ ಮೂಲಕ ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ದೇಶದ ಹಲವು ಕಡೆಯ ಶಿಲ್ಪಿಗಳು ಹಾಗೂ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಅವರೆಲ್ಲರಿಗೂ ಸನ್ಮಾನಿಸುವ ಮೂಲಕ ಗೌರವ ಸೂಚಿಸಲಾಯಿತು. ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಮೋದಿ ತೆರಳಿದ್ದಾರೆ. ಬಳಿಕ ಐತಿಹಾಸಿಕ ಸೆಂಗೋಲ್ (Sengol) ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು.