Author: Prajatv Kannada

ಮಂಗಳೂರು: ಅವಳಿ ಸಹೋದರಿಯರಿಬ್ಬರು (Twin Sisters) ಪಿಯುಸಿ (PUC) ಪರೀಕ್ಷೆಯಲ್ಲಿ ಸಮಾನವಾದ ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಲ್ಲದೇ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಗಂಡಿ (Belthangady) ತಾಲೂಕಿನ ನೆರಿಯ ಗ್ರಾಮದ ಅವಳಿ ಸಹೋದರಿಯರಾದ ಸ್ಪಂದನ ಮತ್ತು ಸ್ಪರ್ಶ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 594 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಉಜಿರೆಯ (Ujire) ಎಸ್‌ಡಿಎಂ  ಕಾಲೇಜಿನ (SDM College) ದ್ವಿತೀಯ ಪಿಯುಸಿ ವಾಣಿಜ್ಯ (Commerce) ವಿಭಾಗದ ವಿದ್ಯಾರ್ಥಿನಿಯರಾದ ಇವರು ಸಮಾನವಾಗಿ 594 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸ್ಪಂದನ ಮತ್ತು ಸ್ಪರ್ಶ ಇಂಗ್ಲಿಷ್ (English) ಮತ್ತು ಅರ್ಥಶಾಸ್ತ್ರ (Economics) ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಸಮಾನವಾದ ಅಂಕಗಳನ್ನು ಪಡೆದಿದ್ದಾರೆ. ಸ್ಪಂದನ ಇಂಗ್ಲಿಷ್‌ನಲ್ಲಿ 98 ಹಾಗೂ ಸ್ಪರ್ಶ 97 ಅಂಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ಪಂದನ 98 ಅಂಕಗಳನ್ನು ಪಡೆದಿದ್ದರೆ, ಸ್ಪರ್ಶ 99 ಅಂಕಗಳನ್ನು ಪಡೆದಿದ್ದಾರೆ. ಹಿಂದಿಯಲ್ಲಿ (Hindi) ಇಬ್ಬರೂ 98 ಅಂಕಗಳನ್ನು ಪಡೆದು ಉಳಿದೆಲ್ಲಾ…

Read More

ತನ್ನಲ್ಲಿ ಖಾಲಿ ಇರುವ ಅಟೆಂಡರ್ ಹುದ್ದೆ ಭರ್ತಿಗೆ ಬೆಂಗಳೂರಿನಲ್ಲಿ ನಿಮ್ಹಾನ್ಸ್(NIMHANS) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 24, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ( Bangalore) ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಇ-ಮೇಲ್ ಮಾಡಬಹುದು. ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು( Bangalore)ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

Read More

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯಲ್ಲಿ 2017 ರಿಂದ  RTI ಘಟಕವೇ ಇಲ್ಲದಂತಾಗಿದ್ದು, ಅರ್ಜಿದಾರರು ಪರದಾಟುವಂತಾಗಿದೆ. ಬಿಬಿಎಂಪಿ 2017 ರಿಂದ ಆರ್ಟಿಐ  ಘಟಕವನ್ನು ಮುಚ್ಚಿರುವುದರಿಂದ, ಅರ್ಜಿದಾರರು ಈಗ ತಮ್ಮ ಆರ್ಟಿಐ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಹುಡುಕುವ ಪ್ರಯಾಸಕರ ಕೆಲಸ ಮಾಡಬೇಕಿದೆ. ಮೊದಲು, ಅರ್ಜಿದಾರರು ತಮ್ಮ ವಿನಂತಿಗಳನ್ನು ‘ಪಿಐಒ,(PIO) ಬಿಬಿಎಂಪಿ’ಗೆ ತಿಳಿಸಬೇಕಾಗಿತ್ತು, ನಂತರ ಅದನ್ನು ಸಂಬಂಧಿಸಿದ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಆದರೆ ಈಗ ಅರ್ಜಿದಾರರು ಬಿಬಿಎಂಪಿ ವೆಬ್ಸೈಟ್ನಿಂದ ಪಿಐಒಗಳ ಪಟ್ಟಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಯನ್ನು ಕಂಡುಹಿಡಿಯಬೇಕಾದ ಪರಿಸ್ಛಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಿಬಿಎಂಪಿ(BBMP) ವಿರುದ್ಧ ಕಿಡಿಕಾರಿರುವ ಆರ್ಟಿಐ (RTI)ಕಾರ್ಯಕರ್ತರ ವೇದಿಕೆಯಾದ ಕೆಆರ್ಐಎ ಕಟ್ಟೆಯ ರವೀಂದ್ರನಾಥ ಗುರು ಅವರು, ‘ಬಹುಶಃ ಬಿಬಿಎಂಪಿ ಅಧಿಕಾರಿಗಳು ಪಿಐಒ ಗಳನ್ನು ಹುಡುಕಲು ಜನರು ನಗರದಾದ್ಯಂತ ಪ್ರಯಾಣಿಸಬೇಕೆಂದು ಬಯಸುತ್ತಿದ್ದಾರೆ ಎಂದು ಅನಿಸುತ್ತಿದೆ. ಇದು ನಾಗರಿಕರ ಮಾಹಿತಿಯನ್ನು ನಿರಾಕರಿಸುವ ಬಿಬಿಎಂಪಿಯ ಕಾರ್ಯವಿಧಾನವಾಗಿದೆ ಎಂದು ಆರೋಪಿಸಿದ್ದಾರೆ.

Read More

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಚಿಕ್ಕಜಾಲದ ಬಳಿ ‘ಯು ಗರ್ಡರ್‌’ ಅಳವಡಿಕೆ ಮಾಡುತ್ತಿದೆ. ಕೆ.ಆರ್‌.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಗರ್ಡರ್‌’ ಅಳವಡಿಕೆ ಮಾಡುತ್ತಿದೆ. ಸಮಯ ಹಾಗೂ ನಿರ್ಮಾಣ ವೆಚ್ಚ ಕಡಿಮೆ ಮಾಡಲು ಈ ಮಾದರಿಯ ಗರ್ಡರ್‌ಗಳ ಬಳಸಲಾಗುತ್ತಿದೆ.  ನಮ್ಮ ಮೆಟ್ರೊ ಕಳೆದ ವರ್ಷ ಜೂನ್‌ನಲ್ಲಿ ಹೊರವರ್ತುಲ ರಸ್ತೆ-ಏರ್‌ಪೋರ್ಟ್‌ ಮಾರ್ಗದಲ್ಲಿ ಮೊದಲ ಬಾರಿಗೆ ‘ಯು ಗರ್ಡರ್‌’ಗಳ ಬಳಕೆ ಮಾಡಿತ್ತು. ಯಲಹಂಕ ಐಎಎಫ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 15.1 ಕಿ.ಮೀ. ಈ ಮಾರ್ಗದಲ್ಲಿ 784 ಯು ಗರ್ಡರ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಪ್ರತಿಯೊಂದು ಯು ಗರ್ಡರ್‌ಗಳು 28 ಮೀ. ಉದ್ದವಿದ್ದು, 165 ಟನ್‌ ತೂಕ ಇರುತ್ತವೆ. ಇವುಗಳನ್ನು ಕ್ರೇನ್‌ ಮೂಲಕ ಪಿಲ್ಲರ್‌ ಮೇಲೇರಿಸಲಾಗುತ್ತಿದೆ. ದೊಡ್ಡಜಾಲದ ಮೆಟ್ರೋ ಶೆಡ್‌ನಲ್ಲಿ ‘ಯು ಗರ್ಡರ್‌ ರೂಪಿಸಲಾಗಿದೆ. ಸಾಮಾನ್ಯವಾಗಿ 2.2 ಮೀಟರ್‌ನಿಂದ 2.5 ಮೀಟರ್‌ ಉದ್ದದ ‘ಬಾಕ್ಸ್‌ ಗರ್ಡರ್‌’ಗಳನ್ನು ನಮ್ಮ ಮೆಟ್ರೊ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಬಳಸಲಾಗುತ್ತಿದೆ, ಆದರೆ, ಯು ಗರ್ಡರ್‌ ಇವುಗಳಿಗಿಂತ ಸಾಕಷ್ಟುಉದ್ದವಾಗಿವೆ.…

Read More

ಬೆಂಗಳೂರು: ಬೆಂಗಳೂರಲ್ಲಿ ಫೇಕ್​ ಐಪಿಎಲ್‌ ಟಿಕೆಟ್ ಮಾರುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ದರ್ಶನ್, ಸುಲ್ತಾನ್  ಸೇರಿ ಮೂವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕ್ಯೂ ಆರ್ ಕೋಡ್ ಮಾಡುವ ಬಾರ್ ಕೋಡ್ ನಕಲಿ ಸೃಷ್ಟಿಸಿ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯ ವೇಳೆ‌ ನಕಲಿ ಟಿಕೆಟ್ ಜಾಲದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸೇರಿದಂತೆ ಇಬ್ಬರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ತಿಂಗಳು 17 ರಂದು ಆರ್ ಸಿಬಿ ಹಾಗೂ ಸಿಎಸ್ ಕೆ‌ ನಡುವೆ ಪಂದ್ಯ ನಿಗದಿಯಾಗಿತ್ತು. ಈ ಮ್ಯಾಚ್ ಟಿಕೆಟ್ ಬಾರಿ ಡಿಮ್ಯಾಂಡ್ ಕಂಡು ಬಂದಿತ್ತು‌. ಇದನ್ನೇ ದುರ್ಬಳಕೆ‌ ಮಾಡಿಕೊಂಡ ದರ್ಶನ್, ತಮ್ಮ ಐಡಿ ಕಾರ್ಡ್​ನಲ್ಲಿದ್ದ ಬಾರ್ ಕೋಡ್ ತೆಗೆದು ನಕಲಿ ಬಾರ್​ ಕೋಡ್​ ಸೃಷ್ಟಿಸಿಕೊಂಡಿದ್ದ.‌ ನಂತರ ಸ್ನೇಹಿತರ ಮುಖಾಂತರ ನಕಲಿ ಟಿಕೆಟ್​ಗಳನ್ನು 10 ರಿಂದ 15 ಸಾವಿರ ರೂಪಾಯಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ‌ ಮಾಡುತ್ತಿದ್ದರು. ಸ್ಟೇಡಿಯಂ…

Read More

ಬೆಂಗಳೂರು: ಏ.23 ರಿಂದ ರಾಜ್ಯಾದ್ಯಂತ ಪ್ರವಾಸ ಆರಂಭ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, . ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಅಮಿತ್ ಶಾ ಅವರು ಅನೇಕ ಸಲಹೆ ನೀಡಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರುತ್ತಾರೆ. ರಾಜ್ಯದಲ್ಲಿ 130 ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ  ವಿಶ್ವಾಸ ವ್ಯಕ್ತಪಡಿಸಿದರು.

Read More

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (bangalore) ಪೇಂಟಿಂಗ್ ಮೂಲಕ ನ್ಯಾಯದ ಚಿತ್ರ ಪ್ರದರ್ಶನ (painting)  ಜರುಗಿದೆ. ಟೆಡ್ X ಬೆಂಗಳೂರು(Ted X Bangalore) ವತಿಯಿಂದ ಕಾರ್ಯಕ್ರಮ ನಡೆಯುತ್ತಿದ್ದು, Video Player 00:00 00:08 ಎಂಜಿ ರಸ್ತೆಯ ಮೆಟ್ರೋ ಬಳಿ ಇರುವ ರಂಗೋಲಿ ಆರ್ಟ್ ಸೆಂಟರ್ ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. Video Player 00:00 00:45 9 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಭಾರತದ 17 ವಿವಿಧ ಕಲಾವಿದರಿಂದ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.(Demonstration of justice through painting) ಜನರ ಮನಸ್ಸನ್ನು ಗಟ್ಟಿಗೊಳಿಸಲು, Video Player 00:00 00:12 ನ್ಯಾಯಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ಪೇಂಟಿಂಗ್ಸ್ ಗಳು ಎಲ್ಲರ ಗಮನ ಸೆಳೆದಿದ್ದು, ಪೇಂಟಿಂಗ್ ಮೂಲಕ ನ್ಯಾಯದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Read More

ಬೆಂಗಳೂರು:  ಬೆಂಗಳೂರಿನಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಲು ಜೆಡಿಎಸ್  ಕಸರತ್ತು ನಡೆಸಿದೆ.  ಬಸವನಗುಡಿಯಲ್ಲಿ ಜೆಡಿಎಸ್  ಗೆಲ್ಲಿಸಲು ಮಿಡ್ ನೈಟ್ ಮೀಟಿಂಗ್ ನಡೆದಿದ್ದು,   ಕ್ಷೇತ್ರದಲ್ಲಿ ಸಮುದಾಯ ಕ್ರೋಡಿಕರಣಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಟಿಎ ಶರವಣ ಮತ್ತು ಅಭ್ಯರ್ಥಿ ಅರಮನೆ ಶಂಕರ್  ಮಹತ್ವದ ಸಭೆ ನಡೆಸಿ,  ದೇವೇಗೌಡರ ಸೂಚನೆಯಂತೆ ಪ್ರತಿ ಸಮುದಾಯವನ್ನ ಸೆಳೆಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಬೆಂಗಳೂರಿನ  ಖಾಸಗಿ ಸ್ಥಳದಲ್ಲಿ ಸಮುದಾಯವಾರು ಸಭೆ ನಡೆಸುತ್ತಿರುವ ಪರಿಷತ್ ಸದಸ್ಯ ಟಿ ಎ ಶರವಣ  ರಾತ್ರಿ ವಿಶ್ವಕರ್ಮ ಆರ್ಯವೈಶ್ಯ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದರು. ಈ ಬಾರಿಯ (election2023)ಕರ್ನಾಟಕ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ಅರಮನೆ ಶಂಕರ್ ಅವರಿಗೆ ಪ್ರತಿಯೊಬ್ಬರು ಬೆಂಬಲ ಸೂಚಿಸಿ, ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವಂತೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಭೆಯಲ್ಲಿ ಟಿಎ ಶರವಣ ಅವರು ಮನವಿ ಮಾಡಿದರು. ಚಿಕ್ಕ ಚಿಕ್ಕ ಸಮುದಾಯವನ್ನು ಜೆಡಿಎಸ್  ನತ್ತ ಸೆಳೆಯುವ  ಪ್ರಯತ್ನ  ಮಾಡುತ್ತಿದ್ದು,   ಬ್ರಾಹ್ಮಣ,ವಿಶ್ವಕರ್ಮ, ಆರ್ಯವೈಶ್ಯ,…

Read More

ಬೆಂಗಳೂರು: ಚುನಾವಣಾ ಆಯೋಗದ ಬಗ್ಗೆ ಡಿಕೆಶಿಗೆ ನಂಬಿಕೆ ಇಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಬಗ್ಗೆ ಡಿಕೆಶಿಗೆ ನಂಬಿಕೆ ಇಲ್ಲ. ಅದಕ್ಕಾಗಿಯೇ ಸಹೋದರ ಡಿ.ಕೆ.ಸುರೇಶ್ ಕೈಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಪದ್ಮನಾಭ ನಗರದಲ್ಲಿ ನಾಮಪತ್ರ ಸಲ್ಲಿಸಲು ಸಮಯ ಸಿಗಲಿಲ್ಲವೆಂದು ಕಾಣುತ್ತದೆ ಎಂದರು. ಸಿದ್ದರಾಮಯ್ಯ ರಾಜ್ಯವೆಲ್ಲ ಸುತ್ತಿ ಮತ್ತೆ ವರುಣಕ್ಕೆ ಬಂದಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣ ಗೆಲ್ಲುತ್ತಾರೆ. ಸಿದ್ದರಾಮಯ್ಯರಿಗೆ ಸೊಸೆ, ಮೊಮ್ಮಕ್ಕಳನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಎಲ್ಲರನ್ನೂ ಗೆಲ್ಲಿಸುವ ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಲು ಸೊಸೆ, ಮೊಮ್ಮಕ್ಕಳನ್ನು ಕರೆದುಕೊಂಡು ಬರಬೇಕಾದುದು ಎಂಥ ವಿಪರ್ಯಾಸ” ಎಂದು ಟೀಕಿಸಿದರು. ಎಲ್ಲರ ಶಾಪದಿಂದ ಸಿದ್ದರಾಮಯ್ಯ ಈ ಸಾರಿ ಸೋಲುತ್ತಾರೆ ಎಂದ ಅವರು, ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ. ಡಿ.ಕೆ.ಶಿವಕುಮಾರ್ ಅವರು ಸೋಲುವ ಭಯದಲ್ಲಿದ್ದಾರೆ ಎಂದು ತಿಳಿಸಿದರು. ನಮ್ಮ ಪಕ್ಷದ ಆರ್.ಅಶೋಕ್…

Read More

ಬೆಂಗಳೂರು: ಬಿಹಾರ ಮೂಲದ ಯುವತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರೀಮಾ ಕುಮಾರಿ ಮೃತಪಟ್ಟ ಯುವತಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು, ಹಾಸ್ಟೆಲ್ನ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ಯುವತಿ ಪದೇ ಪದೇ ಟೆರೇಸ್’ಗೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿಗಳು ನೋಡಿದ್ದಾರೆ. ಬಳಿಕ ಯುವತಿಯನ್ನು ರೂಮಿಗೆ ಕಳುಹಿಸಿದ್ದಾರೆ. ಆದರೆ, ಮರು ದಿನ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆ ನಡೆದು ಎರಡು ದಿನ ಕಳೆದರೂ ಪ್ರಕರಣವನ್ನು ಕೈಗೆತ್ತಿಕೊಳ್ಳಲು ವಿಳಂಬ ಮಾಡಿದ ಪೀಣ್ಯ ಪೊಲೀಸರ ವಿರುದ್ಧ ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಆಕ್ರೋಶ ಹೊರಹಾಕಿದ್ದು, ಮಂಗಳವಾರ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿತು. ಈ ನಡುವೆ ಯುವತಿಯ ಕುಟುಂಬಸ್ಥರು ಗುರುವಾರ ಠಾಣೆಗೆ ಬಂದಿದ್ದು, ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲಸ ಸ್ಥಳದಲ್ಲಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read More