ಬೆಂಗಳೂರು: ಬಾಕಿ ಬಿಲ್ ಪಾವತಿಗಾಗಿ ಪರದಾಡುತ್ತಿರುವ ಗುತ್ತಿಗೆದಾರರಿಗೆ ಅಡ್ವಾನ್ಸ್ ಹಣ ನೀಡಲು ಪಾಲಿಕೆ ಪ್ಲಾನ್ ಮಾಡಿದೆ. ಗುತ್ತಿಗೆದಾರರಿಗಾಗಿಯೇ 400 ಕೋಟಿ ಮೊತ್ತದ ವೆಂಡರ್‌ಬಿಲ್ ಡಿಸ್‌ಕೌಟಿಂಗ್ ಸಿಸ್ಟಮ್ ಯೋಜನೆ ಜಾರಿಯಾಗಿದ್ದು , ಇದಕ್ಕಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಪ್ಪಂದವೂ ಆಗಿದೆ. ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ಪಾವತಿ ಮಾಡಲು ಮುಂದಾಗಿದೆ. ಹೊಸದಾಗಿ ಕಾಮಗಾರಿ ಮಡುತ್ತಿರುವ ಗುತ್ತಿಗೆದಾರರಿಗೆ ಅಡ್ವಾನ್ಸ್ ಹಣ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಬಿಬಿಎಂಪಿಯ ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡ ಹಣ ನೀಡುತ್ತೆ. ಆದರೆ ಗುತ್ತಿಗೆದಾರರೇ ಅಡ್ವಾನ್ಸ್ ಆಗಿ ಪಡೆದ ಹಣಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ. ವಾರ್ಷಿಕ ಶೇ.8.25ರಷ್ಟು ಬಡ್ಡಿ ದರದಲ್ಲಿ ಮುಂಗಡ ಹಣ ಪಾವತಿಸಬೇಕು. ಆದರೆ ಈ ಹಣವನ್ನ ಆರು ತಿಂಗಳ ಅವಧಿಯಲ್ಲಿ ಬಿಬಿಎಂಪಿ ಬ್ಯಾಂಕ್‌ಗೆ ಮರು ಪಾವತಿಸುತ್ತದೆ. ಈಗಾಗಲೇ ಈ ಯೋಜನೆಗೆ ಆಸಕ್ತ ಗುತ್ತಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಮುಂಗಡ ಹಣ ನೀಡಲಾಗುತ್ತೆ. ಈಗಾಗಲೇ ಸಾಕಷ್ಟು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ…
Author: Prajatv Kannada
ಬೆಂಗಳೂರು: ಸ್ಮಶಾನ ಭೂಮಿಗಾಗಿ ಅರ್ಜಿ ಸಲ್ಲಿಸದ ಸಾರ್ವಜನಿಕರ ವಿರುದ್ಧ ಬೆಂಗಳೂರಿನ ಹೈಕೋರ್ಟ್ ಬೇಸರ ಹೊರ ಹಾಕಿದೆ. ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ, ಜನರ ಧೋರಣೆ ವಿರುದ್ಧ ಅಸಮಾಧಾನ ಹೊರಹಾಕಿತು. ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲ ಕಿರಣ್ ಕುಮಾರ್, 2023ರ ಏ.19 ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೋವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 2023ರ ಏ.9 ರಂದು ಹೈಕೋರ್ಟ್ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದರೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸಿದ ಹೊರತಾಗಿಯೂ ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥನಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಇದಕ್ಕೆ ತೀವ್ರವಾಗಿ…
ಕೊನೆಗೂ ಜನರ ಬಳಕೆಗೆ ʼನಮ್ಮ ಬಿಎಂಟಿಸಿʼ ಮೊಬೈಲ್ ಆಯಪ್ ಬಿಡುಗಡೆ ಮಾಡಲಾಗಿದೆ. ವರ್ಷಗಳಿಂದ ನನೆಗುದಿಯಲ್ಲಿದ್ದ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಆಯಪ್ ʼನಮ್ಮ ಬಿಎಂಟಿಸಿ ಆ್ಯಪ್ ಬಿಡುಗಡೆ ಆಗಿದ್ದು, ಪ್ಲೇ ಸ್ಟೋರ್‌ನಲ್ಲಿ ಈ ಆಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ʼನಮ್ಮ ಬಿಎಂಟಿಸಿʼ ಆಯಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿ ಬಸ್ ಟ್ರ್ಯಾಕ್ ಮಾಡಲು ಸಹಾಯವಾಗಲಿದೆ. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳಿವೆ. ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿ ಲಭ್ಯವಿರಲಿವೆ. 400 ವೋಲ್ವೋ ಬಸ್‌ಗಳು ಸೇರಿ ದಿನ ಸುಮಾರು 5,600 ಬಸ್‌ಗಳನ್ನು ನಿರ್ವಹಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಸ್ಕ್ರ್ಯಾಪ್ ಆಗಲಿರುವ ಬಸ್‌ಗಳಲ್ಲಿ ಲೈವ್ ಟ್ರ್ಯಾಕಿಂಗ್ ಲಭ್ಯವಿರುವುದಿಲ್ಲ. ʼನಮ್ಮ ಬಿಎಂಟಿಸಿ’ ಆಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ. ಸೈನ್ ಇನ್ ಮಾಡುವ ಮೂಲಕ ಅಥವಾ ಗೆಸ್ಟ್ ಯೂಸರ್ ಆಗಿಯೂ ಬಳಸಬಹುದು. ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆಯಪ್ನಲ್ಲಿ ಲಿಂಕ್ ಸಹ ನೀಡಲಾಗಿದೆ.…
ಬೆಂಗಳೂರು: ಪಿಎಂ ಮೋದಿ ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೂ ಇಳಿಯಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಪ್ರಧಾನಿ ಕಚೇರಿ ದೊಡ್ಡ ಅಪರಾಧ ಎಸಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆ ಎಸ್ ಈಶ್ವರಪ್ಪಗೆ ಕರೆ ಮಾಡಿದ್ದಾರೆ. ಇದು ಭಾರತ ಇತಿಹಾಸ, ಕರ್ನಾಟಕದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯಲಿದೆ. ಕರೆ ಮಾಡುವ ಮೂಲಕ ಪಿಎಂ ಶೇ 40ರಷ್ಟು ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ. ಪಿಎಂ ಮೋದಿ ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೂ ಇಳಿಯಬಹುದು. ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಅದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈಶ್ವರಪ್ಪ ಜೊತೆ ಕರೆ ಮಾಡಿ, ನಗು ನಗುತ್ತಾ ಮಾತನಾಡಿದ್ದಾರೆ. ಈಶ್ವರಪ್ಪ ಕಮಿಷನ್ ಆರೋಪದಲ್ಲಿ ಮಂತ್ರಿಗಿರಿಯಿಂದ ವಜಾ ಮಾಡಿಲ್ಲವೇ?. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪತ್ನಿ ಜೊತೆ ಮಾತನಾಡಿದ್ದಾರಾ?. ಅವರ ತಂದೆ ತಾಯಿ ಜೊತೆ ಮಾತನಾಡಿದ್ದಾರಾ?. ಪ್ರಧಾನಿ ಅವರ ಮನೆಗೆ ಹೋಗಿದ್ದಾರಾ?. ಈಶ್ವರಪ್ಪ ಬಿಜೆಪಿ ಮುಖಂಡರಾಗಿರಬಹುದು,…
ಬೆಂಗಳೂರು: ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಲಿಂಗಾಯತರ ಬಗ್ಗೆ ಚಿಂತೆ ಬೇಡ ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿಯವರೇ, ನಮ್ಮ ನಾಡಿನಲ್ಲಿ ಲಿಂಗಾಯತರ ಡ್ಯಾಮನ್ನು ಒಡೆಯುವ ನಿಮ್ಮ ಹಗಲು ಕನಸು ಯಾವತ್ತೂ ನನಸಾಗುವುದಿಲ್ಲ. ಹಿಂದೆ ನಿಮ್ಮ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ ಲಿಂಗಾಯತ ಸಮಾಜವನ್ನು ಒಡೆದು ಆಳುವ ಕುತಂತ್ರಕ್ಕೆ ಕೈ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಣೆಕಟ್ಟೆಯೇ ಒಡೆದು ಹೋಗಿ ಒಣಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ. ಕಾಂಗ್ರೆಸ್ಸಿನಿಂದ ಮುಂದೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳುವ ತಾಕತ್ತು ನಿಮಗಿದೆಯೇ ? ಹಿಂದೆ ಹಿರಿಯ ಮುತ್ಸದ್ದಿ ಶ್ರೀ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೇಗೆ ಹೀನಾಯವಾಗಿ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದ್ದಾರೆ. ನೀವು ಏನೇ ಮಾಡಿದರೂ ಲಿಂಗಾಯತರ ಅಣೆಕಟ್ಟೆ ಸದಾ ಬಿಜೆಪಿ ಪರ ಸಮೃದ್ಧ ಅಲೆಗಳಿಂದ ತುಂಬಿರುತ್ತದೆ. ಈ ಅಣೆಕಟ್ಟೆಗೆ ಕೈ ಹಾಕುವ ನಿಮ್ಮ ವ್ಯರ್ಥ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನೀವು ಮರೆಯಬೇಡಿ…
ಬೆಂಗಳೂರು: ಈಶ್ವರಪ್ಪ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿದ್ದನ್ನು ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಅನುಮೋದನೆ ಎಂದು ಟೀಕಾ ಪ್ರಹಾರ ನಡೆಸಿದೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಈಶ್ವರಪ್ಪ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಟಿಕೆಟ್ ನಿರಾಕರಣೆ ಮಾಡಿದ ಬಳಿಕವೂ ಪ್ರತಿಭಟಿಸದೇ ಇರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಒಪ್ಪಲಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಕೆಎಸ್ ಈಶ್ವರಪ್ಪ 2022 ರ ಏಪ್ರಿಲ್ ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ, ಬೆಳಗಾವಿಯ ಸಾರ್ವಜನಿಕ ಕಾಮಗಾರಿಗಳಲ್ಲಿ ಈಶ್ವರಪ್ಪ ಶೇ.40 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಈ ಪ್ರಕರಣದ ತನಿಖೆಯಲ್ಲಿ ಕೆಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಈ ಬಳಿಕ ಈಶ್ವರಪ್ಪ ಸ್ವ ಇಚ್ಛೆಯಿಂದ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಘೋಷಿಸಿದ್ದರು ಆದರೆ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಆದರೆ…
ಬೆಂಗಳೂರು: ಶ್ರೀನಿವಾಸ ವೈದ್ಯರ ನಿಧನಕ್ಕೆ ನಾಡೋಜ ಮಹೇಶ್ ಜೋಶಿ ಅವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು,ಶ್ರೀನಿವಾಸ ವೈದ್ಯ ಅವರ ನಿಧನ ವಾರ್ತೆ ಆಘಾತ ತಂದಿದೆ. ಅವರ ಅಗಲುವಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರ ನಷ್ಟವಾಗಿದೆ ಎಂದರು. ಶ್ರೀನಿವಾಸ ವೈದ್ಯ ಮೂಲತಃ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 1936ರ ಏಪ್ರಿಲ್ 4 ರಂದು ಜನಿಸಿದ್ದರು. ತಂದೆ ಬಿ.ಜಿ. ವೈದ್ಯರು ಸುಪ್ರಸಿದ್ಧ ವಕೀಲರು. ತಾಯಿ ಸುಂದರಬಾಯಿ. ಇವರ ಅಜ್ಜ ಎಂದರೆ ತಾಯಿಯ ತಂದೆ ನರಗುಂದಕರ್ ರಾಮರಾ ಕರ್ನಾಟಕದ ಸಪ್ತರ್ಷಿಗಳಲ್ಲೊಬ್ಬರು ಎಂದು ಗುರುತಿಸಿಕೊಂಡವರು. ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ʻಗಗ್ಗಯನ ಗಡಿಬಿಡಿʼ, ʻದಾಂಪತ್ಯದ ಬೊಂಬೆʼ, ʻತಿರುವು-ಮುರುವುʼ ಮುಂತಾದ ಅನೇಕ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ವಿದ್ಯಾವರ್ಧಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವಾರು ಬಹುಮಾನಗಳನ್ನು ಗಳಿಸಿದ್ದರು ಎಂದು ಮಹೇಶ್ ಜೋಶಿ ನೆನಪಿಸಿಕೊಂಡಿದ್ದಾರೆ.
ಬೆಂಗಳೂರು: ವರುಣಾ (Varuna) ಕ್ಷೇತ್ರಕ್ಕೆ ಮತ್ತೆ ಮತ ಪ್ರಚಾರಕ್ಕೆ ಸಿದ್ದರಾಮಯ್ಯ (Siddaramaiah) ಆಗಮಿಸಿದ್ದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಕಾಲೆಳೆದಿದ್ದಾರೆ. ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗೂ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿಬಂದರು. ಇವತ್ತು ಮತ್ತೆ ಬಂದಿದ್ದಾರೆ. ಮುಂದಿನವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಬಳಿಕ ವರುಣಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ. ರಾತ್ರಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಈ ಬಾರಿ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ನಿಂತಿದ್ದಾರೆ. ಈ ಬಾರಿ ಸಿದ್ದರಾಮಯ್ಯನವರನ್ನು ಸೋಲಿಸಲು ಬಿಜೆಪಿ ಸೋಮಣ್ಣನವರನ್ನು ಕಣಕ್ಕೆ ಇಳಿಸಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿದೆ.
ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕಳೆದ 10 ದಿನಗಳ ಹಿಂದೆ ದೆಹಲಿ ಹಾಗೂ ಆರ್ ಸಿಬಿ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳುವಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರಿಗೆ ದೆಹಲಿ ತಂಡದ ಮ್ಯಾನೇಜ್ಮೆಂಟ್ ದೂರು ನೀಡಿತ್ತು. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದರು. ಪ್ರಕರಣದ ತನಿಖೆ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕಳವುವಾಗಿರುವ ಅನುಮಾನವಿದ್ದರಿಂದ ಡೆಲ್ಲಿ ಕ್ಯಾಪಿಟಲ್ ತಂಡ ಈ ಬಗ್ಗೆ ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿದ್ದರು. ಬೆಂಗಳೂರು ಪೊಲೀಸರು ತೀವ್ರ ತನಿಖೆ ನಡೆಸಿದ್ದು, ಕೊನೆಗು ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಳವಾಗಿದ್ದ 17 ಬ್ಯಾಟ್ಗಳು, ಗ್ಲೌಸ್, ಹೆಲ್ಮೇಟ್, ಪ್ಯಾಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಕರ್ನಾಟಕ ವಿಧಾನಸಭೆಯ ಚುನಾವಣೆ-2023ರ ಮತದಾನ ಮೇ 10 ರಂದು ನಡೆಯಲಿದ್ದು, ಶೇಕಡಾವಾರು ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮಾ.ಪಿ.ವಿ ರವರು ಇಂದು ಜಕ್ಕೂರಿನಲ್ಲಿರುವ ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್(ಭಾರತೀಯ ವಿಜ್ಞಾನಿ) ರವರ ನೇತೃತ್ವದಲ್ಲಿ ಇಂದು ಅಧ್ಯಯನ ಕೇಂದ್ರದ ಮುಖ್ಯ ಆಡಳಿತಾಧಿಕಾರಿ, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಸಂಸ್ಥೆಯ ಆಡಳಿತ ಸಿಬ್ಬಂದಿಗಳಿಗೆ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿದ ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ವಿವಿಧ ಸ್ಥಳಗಳಲ್ಲಿ ಮತ ಜಾಗೃತಿ: ಯಲಹಂಕ ವಲಯ ವಿದ್ಯಾರಣ್ಯಪುರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದಂತಹ ಭಕ್ತರುಗಳಿಗೆ, ಕಾಪಿ ಬೋರ್ಡ್, ದಾಸರಹಳ್ಳಿ, ನಂಜಪ್ಪ ವೃತ್ತ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಆಟೋ ಚಾಲಕರು, ಉದ್ದಿಮೆದಾರರು, ಕೋಡಿಗೆಹಳ್ಳಿ ಸ್ವಾತಿ ಗಾರ್ಡನ್ ಹೋಟೆಲ್ ನೌಕರರು, ಗ್ರಾಹಕರು, ಸಾರ್ವಜನಿಕರಿಗೆ ಬೀದಿ ಬದಿ ನಾಟಕ, ಮತದಾನ ಜಾಗೃತಿ ಹಾಗೂ ಜಾಥಾ ಮೂಲಕ ಅಭಿಯಾನ ನಡೆಸಿ…