Author: Prajatv Kannada

ಬೆಂಗಳೂರು: ನಾಳೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪೂರ್ಣ ಪ್ರಮಾಣದ ಸಂಪುಟ ರಚನೆ ಆಗಿದೆ. ಕೆಲವು ಮಾನದಂಡಗಳ ಆಧಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗಿದೆ. ಮುಂದಿನ ಸಂಪುಟದಲ್ಲಿ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ. ಈ ಹಿಂದೆಯೂ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಈಗಲೂ ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ. ವಿರೋಧ ಪಕ್ಷದವರು ಜನರಿಗೆ ಕೊಟ್ಟ ಭರವಸೆ ಈಡೇರಿಸಿರಲಿಲ್ಲ ಎಂದರು.

Read More

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಅವಕಾಶ ಕೊಡಬೇಕಿತ್ತು ಎಂದುಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಆಗ್ರಹಿಸಿದರು. ನಗರದಲ್ಲಿಂದು‌ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಸಚಿವರಾಗಲು ಅರ್ಹರಾಗಿರುತ್ತಾರೆ ಆದರೆ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು ಇನ್ನು ಮುಂದಾದರೂ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ಅವರ ಧರ್ಮ ಎಂದ ಸ್ವಾಮೀಜಿ ಅವರು, ಜಗದೀಶ್ ಶೆಟ್ಟರ್  ಹಾಗೂ ಸವದಿ ಒಳ್ಳೆ ಅನುಭವಿ ರಾಜಕಾರಣಿಗಳು. ಸಜ್ಜನ,ಸಾತ್ವಿಕ ರಾಜಕಾರಣಿಗಳು ಆಗಿದ್ದಾರೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ಅನುಭವವನ್ನು ಮಾರ್ಗದರ್ಶನವನ್ನು ಪಕ್ಷ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಾನು ಇನ್ನೂಂದು ಸಲ ನಾನು ಅವರಿಗೆ ಸಚಿವ ಸ್ಥಾನ ಕೊಡಲು ಒತ್ತಾಯ ಮಾಡ್ತೀನಿ ಎಂದರು. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಲಿಂಗಾಯತರನ್ನು ಕಡೆಗಣಿಸಿದ ಹಾಗೆ ಕಾಣಲ್ಲ ಇನ್ನು ಅವಕಾಶ ಇದೆ,…

Read More

ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಚುನಾವಣೆ ಸಮಯದಲ್ಲಿ ಕರ್ನಾಟಕ ರಾಜ್ಯದ ಜನತೆಗೆ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿದ್ದೀರಿ. ಕೂಡಲೆ ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಮಾಡಲಿ ಎಂದು ಬಿಜೆಪಿ ಮುಖಂಡ ಕಿರಣಕುಮಾರ ದೇಸಾಯಿ ಒತ್ತಾಯಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ ಅದು ಬರಿ ಘೋಷಣೆಯಾಗಿ ಉಳಿಯಬಾರದು ಕರ್ನಾಟಕದ ಜನರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿ ಎಂದರು. ಪ್ರಕಾಶ ಕುಂಬಾರ

Read More

ಧಾರವಾಡ: ತಡರಾತ್ರಿಯಷ್ಟೇ ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿ ಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ಮಗ ಅರಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿದಂತೆ ನಾಲ್ಕು ಜನರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿಯನ್ನು ಹತ್ಯೆ ಮಾಡಲು ಐದು ಜನರ ತಂಡ ನಿನ್ನೆ ರಾತ್ರಿ ಅವರ ಮನೆಗೆ ನುಗ್ಗಿತ್ತು. ತಾವು ಅಂದುಕೊಂಡಂತೆ ಮಹ್ಮದ್‌ನನ್ನು ಹತ್ಯೆ ಮಾಡಿದ ಆರೋಪಿಗಳು, ಹತ್ಯೆ ಮಾಡುವ ಅವಸರದಲ್ಲಿ ತಮ್ಮ ಸಹಚರ ಗಣೇಶ ಕಮ್ಮಾರನ ಕಾಲಿಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದರು. ಇದರಿಂದ ಗಣೇಶ, ಮಹ್ಮದನ ಮನೆಯಿಂದ ಅನತಿ ದೂರ ಓಡಿ ಹೋಗಿ ಸಾವನ್ನಪ್ಪಿದ್ದ. ಉಳಿದ ನಾಲ್ಕು ಜನ ಆರೋಪಿಗಳು ಗಣೇಶನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ರೌಡಿ ಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿ ಜೊತೆ ವ್ಯವಹಾರ ಮಾಡುತ್ತಿದ್ದ. ತನ್ಮ ತಂದೆ ಫ್ರೂಟ್ ಇರ್ಫಾನ್…

Read More

ಹಾಸನ: ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ (Fire) ಹಾಕಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ. ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಶೋಭಾ ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್‌ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read More

ಬೆಂಗಳೂರು: ಗ್ಯಾರಂಟಿ (Guarantee Scheme) ಅನುಷ್ಠಾನಕ್ಕೆ ತಂದರೆ ನಾಳೆ ಬಿಜೆಪಿಯ (BJP) ಅಸ್ತಿತ್ವವೇ ಕಳೆದುಹೋಗುತ್ತದೆ. ಮುಂದೆ 25 ವರ್ಷಗಳವರೆಗೆ ಅವರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಭಯದಲ್ಲಿ ಜನರಲ್ಲಿ ಒಂದು ರೀತಿಯಲ್ಲಿ ಅನುಮಾನ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ (Eshwara Khandre) ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಕ್ಯಾಬಿನೆಟ್‌ನಲ್ಲಿಯೇ ಗ್ಯಾರಂಟಿ ಯೋಜನೆಗಳಿಗೆ ಒಪ್ಪಿಗೆ ಕೊಡಬೇಕಿತ್ತು ಎಂಬ ಬಿಜೆಪಿ ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಜಾರಿಗೆ ತರುವುದರಲ್ಲಿ ಯಾವುದೇ ಗೊಂದಲವಿಲ್ಲ. ನಾವು ಏನು ಹೇಳಿದ್ದೇವೆ ಅದನ್ನು ಅನುಷ್ಠಾನ ಮಾಡಿ ಜಾರಿಗೆ ತರುತ್ತೇವೆ. ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಈ ರೀತಿಯಾಗಿ ಹೇಳುತ್ತಿದ್ದಾರೆ. ಜನರಿಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ವಿದ್ಯುತ್ ಬಿಲ್ (Electricity Bill) ಕಟ್ಟಲ್ಲ ಎಂಬ ಜನರ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಜನರು ಈಗ ಕಟ್ಟುತ್ತಿರುವುದು ಹಳೆಯ ಬಿಲ್. ಅದು ಏಪ್ರಿಲ್ ತಿಂಗಳಿನ ಬಿಲ್ ಆಗಿದ್ದು, ಮೇ ತಿಂಗಳಿನಲ್ಲಿ…

Read More

ಚೆನ್ನೈ: 2023ರ ಐಪಿಎಲ್ (IPL 2023) ಆವೃತ್ತಿಯ ಪ್ಲೇ ಆಫ್‌ನಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡವನ್ನ ಮಣಿಸಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) 10ನೇ ಬಾರಿಗೆ ಫೈನಲ್ ತಲುಪಿದೆ. ಆದ್ರೆ ಕೊನೆಯ 5 ಓವರ್‌ನಲ್ಲಿ ಟೈಟಾನ್ಸ್ ಗೆಲುವಿಗೆ 71 ರನ್‌ಗಳ ಅಗತ್ಯವಿದ್ದಾಗ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ (MS Dhoni) ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂಷಿಸುತ್ತಿದ್ದಾರೆ. ಈ ಹಿಂದೆ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕೇಸ್‌ನಲ್ಲಿ ಸಿಲುಕಿದ್ದರಿಂದ ತಂಡ 2 ವರ್ಷ ಬ್ಯಾನ್ ಆಗಿತ್ತು. ಆಗ ತಂಡದಲ್ಲಿದ್ದ ಆಟಗಾರರು ಇಬ್ಭಾಗವಾಗಿ ಕೆಲ ಆಟಗಾರರು ಗುಜರಾತ್ ಲಯನ್ಸ್ ತಂಡದಲ್ಲಿ, ಇನ್ನೂ ಕೆಲವರು ಮಹಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಇದೀಗ ಮಹಿ ಅವರ ನಡೆಯಿಂದ ಕ್ರಿಕೆಟ್ ಅಭಿಮಾನಿಗಳ ನಡುವೆ ಪರ-ವಿರೋಧ ಚರ್ಚೆ ಹುಟ್ಟಿಕೊಂಡಿದೆ. ಕೊನೆಯ 5 ಓವರ್‌ನಲ್ಲಿ ನಡೆದಿದ್ದೇನು? ಗುಜರಾತ್ ಟೈಟಾನ್ಸ್‌ಗೆ ಬೃಹತ್ ಮೊತ್ತದ…

Read More

ವೇದ ಸಿನಿಮಾ ನಂತರ ಶಿವರಾಜ್ ಕುಮಾರ್ ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿತ್ತು. ‘ಭೈರತಿ ರಣಗಲ್’ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ನಿರ್ದೇಶಕ ನರ್ತನ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಮುಹೂರ್ತ (Muhurta) ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ನರ್ತನ್ ನಿರ್ದೇಶನ ಅಂದರೆ, ಸೈಲೆನ್ಸ್ ಅಲ್ಲಿ ವೈಯಲೆನ್ಸ್ ಇರುತ್ತದೆ. ಇದು ಸಸ್ಪೆನ್ಸ್ ಅಂಶಗಳನ್ನು ಹೊಂದಿರುವಂತಹ ಸಿನಿಮಾ. ಶಿವಣ್ಣನಿಗೆ 61 ವರ್ಷ ವಯಸ್ಸಾದರೂ ಇನ್ನೂ ಯುದ್ಧಕ್ಕೆ ಕಳುಹಿಸ್ತಾನೆ ಇದ್ದಾರೆ. ಈ ಸಿನಿಮಾವನ್ನು ಗೀತಾ ಪಿಕ್ಚರ್ಸ್ ನಲ್ಲಿ ಮಾಡಬೇಕು ಎನ್ನುವುದು ಹಲವು ದಿನಗಳ ಹಿಂದಿನ ನಿರ್ಧಾರವಾಗಿತ್ತು. ಈಗ ಅದಕ್ಕೆ ಚಾಲನೆ ಸಿಕ್ಕಿದೆ’ ಎಂದರು. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ (Geeta Pictures) ನಿರ್ಮಾಣವಾಗುತ್ತಿರುವ 2ನೇ ಸಿನಿಮಾವಿದು.  ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ…

Read More

ತೆಲುಗಿನ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh)  ನಟನೆಯ ‘ಮತ್ತೆ ಮದುವೆ’ (ಮಲ್ಲಿ ಪೆಲ್ಲಿ) (Matte Maduve) ಸಿನಿಮಾ ವಿರುದ್ಧ ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್  (Court) ಮೋರೆ ಹೋಗಿದ್ದಾರೆ. ತಮ್ಮ ಮಾನಹಾನಿ ಮಾಡುವಂತಹ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂದು ಅವರು ಕೋರ್ಟಿಗೆ ತಿಳಿಸಿದ್ದಾರೆ. ವೈಯಕ್ತಿಕ ಜೀವನಕ್ಕೆ ಧಕ್ಕೆ ತರುವಂತಹ ಅಂಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಸಿನಿಮಾ ಪ್ರದರ್ಶನವಾಗದಂತೆ ತಡೆಯಬೇಕು ಎಂದು ಅವರು ಕುಕಟ್ ಪಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ. ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ. ನರೇಶ್ ಲೈಫ್…

Read More

ಆಹಾರದ ರುಚಿಯನ್ನು ಹೆಚ್ಚಿಸುವ ಜೀರಿಗೆಯು ಹಲವಾರು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿದೆ. ಮಸಾಲೆಗಳ ವರ್ಗದಲ್ಲಿ ಬರುವ ಜೀರಿಗೆಯನ್ನು(cumin) ಸರಿಯಾಗಿ ಸೇವಿಸಿದರೆ, ಅದು ನಮ್ಮನ್ನು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ದೂರವಿಡುತ್ತದೆ. ಜೀರಿಗೆಯಲ್ಲಿರುವ ನಂಜುನಿರೋಧಕ ಗುಣಲಕ್ಷಣಗಳು ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಎದುರಿಸುತ್ತಿರುವ ಜನರು ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಹೊಟ್ಟೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ದೇಹದಲ್ಲಿ(Body) ಇರುವ ವಿಷವನ್ನು ಹೊರಹಾಕಬಹುದು. ಜೀರಿಗೆಯ ಮತ್ತೊಂದು ವಿಶೇಷತೆಯೆಂದರೆ ಇದು ಅನೇಕ ಆ್ಯಂಟಿ ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಹೊಟ್ಟೆ ಮತ್ತು ಯಕೃತ್ತಿನಲ್ಲಿ ಸಂಭವಿಸುವ ಗೆಡ್ಡೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಜೀರಿಗೆಯನ್ನು ಸೇವಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತಜ್ಞರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಜೀರಿಗೆ ಸೇವನೆಯಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ ರೋಗನಿರೋಧಕ ಶಕ್ತಿ ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ…

Read More