ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರು ಮೇ 31 ರಿಂದ ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮೂರನೇ ಬಾರಿಗೆ ನೇಪಾಳ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಪ್ರಚಂಡ ಅವರ ಮೊದಲ ವಿದೇಶಿ ಭೇಟಿ ಇದಾಗಿದೆ. ಮೇ 31 ರಿಂದ ಜೂನ್ 3 ರವರೆಗೆ ಭಾರತಕ್ಕೆ ಭೇಟಿ ನಡೆಯಲಿದ್ದಾರೆ ಎಂದು ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ಭಾರತ ಭೇಟಿಯ ಕುರಿತು ವಿದೇಶಾಂಗ ಸಚಿವಾಲಯ ಶನಿವಾರ ಅಧಿಕೃತ ಘೋಷಣೆ ಮಾಡಲಿದೆ. ಈ ಭೇಟಿಯು ಮೇ 31 ರಿಂದ ಜೂನ್ 3 ರವರೆಗೆ ನಡೆಯಲಿದೆ ಮತ್ತು ಅವರು ದ್ವಿಪಕ್ಷೀಯ ಸಂಬಂಧಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಮಟ್ಟದ ನಾಯಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು…
Author: Prajatv Kannada
ಜೋಹಾನ್ಸ್‌ಬರ್ಗ್: ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ ಕೈಗೊಂಡಿರುವ ಸಾಧಕ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಜೂನ್ 26ರಂದು ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮುಖ್ಯ ಅತಿಥಿಯಾಗಿದ್ದು, ಈ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ‘ಸದ್ಗುರು ಲಂಡನ್‌ನಿಂದ ಭಾರತಕ್ಕೆ ಮೋಟಾರ್ ಬೈಕ್‌ನಲ್ಲಿ ಜಾಥಾ ನಡೆಸಿದ್ದನ್ನು ನೋಡಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ನೆಲೆಸಿರುವ ಡಲ್‌ಸ್ಟ್ರೂಮ್‌ನಿಂದ ದಕ್ಷಿಣ ಆಫ್ರಿಕಾದಾದ್ಯಂತ 10 ಸಾವಿರ ಕಿ.ಮೀ. ನಡಿಗೆ ಕೈಗೊಂಡೆ. ಎಲ್ಲಿ ನಾನು ಬದುಕುತ್ತೇನೋ ಅಲ್ಲಿ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತೇನೆ’ ಎಂದು ‘ಮಣ್ಣು ಉಳಿಸಿ’ ರಾಯಭಾರಿ ಟೆಸ್ಕೆ ನಾಕಾಡಿಮೆಂಗ್ ಹೇಳಿದ್ದಾರೆ. ಈ ನಡಿಗೆಯನ್ನು ಅವರು ಒಂಬತ್ತು ತಿಂಗಳ ಕಾಲ ನಡೆಸಿದ್ದಾರೆ.
ಫನಂ ಪೆನ್ಹ್: 72 ವರ್ಷದ ವೃದ್ಧರೊಬ್ಬರನ್ನು ಸುಮಾರು 40 ಮೊಸಳೆಗಳು ಕೊಂದ ಭಯಾನಕ ಘಟನೆಯೊಂದು ನಡೆದಿರುವ ಬಗ್ಗೆ ಕಾಂಬೋಡಿಯಾದಲ್ಲಿ ಬೆಳಕಿಗೆ ಬಂದಿದೆ. ಮೃತನ ಕುಟುಂಬ ಮೊಸಳೆ ಸಾಕಾಣಿಕೆ ಮಾಡುತ್ತಿದೆ. ಅಂತೆಯೇ ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಪ್ರಯತ್ನಿಸುತ್ತಿದ್ದರು. ಅಂತೆಯೇ ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಈ ವೇಳೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಆ ವೃದ್ಧ ಕೋಲಿನ ಸಮೇತ ಮೊಸಳೆಗಳ ವಾಸಸ್ಥಳದೊಳಗೆ ಬಿದ್ದಿದ್ದಾರೆ. ಕ್ಷಣಮಾತ್ರದಲ್ಲಿ ಅಲ್ಲಿದ್ದ ಮೊಸಳೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿದ್ದು, ವೃದ್ಧನ ದೇಹವನ್ನು ಛಿದ್ರಗೊಳಿಸಿ ತಿಂದು ಹಾಕಿವೆ. ಈ ಬಗ್ಗೆ ಸೀಯೆಮ್ ರೀಪ್ ಸಮೂಹದ ಪೊಲೀಸ್ ಮುಖ್ಯಸ್ಥ ಮೀ ಸಾವ್ರಿ ಪ್ರತಿಕ್ರಿಯಿಸಿ, ಮೊಟ್ಟೆ ಇರಿಸಿದ್ದ ಪಂಜರದಿಂದ ಮೊಸಳೆಯನ್ನು ಹೊರಗೆ ಓಡಿಸುತ್ತಿದ್ದಾಗ, ಮೊಸಳೆಯು ಕೋಲಿನ ಮೇಲೆ ದಾಳಿ ನಡೆಸಿದೆ. ಇದರಿಂದ ಆಯ…
ಲಂಡನ್: ಸಾಮಾನ್ಯವಾಗಿ ಕಂಡ ಕಂಡಲ್ಲಿ ಉಗಿಯುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತೆ. ಇದನ್ನ ನೋಡಿದ್ರೆ ಕೆಲವರಿಗೆ ಅಸಹ್ಯ ಎನಿಸಬಹುದು. ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಎಂಜಲು ರಸವನ್ನೇ (ಲಾಲಾ ರಸ) ಮಾರಾಟ (Spit Selling) ಮಾಡಿ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ. ಅಸಾಧ್ಯವೆನಿಸಿದರೂ ನೀವು ಇದನ್ನ ನಂಬಲೇಬೇಕು. ಹೌದು.. ವೈದ್ಯೆ ಆಗಬೇಕೆಂದುಕೊಂಡಿದ್ದ UKನ ಮ್ಯಾಂಚೆಸ್ಟರ್‌ನ ನಿವಾಸಿ ಲತೀಶಾ ಜೋನ್ಸ್ (Latiesha Jones) ಇದೀಗ ತನ್ನ ಎಂಜಲು ರಸವನ್ನ ಮಾರಾಟ ಮಾಡಿ ತಿಂಗಳಿಗೆ 40 ಲಕ್ಷ ಸಂಪಾದಿಸುತ್ತಿದ್ದಾಳೆ. ಅದು ಹೇಗೆ ಅಂತೀರಾ ಮುಂದೆ ನೋಡಿ… ವೈದ್ಯೆ (Doctor) ಆಗಬೇಕೆಂದು ಬಯಸಿದ್ದ ಲತೀಶಾ ಜೋನ್ಸ್‌ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ಟೆಸ್ಕೊ ಎಂಬ ಕಿರಾಣಿ ಅಂಗಡಿಯಲ್ಲಿ ಪಾರ್ಟ್‌ಟೈಮ್ ಕೆಲಸಕ್ಕೆ ಹೋಗುತ್ತಿದ್ದಳು. ಅದೂ ಸಾಕಾಗದೇ ಇದ್ದಾಗ, ಆಕೆ ಜಾಲತಾಣದಲ್ಲಿ ಓನ್ಲಿ ಫ್ಯಾನ್ಸ್ ಖಾತೆಯೊಂದನ್ನ ತೆರೆದು ವೀಡಿಯೋ ಮಾಡಲು ಪ್ರಾರಂಭಿಸಿದ್ದಳು. ಆಗ ವೀಕ್ಷಕರು ಆಕೆಗೆ ವಿಚಿತ್ರವಾದ ಬೇಡಿಕೆಗಳನ್ನ ಮುಂದಿಟ್ಟರು. ಇದೇ ಅವಳನ್ನು ಉಗುಳು ಮಾರಾಟ ಮಾಡಲು ದಾರಿ ಮಾಡಿಕೊಟ್ಟಿತು.…
ಲಂಡನ್: ಭಾರತದಿಂದ ಪಲಾಯನಗೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಕೊಂಡುಕೊಂಡಿದ್ದ ಟಿಪ್ಪು ಸುಲ್ತಾನ್‌ನ ಖಡ್ಗ (Tipu Sultan’s sword) 145 ಕೋಟಿ ರೂ.ಗೆ ಹರಾಜಾಗಿದೆ. ಖಡ್ಗವನ್ನು ಲಂಡನ್‍ನಲ್ಲಿ ಬೋನ್‍ಹ್ಯಾಮ್ ಹರಾಜು ಸಂಸ್ಥೆ ಹರಾಜು ಹಾಕಿದ್ದು 145 ಕೋಟಿ ರೂ.ಗೆ ಬಿಡ್ ಆಗಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಬೋನ್‍ಹ್ಯಾಮ್ ಹೌಸ್ ಸಂಯೋಜಕ ಎನ್ರಿಕಾ ಮೆಡುಗ್ನೊ ಹೇಳಿದ್ದಾರೆ. 2004ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಟ್ಟಿಕೊಂಡು ಸ್ಪರ್ಧೆಗೆ ಇಳಿದಿದ್ದ ಮಲ್ಯ, ಪ್ರಚಾರದ ತಂತ್ರವಾಗಿ ಖಡ್ಗವನ್ನು ಬಳಸಿಕೊಂಡಿದ್ದರು. ಆದರೆ ಅವರ ಸಮೇತ ಜನತಾ ಪಕ್ಷದ ಎಲ್ಲಾ ಅಭ್ಯರ್ಥಿಗಳು ಸೋಲು ಕಂಡಿದ್ದರು. ವಿಜಯ್ ಮಲ್ಯ ದಿವಾಳಿಯಾಗಿ ಭಾರತದಿಂದ ಪಲಾಯಾನಗೊಳ್ಳಲು ಈ ಖಡ್ಗ ಕಾರಣ ಎಂಬ ಮಾತು ಕೇಳಿ ಬಂದಿತ್ತು. 2016ರಲ್ಲಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‍ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿಬರ್ಂಧ ವಿಧಿಸಲು…
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ (New Parliament Building) ಉದ್ಘಾಟನೆ ಯಾಗುವುದನ್ನು (inauguration) ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದ ವಿಪಕ್ಷ ನಾಯಕರಿಗೆ ಭಾರೀ ಮುಖಭಂಗವಾಗಿದೆ. ರಾಷ್ಟ್ರಪತಿಯವರಿಂದಲೇ ಉದ್ಘಾಟನೆಯಾಗಬೇಕು ಎಂದು ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸುಪ್ರೀಂ ಕೋರ್ಟ್ ನ ಈ ನಿರ್ಧಾರ ವಿಪಕ್ಷಗಳಿಗೆ ಮಾಡಿದ ಕಪಾಳಮೋಕ್ಷದಂತಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಬೆನ್ನಲ್ಲೇ ಟ್ವೀಟರ್ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡಿದ ವಿಪಕ್ಷಗಳಿಗೆ ನ್ಯಾಯಾಲಯ ಪಾಳಮೋಕ್ಷ ಮಾಡಿದೆ ಎಂದಿದ್ದಾರೆ. ನೂತನ ಸಂಸತ್ ಕಟ್ಟಡ ರಾಷ್ಟ್ರಪತಿಗಳಿಂದ ಉದ್ಘಾಟಿಸುವಂತೆ ನಿರ್ದೇಶನ ಕೋರಿ ಅಡ್ವೋಕೇಟ್ ಜಯಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆರ್ಟಿಕಲ್ 79ಕ್ಕೂ, ಪಾರ್ಲಿಮೆಂಟ್ ಮತ್ತು…
ನವದೆಹಲಿ: ಸಾರ ವರ್ಧಿತ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿ ವಿಚಾರದಲ್ಲಿ (Fortified Parboiled Rice) ಕೇಂದ್ರ ಸರ್ಕಾರವು ತೆಲಂಗಾಣದ ರೈತರಿಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾರಿಫ್ ಮಾರ್ಕೆಟಿಂಗ್ ಸೀಸನ್ (KMS) 2022-2023 ಅವಧಿಗಾಗಿ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಹೇಳಿದ್ದಾರೆ. 2021-22 ರಾಬಿ ಹಂಗಾಮಿಗೆ ಮತ್ತು 2022-23 ಖಾರಿಫ್ ಹಂಗಾಮಿಗೆ 13.73 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಸಂಗ್ರಹಣೆಗೆ ಅನುಮೋದಿಸಲಾಗಿತ್ತು. ಅದಕ್ಕೆ ಪೂರಕವಾಗಿ ಹೆಚ್ಚುವರಿಯಾಗಿ ಈಗ 6.80 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದರು. ತೆಲಂಗಾಣದ ರೈತರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಿ ಕಿಶನ್ ರೆಡ್ಡಿ, ಕೇಂದ್ರ ಸರ್ಕಾರದ ಈ ನಿರ್ಧಾರವು ಇತ್ತೀಚಿನ ಅಕಾಲಿಕ ಮಳೆಯಿಂದ ನಷ್ಟಕ್ಕೊಳಗಾದ ರೈತರಿಗೆ ಸಹಾಯ ಮಾಡಲಿದೆ ಎಂದು ಹೇಳಿದರು. ತೆಲಂಗಾಣ ಸರ್ಕಾರವು ಕೇಂದ್ರ ಸರ್ಕಾರ ನೀಡಿದ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕು…
ಚಂಡೀಗಢ: 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅತ್ಯಾಚಾರಗೈದ ನಾಲ್ವರು ಅಪ್ರಾಪ್ತ ಆರೋಪಿಗಳಲ್ಲಿ ಓರ್ವ ಆಕೆಯ ಸಹಪಾಠಿಯಾಗಿದ್ದು, ಉಳಿದ ಮೂವರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಅತ್ಯಾಚಾರಗೈದ ಅಪ್ರಾಪ್ತ ಆರೋಪಿಗಳು ಕಳೆದ 6 ತಿಂಗಳಿನಿಂದ ಸಂತ್ರಸ್ತೆಗೆ ಬೆದರಿಕೆ (Black Mail) ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ 15 ದಿನಗಳ ಹಿಂದೆ ನಡೆದಿದ್ದು, ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲಾಗಿದೆಯೇ ಎಂದು ತಿಳಿದು ಬಂದಿಲ್ಲ. ನಾಲ್ವರು ಅಪ್ರಾಪ್ತರು ತನ್ನ ಮಗಳ ಮೇಲೆ ಶಾಲೆಯ ಆವರಣದ ಪೊದೆಯ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಅಲ್ಲದೇ ಅಪ್ರಾಪ್ತರು ಬಾಲಕಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ತೀವ್ರ ಆಘಾತಕ್ಕೊಳಗಾಗಿದ್ದಳು.…
ಲಕ್ನೋ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ವಧು ಮಂಟಪಕ್ಕೆ ಕರೆತಂದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹೌದು. ಎರಡು ವರ್ಷ ಪ್ರೀತಿಸಿ (Love) ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ವರ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗೆ ವರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆಯೇ ವಧು (Bride) 20 ಕಿ.ಮೀ ಚೇಸ್ ಮಾಡಿ ವರ (Groom) ನನ್ನು ಮಂಟಪಕ್ಕೆ ಕರೆತರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಏನಿದು ಘಟನೆ..?: ಯುವತಿ ಹಾಗೂ ಬದೌನ್ ಜಿಲ್ಲೆಯ ನಿವಾಸಿ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊನೆಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆಯ ನಂತರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅಂತೆಯೇ ಭಾನುವಾರ ಭೂತೇಶ್ವರನಾಥ ದೇವಾಲಯದಲ್ಲಿ ಮದುವೆ ಮಾಡುವುದಾಗಿ ನಿರ್ಧರಿಸಲಾಯಿತು. ಇತ್ತ ವಧು ಕಡೆಯವರು ಹಾಗೂ ಅತಿಥಿಗಳು ಎಲ್ಲರೂ ಮಂಟಪಕ್ಕೆ ಹಾಜರಾಗಿದ್ದಾರೆ. ವಧು ಕೂಡ ರೆಡಿಯಾಗಿ ಕುಳಿತಿದ್ದಳು. ಆದರೆ ವರ ಮಾತ್ರ ಮಂಟಪಕ್ಕೆ ಬಾರದೇ ಇರುವುದರಿಂದ ಕೆಲವೊಂದು ಅನುಮಾನಗಳು ಹುಟ್ಟಿಕೊಂಡವು. ಬಂದವರೆಲ್ಲ ಗುಸುಗುಸು ಮಾತನಾಡಲು ಆರಂಭಿಸಿದರು. ಈ ವೇಳೆ ವರನಿಗೆ…
ಶಿಮ್ಲಾ: ಸಾಮಾನ್ಯವಾಗಿ ಯಾರಿಗಾದ್ರೂ ಎರಡು ಮೂರು ಬಾರಿ ಹಾವು ಕಚ್ಚಿರೋ ಬಗ್ಗೆ ಕೇಳಿದ್ರೇನೇ ಆಶ್ಚರ್ಯಪಡ್ತೀವಿ. ಅದ್ರೆ ಹಿಮಾಚಲಪ್ರದೇಶದ 18 ವರ್ಷದ ಮನಿಷಾ ಎಂಬ ಈ ಯುವತಿ ಕಳೆದ 3 ವರ್ಷದಲ್ಲಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ. ಈ ಮೂರು ವರ್ಷದಲ್ಲೂ ಹಲವು ವಿಧದ ಹಾವುಗಳು ಈಕೆಯನ್ನ ಕಚ್ಚಿವೆ. “ನನಗೆ ಕಳೆದ 3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿವೆ. ಮೊದಲ ಬಾರಿಗೆ ಗ್ರಾಮದಲ್ಲಿರುವ ನದಿ ಬಳಿ ನನಗೆ ಹಾವು ಕಚ್ಚಿತ್ತು. ಇತ್ತೀಚೆಗಷ್ಟೆ ನನಗೆ ಬಿಳಿ ಬಣ್ಣದ ಹಾವು ಕಚ್ಚಿತು. ಹಾವುಗಳನ್ನ ನೋಡಿದಾಗಲೆಲ್ಲಾ ನಾನು ಮಂತ್ರಮುಗ್ಧಳಾಗುತ್ತೇನೆ. ಆಗ ನನಗೆ ಅದು ಕಚ್ಚುತ್ತದೆ. ಎರಡು ವರ್ಷದ ಹಿಂದೆ ಮಾತ್ರ ಹಾವು ನನಗೆ ಕಚ್ಚಿರಲಿಲ್ಲ. ಶಾಲೆಯಲ್ಲಿದ್ದಾಗ ನನಗೆ ಪದೇ ಪದೇ ಹಾವು ಕಚ್ಚುತ್ತಿತ್ತು. ಕೆಲವೊಮ್ಮೆ ಒಂದೇ ದಿನದಲ್ಲಿ ಎರಡರಿಂದ ಮೂರು ಬಾರಿ ಹಾವು ಕಡಿತಕ್ಕೊಳಗಾಗಿದ್ದೇನೆ. ನನಗೂ ನಾಗದೇವತೆಗೂ ಏನೋ ಬಂಧವಿದೆ ಅಂತಾ ಜ್ಯೋತಿಷ್ಯರು ಹೇಳಿದ್ದಾರೆ ಅಂತಾ ಮನಿಷಾ ಹೇಳಿದ್ದಾಳೆ 4ನೇ ಬಾರಿಗೆ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ…