ಚಿತ್ರದುರ್ಗ: ಹಿರಿಯೂರು ಕ್ಷೇತ್ರದಲ್ಲಿ ಮಾಜಿ ಸಚಿವ ಎ.ಕೃಷ್ಣಪ್ಪ ಅವರು ತಮ್ಮದೇ ಆದ ಚಾಪು ಮೂಡಿಸಿದ್ದರು. ಇವರ ಮಗಳು ಕೆ. ಪೂರ್ಣಿಮಾ ಶ್ರೀನಿವಾಸ್ (Poornima Srinivas). ತಂದೆಯ ಸಾವಿನ ಬಳಿಕ ಅನುಕಂಪದ ಅಲೆಯ ಮೇಲೆ ಮತದಾರರು ಪೂರ್ಣಿಮಾರನ್ನೂ ಗೆಲ್ಲಿಸಿದ್ದರು. ಪೂರ್ಣಿಮಾ ಹಿರಿಯೂರು ಕ್ಷೇತ್ರದಲ್ಲಿ ಬಿಎಸ್‌ವೈ (BS Yediyurappa) ಕೃಪಾಕಟಾಕ್ಷದೊಂದಿಗೆ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿದ ಮಹಿಳಾ ಶಾಸಕಿಯಾದರು. ಬಿಜೆಪಿಗೆ (BJP) ನೆಲೆ ಇಲ್ಲದ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಿಜೆಪಿ ಬಾವುಟ ಕಟ್ಟಿದ ಮಹಿಳೆ ಮಂತ್ರಿಸ್ಥಾನಕ್ಕೆ ಹೆಸರು ಕೇಳಿಬಂದಿತ್ತು. ಈ ಬಾರಿ ಚುನಾವಣೆಯಲ್ಲೂ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಸುಧಾಕರ್ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್ (JDS) ನಿಂದ ನಿವೃತ್ತ ಇಂಜಿನಿಯರ್ ರವಿಂದ್ರಪ್ಪ ಕಣದಲ್ಲಿದ್ದಾರೆ. ಹೀಗಾಗಿ ಹಿರಿಯೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಪೂರ್ಣಿಮಾ ಧನಾತ್ಮಕ ಅಂಶ ಏನು? ಪೂರ್ಣಿಮಾ, ಬಿಎಸ್‌ವೈ ಪರಮಾಪ್ತೆಯಾಗಿದ್ದು, ದತ್ತುಪುತ್ರಿ ಎನಿಸಿಕೊಂಡಿದ್ದಾರೆ. ಹೀಗಾಗಿ ಲಿಂಗಾಯತ, ತಮಿಳರು ಮತ್ತು ಗೊಲ್ಲ ಸಮುದಾಯದ ಮತಗಳು ಪೂರ್ಣಿಮಾ ಪರ ಇವೆ. ಕಳೆದ ಚುನಾವಣೆಯಲ್ಲಿ ಪೂರ್ಣಿಮಾ ಅವರು ಜನರಿಗೆ…
Author: Prajatv Kannada
ಬಾಗಲಕೋಟೆ: ಅಥಣಿಯ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಗಟ್ಟಿಯಾಗಿರುವ ಲಿಂಗಾಯತ ಮತಗಳು ಹರಿದು ಹಂಚಿಹೋಗುವ ಸಾಧ್ಯತೆಗಳಿವೆ. ಇದನ್ನು ತಡೆಯಲು ಬಿಜೆಪಿ ನಾನಾ ಸರ್ಕಸ್ ಗಳನ್ನು ಶುರು ಮಾಡಿದೆ. ಇದಕ್ಕೆ ಕೌಂಟರ್ ಕೊಡಲು, ಕಾಂಗ್ರೆಸ್ ಕೂಡ ಸಿದ್ಧತೆಗಳನ್ನು ನಡೆಸಿದ್ದು ಇದೇ 25ರಂದು ಲಿಂಗಾಯತರ ಪರಮಪವಿತ್ರ ಧಾಮವಾದ, ಬಸವಣ್ಣನವರ ಲಿಂಗೈಕ್ಯ ಸ್ಥಳವಾದ ಕೂಡಲ ಸಂಗಮಕ್ಕೆ ರಾಹುಲ್ ಗಾಂಧಿಯವರನ್ನು ಕರೆಯಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಕೂಡಲಸಂಗಮದ ಬಸವ ಸಭಾ ಭವನವನ್ನು ಈಗಾಗಲೇ ಬುಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏ. 25ರಂದು ಜಯಂತಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲಿಂಗಾಯತ ಮುಖಂಡರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಶುಕ್ರವಾರ ಕೂಡಲಸಂಗಮಕ್ಕೆ ಭೇಟಿ ನೀಡಿ ಸಭಾ…
ತುಂಟ ತುಟಿಗಳ ಮೂಲಕ ಬೆಳ್ಳಿಪರದೆಗೆ ಕಿಸ್ ಕೊಟ್ಟಿದ್ದ ಚಂದವನದನ ಹ್ಯಾಂಡ್ಸಮ್ ಹೀರೋ ವಿರಾಟ್ ಗೆ ಬಂಪರ್ ಆಫರ್ ಸಿಕ್ಕಿದೆ. ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಫ್ಯೂಚರ್ ಸೂಪರ್ ಸ್ಟಾರ್ ಎಂಬ ಭರವಸೆ ಮೂಡಿಸಿದ್ದ ಈ ಹುಡ್ಗನಿಗೆ ಬಂಗಾರದ ಅವಕಾಶ ಒಲಿದು ಬಂದಿದೆ. ಕಿರುತೆರೆಯಿಂದ ಬಣ್ಣದ ಬದುಕು ಶುರು ಮಾಡಿದ್ದ ವಿರಾಟ್ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆಯುವ ಕನಸು ಕಟ್ಟಿಕೊಂಡಿದ್ದಾರೆ. ಅದರಂತೆ ಒಂದೊಂದೆ ಹೆಜ್ಜೆ ಇಟ್ಟು ಸಾಗ್ತಿರುವ ಈ ಪ್ರತಿಭಾನ್ವಿತ ಕಲಾವಿದನಿಗೆ ಸುಕ್ಕ ಸೂರಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಿಸ್ ಚಿತ್ರದ ಬಳಿಕ ಮತ್ತೊಮ್ಮೆ ಎಪಿ ಅರ್ಜುನ್ ಜೊತೆಗೂಡಿ ಅದ್ಧೂರಿ ಲವರ್ಸ್ ಸಿನಿಮಾ ಮಾಡ್ತಿರುವ ವಿರಾಟ್, ಜಯಣ್ಣ ಕಾಂಬೈನ್ಸ್ ನಿರ್ಮಾಣದ ರಾಯಲ್ ಚಿತ್ರದಲ್ಲಿಯೂ ನಾಯಕನಾಗಿ ನಟಿಸುತ್ತಿದ್ದಾರೆ. ದಿನಕರ್ ತೂಗದೀಪ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮೊದ್ಲೇ ಜಯಣ್ಣ ಭೋಗಣ್ಣ ವಿರಾಟ್ ಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದಾರೆ. ಕನ್ನಡದ ಮಾಸ್ ಡೈರೆಕ್ಟರ್ ಸೂರಿ ಗರಡಿಯಲ್ಲಿ ಒಮ್ಮೆಯಾದ್ರೂ ಕೆಲಸ ಮಾಡ್ಬೇಕು. ಅವ್ರಿಂದ ಆಕ್ಷನ್ ಕಟ್…
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಜಗದೀಶ ಶೆಟ್ಟರ್ (Jagadish Shettar) ಅವರನ್ನು ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸೋಲಿಸಲು ಹಾಗೂ ತಮ್ಮ ಮತಬ್ಯಾಂಕ್ ಅನ್ನು ಭದ್ರವಾಗಿರಿಸಿಕೊಳ್ಳಲು ಆರ್ಎಸ್ಎಸ್ ಅನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಆರ್ಎಸ್ಎಸ್ ಕಾರ್ಯಕರ್ತರನ್ನು ನಿಯೋಜಿಸುವ ಮೂಲಕ ಬಿಜೆಪಿ ಹಲವು ತಂತ್ರಗಳನ್ನು ಹೆಣೆದಿದೆ. ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಎರಡು ಜನಪ್ರಿಯ ಲಿಂಗಾಯತ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿ ಸಮುದಾಯವನ್ನು ಓಲೈಸುವ ತಂತ್ರಗಾರಿಕೆ ಅನುಸರಿಸಿದ್ದರು. ಇದರ ಜತೆಗೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಈ ಮಧ್ಯೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ)…
ಎಲೆಕ್ಷನ್ ಹತ್ತಿರ ಬರ್ತಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ಮತ ಸಮರದ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದ ಉದ್ದಗಲಕ್ಕೂ ಪ್ರಚಾರ ಭರಾಟೆ ಜೋರಾಗಿದೆ. ಈ ಪೈಕಿ ಹಳೇ ಮೈಸೂರು ಭಾಗ ವಿಶಿಷ್ಟ ಕಾರಣಗಳಿಂದಾಗಿ ಈ ಬಾರಿ ಗಮನ ಸೆಳೆದಿದೆ. ಹಳೇ ಮೈಸೂರು ಭಾಗದಲ್ಲಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳದ್ದೇ ಆರ್ಭಟ.. ಅದರಲ್ಲೂ ಹಳೇ ಮೈಸೂರಿನ ಹಲವು ಕ್ಷೇತ್ರಗಳು ಜೆಡಿಎಸ್‌ನ ಭದ್ರ ಕೋಟೆಗಳು.. ಇದೀಗ ಈ ಕೋಟೆಗಳನ್ನು ಗೆಲ್ಲಲು ಬಿಜೆಪಿ ಲಗ್ಗೆ ಇಟ್ಟಿದೆ. ಅದರಲ್ಲೂ ಪ್ರಧಾನಿ ಮೋದಿ ಹಳೇ ಮೈಸೂರು ಭಾಗವನ್ನೇ ಗುರಿಯಾಗಿಸಿ ಪ್ರಚಾರ ಕಣದಲ್ಲಿ ಅಬ್ಬರಿಸಲಿದ್ದಾರೆ..! ಈ ಭಾಗವನ್ನು ಗೆಲ್ಲಲು ಬಿಜೆಪಿ ಮಾಡಿರುವ ತಂತ್ರ ಏನು? ಕಾಂಗ್ರೆಸ್ – ಜೆಡಿಎಸ್‌ನ ಪ್ರತಿತಂತ್ರ ಏನು? ಇಲ್ಲಿದೆ ಸಮಗ್ರ ವಿವರ.. ಹಳೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾರೆ ಪ್ರಧಾನಿ ಮೋದಿ! ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೇ ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜ ನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರಧಾನಿ ಮೋದಿ ಬಂದು ಹೋಗಿದ್ದಾರೆ. ಆದ್ರೆ, ರಾಮನಗರ ಜಿಲ್ಲೆಗೆ ಮಾತ್ರ ಪ್ರಧಾನಿ ಕಾಲಿಟ್ಟಿರಲಿಲ್ಲ. ಇದೀಗ ಚುನಾವಣಾ ಪ್ರಚಾರಕ್ಕಾಗಿ ರಾಮನಗರಕ್ಕೆ ಪ್ರಧಾನಿ ಮೋದಿ ಕಾಲಿಡಲಿದ್ದಾರೆ. ಮೇ 3 ರಂದು ಪ್ರಧಾನಿ ಮೋದಿ ರಾಮನಗರಕ್ಕೆ ಎಂಟ್ರಿ ಕೊಡೋದು ಬಹುತೇಕ ಫಿಕ್ಸ್ ಆಗಿದೆ. ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಕೂಡಾ ನಡೆಸಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಜೊತೆಯಲ್ಲೇ ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿ ಪರಿಶೀಲನೆ, ರಾಮ ದೇವಾಲಯ ನಿರ್ಮಾಣದ ಬಗ್ಗೆ ಚರ್ಚೆ ಕೂಡಾ ನಡೆಯಲಿದೆ. ಈ ಮೂಲಕ ಅಭಿವೃದ್ದಿ ಹಾಗೂ ಹಿಂದುತ್ವ ಜಪ ಈ ಭಾಗದಲ್ಲಿ ಆಗಲಿದೆ. ಈಗಾಗಲೇ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿರುವ ಪ್ರಧಾನಿ ಮೋದಿ, ಈ ಭಾಗದಲ್ಲಿ ಬಿಜೆಪಿಗೆ ಮತ್ತಷ್ಟು ಬೂಸ್ಟ್ ಕೊಡೋದಕ್ಕೆ ಮುಂದಾಗಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್…
ಭಾರತದಲ್ಲಿ ಜೀವನ ನಡೆಸುವಾಗ ಅತೀ ಹೆಚ್ಚು ಖರ್ಚಾಗುವುದು ಯಾವಾಗ ಎಂದು ಕೇಳಿದರೆ ಹೆಚ್ಚು ಯೋಚಿಸದೆ ಮದುವೆ ಎಂದು ಉತ್ತರಿಸಬಹುದು. ಮದುವೆ ಸಮಾರಂಭ ನಡೆಸಲು ಪ್ರತಿಯೊಬ್ಬರೂ ತಮ್ಮಿಂದಾಗುವಷ್ಟು ಅಧಿಕ ಮೊತ್ತವನ್ನು ವ್ಯಯಿಸುತ್ತಾರೆ. ಸಾಮಾನ್ಯವಾಗಿ ಅಪ್ಪ-ಅಮ್ಮ ಮಕ್ಕಳಿಗೆ ಮದುವೆ ಮಾಡಿ ಕೊಡುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದಲ್ಲಿರುವ ಯುವಕ-ಯುವತಿಯರು ತಮ್ಮ ಮದುವೆಯ ಖರ್ಚನ್ನು ತಾವೇ ಹಾಕಿಕೊಂಡು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಾರೆ. ಆದ್ರೆ ಈ ರೀತಿಯ ಮದುವೆ ಖರ್ಚಿನ ಕುರಿತು ಕೇರಳ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಮದುವೆಯ (Marriage) ವೆಚ್ಚವನ್ನು ತಂದೆಯಿಂದ ಪಡೆಯುವ ಹಕ್ಕು ಪ್ರತಿಯೊಬ್ಬ ಅವಿವಾಹಿತ ಮಗಳಿಗೂ (Unmarried daughter) ಇದೆ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮದುವೆಯಾಗದ ಪ್ರತಿಯೊಬ್ಬ ಮಗಳಿಗೂ ತನ್ನ ತಂದೆ (Father)ಯಿಂದ ಸಮಂಜಸವಾದ ಮದುವೆಯ ವೆಚ್ಚವನ್ನು ಧರ್ಮವನ್ನು (Religion) ಲೆಕ್ಕಿಸದೆ ಪಡೆಯುವ ಹಕ್ಕಿದೆ ಎಂದು ಕೇರಳ ಹೈಕೋರ್ಟ್ ತೀರ್ಪು (Verdict0 ನೀಡಿದೆ. ಅವಿವಾಹಿತ ಮಗಳಿಗೆ ತಂದೆಯಿಂದ ಮದುವೆ ವೆಚ್ಚವನ್ನು ನಿರಾಕರಿಸುವಂತಿಲ್ಲ ಇತ್ತೀಚೆಗೆ ಕ್ರಿಶ್ಚಿಯನ್ ಮಗಳಿಗೆ ತನ್ನ ತಂದೆಯ ಸ್ಥಿರ ಆಸ್ತಿಯಿಂದ ಅಥವಾ ಅದರಿಂದ ಬರುವ…
ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮೂರನೇ ದಿನವಾದ ಗುರುವಾರವೂ ಮುಂದುವರಿಸಿರುವ ಸುಪ್ರೀಂಕೋರ್ಟ್, ಮದುವೆಗೆ ಎರಡು ಭಿನ್ನ ಲಿಂಗಕ್ಕೆ ಸೇರಿದ ಜೋಡಿಗಳ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಕೇಳಿದೆ. ಸಲಿಂಗ ಸಂಬಂಧ ಎಂಬುದು ಭೌತಿಕ ಬಾಂಧವ್ಯವಷ್ಟೇ ಅಲ್ಲ. ಅದು ಸ್ಥಿರವಾದ ಹಾಗೂ ಭಾವನಾತ್ಮಕ ಸಂಬಂಧ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ (Justice Chandrahud) ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮುನ್ನ ವಿವಾಹ ಎಂಬುದರ ಬದಲಾದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸಬೇಕಾದ ಅವಶ್ಯಕತೆ ಇದೆ. ಏಕೆಂದರೆ, ಎರಡು ಭಿನ್ನ ಲಿಂಗಗಳಿಗೆ ಸೇರಿದ ಇಬ್ಬರು ವ್ಯಕ್ತಿಗಳ ಅಸ್ತಿತ್ವ ವಿವಾಹದ ಅಗತ್ಯಕ್ಕೆ ಅವಶ್ಯವಿದೆಯೇ? ಎಂದು ಪ್ರಶ್ನಿಸಿದರು. ವೈಯಕ್ತಿಕ ಕಾನೂನು (Personel Law) ಪಾಲಿಸಲು ಬಯಸದೇ ಇರುವ ನಾಗರಿಕರ ವಿವಾಹಕ್ಕೆ ಅವಕಾಶ ಕಲ್ಪಿಸಲು 1954ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ರೂಪಿಸಲಾಗಿದೆ. ಅದಾಗಿ 69 ವರ್ಷಗಳಾದ ಬಳಿಕ ಆ ಕಾನೂನು ಗಮನಾರ್ಹ ರೀತಿಯಲ್ಲಿ ವಿಕಾಸಗೊಂಡಿದೆ ಎಂದರು. ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸುವ ಮೂಲಕ ಒಂದೇ ಲಿಂಗದ…
ನವದೆಹಲಿ: ಇತ್ತೀಚಿನ ಕೆಲ ತಿಂಗಳುಗಳಿಂದ ವಿಮಾನದಲ್ಲಿ ಪ್ರಯಾಣಿಕರು ಕುಡಿದು ಮಾಡುವ ಕಿತಾಪತಿಗಳಿಂದಾಗಿ ವಿಮಾನ ಪ್ರಯಾಣದ ಬಗ್ಗೆ ವಿಮಾನದಲ್ಲಿ ಪ್ರಯಾಣಿಸುವ ದೊಡ್ಡವರ ಬಗ್ಗೆ ಜನ ಸಾಮಾನ್ಯರಲ್ಲಿ ಒಂದು ರೀತಿಯ ಅಸಹ್ಯಭಾವ ಮೂಡಿತ್ತು. ಕೆಲವರು ವಿಮಾನದಲ್ಲಿ ಪ್ರಯಾಣಿಕರು ಕುಡಿದು ಗಗನಸಖಿಗಳಿಗೆ ಕಿರುಕುಳ ನೀಡಿದ್ದಲ್ಲದೇ ಕೆಲವರು ವಿಮಾನದ ಸಿಬ್ಬಂದಿಯ ಮೇಲೆ ಹಲ್ಲೆ ಕೂಡ ಮಾಡಿದ್ದ ಘಟನೆಗಳು ನಡೆದಿದ್ದವು. ಇಂತಹ ಅಸಹ್ಯರ ಘಟನೆಗಳ ನಡುವೆ ಈಗ ವಿಮಾನದಲ್ಲಿ ಪ್ರಯಾಣಿಕರು ಡಾನ್ಸ್ ಮಾಡಿದ ಘಟನೆ ನಡೆದಿದೆ. ಹೌದು, 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಪ್ರಯಾಣಿಕರ ಜೋಶ್ ಹಾಗೂ ಶಕಲಕ ಸ್ಟೆಪ್ ನೋಡುಗರನ್ನು ಕೂಡ ಕುಣಿಯುವಂತೆ ಮಾಡಿದೆ. ಆದರೆ ಅನೇಕರು ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದಾರೆ. ಹರ್ಯಾಣಿ ಗಾಯಕಿ ಸಪ್ನಾ ಚೌಧರಿ ಅವರ ‘ತೆರಿ ಅಖ್ಯಾ ಕಾ ಯೋ ಕಾಜಲ್’ ಹಾಡು ಟೇಪೊಂದರಲ್ಲಿ ಪ್ಲೇ ಆಗುತ್ತಿದ್ದರೆ, ವಿಮಾನದ…
ಜರ್ಮನ್ ಹುಡುಗಿಯೊಬ್ಬಳು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಹಾಡುಗಳನ್ನು ಹಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು ಇದರಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಹೇಳಿ ಕೇಳಿ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಬಹುಸಂಸ್ಕೃತಿಯ ವಿಶಾಲ ದೇಶ. ಹಾಗೆ ಈ ಹುಡುಗಿಯೂ ಕೂಡ ಇಲ್ಲಿನ ಬಹುಸಂಸ್ಕೃತಿಯ ವಿವಿಧ ಭಾಷೆಗಳ ಹಾಡುಗಳನ್ನು ತನ್ನ ಸುಮಧುರ ಕಂಠದಿಂದ ಹಾಡುತ್ತಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಹಲ್‌ಛಲ್ ಸೃಷ್ಟಿಸಿದ್ದಾಳೆ. ಸಿನಿಮಾ ಹಾಡುಗಳಿಂದ ಹಿಡಿದು ಹಿಂದೂ ಸನಾತನ ಧರ್ಮದ ಆಧ್ಯಾತ್ಮದ ಭಕ್ತಿಗೀತೆ ಸ್ತೋತ್ರಗಳನ್ನು ಕೂಡ ಈಕೆ ಹಾಡಿದ್ದು, ಮೃತ್ಯಂಜಯ ಮಂತ್ರ ನನ್ನ ಬದುಕು ಬದಲಿಸಿದೆ ಎಂದು ಹೇಳುತ್ತಾಳೆ ಈ ಬೆಡಗಿ. ಅಂದಹಾಗೆ ಈಕೆಯ ಹೆಸರು CassMae, ಇನ್ಸ್ಟಾಗ್ರಾಮ್‌ನಲ್ಲಿ CassMae ಹೆಸರಿನಿಂದ ಗುರುತಿಸಿಕೊಂಡಿರುವ ಈಕೆ ಜರ್ಮನ್ನ ಓರ್ವ ಗಾಯಕಿ ಹಾಗೂ ಇನ್‌ಫ್ಲುಯೆನ್ಸರ್, ಜರ್ಮನ್ ಗಾಯಕಿ ಹಾಗೂ ಹಾಡುಗಳ ಬರಹಗಾರ್ತಿ ಎಂದು ತನ್ನ ಬಯೋದಲ್ಲಿ ಬರೆದುಕೊಂಡಿರುವ ಈಕೆ ಭಾರತದ ಮೇಲೆ ನನಗೆ ಇನ್ನಿಲ್ಲದ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾಳೆ. ಇತ್ತೀಚೆಗೆ ಈಕೆ ಪುರಂದರದಾಸರ ಭಾಗ್ಯದ…
ಪ್ರಖ್ಯಾತ ಆಭರಣ ಮಳಿಗೆಯಾದ ಸಾಯಿ ಗೋಲ್ಡ್ ಪ್ಯಾಲೇಸ್ ಅಕ್ಷಯ ತೃತೀಯ ಅಂಗವಾಗಿ ಆಭರಣಗಳ ಪ್ರದರ್ಶನ ಹಾಗೂ ರಿಯಾಯಿತಿ ದರದಲ್ಲಿ ಆಭರಣಗಳ ಮಾರಾಟ ನಡೆಸುತ್ತಿದೆ. ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ 100 ರೂಪಾಯಿ ರಿಯಾಯಿತಿ ನೀಡಲಿದ್ದು ಹಳೆ ಚಿನ್ನವನ್ನು ಮಾರುಕಟ್ಟೆ ದರಕ್ಕಿಂತ 100 ರೂಪಾಯಿ ಹೆಚ್ಚು ಹಣ ಕೊಟ್ಟು ಬದಲಾಯಿಸಿಕೊಡಲಾಗುತ್ತದೆ. ಪ್ರತಿ ಕ್ಯಾರೆಟ್ ವಜ್ರದ ಆಭರಣಗಳ ಖರೀದಿಯ ಮೇಲೆ 10,000 ರಿಯಾಯಿತಿ ಹಾಗೂ ಪ್ರತಿ ಕೆಜಿ ಬೆಳ್ಳಿ ವಸ್ತುಗಳ ಖರೀದಿ ಮೇಲೆ 2.000 ರೂ ರಿಯಾಯಿತಿ ಹಾಗೂ ಬೆಳ್ಳಿ ಆಭರಣದ ಮೇಲೆ ಶೇಕಡ 10% ರಿಯಾಯಿತಿ ನೀಡಲಾಗುತ್ತಿದೆ ಎಂದು ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲಿಕ ಟಿ.ಎ ಶರವಣ ತಿಳಿಸಿದ್ದಾರೆ. ಚಿನ್ನದ ಉಳಿತಾಯ ಶ್ರೀ ಸಾಯಿ ಸಮೃದ್ಧಿ ಉಳಿತಾಯ ಯೋಜನೆ ಮತ್ತು ಶ್ರೀ ಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಗಳ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ..