ಸಾಮಾನ್ಯವಾಗಿ ಮನೆಯಲ್ಲಿರುವ ತರಕಾರಿ, ಹಣ್ಣುಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ಪರಂಗಿ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಅತೀ ಹೆಚ್ಚು ಔಷಧಿಯ ಸತ್ವಗಳಿವೆ. ಪಪ್ಪಾಯದಲ್ಲಿ ವಿಟಮಿನ್ ಎ ಸತ್ವ ಹೆಚ್ಚಾಗಿರುವುದರಿಂದ ಬಹುಮುಖ್ಯವಾಗಿ ನಮ್ಮ ಕಣ್ಣಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾಗಿದೆ. ಪಪ್ಪಾಯ ಹಣ್ಣು, ಪಪ್ಪಾಯ ಎಲೆಗಳು ಹಾಗೂ ಪಪ್ಪಾಯ ಬೀಜಗಳು ಔಷಧಿಯ ಗುಣವನ್ನು ಹೊಂದಿವೆ. ಪಪ್ಪಾಯದಲ್ಲಿ ಪ್ರೊಟೀನ್, ಕೊಬ್ಬು, ವಿಟಮಿನ್ ಸಿ, ಫಾಸ್ಫರಸ್, ಕಬ್ಬಿಣ, ಕಾರ್ಬೋಹೈಡ್ರೇಟ್, ನಿಯಾಸಿನ್ ಹಾಗೂ ಖನಿಜಾಂಶಗಳು ಯಥೇಚ್ಛವಾಗಿರುತ್ತವೆ. ಪಪ್ಪಾಯ ಸೇವನೆಯ ಉಪಯೋಗಗಳು: * ಬಹುಮುಖ್ಯವಾಗಿ ಪಪ್ಪಾಯ ಸೇವನೆಯಿಂದ ಕರುಳಿನ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ. * ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕ್ರಮೇಣ ನಿವಾರಿಸುತ್ತದೆ. * ಬೊಜ್ಜು ಕರಗಿಸಲು ಪಪ್ಪಾಯ ದಿವ್ಯ ಔಷಧಿ. ಅಲ್ಲದೆ ದೇಹದ ಉತ್ತಮ ಬೆಳವಣಿಗೆಗೆ ಪೂರಕವಾದ ಮೆಗ್ನೀಷಿಯಂ, ಕಬ್ಬಿಣಾಂಶಗಳನ್ನು ಒದಗಿಸುತ್ತದೆ. * ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಹಣ್ಣಿನೊಂದಿಗೆ ಕೆಲವು ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಯಾಗುತ್ತದೆ. * ಚರ್ಮ ಬಣ್ಣ ಕಳೆದುಕೊಂಡಿದ್ದರೆ ಅಥವಾ…
Author: Prajatv Kannada
ಖಾರ್ಟೂಮ್: ಮುಸ್ಲಿಂಮರ ಪವಿತ್ರ ಈದ್ ಹಬ್ಬದ ಹಿನ್ನೆಲೆಯಲ್ಲಿ 74 ಗಂಟೆಗಳ ಕಾಲ ಯುದ್ಧ ವಿರಾಮ ಘೋಷಿಸಿದ್ದ ಸುಡಾನ್ ಇದೀಗ ಒಪ್ಪಂದವನ್ನು ಮೀರಿ ರಾಜಧಾನಿ ಖಾರ್ಟೂಮ್‌ನಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆಸಿದೆ. ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಫತಾಹ್ ಬೆಂಬಲಿತ ಸೇನಾ ಪಡೆ ಮತ್ತು ಉಪ ಸೇನಾ ಮುಖ್ಯಸ್ಥ ಮೊಹಮ್ಮದ್ ಹಮ್ದಾನ್ ಡಾಗ್ಲೊ ನೇತೃತ್ವದ ಪ್ಯಾರಾ ಮಿಲಿಟರಿ ಪಡೆಗಳ ನಡುವೆ ಕಳೆದ ಶನಿವಾರ ಸಂಘರ್ಷ ಆರಂಭವಾದಾಗಿನಿಂದ ನಡೆದ ಗುಂಡಿನ ಚಕಮಕಿಯಲ್ಲಿ ಈವರಗೆ ಕನಿಷ್ಠ 300 ಜನರು ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಈದ್ ಉಲ್ ಫಿತ್ರ್ ಆಚರಣೆಯ ರಾತ್ರಿಯೂ ಖಾರ್ಟೂಮ್‌ನ ಹಲವು ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ಶೆಲ್ ದಾಳಿ ಮತ್ತು ಸಂಘರ್ಷಗಳು ಸತತ ಆರನೇ ದಿನವೂ ಮುಂದುವರಿದಿದ್ದವು ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ ಹೇಳಿದೆ. ಅಧಿಕ ಜನಸಂದಣಿ ಇರುವ ಖಾರ್ಟೂಮ್ ಜಿಲ್ಲೆ, ವೈಮಾನಿಕ ದಾಳಿಗಳು ಮತ್ತು ಟ್ಯಾಂಕ್‌ಗಳನ್ನು ಬಳಸಿ ಗುಂಡಿನ ದಾಳಿ ಸೇರಿದಂತೆ ಭಯಾನಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. 50…
ಅಕ್ಷಯ ತೃತೀಯಾ ಸೂರ್ಯೋದಯ: 06.03 AM, ಸೂರ್ಯಾಸ್ತ : 06.33 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣ ತಿಥಿ: ಇವತ್ತು ಬಿದಿಗೆ 07:49 AM ತನಕ ನಂತರ ತದಿಗೆ ನಕ್ಷತ್ರ: ಇವತ್ತು ಕೃತ್ತಿಕ 11:24 PM ತನಕ ನಂತರ ರೋಹಿಣಿ ಯೋಗ: ಇವತ್ತು ಆಯುಷ್ಮಾನ್ 09:26 AM ತನಕ ನಂತರ ಸೌಭಾಗ್ಯ ಕರಣ: ಇವತ್ತು ಕೌಲವ 07:49 AM ತನಕ ನಂತರ ತೈತಲೆ 07:43 PM ತನಕ ನಂತರ ಗರಜ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00ನಿಂದ 07:30 ವರೆಗೂ ಅಮೃತಕಾಲ: 08.58 PM to 10.35 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:39 ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ನಿರ್ವಹಣಾ ಅಧಿಕಾರಿಗಳಿಗೆ ಧನ ಲಾಭ ಮತ್ತು ಜಾಗ್ರತೆ ಇರಲಿ, ಪುರೋಹಿತರಿಗೆ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 537 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರುನಲ್ಲಿಯೇ 367 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ 2070 ಸಕ್ರಿಯ ಪ್ರಕರಣಗಳಿದ್ದು, ವಾರದ ಏರಿಕೆ ಪ್ರಮಾಣ 3.52ರಷ್ಟಿದೆ. ದೈನಂದಿನ ಏರಿಕೆಯು ಶೇ 3.06 ರಷ್ಟಿದೆ. ಕೊರೊನಾದಿಂದ ರಾಜ್ಯದಲ್ಲಿ ಕಳೆದ 15 ದಿನದಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬೆಂಗಳೂರು: ಬಿಬಿಎಂಪಿಯು 166 ಹುದ್ದೆಗಳ ವಾಹನ ಖರೀದಿಯಲ್ಲಿ ಅಕ್ರಮವೆಸಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಅವರು, 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೆ ಬಿಬಿಎಂಪಿಯು ವಾಹನಗಳನ್ನು ಪೂರೈಸುತ್ತಿದೆ. ಆದರೆ ಈ ಪೈಕಿ ಶೇಕಡಾ 90ರಷ್ಟು ಜನರಿಗೆ ವಾಹನ ವಿತರಿಸಿಲ್ಲ ಎಂದು ಆರೋಪಿಸಿದರು. ಈ ವಾಹನ ಪೂರೈಕೆ ಯೋಜನೆಯು ಒಟ್ಟು 223 ಕೋಟಿ ರೂಪಾಯಿಯ ಕಾರ್ಯಕ್ರಮವಾಗಿದೆ. ವಾಹನ ವಿತರಿಸದ ಕಾರಣ ಇಷ್ಟು ಪ್ರಮಾಣದ ಹಣ ಎಲ್ಲಿ ಹೋಗಿದೆ. ಆ ಬಗ್ಗೆ ಅಗತ್ಯ ತನಖೆಯಾಗಬೇಕು. ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ಮನವಿ ಮಾಡಿದರು. ವಾಹನ ವಿತರಣೆ ಸಂಬಂಧ ಅಧಿಕಾರಿಗಳು ಸರ್ಕಾರದಲ್ಲಿನ ಖಾತೆಗಳ ವಿಭಾಗದಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದ ಹಣ ಏನಾಯಿತು? ಎಂಬ ಫಲಾನುಭವಿಗಳ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ. ಹೀಗೆ ಪ್ರಶ್ನಿಸುವವರು ವಾಹನವನ್ನು ಸ್ವೀಕರಿಸಿಲ್ಲ. ಲೆಕ್ಕಪತ್ರ ಇಲಾಖೆಯು ಬಿಲ್‌ಗಳನ್ನು ಸಿದ್ಧಪಡಿಸಿ…
ಬೆಂಗಳೂರು: ಇಂದು ರಂಜಾನ್ ಹಬ್ಬದ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾವಿರಾರು ಮುಸ್ಲಿಂ ಭಾಂದವರು ಮೈದಾನದಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ಮಾಡುವ ಹಿನ್ನೆಲೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನೂ ಪ್ರಾರ್ಥನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸುಮಾರು 300ಕ್ಕೂ ಹೆಚ್ಚು ಪೊಲೀಸರಿಂದ ಕಣ್ಗಾವಲು ಇರಿಸಲಾಗಿದೆ. ಇನ್ನೂ ಪ್ರಾರ್ಥನೆ ಮಾಡುವ ಸಲುವಾಗಿ ಈದ್ಗಾ ಮೈದಾನದಲ್ಲಿ ಎಲ್ಲಾ ತಯಾರಿ ನಡೆಸಲಾಗಿದ್ದು, ಸಿದ್ದತೆಯ ಕಾರ್ಯ ಭರದಿಂದ ಸಾಗುತ್ತಿದೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬ್ಯಾರಿಗೇಟ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ದಕ್ಷಿಣ ವಲಯದ ಲಾಲ್ ಬಾಗ್ ಪೂರ್ವ ದ್ವಾರದ ಬಳಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು ಜಾಥ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾನದ ಪ್ರಮಾಣವು ಶೇ. 52 ರಷ್ಟಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ. 60 ಆಗಬೇಕೆಂಬ ಉದ್ದೇಶದಿಂದ ಸಾಕಷ್ಟು ಮತದಾರರ ಜಾಗೃತಿ ಅಭಿಯಾನಗಳನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿ ಇಂದು ಲಾಲ್ ಬಾಗ್ ನಲ್ಲಿ ಬರುವ ವಾಯುವಿಹಾರಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ದಕ್ಷಿಣ ವಲಯದ ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದು, ಕಾಲೇಜಿಗೆ ತೆರಳಿ ಮತದಾನದ ದಿನದ ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಇನ್ನೂ ಮೇ 10 ರವರೆಗೂ ಎಲ್ಲಾ ಕಾಲೇಜು,…
ಬೆಂಗಳೂರು: ವಿಜಯಪುರ, ಕಲ್ಯಾಣ ಕರ್ನಾಟಕ ಭಾಗದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಷ್ಟ ಕಾಲದಲ್ಲಿ ಬಿಜೆಪಿ ಯಾವ ರೀತಿ ನಡಿಸಿಕೊಳ್ತು ಅಂತಾ ಗೊತ್ತಿದೆ. ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಛೆ ಇದ್ದರೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾಗಿ. ನಮಗೆ ಶಕ್ತಿ ತುಂಬಿ. ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಜನ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಸೇರಲಿದ್ದಾರ ಎಂದರು
ಬೆಂಗಳೂರು: ರಂಜಾನ್ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ ವಿಧಿಸಿಲಾಗಿದೆ. ಇಂದು ಬೆಳಗ್ಗೆ 8:30 ರಿಂದ ಬೆಳಗ್ಗೆ 11:00 ಗಂಟೆವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.ಮೈಸೂರು ಬ್ಯಾಂಕ್ ನಿಂದ ಟೌನ್ ಹಾಲ್ ಕಡೆಗೆ ಬರುವ ವಾಹನಗಳು ಕಿಮ್ಕೊ ಜಂಕ್ಷನ್ ನಲ್ಲಿ ಎಡ ತಿರುವು ಪಡೆಯಬೇಕು, ಅಲ್ಲಿಂದ ವಿಜಯನಗರ ಮೂಲಕ ಸಂಚರಿಸಬಹುದಾಗಿದೆ. ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಬರುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಶಿರಸಿ ಜಂಕ್ಷನ್ ನಲ್ಲಿ ಬಲತಿರುವು ಪಡೆದುಕೊಂಡು ಸಂಚರಿಸಬೇಕು ಹಾಗೂ ಶಿರಸಿ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಜೆ ಜೆ ನಗರ, ಟ್ಯಾಂಕ್ ಬಂಡೆ ರಸ್ತೆ, ಬಿನ್ನಿಮಿಲ್ ಜಂಕ್ಷನ್, ಹುಣಸೇಮ ಜಂಕ್ಷನ್ ಮೂಲಕ ಸಂಚಾರ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ರಂಜಾನ್ ಪ್ರಯುಕ್ತ ಮೈಸೂರು ರಸ್ತೆಯಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆಗೆ ಆಗಮಿಸುವ ಹಿನ್ನಲೆಯಲ್ಲಿ ಸಂಚಾರ ನಿರ್ಬಂಧ ಮಾಡಿ ಮಾರ್ಗ ಬದಲಾವಣೆ ಮಾಡಿದ್ದಾರೆ.
ಬೆಂಗಳೂರು: ಭಾರತದ ಚುನಾವಣಾ ಆಯೋಗ (Election Commission of India) ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ವಿಶೇಷಚೇತನರಿಗೆ (Disabilities) ಮನೆಯಿಂದಲೇ ಮತದಾನ (Vote From Home) ಮಾಡಲು ಅವಕಾಶ ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಈಗಾಗಲೆ ತಯಾರಿ ಮಾಡಿಕೊಂಡಿದೆ. ಇದರಂತೆ ರಾಜ್ಯಾದ್ಯಂತ 80 ವರ್ಷಕ್ಕಿಂತ ಮೇಲ್ಪಟ್ಟ 60,000 ಜನರು ಮತ್ತು 15,000-20,000 ಜನ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಮನೆಯಿಂದಲೇ ಮತದಾನ ಮಾಡಲು ಮತದಾರರು ಸಲ್ಲಿದ ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿ ನಂತರ ಮತದಾನಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವ ಬಗ್ಗೆ ನಿರ್ಧರಿಸುತ್ತಾರೆ. ಪಟ್ಟಿಯನ್ನು ಮುಂಚಿತವಾಗಿ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ” ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ . 2023ರ ಮಾರ್ಚ್ವರೆಗೆ ಮತದಾರರ ಪಟ್ಟಿ ಪ್ರಕಾರ ಕರ್ನಾಟಕದಲ್ಲಿ 80-99 ವಯಸ್ಸಿನ 12.2 ಲಕ್ಷ ಜನರಿದ್ದಾರೆ. 5.6 ಲಕ್ಷ ವಿಶೇಷಚೇತನರಿದ್ದು, 16,000 ಕ್ಕೂ ಹೆಚ್ಚು ಶತಾಯುಷಿ ಮತದಾರರಿದ್ದಾರೆ. ಆದರೆ ಕೇವಲ ಶೇ5ರಷ್ಟು ಜನರು ಮಾತ್ರ ಮನೆಯಿಂದಲ್ಲೇ ಮತದಾನಕ್ಕೆ ಅರ್ಜಿ…