ವಾಷಿಂಗ್ ಟನ್: ಅಮೇರಿಕಾದ ಜಂಟಿ ಕಾಂಗ್ರೆಸ್ ಅಧಿವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಭಾವಿ ಕಾಂಗ್ರೆಸ್ ನ ಭಾರತೀಯ ಸಮಿತಿಯ ಸಹ-ಅಧ್ಯಕ್ಷರು ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿ ಅವರ ಮುಂಬರುವ ಅಮೇರಿಕಾ ಭೇಟಿ ವೇಳೆ ಜಂಟಿ ಅಧಿವೇಶನಕ್ಕೆ ಆಹ್ವಾನಿಸಬೇಕು ಎಂದು ಸಭಾಧ್ಯಕ್ಷ ಕೆವಿನ್ ಮೆಕ್-ಕಾರ್ತಿ ಅವರನ್ನು ಒತ್ತಾಯಿಸಲಾಗಿದೆ. ಜೂ.22 ರಂದು ಪ್ರಧಾನಿ ಮೋದಿಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಆತಿಥ್ಯ ನೀಡಲಿದ್ದು, ಸರ್ಕಾರದ ವತಿಯಿಂದ ಔತಣಕೂಟ ಆಯೋಜಿಸಲಿದ್ದಾರೆ. “ಕಾಂಗ್ರೆಸ್ ನ ಜಂಟಿ ಭಾಷಣಕ್ಕಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸುವುದನ್ನು ಪರಿಗಣಿಸಲು ಗೌರವಪೂರ್ವಕವಾಗಿ ವಿನಂತಿಸುತ್ತೇವೆ. ಇದು ಯುಎಸ್-ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಮಹತ್ವ, ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ” ಎಂದು ಡೆಮಾಕ್ರಟಿಕ್ ಪಕ್ಷದ ಭಾರತೀಯ-ಅಮೆರಿಕನ್ ಕಾಂಗ್ರೆಸ್ನ ರೋ ಖನ್ನಾ ಮತ್ತು ರಿಪಬ್ಲಿಕನ್ ಪಾರ್ಟಿಯ ಕಾಂಗ್ರೆಸ್ಸಿಗ ಮೈಕೆಲ್ ವಾಲ್ಟ್ಜ್ ಮೆಕಾರ್ಥಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಅಮೇರಿಕಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಮತ್ತು ಕಾಂಗ್ರೆಸ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವ…
Author: Prajatv Kannada
ನವದೆಹಲಿ: ದೇಶದ ಜನರ ಜನನ ಮತ್ತು ಮರಣ ಮಾಹಿತಿಯನ್ನು ಮತದಾರರ ಪಟ್ಟಿಯೊಂದಿಗೆ ( Voter List ) ಲಿಂಕ್ ಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ಮುಂದಿನ ಮುಂಗಾರು ಸಂಸತ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಮತದಾರರ ಪಟ್ಟಿಯೊಂದಿಗೆ ಜನನ, ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲೀಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಿಯೇ ಆಗಲಿದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ( Election Commission ) ಕಡೆಯಿಂದ ಸೂಚನೆ ಬರಲದಿ ಎಂದರು. ಇದೇ ರೀತಿ ಯಾವುದೇ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಸಾಧ್ಯವಾಗಲಿದೆ. ಆದರೇ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸುವಂತೆ ಕೋರಲಾಗುವುದು. ಸೆನ್ಸಸ್ ರಿಜಿಸ್ಟ್ರಾರ್ ಕಡೆಯಿಂದ ಪತ್ರ ಅಥವಾ ಸಂದೇಶದ ಮುಖಾಂತರ ಈ ದೃಢೀಕರಣ ಕೇಳಲಾಗುತ್ತದೆ. ಕುಟುಂಬ ಸದಸ್ಯರು ಯಾವುದೇ ಆಕ್ಷೇಪಣೆ…
ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಯನಾಡ್‌ನಲ್ಲಿ ಉಳಿದರೆ ಉತ್ತರ ಪ್ರದೇಶದ ಅಮೇಠಿ ಸಂಸದರಾಗಿದ್ದಾಗ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಮೊದಲು ರಾಹುಲ್ ಗಾಂಧಿ ಅವರು ವಯನಾಡ್ (Wayanad )ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕನ ಮನವಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ. ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿಯನ್ನು ಅಮೇಠಿಯಿಂದ ಹೊರ ಕಳುಹಿಸಿದ ಅದೃಷ್ಟ ಹೊಂದಿದ್ದೇನೆ ಎಂದು ಹೇಳಿದರು. ಅದಕ್ಕೆ ಕಾರಣ ಅವರು ಅಮೇಠಿಯ ಸಂಸದರಾಗಿದ್ದಾಗ ಅಲ್ಲಿನ ಶೇ.80 ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಸ್ಟೇಷನ್, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇಲ್ಲ.…
ಕಂಪ್ಲಿ: ಕಂಪ್ಲಿ ಪಟ್ಟಣದ ಅತಿಥಿ ಗೃಹದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಅಹಿಂದಾ ಮಹಾ ಒಕ್ಕೂಟ ಕಲ್ಬುರ್ಗಿ ವಿಭಾಗೀಯ ಘಟಕ ಬಳ್ಳಾರಿ ಕಾಂಗ್ರೆಸ್ ಕಟ್ಟಾಳು ಅಹಿಂದಾ ನಾಯಕರಾಗಿ ಡಾ!! ಎಚ್ ಸಿ ಮಾದೇವಪ್ಪ ಬಸವರಾಜ ರಾಯರೆಡ್ಡಿ ಬಿ ನಾಗೇಂದ್ರ ಕೆ ಎನ್ ರಾಜಣ್ಣ ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ ರವರಿಗೆ ಸರ್ಕಾರ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂಟದ ಅಧ್ಯಕ್ಷರಾದ ಸಿ ನರಸಪ್ಪ ಗೌರವಾಧ್ಯಕ್ಷರಾದ ಡಾ. ಎಸಿ ದಾನಪ್ಪ ರವರು ಸರ್ಕಾರಕ್ಕೆ ಪತ್ರಿಕೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ, ಒಕ್ಕೂಟದ ಅಧ್ಯಕ್ಷರು ಸಿ ನರಸಪ್ಪ, ಗೌರವ ಅಧ್ಯಕ್ಷರಾದ ಡಾ!! ಎ.ಸಿ ದಾನಪ್ಪ ರವರು ನಂತರ ಮಾತನಾಡಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಈ ಚುನಾವಣೆಯ ನಡೆದ ಎಲ್ಲಾ ಸರ್ವರ್ತಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ಲಭಿಸಿದೆ. ಇದರಿಂದ 30 ನಾಲ್ಕು ವರ್ಷಗಳ ಇತಿಹಾಸ ಮತ್ತೊಮ್ಮೆ ಮರು ಕಳುಹಿಸಿದಂತಾಗಿದೆ. ರಾಜ್ಯದಲ್ಲಿ ದಶಕಗಳ ಕಾಲ ಹೈದ ಸಮುದಾಯ ಗಳು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದೆ ಅದರಂತೆ ಪ್ರಸ್ತುತ 2023ರ ರಾಜ್ಯ…
ಮಂಡ್ಯ :- ವ್ಯಕ್ತಿಯೊಬ್ಬರಿಂದ ಇ-ಸ್ವತ್ತು ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಡ್ಯ ಜಿಲ್ಲೆ, ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಜರುಗಿದೆ. ಮಂಡ್ಯ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಯಾನಂದ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬಂಧಿತ ಆರೋಪಿಯಾಗಿದ್ದು, ಲಂಚ ಸ್ವೀಕರಿಸಿದ್ದ 5 ಸಾವಿರ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಮಂಡ್ಯ ನಗರದ ಮಂಜುನಾಥ್ ಎಂಬುವರ ಮನೆ, ಖಾಲಿ ನಿವೇಶನದ ಇ-ಸ್ವತ್ತು ಮಾಡಿಕೊಡಲು ದಯಾನಂದ್ 40,000 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಬುಧವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮುಂಗಡವಾಗಿ 5 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ, ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ದಾಳಿ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ…
ಹುಬ್ಬಳ್ಳಿ: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚನ್ನಪೇಟ, ತೋರವಿ ಹಕ್ಕಲ, ಖರಾದಿ ಓಣಿ, ಮೊಯಿನ್ ಪ್ಲಾಟ್, ಹಾಗೂ ಇನ್ನಿತರ ಪ್ರದೇಶಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭೇಟಿ ನೀಡಿ, ಸಾರ್ವಜನಿಕರ ಆಸ್ತಿ, ಪಾಸ್ತಿಗಳಿಗೆ ಹಾನಿಯುಂಟಾಗಿರುವ ಬಗ್ಗೆ ನಾಗರಿಕರಿಗೆ ಸಾಂತ್ವನ ಹೇಳಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ, ಸದರಿ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ನಾಲಾ ಹಾಗೂ ರಾಜಕಾಲುವೆಗಳ ಒತ್ತುವರಿಕೆಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಹಾಗೂ ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀಮತಿ ಚಂದ್ರಿಕಾ ಮೇಸ್ತ್ರಿ ರವರು, ಮಾಜಿ ಮಹಾಪೌರರಾದ ವೆಂಕಟೇಶ ಮೇಸ್ತ್ರಿ ರವರು, ಪಾಲಿಕೆಯ ಅಧಿಕಾರಿಗಳಾದ ಕಾಂಬ್ಳೆ ರವರು, ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಧಾರವಾಡ: ಜಾತ್ರೆಗಳಂದರೇ ಏನೋ ಒಂಥರ ವಿಶಿಷ್ಟ ಅಚರಣೆಗಳೇ ಇರುತ್ತವೆ. ಒಂದೊಂದು ಜಾತ್ರೆಯಲ್ಲಿ ಒಂದೊಂದು ತೆರನಾದ ಆಚರಣೆ.. ಈ ಆಚರಣೆಗೆ ಅದರದೇ ಆದ ಹಿನ್ನೆಲೆ ಇರುತ್ತೆ…ಇಲ್ಲೊಂದು ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಂಡಾರ ತೂರಿ ಹರಕೆ ತೀರಿಸೋದು ನಡೆದು ಬಂದ ಸಂಪ್ರದಾಯ. ಹೌದು…ತಾಲೂಕಿನ ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಮಂಡಿಹಾಳ ಗ್ರಾಮದ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ದೇವಿಯರ ಮೂರ್ತಿ ಮೆರವಣಿಗೆ ನಡೆಯುತ್ತಿದ್ದು, ಗ್ರಾಮಸ್ಥರು ಸಂಭ್ರಮದಿಂದ ಹೊನ್ನಾಟವಾಡುತ್ತಿದ್ದಾರೆ. ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವಿಯರ ಜಾತ್ರೆ ನಡೆಯುತ್ತಿರುವುದರಿಂದ ಯಾರೂ ಕೂಡ ಚಪ್ಪಲಿ ಹಾಕಿಕೊಂಡು ಬರದಂತೆ ನಿರ್ಬಂಧ ಹೇರಲಾಗಿದೆ. ಇದರಿಂದ ಯಾರೂ ಕೂಡ ಪಾದರಕ್ಷೆ ಧರಿಸದೇ ಅದ್ಧೂರಿಯಿಂದ ಗ್ರಾಮ ದೇವಿಯರ ಜಾತ್ರೆ ನಡೆಸುತ್ತಿದ್ದಾರೆ. ದೇವರ ಪಲ್ಲಕ್ಕಿಯ ಮೇಲೆ ಜನರು ಭಂಡಾರ ತೂರುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಕೆಲವರು ಭಂಡಾರ ಹಾರಿಸಿ ವರವ ಕೊಡು ದೇವರೇ ಎಂದು ತಮ್ಮ ನಿವೇದನೆಯನ್ನು ದೇವರ ಮುಂದೆ ಇಟ್ಟರೆ, ಇನ್ನು…
ಮಂಗಳೂರು: ಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದೂಗಳಿಗೆ (Hindu) ಕಠಿಣ ದಿನವಾಗಲಿದೆ. ಗೋಹತ್ಯೆ ಕಾಯ್ದೆ, ಮತಾಂತರ ಕಾಯ್ದೆ ನಿಷೇಧಕ್ಕೆ ಕಾರ್ಯತಂತ್ರಗಳು ರೂಪುಗೊಂಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪೊಲೀಸರಿಗೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡು ಬಂದಿದೆ. ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ. ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ಚಿತ್ರದುರ್ಗ ಜಿಲ್ಲೆಯ ಶಿಕ್ಷಕರು ಮುಖ್ಯಮಂತ್ರಿಗಳ ಸಾಲದ ಬಗ್ಗೆ ಮಾತನಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವ…
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಸುತ್ತಿನ ಸಂಪುಟ ರಚನೆ ಸರ್ಕಸ್ ಶುರುವಾಗಿದೆ. ಮೊದಲ ಹಂತದಲ್ಲಿ 8 ಶಾಸಕರು ಸಚಿವರಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಂಪುಟ ಸೇರಿದ್ದರು. ಇದೀಗ ಉಳಿದ ಸ್ಥಾನ ಭರ್ತಿ ಮಾಡಬೇಕಿದೆ. ಹೀಗಾಗಿ ಹೈಕಮಾಂಡ್ ಅಂಗಳದಲ್ಲಿ ಹೈವೋಲ್ಟೇಜ್ ಮೀಟಿಂಗ್ ಫಿಕ್ಸ್ ಆಗಿದ್ದು, ಇಂದೇ(ಮೇ 24) ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಈ ನಡುವೆ ಖಾತೆ ಹಂಚಿಕೆ ಸರ್ಕಸ್ ಜೋರಾಗೇ ನಡೆಯುತ್ತಿದೆ. ಬುಧವಾರದ ವೇಳೆಗೆ ಎಲ್ಲವೂ ಫೈನಲ್ ಆಗುತ್ತೆ. ಎಲ್ಲಾ ಸಚಿವ ಸ್ಥಾನ ಭರ್ತಿ ಆಗುತ್ತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಡಿಕೆ ಶಿವಕುಮಾರ್ ಹೇಳಿಕೆಯಂತೆ ಸಂಪುಟ ಸರ್ಕಸ್ ಶುರುವಾಗಿದೆ. ಇವತ್ತು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ರಾತ್ರಿಯೇ ಹೈಕಮಾಂಡ್ ನಾಯಕರ ಜೊತೆ ಮೀಟಿಂಗ್ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಮಾತ್ರ…
ಮಂಡ್ಯ: ಹಳೇಬೂದನೂರು ಗ್ರಾಮದ ಎಚ್.ಪಿ.ಮನೋಜ್ 2022ನೇ ಸಾಲಿನ ಯುಪಿಎಸ್‌ಪಿ ಪರೀಕ್ಷೆಯಲ್ಲಿ 929ನೇ ರ‍್ಯಾಂಕ್ ಪಡೆದಿದ್ದಾರೆ. ಡಾ.ಬಿ.ಎಸ್.ಪುಟ್ಟಸ್ವಾಮಿ- ಹೇಮಾ ದಂಪತಿಯ ಪುತ್ರನಾದ ಮನೋಜ್ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಒಡಿಶಾ, ಭುವನೇಶ್ವರ್ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಬೆಂಗಳೂರು ವಿವಿಯಲ್ಲಿ ಬಿ.ಟೆಕ್ ಪದವಿ ಪೂರೈಸಿದ್ದಾರೆ. ಸದ್ಯ ಮನೋಜ್ ದೆಹಲಿಯ ವಿದ್ಯುಚ್ಛಕ್ತಿ ನಿಗಮದಲ್ಲಿ ಐಇಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ವಿವಿ ಪುರಂ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.