Author: Prajatv Kannada

ದೆಹಲಿ: 2022ರ ಯುಪಿಎಸ್‍ಸಿ (UPSC) ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಟಾಪ್-10 ಪಟ್ಟಿಯಲ್ಲಿ ಮೊದಲ 4 ಸ್ಥಾನವನ್ನು ಯುವತಿಯರೇ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ 6 ಸ್ಥಾನವನ್ನು ಯುವತಿಯರು ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಟಾಪರ್ಸ್ (Toppers) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಶಿತಾ ಕಿಶೋರ್ (Ishita Kishore), ಗರಿಮಾ ಲೋಹಿಯಾ, ಉಮಾ ಹರತಿ ಎನ್, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ಶ್ರೀವಾಸ್ತವ. ಈ ಹತ್ತು ಅಭ್ಯರ್ಥಿಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ. ಸೆ.2022 ರಲ್ಲಿ ನಾಗರಿಕ ಸೇವಾ ಆಯೋಗ ನಡೆಸಿದ ಲಿಖಿತ ಪರೀಕ್ಷೆ (Civil Services Examination 2022 )ಮತ್ತು ಮೇ 2023 ರಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ 933 ಅಭ್ಯರ್ಥಿಗಳನ್ನು ಶಿಪಾರಸು ಮಾಡಲಾಗಿದೆ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ತುಳಸಿ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಶೀತ, ಒತ್ತಡ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ನಿಮ್ಮ ದಿನಚರಿಯಲ್ಲಿ ಹೊಸ ಆಯುರ್ವೇದ ಮತ್ತು ಆರೋಗ್ಯಕರ ಪದಾರ್ಥವನ್ನು ಸೇರಿಸಲು ನೀವು ಬಯಸಿದರೆ, ತುಳಸಿ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ತುಳಸಿ ನೀರು ಮಾಡುವುದು ಹೇಗೆ?: ತುಳಸಿ ನೀರನ್ನು ತಯಾರಿಸುವುದು ಬಹಳ ಸುಲಭ. ಕೆಲವು ತಾಜಾ ತುಳಸಿ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನಿಧಾನವಾದ ಶಾಖದಲ್ಲಿ ಕುದಿಸಿ. ಇದನ್ನು ಲೋಟದೊಳಗೆ ಹಾಕಿಟ್ಟುಕೊಂಡು, ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಆ ತುಳಸಿ ಎಲೆಗಳನ್ನು ಎಸೆಯಬೇಡಿ. ನೀವು ಅಡುಗೆ ಮಾಡುವ ಯಾವುದೇ ಊಟದಲ್ಲಿ ಇದನ್ನು ಬಳಸಬಹುದು. ಅಥವಾ ಬೇಯಿಸಿದ ಅನ್ನಕ್ಕೆ ಸೇರಿಸಿ ತಿನ್ನಲೂಬಹುದು. ತುಳಸಿ ನೀರಿನ ಪ್ರಯೋಜನಗಳು: – ತುಳಸಿ ನೀರನ್ನು ಕುಡಿಯುವುದರಿಂದ ಉಂಟಾಗುವ ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ದೇಹ ಮತ್ತು ಅಂಗಗಳಲ್ಲಿರುವ ತ್ಯಾಜ್ಯ ಮತ್ತು…

Read More

ಬಾಲಿವುಡ್ ನ ಖ್ಯಾತ ನಟ ಅನುಪಮ್ ಖೇರ್ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅನುಪಮ್  ‘ವಿಜಯ್ 69’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದು ವೇಳೆ ಭುಜಕ್ಕೆ ಗಾಯಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ನಾನು ಆರೋಗ್ಯವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆತಂಕದಲ್ಲಿರುವ ಅಭಿಮಾನಿಗಳಿಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್‌ಎಫ್ ಎಂಟರ್‌ಟೈನ್ಮೆಂಟ್’ ಒಟಿಟಿ ಮೂಲಕ ವಿಜಯ್ 69 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಕ್ಷಯ್ ರಾಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Read More

ಚೆನ್ನೈ: ಎಂಎಸ್‌ ಧೋನಿ ತಾನಾಗಿಯೇ ಐಪಿಎಲ್‌ ನಿವೃತ್ತಿ ಬಗ್ಗೆ ಮಾತನಾಡದೇ ಇದ್ದರೂ ಪದೇ-ಪದೆ ನಿವೃತ್ತಿ ಬಗ್ಗೆ ಸಿಎಸ್‌ಕೆ ನಾಯಕನಿಗೆ ಪ್ರಶ್ನೆ ಕೇಳಲಾಗುತ್ತಿದೆ. ಅದೇ ರೀತಿ ಮಂಗಳವಾರ ರಾತ್ರಿ ಗುಜರಾತ್‌ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲುವಿನ ಬಳಿಕ ಎಂಎಸ್‌ ಧೋನಿಗೆ ಮತ್ತೊಮ್ಮೆ ನಿವೃತ್ತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಸಿಎಸ್‌ಕೆ ನಾಯಕ ಖಡಕ್ ಉತ್ತರ ನೀಡಿದ್ದಾರೆ. ಗುಜರಾತ್‌ ಟೈನಟ್ಸ್ ವಿರುದ್ಧ 15 ರನ್‌ಗಳಿಂದ ಮೊದಲನೇ ಕ್ವಾಲಿಫೈಯರ್‌ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ, 10ನೇ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ ತಲುಪಿತು. ಈ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್ ಆರಂಭಕ್ಕೆ ಚೆನ್ನೈ ಪ್ರೇಕ್ಷಕರು ಅವಕಾಶ ಮಾಡಲಿಲ್ಲ. ಧೋನಿ..ಧೋನಿ.. ಎಂದು ಕೂಗುವ ಮೂಲಕ ಮೈದಾನವನ್ನು ಧೋನಿ ಮಯ ಮಾಡಿದ್ದರು. ಇದರ ಹೊರತಾಗಿಯೂ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ಮಾತನಾಡಿದ ಎಂಎಸ್‌ ಧೋನಿ, ಸದ್ಯಕ್ಕೆ ಐಪಿಎಲ್‌ ನಿವೃತ್ತಿ ಬಗ್ಗೆ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್‌ ಮಿನಿ ಹರಾಜು ಡಿಸೆಂಬರ್‌ನಲ್ಲಿ…

Read More

ಚೆನ್ನೈ : ಎಂಎಸ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 10ನೇ ಬಾರಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫೈನಲ್‌ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಐಪಿಎಲ್ 2023 ಟೂರ್ನಿಯ ಕ್ವಾಲಿಫೈಯರ್ 1 ಪಂದ್ಯದಲ್ಲಿ ಭರ್ಜರಿ ಆಟವಾಡಿದ ಸಿಎಸ್‌ಕೆ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್‌ ಟೈಟನ್ಸ್‌ ತಂಡವನ್ನು 15 ರನ್‌ಗಳಿಂದ ಮಣಿಸಿ ಫೈನಲ್‌ಗೆ ದಾಪುಗಾಲಿಟ್ಟಿತು. ಸೋಲುಂಡ ಹಾರ್ದಿಕ್ ಪಾಂಡ್ಯ ಪಡೆ, ಇದೀಗ ಫೈನಲ್‌ಗೆ ಅರ್ಹತೆ ಪಡೆಯಲು ಕ್ವಾಲಿಫೈಯರ್ 2 ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಮುಗ್ಗರಿಸಿದ ಗುಜರಾತ್‌ ಟೈಟನ್ಸ್‌ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ರನ್‌ಚೇಸ್‌ನಲ್ಲಿ ಅಬ್ಬರಿಸಿದ್ದ ಗುಜರಾತ್‌ ಟೈಟನ್ಸ್‌, ಕ್ವಾಲಿಫೈಯರ್‌ ಕದನದಲ್ಲಿ ಸಿಎಸ್‌ಕೆ ಎದುರು ಚೇಸಿಂಗ್‌ ಆಯ್ಕೆ ಮಾಡಿ ಮುಗ್ಗರಿಸಿತು. ಗೆಲ್ಲಲು 173 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಟೈಟನ್ಸ್‌, ತನ್ನ 20 ಓವರ್‌ಗಳಲ್ಲಿ 157 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಸಿಎಸ್‌ಕೆ ಭರ್ಜರಿ ಬೌಲಿಂಗ್‌ ಮನೆಯಂಗಣದ ಪಿಚ್‌ಗೆ ಸೂಕ್ತ ರಣತಂತ್ರ ಹೆಣೆದು ಬೌಲಿಂಗ್‌ ಮಾಡಿದ ಸೂಪರ್‌ ಕಿಂಗ್ಸ್‌ ಎದುರಾಳಿ ಬ್ಯಾಟರ್‌ಗಳ ಅಬ್ಬರಕ್ಕೆ ಬ್ರೇಕ್ ಹಾಕಿತು. ರಶೀದ್‌ ಖಾನ್‌…

Read More

ಬೆಳ್ತಂಗಡಿ : 24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಹತ್ಯೆ ಮಾಡಿದ್ದಾರೆಂದು ತುಳುವಿನಲ್ಲಿ‌ ಮಾಡಿದ ಭಾಷಣದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(Harish Poonja) ವಿವಾದಾತ್ಮಕ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಯಲ್ಲಿ  ಸಿಎಂ ವಿರುದ್ಧ ಕೊಲೆ ಆರೋಪವನ್ನು ಶಾಸಕ ಹರೀಶ್ ಪೂಂಜಾ ಮಾಡಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಶಾಸಕ ಪೂಂಜಾ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ನಾಯಕರ ಬಗ್ಗೆ ಗರಂ ಆಗಿದ್ದರು. ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ.  24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ ಸಿದ್ದರಾಮಯ್ಯಗೆ ನೀವು ವೋಟ್ ಕೇಳಿದ್ದೀರ. ಬಜರಂಗದಳ ಬ್ಯಾನ್ ಮಾಡುತ್ತೇವೆ  ಎಂದ ಕಾಂಗ್ರೆಸ್ ಪರ  ವೋಟ್ ಕೇಳಿದ್ದೀರ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ ಎಂದಿದ್ದರು. ಇದೀಗ ಬಿಜೆಪಿ ಶಾಸಕನ ಆರೋಪ ವಿವಾದಕ್ಕೆ ಕಾರಣವಾಗಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.

Read More

ರಾಮನಗರ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2022ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್​ಇ) ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 933 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಅಗ್ರ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದು, ಕರ್ನಾಟಕದ ಟಾಪರ್ ಕೂಡ ಮಹಿಳೆಯೇ ಆಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಯುವತಿ ದಾಮಿನಿ ಎಂ.ದಾಸ್, ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ತಾಲೂಕಿನ ಮೊದಲ ಯುವತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ರೈತಾಪಿ ಕುಟುಂಬದ ಧಾಮಿನಿ ಎಂ. ದಾಸ್ ಗೆ 345ನೇ ರ‌್ಯಾಂಕ್ ಪಡೆದಿದ್ದಾರೆ. ಮಳೂರುಪಟ್ಟಣ ಗ್ರಾಮದ ಶೈಲಜಾ ಹಾಗೂ ಮೋಹನ್ ದಾಸ್ ದಂಪತಿ ಪುತ್ರಿಯಾದ ದಾಮಿನಿ, ಇಂಜಿನಿಯರ್ ಪದವೀಧರೆ. ಆನ್​ಲೈನ್ ತರಬೇತಿಯ ಮೂಲಕವೇ ಈ ಸಾಧನೆ ಮಾಡಿರುವುದು ವಿಶೇಷ. ದಾಮಿನಿ ಅವರ ತಂದೆ ಮೋಹನ್​ದಾಸ್ ಕೃಷಿಕರು ಆಗಿದ್ದಾರೆ.

Read More

ರಾಮನಗರ: ಮಂಗಳವಾರ ಪ್ರಕಟವಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಯ ರೈತ ಕುಟುಂಬ ಅಭ್ಯರ್ಥಿ 238ನೇ ರ್ಯಾಂಕ್ ಪಡೆದು ಉತ್ತೀರ್ಣನಗಿದ್ದಾನೆ. ಉತ್ತೀರ್ಣನಾದ ಅಭ್ಯರ್ಥಿ ಹಾರೋಹಳ್ಳಿ ತಾಲ್ಲೂಕಿನ ದೊಡ್ಡಬಾದಿಗೆರೆ ನಿವಾಸಿ ಚೆಲುವರಾಜು .ಸತತ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದು .ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ  ಚಲುವರಾಜುರವರು. ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿ.ಯು.ವರೆಗೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಈ ಹಿಂದಿನಿಂದಲೂ ನಾನು ಐಎಎಸ್ ಅಧಿಕಾರಿ ಆಗ ಬೇಕೆಂಬ ಕನಸು ಕಂಡಿದ್ದೆ..ಚಿಕ್ಕ ವಯಸ್ಸಿನಿಂದಲೂ ಸಮಾಜದ ಸೇವೆಗೆ ತೊಡಗಿಸಕೊಳ್ಳಬೇಕು ಎಂಬ ಆಸೆ ಹೊಂದಿದ್ದೆ ಈಗ ನನ್ನ ಆಸೆ ಈಡೇರಿದೆ. Video Player 00:00 00:23 ಇದರ ಮುಂಚೆ ನಾನು ಎರಡು ಬಾರಿ ಪ್ರಯತ್ನದಲ್ಲಿ ಸೋಲನ್ನು ಕಂಡು ಮೂರನೆಯ ಬಾರಿ ಯಶಸ್ಸನ್ನು ಕಂಡಿದ್ದೇನೆ..ನನ್ನ ಯಶಸ್ಸಿಗೆ ನನ್ನ ಅಣ್ಣ ನನ್ನ ಸ್ನೇಹಿತರು ಮತ್ತು ಡಾ. ರಾಜ ಕುಮಾರ್ ಐಎಎಸ್ ತರಭೇತಿ ಕೇಂದ್ರದ ಉಪನ್ಯಾಸಕರು ತುಂಬಾ ಸಹಾಯ ಮಾಡಿದ್ದಾರೆ.ಆದ್ದರಿಂದ ನನ್ನ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದೇನೆ. ನಾನು ಮುಂದೆ ಜನ ಸಾಮಾನ್ಯರಿಗೆ ಉತ್ತಮ ಸೇವೆ ಸಲ್ಲಿಸಬೇಕೆಂಬ…

Read More

ಹುಬ್ಬಳ್ಳಿ: ಕಳೆದ ಅರ್ಧ ಗಂಟೆಯಿಂದಲೂ ನಗರದಲ್ಲಿ ಆಲಿಕಲ್ಲು ಮಳೆ ಸುರಿಯುತ್ತಿದೆ. ಮಳೆರಾಯನ ಆರ್ಭಟಕ್ಕೆ ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಆಲಿಕಲ್ಲು ಮಿಶ್ರಿತ ಮಳೆಯಿಂದ ಜನರು ಪರದಾಡಿದ್ದಾರೆ. ಗಾಳಿ, ಮಳೆ ಆರ್ಭಟಕ್ಕೆ ತೆಂಗಿನ ಮರಗಳು ಉರುಳಿ ಬೀಳುತ್ತಿವೆ. ಮನೆಗಳ ಮೇಲೆ ಮರ ಬೀಳುವುದನ್ನು ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿ ಬೀದಿಗೆ ಬಿದಿವೆ.

Read More

ಸೂರ್ಯೋದಯ: 05.53 AM, ಸೂರ್ಯಾಸ್ತ : 06.40 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಚೌತಿ 12:57 AM ತನಕ ನಂತರ ಪಂಚಮಿ ನಕ್ಷತ್ರ: ಇವತ್ತು ಪುನರ್ವಸು 03:06 PM ತನಕ ನಂತರ ಪುಷ್ಯ ಯೋಗ: ಇವತ್ತು ಗಂಡ05:20 PM ತನಕ ನಂತರ ವೃದ್ಧಿ ಕರಣ: ಇವತ್ತು ವಿಷ್ಟಿ 12:57 AM ತನಕ ನಂತರ ಬವ 01:56 PM ತನಕ ನಂತರ ಬಾಲವ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 12.28 PM to 02.13 PM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ: ಈ ರಾಶಿಯವರಿಗೆ ಅಧಿಕಾರ ಸಂಪತ್ತು ತಾನಾಗಿಯೇ ಸಿಗಲಿದೆ, ಉದ್ಯೋಗದಲ್ಲಿ ಸಮಸ್ಯೆ ದಿಂದ ಉದ್ಯೋಗ ಬಿಡುವ ಸಾಧ್ಯತೆ, ಈ ದಿನ…

Read More