ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದೆ. ಈ ಮಧ್ಯೆ ರೇಣುಕಾ ಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಿ ಅಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಿದ್ದರು ಎಂಬುದು ಈಗಾಗಲೇ ರಿಪೋರ್ಟ್ ನಲ್ಲಿ ಗೊತ್ತಾಗಿದೆ.. ಈ ಟಾರ್ಚರ್ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಪ್ರತಿಯೊಬ್ಬರ ಮನ ಕಲಕುವಂತಿದೆ, ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದರು. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ದರ್ಶನ್ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿಯೂ ಬಗೆಹರಿಸಬಹುದಿತ್ತು. ಆದ್ರೆ ಕಾನೂನು ಕೈಗೊತ್ತಿಕೊಂಡ ದರ್ಶನ್…
Author: Prajatv Kannada
ಕೆಲವು ವರ್ಷಗಳ ಹಿಂದೆ ಸಖತ್ ಸದ್ದು ಮಾಡಿದ್ದ ಮೀಟೂ ವಿಷಯ ಈಗ ಮತ್ತೆ ಸುದ್ದಿಯಾಗುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಹೇಮಾ ವರದಿಯ ಬಳಿಕ ಬೇರೆ ಬೇರೆ ಭಾಷೆಯ ನಟಿಯರು ಕೂಡ ತಮ್ಮ ಮೇಲೆ ನಡೆದ, ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಕುರಿತು ಮೌನ ಮುರಿಯುತ್ತಿದ್ದಾರೆ. ಮಲಯಾಳಂ ಚಿತ್ರರಂಗದಂತೆ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್ (ಫಿಲ್ಮ್ ಇಂಡಸ್ಟ್ರೀ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ನಟರು, ನಟಿಯರು, ಸಾಹಿತಿಗಳು, ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್ ಸಂಸ್ಥೆ ಮನವಿ…
ರೇಣುಕಾಸ್ವಾಮಿ ಕೊಲೆ ಕೇಸ್ ನ ವಿಚಾರಣೆ ಅಂತಿಮ ಹಂತ ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಿಂದ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಚಾರ್ಜ್‌ಶೀಟ್‌ನಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ದರ್ಶನ್ ಹಾತೊರೆಯುತ್ತಿದ್ದಾರೆ. ವಿಷಯ ತಿಳಿಯಲು ದರ್ಶನ್ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಪೂರ್ತಿ ವಿಷಯ ತಿಳಿದುಕೊಳ್ಳುವುದಕ್ಕೂ ಮುನ್ನವೇ ಅವಧಿ ಮುಕ್ತಾಯ ಆಗಿದ್ದರಿಂದ ದರ್ಶನ್ ಪರದಾಡಿದ್ದಾರೆ. ಅಂದ ಹಾಗೆ ಪತ್ನಿ ಜೊತೆ ಮಾತನಾಡಲು ದರ್ಶನ್ ಗೆ ಐದು ನಿಮಿಷ ಮಾತ್ರವೇ ಕಾಲವಕಾಶ ನೀಡಲಾಗಿತ್ತು. ಬಳ್ಳಾರಿ ಸೆಂಟ್ರಲ್ ಜೈಲ್ ನ ಲ್ಯಾಂಡ್ ಲೈನ್ನಿಂದ ಪತ್ನಿ ವಿಜಯಲಕ್ಷ್ಮಿ ನಂಬರ್‌ಗೆ ದರ್ಶನ್ ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ವಿಜಯಲಕ್ಷ್ಮಿ ಫೋನ್ ರಿಸೀವ್ ಮಾಡುತ್ತಿದ್ದಂತೆಯೇ ದರ್ಶನ್ ಭಾವುಕರಾಗಿದ್ದಾರೆ. 5 ನಿಮಿಷಗಳ ಕಾಲ ಅವರು ಎಮೋಷನಲ್ ಆಗಿಯೇ ಮಾತನಾಡಿದ್ದಾರೆ. ಕುಟುಂಬಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಚಾರ್ಜ್‌ಶೀಟ್‌ನಲ್ಲಿ ಇರುವ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಚಾರ್ಜ್ ಶೀಟ್ ಕುರಿತು ಪತ್ನಿ ಜೊತೆ ಮಾತನಾಡುತ್ತಿದ್ದಂತೆ ಕರೆ ಕಟ್ ಆಗಿದೆ. ಸಿಕ್ಕ 5…
ಪ್ರವಾಹದಿಂದಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ರಾಮ್ ಚರಣ್, ಪ್ರಭಾಸ್, ಅಲ್ಲು ಅರ್ಜುನ್, ನಂದಮೂರಿ ಬಾಲಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮೊದಲು ಪವನ್ ಕಲ್ಯಾಣ್ ಅವರು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದರು. ಆ ನಂತರ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಣ ಸಾಕಾಗುವುದಿಲ್ಲ ಎಂದು ಮತ್ತೆ 4 ಕೋಟಿ ರೂಪಾಯಿ ನೀಡುವುದಾಗಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ 400 ಪಂಚಾಯತ್ ಕ್ಷೇತ್ರಗಳಲ್ಲಿ ಪುನರ್ವಸತಿ ಕಲ್ಪಿಸುವ ಸಲುವಾಗಿ ಪವನ್ ಕಲ್ಯಾಣ್ ನೀಡಿದ 4 ಕೋಟಿ ರೂಪಾಯಿ ಬಳಕೆ ಆಗಲಿದೆ. ‘ಪ್ರವಾಹದಿಂದ ಆಗಿರುವ…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕೊನೆ ಹಂತಕ್ಕೆ ಬಂದು ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದೀಗ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿದ್ದ ದೃಶ್ಯ ಸಿಕ್ಕಿದ್ದು ಇದರಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ದರ್ಶನ್ ಮತ್ತು ಇತರರಿಂದ ಪಡೆದುಕೊಂಡಿದ್ದ ರಕ್ತದ ಕಲೆಗಳಿದ್ದ ಬಟ್ಟೆ, ಚಪ್ಪಲಿಗಳನ್ನು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದೆ. ಇಷ್ಟೇ ಅಲ್ಲದೇ ಡಿಲೀಟ್ ಮಾಡಿದ್ದ ಮೊಬೈಲ್, ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿ ನೀಡಿತ್ತು. ಈ ಬಗ್ಗೆಯೂ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ವಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ರೇಣುಕಾ ಕೊಲೆ ಬಳಿಕ ದರ್ಶನ್,…
ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಭಾಗಿಯಾದ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. 3 ಪ್ರತ್ಯಕ್ಷ ಸಾಕ್ಷಿಗಳು ಇವೆ. ಎಫ್‌ಎಸ್‌ಎಲ್ ಮಾತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳು ಇವೆ. ಈ ಪ್ರಕರಣದಲ್ಲಿ ಒಟ್ಟೂ 231 ಸಾಕ್ಷಿಗಳು ಇವೆ. ಕೊಲೆ ಕೇಸ್ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಶೇಷ ಕೋರ್ಟ್ಗೆ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಇನ್ನೂ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ರೇಣುಕಾಸ್ವಾಮಿ ಪ್ರಕರಣದ ಎ2 ಆರೋಪಿ, ನಟ ದರ್ಶನ್ ಚಾರ್ಜ್‌ಶೀಟ್‌ನಲ್ಲಿರುವ ಪುಟಗಳ ಸಂಖ್ಯೆಗಳನ್ನು ಕೇಳಿ ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬರೋಬ್ಬರಿ 3991 ಚಾರ್ಜ್‌ಶೀಟ್ ಪುಟಗಳ ಮಾಹಿತಿ ತಿಳಿದು ಅಯ್ಯೋ! ಅಷ್ಟೊಂದಾ ಸಾಕ್ಷಿಗಳಾ ಎಂದು ದಂಗಾಗಿದ್ದಾರೆ ಎಂದು ತಿಳಿದು ಬಂದಿದೆ ರೇಣುಕಾಸ್ವಾಮಿ ಪ್ರಕರಣದಲ್ಲಿ, ದರ್ಶನ್ ಮನೆ ಕೆಲಸದವರ ಹೇಳಿಕೆಗಳು, ಶೆಡ್ ಕೆಲಸಗಾರರ ಹೇಳಿಕೆಗಳು, ಸೆಕ್ಯೂರಿಟಿ ಹೇಳಿಕೆ ಪ್ರತಿ, ಶೆಡ್ ಗೆ ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳ ಪ್ರತಿಯನ್ನು ಕೂಡ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ…
ಚಿಕ್ಕೋಡಿ: ಮದುವೆಗೆ ಒಂದು ದಿನ ಬಾಕಿಯಿರುವಾಗಲೇ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದಲ್ಲಿ ನಡೆದಿದೆ. ಜುಂಜರವಾಡ ಆರ್‌ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ 31 ಹೋಸಲ್ಕಾರ ಮೃತ ವ್ಯಕ್ತಿ. ಸಂಬAಧಿಕರು ಹಾಗೂ ಕುಟುಂಬಸ್ಥರು ಸೆಪ್ಟೆಂಬರ್ 5ರಂದು ಮದುವೆಗೆ ದಿನಾಂಕ ನಿಗದಿಪಡಿಸಿದ್ದರು. ಮಂಗಳವಾರ ರಾತ್ರಿ ಎಂಟು ಗಂಟೆ ಆಸುಪಾಸಿನಲ್ಲಿ ಮನೆ ಮುಂದೆ ಮದುವೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಾಳೆ ನಡೆಯಲಿದ್ದ ಮದುವೆ ಸಿದ್ಧತೆಗಾಗಿ ದೂರವಾಣಿಯಲ್ಲಿ ಮಾತನಾಡುವ ವೇಳೆ ಈ ಅವಘಡ ಸಂಭವಿಸಿದ್ದು, ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ತಕ್ಷಣವೇ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಬದುಕುಳಿಯಲಿಲ್ಲ. ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹತ್ತಿರ ಜಾಕ್ವೆಲ್ ಬಳಿ ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುರೇಶ ಹನಮಂತಪ್ಪ ಇಂಚಲ (46) ಮೃತ ದುರ್ದೈವಿಯಾಗಿದ್ದಾರೆ. ದುರಸ್ತಿಗಾಗಿ ಕಂಬ ಏರಿದ್ದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಆಗಮಿಸುವಂತೆ ಮೃತರ ಕುಟುಂಬಸ್ಥರು ಪಟ್ಟುಹಿಡಿದರು. ಇಲ್ಲದೇ ಇದ್ದರೆ ಶವ ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು.ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.