ನವದೆಹಲಿ: ಸಂಸತ್ ಭವನ ಉದ್ಘಾಟನೆಗೆ ಕೇವಲ ಒಂದು ವಾರ ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ ಬದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮೇ 28 ರಂದು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿದೆ. ಭಾರತದ ಮಹಾನ್ ಪುತ್ರ ವಿನಾಯಕ ದಾಮೋದರ್ ಸಾವರ್ಕರ್ ಅವರ 140ನೇ ಜನ್ಮದಿನವಾದ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ’ ಎಂದು ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ವೀರ್ ಸಾವರ್ಕರ್ ಅವರು 1883ರ ಮೇ 28ರಂದು ಭಾಗೂರಿನಲ್ಲಿ ಜನಿಸಿದರು. ಹೊಸ ಸಂಸತ್ತು ಕನಿಷ್ಠ 150 ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯದ, ಸಂಸತ್ ಕಟ್ಟಡ 100 ವರ್ಷಗಳಿಗೆ ಬಾಳಿಕೆ ಬರುತ್ತದೆ…
Author: Prajatv Kannada
ಜೈಪುರ: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಪಕ್ಷದ ನಾಯಕ ಸಚಿನ್ ಪೈಲಟ್ ಭಾನುವಾರ, ಪಕ್ಷವು ಜನರಿಗಾಗಿ ಕೆಲಸ ಮಾಡುತ್ತದೆ ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದು ಹೇಳಿದ್ದಾರೆ. ಉತ್ತಮ ಬಹುಮತದೊಂದಿಗೆ ಕರ್ನಾಟಕದಲ್ಲಿ ಸರ್ಕಾರ ರಚಿಸಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಾರ ಮಾಡುವಾಗ, ಬಿಜೆಪಿ ಭ್ರಷ್ಟ ಪಕ್ಷ ಎಂದು ಹೇಳಿತು ಮತ್ತು ಜನರು ಅದನ್ನು ಒಪ್ಪಿಕೊಂಡರು. ಪರಿಣಾಮವಾಗಿ ನಾವು ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದ್ದೇವೆ ಎಂದು ಪೈಲಟ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು. ‘ನಾವು ಜನರಿಗಾಗಿ ಕೆಲಸ ಮಾಡುತ್ತೇವೆ ಮತ್ತು ಸಾರ್ವಜನಿಕ ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತೇವೆ ಎಂದು ನಾನು ನಂಬುತ್ತೇನೆ’ ಎಂದು ಅವರು ಹೇಳಿದರು.
ನವದೆಹಲಿ: 2016ರಲ್ಲಿ ನೋಟು ಅಪನಗದೀಕರಣದ ಬಳಿಕ 2000 ರು. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಹೊಂದಿದ್ದರು ಎಂದು ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಅಧಿಕಾರಿಗಳ ತಂಡ ಅಪನಗದೀಕರಣದ ಪ್ರಸ್ತಾಪದ ಬಳಿಕ ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರು.ಮುಖಬೆಲೆಯ ನೋಟು ಬಿಡುಗಡೆ ಪ್ರಸ್ತಾಪ ಮುಂದಿಟ್ಟಿರು. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರು. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರು. ಮತ್ತು 500 ರು.ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು. ಈ ವೇಳೆ ಆಪ್ತರ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ, ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ. 2 ಸಾವಿರ ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತಿರುವುದು ಅಪನಗದೀಕರಣ ಅಲ್ಲ…
ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿರುವ (Jaipur) ಸರ್ಕಾರಿ ಕಟ್ಟಡದ ಯೋಜನ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಕಪಾಟಿನಲ್ಲಿ 2.31 ಕೋಟಿ ರೂ.ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಾಳಿಗೆಗೆ (Basement) ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್‌ಕೇಸ್‌ನಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಆರ್‌ಬಿಐ 2,000 ರೂ. ಕರೆನ್ಸಿ ಚಲಾವಣೆ ಹಿಂತೆಗೆದುಕೊಂಡ ದಿನ ಈ ಘಟನೆ ನಡೆದಿದೆ. ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಮಾಹಿತಿ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ ಶ್ರೀವಾಸ್ತವ ಅವರು ಶುಕ್ರವಾರ ತಡರಾತ್ರಿ ಸಚಿವಾಲಯದಲ್ಲಿ ಜಂಟಿ ಸುದ್ದಿಗೋಷ್ಠಿ…
ಹುಬ್ಬಳ್ಳಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ಕೊಡುತ್ತದೆ ಇದನ್ನ ಈಡೇರಿಸಲು ಆಗಲ್ಲ ಅಂತಾ ನಾವು ಹೇಳಿದ್ದವು ಅದೇ ರೀತಿ ಆಗಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಮಯೂರ ಎಸ್ಟೇಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ , ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಲಾಗಿದೆ. ಇನ್ನು ಭರವಸೆಯಲ್ಲಿ ಏನು ಹೇಳಿದ್ದಿರಿ ಒಂದನೇ ಸಂಪುಟದಲ್ಲಿ ಭರವಸೆ ಈಡೇರಿಸಲಾಗುವುದು ಅಂತಾ ಎಲ್ಲಿ ಭರವಸೆ ಈಡೇರಿಸಿದಿರಿ ಎಂದು ಪ್ರಶ ಮಾಡಿದ ಅವರುಈಗ ಏನ್ ಹೇಳತಾ ಇರೋದು ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ ಇದೇನಾ ಜನರಿಗೆ ನೀಡಿದ ಭರವಸೆ ಈಢೇರುಸುವುದು ತಾವು ಚುನಾವಣಾ ಸಮಯದಲ್ಲಿ ಏನು ಹೇಳಿದಿರಿ ಅಂತಾ ಗಮನಿಸಿ ಇನ್ ಪ್ರೀನ್ಸೀಫಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಿ ಈಗ ಆ ಬಗ್ಗೆ ಸರಿಯಾಗಿ ಉತ್ತರ ಕೊಡಕೋ ಆಗತಾ ಇಲ್ಲ…
ಮಲೆನಾಡಿನ ಜೀವನದಿಯಾದ ತುಂಗೆ ಈ ಬಾರಿ ನೀರಿನ ಹರಿವನ್ನೆ ನಿಲ್ಲಿಸಿದ್ದಾಳೆ. ಬೇಸಿಗೆಯಲ್ಲಿ ಅಲ್ಲಲ್ಲಿ ಬತ್ತಿದಂತೆ ಕಾಣುತ್ತಿದ್ದ ತೀರ ಪ್ರದೇಶ ಈ ಬಾರಿ ಸಂಪೂರ್ಣ ಬತ್ತಿಹೋಗಿದೆ. ಬೇಸಿಗೆಯ ಬೆಳೆ ನಂಬಿದ್ದ ಅಚ್ಚುಕಟ್ಟು ಪ್ರದೇಶದ ರೈತರು ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ನೀರಿಗೆ ಹಾಹಾಕಾರ ಎದುರಾಗಿ ಪಾರಂಪಾರಿಕ ಮೀನು ಸಂತಿತಿಗಳು ನಶಿಸಿ ಹೋಗುತ್ತಿದೆ. ನೀರಿಲ್ಲದೆ ಮೀನುಗಳು ಹೊರಬರುತ್ತಿರುವುದರಿಂದ ನಾಯಿಗಳು ಅನಾಯಾಸವಾಗಿ ಬೇಟೆಯಾಡುತ್ತಿದೆ. ಇನ್ನು ಬತ್ತಿದ ನದಿಯಿಂದಾಗಿ ಒಣಗಿದ ಬಿದುರುಮಟ್ಟೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿದೆ. ತುಂಗಾ ಪಾನ ಗಂಗಾ ಸ್ನಾನ ಎನ್ನುವ ನಾಣ್ನುಡಿಗೆ ತಕ್ಕಂತೆ ತುಂಗಾ ನದಿಯ ನೀರು ಯಾವ ಮಿನರಲ್ ವಾಟರ್ ಗಿಂತಲೂ ಕಮ್ಮಿಇಲ್ಲ. ಬೆಟ್ಟಗುಡ್ಡಗಳ ಠಿಸಿಲೊಡೆದುಕೊಂಡು ಹರಿಯುವ ನದಿ ಔಷಧಿಯ ಗುಣವನ್ನು ಹೊಂದಿದೆ. ವರ್ಷ ಪೂರ್ತಿ ಹರಿಯುವ ನದಿಯೆಂದೇ ತುಂಗಾ ನದಿ ಪ್ರಖ್ಯಾತಿಯನ್ನು ಹೊಂದಿದೆ. ಆದರೆ ಇತ್ತಿಚ್ಚಿನ ವರ್ಷಗಳಲ್ಲಿ ನದಿಪಾತ್ರದ ಮರಳು ಗಣಿಗಾರಿಕೆ ಪರಿಸರ ನಾಶದಿಂದ ನದಿ ತನ್ನ ಹರಿವಿನ ದಿಕ್ಕನ್ನೇ ಬದಲಿಸಿದೆ. ಅಲ್ಲದೆ ಬೇಸಿಗೆಯಲ್ಲಿ ತುಂಗಾ ನದಿ ಹರಿವನ್ನೇ ನಿಲ್ಲಿಸುವುದು ಸಾಮಾನ್ಯ…
ಉಡುಪಿ: ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಕನಸನ್ನು ಹೊತ್ತು 2023 ರ ಚುನಾವಣೆಯಲ್ಲಿ ಆಸ್ಕರ್ ಫರ್ನಾಂಡಿಸ್ ಪ್ರೇರಣೆಯಿಂದ ಎರೆಡು ಬಾರಿ ಶಾಸಕರಾಗಿದ್ದ ಹಿರಿಯ ರಾಜಕಾರಣಿ ಯು.ಆರ್.ಸಭಾಪತಿ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯು.ಆರ್.ಸಭಾಪತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಉಡುಪಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದು. 1980-90ರ ದಶಕದ ಕರಾವಳಿ ಭಾಗದ ಪ್ರಭಾವಿ ನಾಯಕರಾಗಿದ್ದ ಸಭಾಪತಿ ಉಡುಪಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದರು. ಯುಆರ್ ಸಭಾಪತಿ ಅವರು ರಾಜಕೀಯ ಪ್ರವೇಶಕ್ಕೆ ಆಸ್ಕರ್ ಫರ್ನಾಂಡಿಸ್ ಪ್ರೇರಣೆಯಾಗಿದ್ದು, ಬಂಗಾರಪ್ಪ ಅನುಯಾಯಿಯಾಗಿದ್ದರು. 1994 ರಲ್ಲಿ ಕೆಸಿಪಿ ಪಕ್ಷದಿಂದ ಗೆದ್ದು ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, 1999ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪರಿಷತ್ ನ ಶಿಕ್ಷಣ…
ತುಮಕೂರು: ಬಹಳ ಪ್ರಸಿದ್ದಿ ಹೊಂದಿರುವ ತುಮಕೂರಿನ ಸಿದ್ದಗಂಗಾ ಮಠವು ಅನೇಕರ ಬಾಳಿಗೆ ದಾರಿದೀಪವಾಗಿದ್ದು. ನಡೆದಾಡುವ ದೇವರು ಶಿವಕುಮಾರ್ ಶ್ರೀ ಆಪ್ತ, ಸಿದ್ದಗಂಗಾ ಮಠದ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಎಂ ಸಿದ್ದಲಿಂಗಯ್ಯನವರು ಇಂದು ಬೆಳಗ್ಗೆ ನಿಧನರಾಗಿದ್ದು. ಸುಮಾರು 95 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ್ ಶ್ರೀಗಳಿಗೆ ಆಪ್ತ ಸ್ನೇಹಿತರಾಗಿದ್ದರೂ ಎನ್ನಲಾಗಿದೆ.
ಧಾರವಾಡ: ಹಾವಿನ ಜೊತೆ ಹುಡುಗಾಟ ಎಂಧು ಒಳ್ಳೆಯದಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ . ವಿಷಪೂರಿತ ಹಾವಿನ ಕಡಿತದಿಂದಾಗಿ 27 ವರ್ಷದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಶ್ರಿರಾಮನಗರ (Shriram Nagar) ನಿವಾಸಿ ಚೇತನ್ (27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು. ವಿಷಕಾರಿ ಹಾವೊಂದು ಶ್ರಿರಾಮನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಸಂಚಲಿಸಿತ್ತು. ಅದನ್ನು ಹಿಡಿಯುವ ಸಲುವಾಗಿ ಚೇತನ್ ಅದರ ಸಮೀಪ ಹೋಗಿದ್ದಾರೆ. ಈ ವೇಳೆ ಚೇತನ್ ಗೆ ಹಾವು ಕಚ್ಚಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿದ ತಕ್ಷಣ ಚೇತನ್ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಕೊನೆಯುಸಿರೆಳೆದಿದ್ದಾರೆ.
ಕಲಬುರಗಿ: ಹೆಡ್ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ(Head Constable Suicide) ಮಾಡಿಕೊಂಡ ಘಟನೆ ನಗರದ ಡಿಎಆರ್(DAR) ನಲ್ಲಿ ನಡೆದಿದೆ. ಪಾಂಡುರಂಗ (47) ಆತ್ಮಹತ್ಯೆಗೆ ಶರಣಾದ ಮೃತ ರ್ದುದೈವಿ. ಚಿಂಚೋಳಿ ಜಿಲ್ಲೆಯ ಚಿಮ್ಮನ ತಾಲ್ಲೂಕಿನ ಚೋಡ್ (Chincholi) ಗ್ರಾಮದ ನಿವಾಸಿಯಾಗಿದ್ದ ಪಾಂಡುರಂಗ ಅವರು ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಮನೆಯಲ್ಲಿ ಶಕೆ ಇದೆ ಎಂದು ಇಬ್ಬರು ಮಕ್ಕಳು ಮನೆಯ ಮೇಲ್ಚಾವಣಿಯಲ್ಲಿ ಮಲಗಿದ್ದು, ಗಂಡ ಹೆಂಡತಿ ಇಬ್ಬರು ಕ್ವಾಟರ್ಸ್ನ ಬೆಡ್ ರೂಮ್ನಲ್ಲಿ ಮಲಗಿದ್ದರು. ನಸುಕಿನ ಜಾವ ಮನೆಯ ಅಡುಗೆ ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರದ ಕಾರಣ ತನಿಖೆ ಮುಂದುವರೆದಿದೆ.