Author: Prajatv Kannada

ಧಾರವಾಡ: ಹಾವಿನ ಜೊತೆ ಹುಡುಗಾಟ ಎಂಧು ಒಳ್ಳೆಯದಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ . ವಿಷಪೂರಿತ ಹಾವಿನ ಕಡಿತದಿಂದಾಗಿ  27 ವರ್ಷದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಶ್ರಿರಾಮನಗರ (Shriram Nagar) ನಿವಾಸಿ ಚೇತನ್ (27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು. ವಿಷಕಾರಿ ಹಾವೊಂದು ಶ್ರಿರಾಮನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಸಂಚಲಿಸಿತ್ತು. ಅದನ್ನು ಹಿಡಿಯುವ ಸಲುವಾಗಿ ಚೇತನ್ ಅದರ ಸಮೀಪ ಹೋಗಿದ್ದಾರೆ. ಈ ವೇಳೆ ಚೇತನ್ ಗೆ ಹಾವು ಕಚ್ಚಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿದ ತಕ್ಷಣ ಚೇತನ್ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಕೊನೆಯುಸಿರೆಳೆದಿದ್ದಾರೆ.

Read More

ಕಲಬುರಗಿ: ಹೆಡ್ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ(Head Constable Suicide) ಮಾಡಿಕೊಂಡ ಘಟನೆ ನಗರದ ಡಿಎಆರ್(DAR) ನಲ್ಲಿ ನಡೆದಿದೆ. ಪಾಂಡುರಂಗ (47) ಆತ್ಮಹತ್ಯೆಗೆ ಶರಣಾದ ಮೃತ ರ್ದುದೈವಿ. ಚಿಂಚೋಳಿ ಜಿಲ್ಲೆಯ ಚಿಮ್ಮನ ತಾಲ್ಲೂಕಿನ ಚೋಡ್ (Chincholi) ಗ್ರಾಮದ ನಿವಾಸಿಯಾಗಿದ್ದ ಪಾಂಡುರಂಗ ಅವರು ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಮನೆಯಲ್ಲಿ ಶಕೆ ಇದೆ ಎಂದು ಇಬ್ಬರು ಮಕ್ಕಳು ಮನೆಯ ಮೇಲ್ಚಾವಣಿಯಲ್ಲಿ ಮಲಗಿದ್ದು, ಗಂಡ ಹೆಂಡತಿ‌ ಇಬ್ಬರು ಕ್ವಾಟರ್ಸ್ನ ಬೆಡ್ ರೂಮ್ನಲ್ಲಿ ಮಲಗಿದ್ದರು. ನಸುಕಿನ ಜಾವ ಮನೆಯ ಅಡುಗೆ ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರದ ಕಾರಣ ತನಿಖೆ ಮುಂದುವರೆದಿದೆ.

Read More

ರಾಯಚೂರು:ಬೇಸಿಗೆಯ ದಾಹ ತೀರಿಸಿಕೊಳ್ಳುವ ಸಲುವಾಗಿ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನೋರ್ವನನ್ನು ಮೊಸಳೆಯೊಂದು  ಹೊತ್ತೊಯ್ದ ಘಟನೆ ಕುರವಕಲಾ ತಾಲೂಕಿನ ಗ್ರಾಮವೊಂದರಲ್ಲಿ  ನಡೆದಿದೆ. ನವೀನ್ ​(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ವೇಳೆ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ನದಿಗೆ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ಬಾಟಲಿಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ನವೀನನ​ ಮೇಲೆ ಮೊಸಳೆ ದಾಳಿ ಮಾಡಿದ್ದು, ಹೊತ್ತೊಯ್ದಿದೆ. ನವೀನ್​ ಜತೆ ಇದ್ದ ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಬಾಲಕ ನವೀನ್​ಗಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆ ಸ್ಥಳೀಯರಿಂದ ಕಾರ್ಯಾಚರಣೆ. ನಡೆಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಮೋದಿ ಸರ್ಕಾರ ತೆಗೆದು ಹಾಕಿರುವ ವಿಧಿ370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ..ಭಾರತದ ಕಲ್ಪನೆಯ ಉಳಿವಿಗಾಗಿ, ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ‘ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ… ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯುತ್ತದೆ ಎಂದು ನನಗನ್ನಿಸುತ್ತಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವುದೇ ವಿರೋಧವನ್ನು ಬಯಸುವುದಿಲ್ಲ. ದೆಹಲಿ ಸರ್ಕಾರ ಶಕ್ತಿಹೀನವಾಗಿದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದರು ಅಂತೆಯೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿ-20 ದೇಶದ ಕಾರ್ಯಕ್ರಮ.. ಆದರೆ ಬಿಜೆಪಿ ಅದನ್ನು ಹೈಜಾಕ್ ಮಾಡಿದೆ. ಬಿಜೆಪಿ ಕಾರ್ಯಕ್ರಮದ ಚಿನ್ಹೆಯನ್ನು ಕಮಲಕ್ಕೆ ಬದಲಾಯಿಸಿದೆ. ಜನರು ದೇಶದೊಂದಿಗೆ ಬೆಸೆದುಕೊಂಡಿರಬೇಕೇ ಹೊರತು ಯಾವುದೇ ಪಕ್ಷದೊಂದಿಗೆ ಅಲ್ಲ… ಈ ಪ್ರದೇಶದಲ್ಲಿ ನಾವು ನಮ್ಮ…

Read More

ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಆಲಿಕಲ್ಲು ಮಳೆಯಾಗಿದೆ. ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಮಲ್ಲೇಶ್ವರಂ, ನಾಗರಭಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಜೆ.ಪಿ ನಗರ, ನಂದಿನಿ ಲೇಔಟ್, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ದಿಢೀರ್ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು, ರಸ್ತೆ ಬದಿಯ ವ್ಯಾಪಾರಿಗಳು ಪರದಾಡುವಂತೆ ಆಗಿದೆ. ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ, ವಾಹನ ಸವಾವರು ಮುಂದೆ ಸಾಗದಂತೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಗರದಲ್ಲಿ ಇಂದು ಭಾರೀ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ಬೈಕ್, ಕಾರಿನ ಮೇಲೆ ಬಿದ್ದು ಜಖಂ ಗೊಂಡಿರುವಂತ ಘಟನೆ ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಮುಂಭಾಗದಲ್ಲಿ ನಡೆದಿದೆ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದಂತ ಜನತೆಗೆ ಇಂದು ಮಧ್ಯಾಹ್ನವೇ ಧಾರಾಕಾರ ಮಳೆಯಾಗುವ ಮೂಲಕ ತಂಪೆರೆದಿದೆ. ಭಾರೀ ಮಳೆಯಾಗಿದ್ದು ಕೆ ಆರ್ ಸರ್ಕಲ್ ನಲ್ಲಿ ಕಾರೊಂದು ನೀರಿನಲ್ಲಿ ಮುಳುಗಿದೆ. ಕಾರಿನಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬೆಂಗಳೂರು ಕೆ ಆರ್ ಸರ್ಕಲ್…

Read More

ಬೆಂಗಳೂರು : 2 ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಅವರ ಪತ್ನಿ ಆಕರ್ಷಕ ಉಡುಗೊರೆಯಾಗಿ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆ ವಾಚ್ ಕಟ್ಟಿಕೊಂಡು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಾಚ್ ಎಲ್ಲರ ಗಮನ ಸೆಳೆದಿತ್ತು, ಸಿಎಂ ಸಿದ್ದರಾಮಯ್ಯ ಹೊಸ ವಾಚ್ ಕಟ್ಟಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಾಚ್ ನ್ನೇ ನೋಡಿದ್ದಾರೆ. ಇನ್ನೂ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಸಿದ್ದರಾಮಯ್ಯ ವಾಚ್ ಮುಟ್ಟಿ ಮುಟ್ಟಿ ನೋಡಿದ್ದಾರೆ.

Read More

ಬೆಂಗಳೂರು: ಹಿಂದಿನ ಸರ್ಕಾರಗಳ ಹಗರಣಗಳ ತನಿಖೆಗೆ ಆಯೋಗ ರಚಿಸಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಿ ಗುತ್ತಿಗೆ ನಿರ್ವಹಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಂದು ತನಿಖಾ ಆಯೋಗ ರಚಿಸಬೇಕು. ಸಮಗ್ರ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಹಲವಾರು ಇಲಾಖೆಗಳಲ್ಲಿ ಭ್ರಷ್ಟಾಚಾರಗಳು ಮಿತಿಮೀರಿದ್ದವು ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿವೆ. ನಾವು ಚುನಾವಣೆ ವೇಳೆ ಈ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದೇವೆ. ನಮ್ಮ ಭರವಸೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣವೂ ಒಂದು ಎಂದು ಹೇಳಿದರು. ಇನ್ನೂ ಲಿಂಗಾಯತ ಸಮುದಾಯದಲ್ಲಿ ನಾನು ಹೆಚ್ಚು ಬಾರಿ ಗೆದ್ದಿದ್ದೇನೆ. ಜಾತಿ ಆಧಾರದ ಮೇಲೆ ಅವಕಾಶ ಕೇಳುವುದಿಲ್ಲ. ಆದರೆ, ಹಿರಿತನವನ್ನು ಆಧರಿಸಿ ತಮಗೂ ಉಪಮುಖ್ಯಮಂತ್ರಿ ಹುದ್ದೆ ಕೊಡಬೇಕು. ಆದರೆ, ಸಂಪುಟದಲ್ಲಿ ಅವಕಾಶ ಕಲ್ಪಿಸುವ ಅಥವಾ ಬಿಡುವ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ. ಬಹುತೇಕ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ…

Read More

ಬೆಂಗಳೂರು :  ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Comgress) ಅಭೂತಪೂರ್ವ ಗೆಲುವಿನೊಂದಿಗೆ​ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ  ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ನಂತರ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಬಗ್ಗೆ ಘೋಷಣೆ ಮಾಡಿದ್ದಾರೆ ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳಿಗೆ ಈಗ ಷರತ್ತುಗಳು ಅನ್ವಯ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ಭರಪೂರ ಗ್ಯಾರಂಟಿಗಳ ನೀಡಿತ್ತು. ಆದರೆ ಈಗ ಪ್ರತಿಯೊಂದಕ್ಕೂ ‘ಷರತ್ತುಗಳು ಅನ್ವಯ’ ಎಂಬಂತೆ ನಡೆದುಕೊಳ್ಳುತ್ತಿದೆ. ಜನಾಧಿಕಾರ ನೀಡಿದ್ದು ಷರತ್ತುಗಳ ಮೇಲೆ ಸರ್ಕಾರ ನಡೆಸುವುದಕ್ಕಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅರಿತುಕೊಳ್ಳಬೇಕು ಎಂದು ಕಿಡಿಕಾರಿದೆ. ಆದರೆ ಈಗ ಪ್ರತಿಯೊಂದಕ್ಕೂ ‘ಷರತ್ತುಗಳು ಅನ್ವಯ’ ಎಂಬಂತೆ ನಡೆದುಕೊಳ್ಳುತ್ತಿದೆ. ಜನಾಧಿಕಾರ ನೀಡಿದ್ದು ಷರತ್ತುಗಳ ಮೇಲೆ ಸರ್ಕಾರ ನಡೆಸುವುದಕ್ಕಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ…

Read More

ಬೆಂಗಳೂರು: ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್​ ಆಗಿ ಆರ್​.ವಿ.ದೇಶಪಾಂಡೆ ನೇಮಕ. ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಹಳಿಯಾಳ ಶಾಸಕ. ಸದನದ ಸಭಾಧ್ಯಕ್ಷರ ಆಯ್ಕೆಯಾಗುವ ವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಲು ಶಾಸಕರಾದ ಆರ್.ವಿ ದೇಶಪಾಂಡೆ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಟು ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದರು

Read More

ಬೆಂಗಳೂರು: ಶನಿವಾರ ಎಂಟು ಸಚಿವರ ಪ್ರಮಾಣವಚನ ಆದಾಗಿನಿಂದ ಕಾಂಗ್ರೆಸ್ ಒಳಗೊಳಗೆ ಹೊಗೆಯಾಡಲು ಶುರುವಾಗಿದೆ. ಒಬ್ಬರ ನಡುವೆ ಒಬ್ಬರು ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ತಮ್ಮಲ್ಲೇ ಕುದಿಯುತ್ತಿದ್ದಾರೆ ಹಾಗಾಗಿ ಈ ಬಗ್ಗೆ ಡಿಕೆಶಿ ಮಾತನಾಡಿ ಅವಕಾಶಗಳು ಎಲ್ಲರಿಗೂ ಸಿಗುತ್ತೆ, ತಾಳ್ಮೆಯಿಂದ ಇರಿ ಎಂದು ಸಚಿವ ಸ್ಥಾನಾಕಾಂಕ್ಷಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಇಂದಿರಾ ಗಾಂಧಿ ಭವನದಲ್ಲಿ ನಡೆಯುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ನಿಮ್ಮ ಗುರಿ ಮುಂದಿನ ಚುನಾವಣೆ, ನೀವು ಸರಿಯಾಗಿ ಕೆಲಸ ಮಾಡಬೇಕು. ನಿಮ್ಮ ಬೂತ್ ಸಿದ್ದಪಡಿಸಿಕೊಳ್ಳಿ ಎಂದರು. ಲೋಸಭಾ ಚುನಾವಣೆಗೂ ಅಸೆಂಬ್ಲಿ ಚುನಾವಣೆಗೂ ವ್ಯತ್ಯಾಸ ಇರುತ್ತೆ ಚುನಾವಣೆಯಲ್ಲಿ ತಿಳಿದುಕೊಳ್ಳಿ ಅಂತ ಕಾರ್ಯಕರ್ತರಿಗೆ ಡಿಕೆಶಿ ಹೇಳಿದ್ದಾರೆ. ಸುಮ್ಮನೆ ಒನ್ ಮ್ಯಾನ್ ಆರ್ಮಿ ರೀತಿ ಬಂದು ಮಾತನಾಡುವದಲ್ಲ, ನೀವು ಲೋಕಲ್ ನಲ್ಲಿ ಕೆಲಸ ಮಾಡಬೇಕು. ಮುಂದೆ ಲೋಕಸಭಾ ಚುನಾವಣೆಯಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಅವಕಾಶಗಳು ಎಲ್ಲರಿಗೂ…

Read More