ಪುದೀನ ಎಂದ ತಕ್ಷಣ ನೆನಪಾಗೋದು ಅದರ ಸುವಾಸನೆ, ರುಚಿ. ವಿಶೇಷ ಬಗೆಯ ಅಡುಗೆ, ಜ್ಯೂಸ್ ಹಾಗೂ ಸಲಾಡ್‍ಗಳಲ್ಲಿ ಪುದೀನ ಬಳಸಿದರೆ ಅದ್ಭುತ ಸುವಾಸನೆ ಹಾಗೂ ರುಚಿ ಇರುತ್ತದೆ. ಬರಿ ರುಚಿಗೆಷ್ಟೇ ಪುದೀನ ಸೊಪ್ಪು ಸೀಮಿತವಾಗಿಲ್ಲ, ಇದು ಸಾಕಷ್ಟು ಪೋಷಕಾಂಶಗಳೊಂದಿಗೆ ಆರೋಗ್ಯಕರ ಗುಣವನ್ನು ಒಳಗೊಂಡಿದೆ. ಇದನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಹಾಗೂ ಮನೆ ಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ತನ್ನ ಅದ್ಭುತ ಶಕ್ತಿಯಿಂದಲೇ ಆಯುರ್ವೇದದಲ್ಲಿ ಪುದೀನ ಸೊಪ್ಪು ವಿಶೇಷ ಸ್ಥಾನವನ್ನು ಗಳಿಸಿದೆ. ದಿವ್ಯ ಔಷಧಿ ಎನಿಸಿಕೊಂಡಿರುವ ಈ ಸೊಪ್ಪು ಮೆಲಿಸ್ಸಾ ಅಫಿಷಿನಾಲಿಸ್ ಕುಟುಂಬಕ್ಕೆ ಸೇರಿದ ದೀರ್ಘಕಾಲಿಕ ಸಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಪುದೀನ, ಲೆಮನ್ ಬಾಮ್, ಬಾಮ್ ಮಿಂಟ್ ಮತ್ತು ಸ್ವೀಟ್ ಬಾಮ್ ಎಂದು ಕರೆಯಲಾಗುತ್ತದೆ. ಪುದೀನ ಸಸ್ಯದ ಎಲೆಗಳು ಮತ್ತು ಕಾಂಡಗಳು ಉತ್ಕರ್ಷಣ ನಿರೋಧಕ ಚಟುವಟಿಕೆಯಿಂದ ಕೂಡಿವೆ. ಇವು ಫೆನೊಲಿಕ್ ಗುಣ, ಸೈಟೋಟಾಕ್ಸಿಕ್ ಗುಣವನ್ನು ಒಳಗೊಂಡಿದೆ. ಮಧ್ಯ ವಯಸ್ಸಿನಲ್ಲಿ ಕಾಡುವ ನಿದ್ರಾ ಹೀನತೆ, ಗಾಯಗಳನ್ನು ಗುಣಪಡಿಸುವ ಔಷಧಗಳಲ್ಲಿ, ನೋವಿನ ಎಣ್ಣೆ ತಯಾರಿಸಲು, ಮಾತ್ರೆಗಳ ತಯಾರಿಕೆ,…
Author: Prajatv Kannada
ಕಳೆದ ಒಂದು ವಾರದಿಂದ ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ಅರೆಸೇನಾ ಪಡೆಗಳ ಯುದ್ಧದಿಂದ ಭಾರಿ ಸಾವು ನೋವುಗಳು ಸಂಭವಿಸಿದೆ. ಈ ಮಧ್ಯೆ ಸುಡಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯವು ಭರದಿಂದ ಸಾಗಿದೆ. ಇದೀಗ ಸುಡಾನ್‌ನ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಮಾನವೀಯ ಆಧಾರದ ಮೇಲೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿವೆ. ಮುಸ್ಲಿಂ ರಜಾದಿನವಾದ ಈದ್ ಅಲ್- ಫಿತರ್ ಇರುವ ಕಾರಣ ಕದನ ವಿರಾಮ ಘೋಷಣೆ ಮಾಡಿದೆ. ಏ.14ರಂದು ರಾಜಧಾನಿ ಖಾರ್ಟೂಮ್ ಬಾಂಬ್ ಸ್ಫೋಟ ಮತ್ತು ಶೆಲ್ ದಾಳಿಯಿಂದ ತತ್ತರಿಸಿತು. ಈ ಬಗ್ಗೆ ಸೇನೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅವರು ಸೇನೆಯ ಫೇಸ್‌ಬುಕ್ ಪುಟದಲ್ಲಿ ಲೈವ್ ಬಂದಿದ್ದು, ಕದನ ವಿರಾಮದ ಬಗ್ಗೆ ಪ್ರಸ್ತಾಸಪಿಸಿಲ್ಲ ಎಂದು ಹೇಳಲಾಗಿದೆ. ಈದ್ ಅಲ್-ಫಿತರ್ ಆಚರಣೆ ಇರುವ ಕಾರಣ ಕದನ ವಿರಾಮವನ್ನು ಘೋಷಣೆ ಮಾಡಲಾಗಿದೆ ಎಂದು…
ಲಂಡನ್: ಭಯೋತ್ಪಾದನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿರುವ ಆರೋಪ ಮೇಲೆ ಭಾರತೀಯ ಪ್ರಜೆಯೊಬ್ಬನನ್ನು ಲಂಡನ್ ಪೊಲೀಸರು ವೆಸ್ಟ್ ಲಂಡನ್‌ನ ಹೇಯ್ಸ್‌ನಲ್ಲಿ ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಮದುರೈ ಸುಂದರ್ ರಾಜ್ (65) ಬಂಧಿತನಾಗಿದ್ದು ಈತ ಬ್ರಿಟನ್ ಮತ್ತು ಬೆಲ್ಜಿಯಂನ ವಿಳಾಸ ಹೊಂದಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ. ಆರೋಪಿಯ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಬಂಧನ ವಾರಂಟ್ ಅನ್ನು ಹೊರಡಿಸಿದೆ. ಬಂಧಿತ ಆರೋಪಿ ಸುಂದರ್ ನಾಗರಾಜನ್, ನಾಗರಾಜನ್ ಸುಂದರ್ ಪೂಂಗುಲಾಮ್ ಕಾಶಿವಿಶ್ವನಾಥನ್ ಮತ್ತು ನಾಗಸುಂದರ್ ಪೂಂಗುಲಾಮ್ ಕೆ.ನಾಗರಾಜನ್ ಹೆಸರಿನಿಂದಲೂ ಗುರುತಿಸಲಾಗುತ್ತಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈತನ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಲಂಡನ್‌ನ ವೆಸ್ಟ್‌ಮಿನಿಸ್ಟರ್ ಕೋರ್ಟ್‌ಗೆ ಮುಂದಿನ ವಾರ ಹಾಜರಾಗಬೇಕಿತ್ತು. ಈತನಿಗೆ ಭಯೋತ್ಪಾದಕರಿಗೆ ಹಣ ನೆರವು ಆರೋಪವುಳ್ಳ ವಜ್ರದ ವ್ಯಾಪಾರಿ, ನಜೀಮ್ ಅಹ್ಮದ್ ಜೊತೆಗೆ ಸಂಪರ್ಕವಿದೆ ಎಂದು ಶಂಕಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.
ಲಕ್ನೋ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ನಿರ್ಮಾಣದಲ್ಲಿ ಕರ್ನಾಟಕದವರ (Karnataka) ಕೊಡುಗೆಯೂ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದೆ. ಅದರಲ್ಲೂ ಬಾಲರಾಮನ ವಿಗ್ರಹವನ್ನು ನಿರ್ಮಿಸಲು ರಾಜ್ಯದ ಕಾರ್ಕಳ (Karkala) ಹಾಗೂ ಹೆಚ್.ಡಿ. ಕೋಟೆಯಿಂದ (HD Kote) ತರಿಸಲಾದ ಕಪ್ಪು ಕಲ್ಲನ್ನು ಬಳಸಲು ನಿರ್ಧರಿಸುವುದು ವಿಶೇಷವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಸೋವಾರದಿಂದ 2 ದಿನಗಳ ಸಭೆ ಸೇರಿದ್ದು, ಅಲ್ಲಿ ವಿಗ್ರಹಕ್ಕೆ ಅಗತ್ಯವಾದ ಶಿಲೆ ಬಳಕೆ, ವಿಗ್ರಹದ ಸ್ವರೂಪ, ಶಿಲ್ಪಿ ಆಯ್ಕೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ನೂತನ ರಾಮನ ವಿಗ್ರಹ ನಿರ್ಮಾಣದ ಹೊಣೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ. ಕಪ್ಪು ಶಿಲೆ: ಈಗಾಗಲೇ ರಾಮನ ವಿಗ್ರಹ ನಿರ್ಮಾಣಕ್ಕೆ ಕರ್ನಾಟಕದ ಕಾರ್ಕಳ, ಮೈಸೂರಿನ ಹೆಚ್.ಡಿ ಕೋಟೆ ಸೇರಿದಂತೆ ದೇಶ – ವಿದೇಶಗಳ ವಿವಿಧ ಭಾಗಗಳಿಂದ ಶಿಲೆಗಳನ್ನು ಆರಿಸಲಾಗಿತ್ತು. ಈ ಪೈಕಿ ಕಾರ್ಕಳದ ಕರಿಕಲ್ಲು ಅಂತಾರಾಷ್ಟ್ರೀಯ ಮಟ್ಟದಲ್ಲೇ…
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ (Family) ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ (Marriage) ಯಾಗುತ್ತಾರೆ. ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ. ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿ (Girl)ಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ (Cave)ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಸಹೋದರರಲ್ಲಿ (Brothers) ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ.…
ನವದೆಹಲಿ: ಇಲ್ಲಿ ಸಾಲ ಕೊಡಲಾಗುವುದಿಲ್ಲ. ಉದ್ರಿ ವ್ಯವಹಾರ ಇಲ್ಲಿ ಮಾಡಲಾಗುವುದಿಲ್ಲ. ಇನ್ನೂ ಕೆಲವು ಕಡೆ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ, ದೇವರಿಗೆ ಸಾಲ ಕೊಡವಷ್ಟು ದೊಡ್ಡವನಲ್ಲ ಎಂದು ಬೋರ್ಡ್ ಹಾಕಿಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದ ವ್ಯಾಪಾರಿಯೊಬ್ಬ ರಾಹುಲ್ ಪ್ರಧಾನ ಮಂತ್ರಿಯಾಗುವವರೆಗೆ ಸಾಲ ಕೇಳಬೇಡಿ ಎಂಬ ಬೋರ್ಡ್ ಹಾಕಿಕೊಂಡಿದ್ದಾರೆ. ಚಿಲ್ಲರೆ ವ್ಯಾಪಾರಿ ಅಂಗಡಿ, ಹೊಟೇಲ್‌ಗಳಲ್ಲಿ, ಸಾಲ ಕೇಳುವ ಗ್ರಾಹಕರಿಗೆಂದೇ, ನಾನಾ ರೀತಿಯ ಬೋರ್ಡ್ ಗಳು, ಬರೆದು ಸಾಲ ಕೊಡುವುದನ್ನ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿರುವ ಪಾನ್ ಶಾಪ್‌ನಲ್ಲಿ ಬರೆದಿರುವ ಸಾಲುಗಳನ್ನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈಗ ಅದೇ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆಗೆ ತಾನೂ ಯಾರಿಗೂ ಸಾಲವನ್ನು ಕೊಡುವುದಿಲ್ಲ ಎಂದು ಪಾನ್ ಶಾಪ್ ಅಂಗಡಿ ಮಾಲೀಕ ಬೋರ್ಡ್ ಹಾಕಿಕೊಂಡಿದ್ದಾನೆ. ಇದೇ ಸಾಲುಗಳು ಈಗ ಎಲ್ಲರ ಗಮನ ಸೆಳೆದಿದೆ. ಇದೇ ಸಾಲುಗಳ ಫೋಟೋ ತೆಗೆದು ವ್ಯಕ್ತಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್…
ಒಡಿಶಾ: ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಲೇ ಇದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಲ್ಲಿ ಉತ್ತಮ ಬೆಳವಣಿಗೆಗಳು ಆಗುತ್ತನೇ ಇರುತ್ತವೆ. ಅದರ ಜೊತೆಯಲ್ಲೇ ಮೂಢನಂಬಿಕೆಗಳೂ ಇಲ್ಲಿ ಕಡಿಮೆಯೇನಿಲ್ಲ. ಆಚರಣೆಯ ಹೆಸರಲ್ಲಿ ಅರ್ಥಹೀನ ಪದ್ಧತಿಗಳನ್ನು ಅನುಸರಿಸಲಾಗುತ್ತೆ. ಹಳೆಯ ಸಂಪ್ರದಾಯಗಳನ್ನು ಮುಂದುವರಿಸಲಾಗುತ್ತೆ. ಕೆಲವೊಂದು ಮೂರ್ಖತನದ ಪರಮಾವಧಿ ಅಂತನಿಸಿದ್ರೂ ಜನರು ಇಂಥಾ ಆಚರಣೆಗಳು ಮಾತ್ರ ಬಿಟ್ಟು ಬಿಡೋದಿಲ್ಲ. ಅರ್ಥಹೀನ ಸಂಪ್ರದಾಯಗಳ ಜೊತೆ ಬದುಕುತ್ತಲೇ ಇರುತ್ತಾರೆ. ಹಾಗೆಯೇ ಒಡಿಶಾದಲ್ಲೊಂದು ವಿಚಿತ್ರ ಆಚರಣೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಒಡಿಶಾದ ಬಾಲಸೋರ್ ಎಂಬಲ್ಲಿ ಮಕ್ಕಳಿಗೆ ನಾಯಿಗಳ ಜೊತೆ ಮದುವೆ (Marriage) ಮಾಡಲಾಗ್ತಿದೆ. ಇದು ದುಷ್ಟಶಕ್ತಿ (Evil spirit)ಗಳನ್ನು ದೂರ ಮಾಡುತ್ತದೆ ಎಂಬ ಸ್ಥಳೀಯ ಮೂಢನಂಬಿಕೆಗೆ ಅನುಗುಣವಾಗಿ ಈ ಮದುವೆಯನ್ನು ನಡೆಸಿಕೊಂಡು ಬರಲಾಗ್ತಿದೆ. ಬಾಲಸೋರ್ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು ‘ದುಷ್ಟಶಕ್ತಿಗಳನ್ನು ದೂರವಿಡುವ’ ಸಲುವಾಗಿ ಬೀದಿನಾಯಿ (Street dog)ಗಳೊಂದಿಗೆ ಮದುವೆ ಮಾಡಲಾಗಿದೆ. 11 ವರ್ಷದ ಬಾಲಕ ತಪನ್ ಸಿಂಗ್ ಹೆಣ್ಣು ನಾಯಿಯನ್ನು ಮದುವೆಯಾಗಿದ್ದರೆ, ಏಳು…
ದರೋಡೆಕೋರ ಕುದುರೆ ಏರಿ ಬಂದು ಮಹಿಳೆಯ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (trending news) ಆಗುತ್ತಿದ್ದು, ಇದನ್ನು ನೋಡಿ ಜನರು ಕೂಡ ಅಚ್ಚರಿಗೊಂಡಿದ್ದಾರೆ. ಇನ್ನು ಬಹುತೇಕ ಕಳ್ಳರು, ದರೋಡೆಕೋರರು ಬೈಕ್‌ನಲ್ಲಿ ಬಂದು ದಾರಿಯಲ್ಲಿ ಜನರನ್ನು ಲೂಟಿ ಮಾಡಿ ಓಡಿಹೋಗುತ್ತಾರೆ. ಆದರೆ ಈ ಯುಗದಲ್ಲೂ ಯಾರಾದರೂ ಕುದುರೆ ಸವಾರಿ ಮಾಡಿಕೊಂಡು ಬಂದು ದರೋಡೆ ಮಾಡುವುದನ್ನು ನೀವು ನೋಡಿದ್ದೀರಾ? ಅಂದಹಾಗೆ ಬಹಳ ಹಿಂದೆ ದೊಡ್ಡ ದೊಡ್ಡ ಗ್ಯಾಂಗ್ಸ್ಟರ್ಗಳು ಕುದುರೆಗಳಲ್ಲಿ (horse) ಹಿಂಡುಹಿಂಡಾಗಿ ಬಂದು ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಸಿನಿಮಾಗಳಲ್ಲಿಯೂ ನೀವು ನೋಡಿರುತ್ತೀರಿ. ಆದರೆ ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಕಳ್ಳನೊಬ್ಬ ಕುದುರೆ ಸವಾರಿ ಮಾಡಿಕೊಂಡು ಬಂದು ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಲೂಟಿ ಮಾಡಿ ಆರಾಮವಾಗಿ ಹಿಂದಿರುಗುತ್ತಾನೆ. ರಾತ್ರಿಯ ಸಮಯ ಮತ್ತು ಮಹಿಳೆಯೊಬ್ಬರು ನಿರ್ಜನ ಪ್ರದೇಶದಿಂದ ನಡೆದುಹೋಗುತ್ತಿರುತ್ತಾರೆ. ಇದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಅಷ್ಟರಲ್ಲಿ…
ಮಂಡ್ಯ :- ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚುನಾವಣಾ ವೀಕ್ಷಕ ಅಮಿತ್ ಕುಮಾರ್ (ಐಎಎಸ್) ತೃಪ್ತಿ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಛೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಚುನಾವಣಾಧಿಕಾರಿ ಆರ್.ನಾಗರಾಜ್ ಅವರಿಂದ ಚುನಾವಣಾ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಪಟ್ಟಣದ ಮರಿಯಪ್ಪ ಕಾನ್ವೆಂಟ್ ಹಾಗೂ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಚುನಾವಣಾಧಿಕಾರಿ ಆರ್.ನಾಗರಾಜ್ ಹಾಗೂ ಅಧಿಕಾರಿಗಳ ಜೊತೆಗೂಡಿ ಮತಗಟ್ಟೆಗಳ ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಚುನಾವಣಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸುವ ಸಲುವಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಚುನಾವಣಾ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ಅನುಸಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ತಿಳಿಸಿದ ಅವರು, ರಿಟರ್ನಿಂಗ್ ಅಧಿಕಾರಿಗಳು ಇದುವರೆಗೆ ನಿರ್ವಹಿಸಿದ ಕೆಲಸಗಳ…
ಮಡಿಕೇರಿ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಇದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ದೊಡ್ಡಬಂಡಾರ ಗ್ರಾಮಕ್ಕೆ ಜಿಲ್ಲಾಡಳಿತ (District Administration) ಇದೀಗ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಬೆಸ್ಸೂರು (Bessur) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಂಡಾರ (Doddabandara) ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದನ್ನು ಬಗೆಹರಿಸುವಂತೆ ಇತ್ತೀಚೆಗೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯೊಂದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೆಟ್ಟು ಹೋಗಿದ್ದ ಬೋರ್‌ವೆಲ್ (Borwell) ಪಂಪ್‍ಸೆಟ್ ಸರಿಪಡಿಸಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗ್ರಾಮಸ್ಥರ ಮತದಾನ ಬಹಿಷ್ಕಾರದ ಎಚ್ಚರಿಕೆಯಿಂದ ಹಲವಾರು ದಿನಗಳಿಂದ ಗ್ರಾಮದಲ್ಲಿ ತಲೆದೂರಿದ್ದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಇದೀಗ ಗ್ರಾಮದ ಜನರು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿದ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.