Author: Prajatv Kannada

ಬೆಂಗಳೂರು : ಇಂದು ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Chief Minister Siddaramaiah) ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ (Deputy Chief Minister)  ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಲಿದ್ದಾರೆ.  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಟ ಮತ್ತು ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು ಪದಗ್ರಹಣ ಸಮಾರಂಭದಲ್ಲಿ ಸಿನಿಮಾ ನಟ…

Read More

ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಹೆಸರು ತೆಗೆದು ಸಿಎಂ ಸಿದ್ದರಾಮಯ್ಯ ಎಂದು ಹೆಸರು ಬದಲಾಯಿಸಿ ನೇಮ್ ಪ್ಲೇಟ್ ಚೇಂಜ್ ಮಾಡಲಾಗಿದೆ. ವಿಧಾನ ಸೌಧದ ಮೂರನೇ ಮಹಡಿಯಲ್ಲಿ ರೂಂ ನಂಬರ್ 323ರ ಸಿಎಂ ಕಚೇರಿ ಬಳಿ ನೇಮ್ ಪ್ಲೇಟ್ ಚೇಂಜ್ ಮಾಡಲಾಗಿದೆ.

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಿಜೆಪಿ ಮೇ 21ರಂದ ಅವಲೋಕನಾ ಸಭೆ (Review Meeting) ಕರೆದಿದೆ. ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರು ನಗರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಈ ಸಭೆ ಕರೆಯಲಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರು, ವಿಭಾಗ ಉಸ್ತುವಾರಿಗಳು, ಸಹ ಉಸ್ತುವಾರಿಗಳು, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಹ ಸಂಘಟನಾ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಚುನಾವಣಾ ಸಮೀಕ್ಷೆಗಳ ವರದಿಗಳನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದ್ದು, ಬಿಜೆಪಿ ನಿರೀಕ್ಷೆ ಮಾಡದಂತಹ ಸೋಲು ಕಂಡಿದೆ. 135 + ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಮೇ 20ರಂದು ಸಿಎಂ ಡಿಸಿಎಂ ಮತ್ತು ಕೆಲ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇತ್ತ 65 ಸ್ಥಾನಗಳನ್ನು ಗೆದ್ದ ಬಿಜೆಪಿ ಆತ್ಮಾವಲಕೋನ ನಡೆಸಲು ಮುಂದಾಗಿದೆ. ಈಗಾಗಲೇ ಸೋಲಿನ ಕೆಲವು ನಿಖರ ಕಾರಣಗಳನ್ನು ಬಿಜೆಪಿ ಹುಡುಕಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಾತಿಯಲ್ಲಿನ ಬದಲಾವಣೆ ಸೋಲಿಗೆ ಪ್ರಧಾನ ಕಾರಣ ಎಂಬ…

Read More

ಬೆಂಗಳೂರು: ಸಿದ್ದರಾಮಯ್ಯ ನಮ್ಮನ್ನು ಬಿಜೆಪಿಗೆ ಕಳುಹಿಸಿರಲಿಲ್ಲ. ಬಾಂಬೆ ಟೀಂ ಕ್ಯಾಪ್ಟನ್ ಆಗಿದ್ದೆ, ಏನಾಗಿದೆ ಅನ್ನೋದು ಗೊತ್ತು. ಈಗ ಯಾಕೆ ಡಾ ಕೆ.ಸುಧಾಕರ್ (K Sudhakar)​​ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು H​. ವಿಶ್ವನಾಥ್​ ಹೇಳಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ ಎಂಬ ಮಾಜಿ ಸಚಿವ ಸುಧಾಕರ್​ ಆರೋಪಕ್ಕೆ ಅವರು​​ ತಿರುಗೇಟು ನೀಡಿದರು. ನಾನು ಬಿಜೆಪಿ, ಕಾಂಗ್ರೆಸ್ ಅಂತಲ್ಲ ಜನರ ಮಧ್ಯೆ ಇರೋನು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸುತ್ತಾರೆ. ನಾನು ಕೂಡ ಈ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ​ಬಿಜೆಪಿ ಮಾಡಿದ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದದ್ದು. ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೆ ಗೌರವ ಇರುತ್ತಿತ್ತು. ಈಗ ಏನೋ ಸತ್ಯ ಹೇಳುತ್ತಿದ್ದೇನೆ ಅಂತಾ ಪೋಸು ಕೊಡ್ತಿದ್ದಾರೆ. ಸೋತು ಸುಣ್ಣ ಆದ ಮೇಲೆ ಈ ರೀತಿ ಹೇಳುತ್ತಿರುವುದು ನಗೆ ಪಾಟಲು. ಮಾಜಿ ಸಚಿವ ಸುಧಾಕರ್​ ಜೊತೆ ಬಿಜೆಪಿ ಸರ್ವನಾಶದತ್ತ ಬಂದಿದೆ. ಡಾ.ಕೆ.ಸುಧಾಕರ್​​ರನ್ನು ದುಡ್ಡು ಇಲ್ಲದ ಯುವಕ ಸೋಲಿಸಿದ್ದಾನೆ ಎಂದು ಕಿಡಿಕಾರಿದ್ದಾರೆ.…

Read More

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೆಲವೇ ಕ್ಷಣಗಳಲ್ಲಿ ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಮೊದಲ ಬಾರಿಗೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Read More

ಗೆಲುವಿಗೆ ನೂರಾರು ಅಪ್ಪಂದಿರು.. ಸೋಲು ಅನಾಥ ಎಂಬ ಮಾತಿದೆ. ಈ ಮಾತನ್ನು ಜೆಡಿಎಸ್ ಪಕ್ಷಕ್ಕೆ ಅನ್ವಯಿಸಬಹುದೇ? ಸದ್ಯದ ರಾಜಕೀಯ ಸ್ಥಿತಿಗತಿ ಹಾಗೂ ‘ತೆನೆ’ ಪಕ್ಷದ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಾಗ ಹಲವು ಆಯಾಮಗಳಲ್ಲಿ ಪ್ರಶ್ನೆಗಳು ಎದುರಾಗುತ್ತವೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ವರ್ಷ ಮುನ್ನವೇ ಹಲವು ಯಾತ್ರೆಗಳನ್ನು ಸಂಘಟಿಸಿ ಹುರುಪಿನಿಂದ ಮುನ್ನುಗ್ಗಿದ್ದ ಜೆಡಿಎಸ್‌ಗೆ ಚುನಾವಣಾ ಫಲಿತಾಂಶ ಮರ್ಮಾಘಾತವನ್ನೇ ನೀಡಿದೆ. ಹಳೇ ಮೈಸೂರಿನ ಜೆಡಿಎಸ್ ಕೋಟೆ ‘ಕೈ’ ವಶ, ಮುಸ್ಲಿಂ ವೋಟುಗಳನ್ನು ಕಳೆದುಕೊಂಡಿದ್ದು, ನಿಖಿಲ್, ಸಾರಾ ಮಹೇಶ್‌ರಂಥಾ ನಾಯಕರ ಸೋಲು.. ಹೀಗೆ ಹಲವು ಕಾರಣಗಳು ಪಕ್ಷದ ನೈತಿಕ ಸ್ಥೈರ್ಯ ಉಡುಗಿಸುವಂತೆ ಮಾಡಿಬಿಟ್ಟಿವೆ. ಆದ್ರೆ, ಕಾರ್ಮೋಡದಂಚಿನ ಬೆಳ್ಳಿ ರೇಖೆ ಎಂಬಂತೆ ಜೆಡಿಎಸ್‌ ಪಾಲಿಗೆ ಹಲವು ಆಶಾಕಿರಣಗಳೂ ಇವೆ. ಸ್ವರೂಪ್, ಶರಣ ಗೌಡ, ಹರೀಶ್ ಗೌಡರಂಥಾ ಯುವ ಉತ್ಸಾಹಿಗಳ ಗೆಲುವು ಪಕ್ಷಕ್ಕೆ ಹೊಸ ಭರವಸೆ ಮೂಡಿಸಿದೆ. ಇವೆಲ್ಲದರ ನಡುವೆ, ಮುಂದಿನ 6 ತಿಂಗಳಲ್ಲಿ ರಾಜಕೀಯ ಚಿತ್ರಣ ಬದಲಾಗಬಹುದು ಅನ್ನೋ ಎಚ್ಡಿಕೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ!…

Read More

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಯಾರಾಗ್ತಾರೆ ಅಡ್ವೊಕೇಟ್ ಜನರಲ್ ಅನ್ನೋ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಪ್ರಮುಖವಾಗಿ ನಾಲ್ವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ಸುಪ್ರೀಂ ಕೋರ್ಟ್ (Supreme Court) ವಕೀಲ ಸಂಕೇತ್ ಏಣಗಿ, ಮಧುಸೂಧನ್ ನಾಯಕ್ ಹಾಗೂ ಕಾಂತರಾಜು ಹೆಸರುಗಳು ಚಾಲ್ತಿಯಲ್ಲಿವೆ. ಕಾಂಗ್ರೆಸ್ (Congress) ಪಕ್ಷವನ್ನ ನ್ಯಾಯಾಲಯಗಳಲ್ಲಿ ಬಲವಾಗಿ ಸಮರ್ಥಿಸಿಕೊಂಡು ಹಲವಾರು ಗೆಲುವುಗಳನ್ನ ತಂದುಕೊಟ್ಟ ಕೀರ್ತಿ ಸಂಕೇತ್ ಏಣಗಿಯವರಿಗೆ ಸಲ್ಲುತ್ತೆ. ಸಂಕೇತ್ ಏಣಗಿಯವರು ಪ್ರಬಲ ಲಿಂಗಾಯತ ಜಾತಿಗೆ ಸೇರಿದವರಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ (Lingayat) ಅಸ್ತ್ರ ಬಳಸಿ ಇವರ ಕಾನೂನು ಹೋರಾಟವನ್ನ ತಪ್ಪಿಸಿ, ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದರಾದರೂ, ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ತೊರೆಯದೆ ಕೋರ್ಟ್ ಗಳಲ್ಲಿ ಸಮರ್ಥ ವಾದ ಮಂಡಿಸಿ, ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ರು. ಲಿಂಗಾಯತ ಕಮ್ಯುನಿಟಿಗೆ ಸಿಎಂ, ಡಿಸಿಎಂ ಪೋಸ್ಟ್ ಸಿಗದ ಹಿನ್ನೆಲೆಯಲ್ಲಿ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ವೋಟ್ ಹಾಕಿಸಿಕೊಳ್ಳಲು ಲಿಂಗಾಯತ ಕಮ್ಯುನಿಟಿ ಬೇಕು, ಹುದ್ದೆಗೆ ಮಾತ್ರ ಯಾಕಿಲ್ಲ ಅಂತಾ…

Read More

ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ (Deputy Chief Minister), 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಲ್ಲಿ ತಡರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಿನ್ನೆ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರೊಂದಿಗೆ ಸುಮಾರು 5 ಗಂಟೆಗಳ ಚರ್ಚೆ ನಡೆಸಿ ಸಿಎಂ ಡಿಸಿಎಂ ಸೇರಿ 10 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರ ಪಟ್ಟಿ ಇಲ್ಲಿದೆ ಡಾ.ಜಿ.ಪರಮೇಶ್ವರ್ ಕೆ.ಹೆಚ್. ಮುನಿಯಪ್ಪ ಕೆ.ಜೆ. ಜಾರ್ಜ್ ಎಂ.ಬಿ.ಪಾಟೀಲ್ ಸತೀಶ್ ಜಾರಕಿಹೊಳಿ ಪ್ರಿಯಾಂಕ್ ಖರ್ಗೆ ರಾಮಲಿಂಗ ರೆಡ್ಡಿ ಜಮೀರ್ ಅಹ್ಮದ್ ಖಾನ್

Read More

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರನ್ನು ಸಿಎಂ ಆಗಿ, ಡಿ.ಕೆ.ಶಿವಕುಮಾರ್‌ (DK Shivakumar) ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್​ ಘೋಷಣೆ ಮಾಡಲಾಗಿದೆ. ಇಂದು (ಮೇ 20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ಪ್ರತಿಜ್ಞಾವಿಧಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರದ ಘಟಾನುಘಟಿ ನಾಯಕರು ಭಾಗಿಯಾಗಲಿದ್ದು, ಬರುವ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್​ರಿಂದ ಭದ್ರತೆ ಒದಗಿಸಲಾಗಿದೆ. ವಿವಿಧ 8 ರಾಜ್ಯದ ಮುಖ್ಯಮಂತ್ರಿಗಳಿಗೆ Z+ ಮತ್ತು Z ಕ್ಯಾಟಗರಿ ಭದ್ರತೆ ನೀಡಲಾಗುತ್ತಿದೆ. ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಕೂಡ ಒದಗಿಸಲಾಗಿದೆ. ಹೆಚ್ಚುವರಿ ಪೋಲಿಸರ ನಿಯೋಜನೆ ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಸೇರಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಒದಲಾಗಿಸಲಾಗಿದ್ದು, ಎಂಟು ಮಂದಿ ಡಿಸಿಪಿ, 10 ಮಂದಿ ಎಸಿಪಿ, 28 ಇನ್ಸ್​​ಪೆಕ್ಟರ್​ಗಳು, 1,500ಕ್ಕೂ ಹೆಚ್ಚು ಪೊಲೀಸರು ಮತ್ತು ಸಂಚಾರ ನಿರ್ವಹಣೆಗಾಗಿ 500 ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ವಿವಿಐಪಿ ಎಂಟ್ರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಿರುವ ಪೊಲೀಸರು, 2 ಗೇಟ್​​​ಗಳಲ್ಲಿ ವಿವಿಐಪಿ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ತಯಾರಿ ನಡೆದಿದ್ದು, ಸುಮಾರು…

Read More

ಬೆಂಗಳೂರು: ವೃತ್ತಿಪರ ಕೋರ್ಸ್​ಗಳಿಗೆ ಇಂದು ಬೆಳಗ್ಗೆ 9 ಗಂಟೆಯೊಳಗೆ ತೆರಳುವಂತೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಹೌದು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸರ್ವಾನುಮತದಿಂದ ಕಾಂಗ್ರೆಸ್​ ಗೆದ್ದು ಬಂದಿದ್ದು, ಇಂದು (ಮೇ.20) ಸಿದ್ದರಾಮಯ್ಯ ನವರು ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನುಇದೇ ಸಂದರ್ಭದಲ್ಲಿ ವೃತ್ತಿಪರ ಕೋರ್ಸ್​ಗಳಿಗೆ ಇಂದು ಪ್ರವೇಶ ಪರೀಕ್ಷೆಯಿದ್ದು,  ಈ ಹಿನ್ನಲೆ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯೊಳಗೆ ತೆರಳುವಂತೆ ದೆಹಲಿಯಲ್ಲಿ ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್​ ಮನವಿ ಮಾಡಿದ್ದಾರೆ. ಜೊತೆಗೆ ಕಂಠೀರವ ಕ್ರೀಡಾಂಗಣ ಬಳಿಯ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಸೂಚನೆ ನೀಡಿದ್ದು,  ಕಾಲೇಜು ಆಡಳಿತ ಮಂಡಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

Read More