ಬೆಂಗಳೂರು: ರಾಜ್ಯದಲ್ಲಿ ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಕ್ಯಾಬಿನೆಟ್ (Cabinet) ನಲ್ಲೇ ಬಂಪರ್ ಗಿಫ್ಟ್ ಘೋಷಣೆಯಾಗುವ ಸಾಧ್ಯತೆಗಳಿವೆ. ಹೌದು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಜನರ ಮನಗೆಲ್ಲಲು ಕಾಂಗ್ರೆಸ್ (Congress) ಲೆಕ್ಕಾಚಾರ ಹಾಕಿದೆ. 5 ಗ್ಯಾರಂಟಿಗಳಿಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸುವ ಹಾಗೂ 5 ಭರವಸೆಗಳ ಜಾರಿಗೆ ಮೊದಲ ಕ್ಯಾಬಿನೆಟ್ ಸಾಕ್ಷಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‍ನ 5 ಪ್ರಮುಖ ಭರವಸೆಗಳೇನು..? 1. ಗೃಹಿಣಿಯರಿಗೆ ತಿಂಗಳಿಗೆ 2,000 ರೂ. 2. 200 ಯುನಿಟ್ ಉಚಿತ ವಿದ್ಯುತ್ 3. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ 4. ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ 5. ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ಹಾಗೂ 1,500 ನಿರುದ್ಯೋಗಿ ಭತ್ಯೆ ಇಂದು ಸಿಎಂ ಸಿದ್ದರಾಮಯ್ಯ (Siddramaiah) , ಡಿಸಿಎಂ ಡಿಕೆಶಿ (DK Shivakumar) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಗದ್ದುಗೆ ಏರಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಪ್ರಮಾಣ…
Author: Prajatv Kannada
ಹಾಲಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟ್ ಗಳನ್ನು ಸೆಪ್ಟಂಬರ್ 30 ರ ಒಳಗೆ ಬ್ಯಾಂಕಿನಲ್ಲಿ ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಗಳಲ್ಲಿ 20 ಸಾವಿರ ರೂಪಾಯಿವರೆಗೆ ಡಿಪಾಸಿಟ್ ಮಾಡಬಹುದು. ಮೇ 23 ರ ನಂತರ ಬ್ಯಾಂಕಿನಲ್ಲಿ ನೋಟ್ ಬದಲಾಯಿಸಿಕೊಳ್ಳಲು ಅವಕಾಶ ಇದೆ.
ಬೆಂಗಳೂರು : ಈ ಐದು ಗ್ಯಾರಂಟಿಗಳು ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಗ್ಯಾರಂಟಿ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ನುಡಿದಂತೆ ನಡೆಯುತ್ತೇವೆ. ಇದು ಮಾತ್ರ ಸತ್ಯ ಎಂದು ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿಗಳ ಚರ್ಚೆ ಜೋರಿದೆ. ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಬಹುಮತ ಪಡೆಯುತ್ತಿದ್ದಂತೆಯೇ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟಿಗೆ ಬಿದ್ದಿದ್ದಾರೆ. ಜತೆಗೆ ಯಾವಾಗ ಉಚಿತ ಬಸ್ ಸೌಲಭ್ಯ, ಮನೆಯೊಡತಿಗೆ ಯಾವಾಗ 2 ಸಾವಿರ ರೂಪಾಯಿ ಕೊಡ್ತೀರಾ ಎಂದು ಮಹಿಳೆಯರು ಕೇಳುತ್ತಿದ್ದಾರೆ. ಜತೆಗೆ ಬಿಜೆಪಿ ನಾಯಕರು ಕೂಡಾ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನುಡಿದಂತೆ ನಡೆಯುತ್ತೇವೆ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಈಗ ನಾನು ಏನು ಮಾತನಾಡುವುದಿಲ್ಲ. ನಾವು ಏನು ತೀರ್ಮಾನ ಮಾಡುತ್ತೇವೆಯೋ ಅದನ್ನ ತಿಳಿಸುತ್ತೇವೆ. ನುಡಿದಂತೆ ನಡೆಯುತ್ತೇವೆ. ಇದು ಮಾತ್ರ ಸತ್ಯ ಎಂದರು ಇವು ಡಿಕೆ ಶಿವಕುಮಾರ್…
ಬೆಳಗಾವಿ: ನಗರದಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಅವಘಡಗಳು ಸಂಭವಿಸುತ್ತಿದ್ದು. ಇದೀಗ ನಗರದಲ್ಲಿ ಟಾಟಾ ಓಮಿನಿ ಹಾಗೂ ಟಾಟಾ ಏಸ್ ಸೇರಿ ಒಂದೇ ಬಾರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಎರಡನೇ ರೈಲ್ವೆ ಗೇಟ್ ಸಮೀಪದಲ್ಲಿರುವ ಹೆರವಾಡ್ಕರ್ ಶಾಲೆಯ ಬಳಿ ನಡೆದಿದೆ. ಹೌದು ನೋಡು ನೋಡುತ್ತಿದ್ದಂತೆ ಮೊದಲು ಆಕಸ್ಮಿಕವಾಗಿ ಒಂದು ವಾಹನಕ್ಕೆ ಬೆಂಕಿ ತಗುಲಿದ್ದು, ಬಳಿಕ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬೆಂಕಿ ವ್ಯಾಪಿಸಿದ ಪರಿಣಾಮ ನಾಲ್ಕು ವಾಹನಗಳು ಒಂದೇ ಬಾರಿಗೆ ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಹಿಂದೂ ಕಾರ್ಯಕರ್ತರಿಗೆ ಹೊಡೆಸಿದ್ದಕ್ಕೆ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಭಟ್ಟರು ನೇರ ಕಾರಣ. ಲೋಕಸಭೆ ಸದಸ್ಯನಾಗಿ ಪೊಲೀಸರಿಗೆ ಹೇಳಿ ಕಾರ್ಯಕರ್ತರ ಹೊಡೆಸಿದ್ದಾರಂದ್ರೆ ಏನರ್ಥ ಇದು ನಿಜಕ್ಕೂ ಅವರಿಗೆ ಧಕ್ಕೆ ತರುವಂತಹ ವಿಚಾರ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಜೈನ್ ಅವರು ಈ ಘಟನೆಗೆ ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣವಾಗಿದ್ದು. ಸಿದ್ದರಾಮಯ್ಯ ನಾಳೆ ಅಧಿಕಾರ ಸ್ವೀಕಾರ ಮಾಡಬೇಕು. ಆದರೆ ಕಲ್ಲಡ್ಕ ಭಟ್ ಈ ಘಟನೆಗೆ ಕಾಂಗ್ರೆಸ್ ಕಾರಣ ಅಂತಾ ಹೇಳುತ್ತಾರೆ. ಕಟೀಲ್ ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸ್ತಾರೆ ಅಂದ್ರೆ ಅವರಿಗೆ ಮಾನವೀಯತೆ ಇದ್ಯಾ ಎಂದು ಜೈನ್ ಪ್ರಶ್ನಿಸಿದರು.
ಬೀದರ್: ಮುಂದಿನ ಸಿಎಂ ಯಾರಾಗ್ತಾರೆ ಎನ್ನುತ್ತಿದ್ದ ಅನೇಕರಿಗೆ ಸಿದ್ದುನೆ ಮುಂದಿನ ಮುಖ್ಯಮಂತ್ರಿ ಎನ್ನುವುದು ಬಹುತೇಕರಿಗೆ ಖಚಿತವಾಗಿತ್ತು ಆದ್ರೆ ಈಗ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೆ ಸಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು. ಕಾಂಗ್ರೆಸ್ (Congress) ಹೈಕಮಾಂಡ್ ಸಿದ್ದುವನ್ನು ಸಿಎಂ ಗದ್ದುಗೆಗೆ ಏರಿಸಿದ್ದು ಈ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕೋಲು ಹಿಡಿದು ಗಡಿ ಜಿಲ್ಲೆ ಬೀದರ್‌ನಲ್ಲಿ 75 ವರ್ಷದ ಅಜ್ಜ (Old Man) ಸಖತ್ ಸ್ಟೆಪ್ ಹಾಕುವ ಮೂಲಕ ಭರ್ಜರಿ ಡ್ಯಾನ್ಸ್ (Dance) ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಜಿದ್ದಾಜಿದ್ದಿ ನಡೆಯುತ್ತಿದ್ದು. ಕೊನೆಗೂ ಸಿದ್ದುವೆ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರಿಂದ ಫುಲ್ ಖುಷಿಯಾದ ಬೀದರ್ ತಾಲೂಕಿನ ಮಲ್ಕಾಪೂರ್ ಗ್ರಾಮದ ಅಪ್ಪಟ ಅಭಿಮಾನಿ ಅಜ್ಜ ಡ್ಯಾನ್ಸ್ ಮಾಡಿ ಸಿದ್ದು ಮೇಲಿನ ಅಭಿಮಾನವನ್ನು ತೊರಿದ್ದಾರೆ. ಸಿದ್ದರಾಮಯ್ಯ ಸಿಎಂ ಘೋಷಣೆ ಹಿನ್ನೆಲೆ ಕುರುಬ ಸಮುದಾಯದಿಂದ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಬಂದ ಅಜ್ಜ ಏಕಾಏಕಿ ಸಖತ್ ಸ್ಟೆಪ್ ಹಾಕಿದ್ದಾರೆ.…
ವಿಜಯಪುರ: ಯುವಕನೋರ್ವ ‘ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಮ್ ರಾಷ್ಟ್ರ’ ಎಂದು ಸಾಮಾಜಿಕ ಮಾಧ್ಯಮವಾದ ಇನ್ಸಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. 2023 ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕವೇ ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ಈತ ತನ್ನ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕಿದ್ದ. ಸೊಷಿಯಲ್ ಮೀಡಿಯಾದಲ್ಲಿ ಇದನ್ನು ವೀಕ್ಷಿಸಿದ ಸ್ಥಳಿಯರು ಹಾಗೂ ಈತನ ಖಾತೆಯ ಫಾಲೋವರ್ಸ್ ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡ ತಾಳಿಕೋಟೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಸದ್ಯ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.
ನಾಗಮಂಗಲ: ಈ ದಿನ ಅಮವಾಸ್ಯೆ ಹಿನ್ನಲೆ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮೊರೆಹೋದ ನೂತನ ಶಾಸಕರು . ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಅಮಾವಾಸ್ಯೆ ವಿಶೇಷ ಪೂಜೆಯಲ್ಲಿ ಭಾಗಿಯಾದ ಕಾಂಗ್ರೇಸ್, ಜೆಡಿಎಸ್ ಶಾಸಕರು. ಸಚಿವ ಸ್ಥಾನಕ್ಕಾಗಿ ಅಮಾವಾಸ್ಯೆ ಪೂಜೆಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಶಿವಲಿಂಗೇಗೌಡ ಪಾಲ್ಗೊಂಡು ಕ್ಷೇತ್ರದ ದೇವತೆಗಳು ಹಾಗೂ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ .ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ, ಎಚ್.ಟಿ.ಮಂಜುನಾಥ್, ಕೆ.ಎಂ. ಶಿವಲಿಂಗೇಗೌಡ, ಪಕ್ಷೇತರ ಶಾಸಕ ಪುಟ್ಟಸ್ವಾಮೀಗೌಡ, ಕಾರವಾರ ಶಾಸಕ ಸತೀಶ್ ಶೈಲಿ, ಹೊನ್ನಾವರದ ಶಾಸಕ ಮುಂಕಾಳು ವೈದ್ಯ ಭಾಗಿಯಾಗಿದ್ದರು.
ಪುತ್ತೂರು: ಪುತ್ತೂರಿನಲ್ಲಿ ನಡೆದ ಪೋಲಿಸ್ ಹಾಗೂ ಹಿಂದು ಕಾರ್ಯಕರ್ತರ ನಡುವಣ ಸಮರಕ್ಕೆ ಇದೀಗ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು ಈ ಗಟನೆಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ . ಹಿಂದುಗಲ್ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತೆನೆಂದು ಹೇಳುವ ಮೂಲಕ .ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತೆಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಇದು ಅಸಮಂಜಷ, ನಾವು ಅಂಥದ್ದನ್ನ ಸಹಿಸುವುದಿಲ್ಲ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಬೇರೆ ಅಲ್ಲ ಎಲ್ಲರೂ ಒಂದೇ. ದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡೋದು ಬಿಜೆಪಿಯ ಕೆಲಸ. ಘಟನೆ ಮತ್ತು ಇಲ್ಲಿನ ಕಾರ್ಯಕರ್ತರ ಭಾವನೆಯನ್ನು ಕೇಂದ್ರದ ನಾಯಕರಿಗೆ ಹೇಳುತ್ತೇನೆ. ಹೊಡೆತಕ್ಕೆ ಒಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ನಾನು ವೈದ್ಯಕೀಯ ವೆಚ್ಚಕ್ಕೆ ಒಂದು ಲಕ್ಷ ವೈಯಕ್ತಿಕವಾಗಿ ಭರಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಂಗಳೂರು: ಪೊಲೀಸರ ಅಮಾನವೀಯ ಕೃತ್ಯ ಸಮಾಜವೇ ತಲೆ ತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಥಳಿಸುವ ಹಕ್ಕು ಪೊಲೀಸರಿಗೆ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಡಿವೈಎಸ್ಪಿ ಕೊಠಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಥಳಿಸಲಾಗಿದೆ. ಇವರು ತಾಲಿಬಾನಿಗಳಲ್ಲ, ದೇಶದ್ರೋಹದ ಕೆಲಸ ಮಾಡಿದವರಲ್ಲ. ಇಂತಹ ಕೃತ್ಯ ಪೊಲೀಸ್ ಇಲಾಖೆಗೆ ಗೌರವ ತರುವ ಕೆಲಸವಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ಆದರೆ ದೂರು ಬಂದಾಗ ತನಿಖೆ ಮಾಡಬೇಕು, ಹೊಡೆಯೋ ಅಧಿಕಾರ ಇಲ್ಲ. ಈ ಬಗ್ಗೆ ತನಿಖೆ ಆಗಬೇಕು, ಕೆಳ ಹಂತದ ಸಿಬ್ಬಂದಿ ಜೊತೆ ಡಿವೈಎಸ್ಪಿ ಮೇಲೂ ಕ್ರಮ ಆಗಬೇಕು. ಕಾಂಗ್ರೆಸ್ ಸರ್ಕಾರ ನಾಳೆಯಿಂದ ರಾಜ್ಯದಲ್ಲಿ ಬರ್ತಾ ಇದೆ.