ಮೊಹಾಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ ಮುಖಾಮುಖಿ ಆಗಲಿದೆ. ಮೊಹಾಲಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್ಸಿಬಿ ತಂಡ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ವೇಯ್ನ್ ಪಾರ್ನೆಲ್ ಬದಲು ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಇಂದು ಬದಲಾವಣೆ ಖಚಿತ ಎಂದು ಹೇಳಬಹುದು. ಇದೀಗ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ RCB ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಶಹ್ಬಾಜ್ ಅಹ್ಮಾದ್ ಕಡೆಯಿಂದ ಉತ್ತಮ ಆಟಬರಬೇಕಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಇಂದಿನ ಪಂದ್ಯದಲ್ಲಿ…
Author: Prajatv Kannada
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್, ಕೆಜಿಎಫ್ 2 ಸೂಪರ್ ಹಿಟ್ ಆಗಿದೆ. ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ಕೆಜಿಎಫ್ 3ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಈ ಮಧ್ಯೆ ಕೆಜಿಎಫ್ 3 ಬರುವ ಸುಳಿವನ್ನು ನಟಿ ರವೀನಾ ಟಂಡನ್ ನೀಡಿದ್ದಾರೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಹೊಂಬಾಳೆ ಫಿಲ್ಮ್ಸ್ ‘ಕೆಜಿಎಫ್ 3’ ಮಾಡುವ ಬಗ್ಗೆ ಸುಳಿವು ನೀಡಿತ್ತು. ಈ ಬೆನ್ನಲ್ಲೇ ‘ಕೆಜಿಎಫ್ 3’ಗೆ ರೆಡಿಯಾಗಿ ಎಂದು ಯಶ್ ಹೇಳಿರುವುದನ್ನು ರವೀನಾ ಟಂಡನ್ ಹೇಳಿದ್ದಾರೆ. ‘ಕೆಜಿಎಫ್’ ಪಾರ್ಟ್ 2 ಸಿನಿಮಾ ಏ.14ಕ್ಕೆ ರಿಲೀಸ್ ಆಗಿ ಒಂದು ವರ್ಷವಾಗಿದೆ. ಇದೇ ಖುಷಿಯಲ್ಲಿ ಕೆಜಿಎಫ್ 3 ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ ಕೆಜಿಎಫ್-3 ಚರ್ಚೆಯ ನಡುವೆಯೇ ನಟಿ ರವೀನಾ ಟಂಡನ್ ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್- ಪ್ರಶಾಂತ್ ನೀಲ್ ಕರೆ ಮಾಡಿ ಕೆಜಿಎಫ್ 3ಗೆ ರೆಡಿಯಾಗಿರಲು…
ಕಿರುತೆರೆ ನಟಿ ದಿವ್ಯಾ ಶ್ರೀಧರ್ ಇತ್ತೀಚೆಗೆ ಹೆಣ್ಣ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡನಿಂದ ದೂರವಿರುವ ದಿವ್ಯಾ ಶ್ರೀಧರ್ ಇತ್ತೀಚೆಗಷ್ಟೇ ಮುದ್ದು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಮಗುವನ್ನು ನೋಡಬೇಕು ಎಂದು ನಟಿ ದಿವ್ಯಾ ಶ್ರೀಧರ್ ಪತಿ ನಟಿ ಅರ್ನವ್ ಕೇಳಿಕೊಂಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅನರ್ವ್, ‘ಬೇರೆಯವರ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಿರುವೆ. ನನ್ನ ಮಗುವನ್ನು ನೋಡುವುದಕ್ಕೂ ಆಗುತ್ತಿಲ್ಲ. ದಯವಿಟ್ಟು ನನ್ನ ಮಗುವಿನ ವಿಡಿಯೋವನ್ನಾದರೂ ದಿವ್ಯಾ ಹಂಚಿಕೊಳ್ಳಲಿ ಎಂದು ಕೇಳಿಕೊಂಡಿದ್ದಾರೆ. ಕಾನೂನು ಮೂಲಕ ಹೋಗಬಹುದು. ಆದರೆ, ನನಗೆ ಅದು ಇಷ್ಟವಿಲ್ಲ’ ಎಂದು ಅರ್ನವ್ ಹೇಳಿದ್ದಾರೆ. ‘ಆಕಾಶದೀಪ’ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್, ಪತಿ ಅರ್ನವ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ದಿವ್ಯಾ ಶ್ರೀಧರ್ ನೀಡಿದ ದೂರಿನ ಮೇರೆಗೆ ಪೊಲೀಸರು ಅರ್ನವ್ ನನ್ನು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು…
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸೂಪರ್ ಹಿಟ್ ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ಸುಕುಮಾರನ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದು, ‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಪಕರಾದ ನವೀನ್ ಯೆರ್ನೇನಿ ಹಾಗೂ ರವಿ ಯಲಮಂಚಿಲಿ ಅವರ ಮನೆ ಮೇಲೂ ದಾಳಿ ಆಗಿದೆನಡೆಸಲಾಗಿದೆ. ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುಕುಮಾರ್ ಹಾಗೂ ಮೈತ್ರಿ ಮೂವೀ ಮೇಕರ್ಸ್ ಜಿಎಸ್ಟಿ ಪಾವತಿಯಲ್ಲಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ‘ಪುಷ್ಪ’ ಸಿನಿಮಾ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಇದರಿಂದ ನಿರ್ಮಾಪಕರು ದೊಡ್ಡ ಲಾಭ ಗಳಿಸಿದ್ದರು. ಸುಕುಮಾರ್ ಅವರು ನಿರ್ದೇಶಕರಾಗಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ಅವರು ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದಾರೆ. ಇದಕ್ಕೆ ‘ಸುಕುಮಾರ್ ರೈಟಿಂಗ್ಸ್’ ಎಂದು ಹೆಸರು ಇಟ್ಟಿದ್ದಾರೆ. ಅನೇಕ ನಿರ್ಮಾಣ ಸಂಸ್ಥೆಗಳ ಜೊತೆ ಕೈ…
ನಿಮಗೆ ಮೈಗ್ರೇನ್ ಬರುತ್ತಾ? ಹೇಗಪ್ಪ ಈ ಮೈಗ್ರೇನ್ ತಲೆನೋವು ಕಡಿಮೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು. ದ್ರಾಕ್ಷಿಯಲ್ಲಿ ಕ್ಯಾಲೋರಿ, ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶಗಳು ಇರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಅಲ್ಲದೆ ದ್ರಾಕ್ಷಿ ತಿನ್ನುವುದರಿಂದ ಬ್ಯೂಟಿ ಪ್ರಾಬ್ಲಂ ಕೂಡ ದೂರವಾಗುತ್ತದೆ. ದ್ರಾಕ್ಷಿಯಲ್ಲಿ ಏನಿದೆ? ಒಂದು ಕಪ್ ದ್ರಾಕ್ಷಿಯಲ್ಲಿ 62 ಕ್ಯಾಲೋರಿ, 1.3 ಗ್ರಾಂ ಫ್ಯಾಟ್ ಹಾಗೂ 15 ಗ್ರಾಂ ಶುಗರ್ ಇರುತ್ತದೆ. ಇದನ್ನು ಸೇವಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ 1.8 ಮಿಲಿಗ್ರಾಂ ಸೋಡಿಯಂ, ಶೇ.3ರಷ್ಟು ಡೈಯಟ್ರಿ ಫೈಬರ್, ಶೇ.5ರಷ್ಟು ಪೋಟ್ಯಾಶಿಯಂ, ಶೇ.5ರಷ್ಟು ಕಾರ್ಬೋಹೈಡ್ರೆಟ್, 0.6ಗ್ರಾಂ ಪ್ರೋಟಿನ್, ಶೇ.1ರಷ್ಟು ವಿಟಮಿನ್ ಎ, ಶೇ.6ರಷ್ಟು ವಿಟಮಿನ್ ಸಿ, ಶೇ.1ರಷ್ಟು ಕ್ಯಾಲಿಶಿಯಂ, ಶೇ.1ರಷ್ಟು ಐರನ್, ಶೇ.1ರಷ್ಟು ಮ್ಯಾಗ್ನೇಶಿಂ ಹಾಗೂ ಶೇ.5ರಷ್ಟು ವಿಟಮಿನ್ ಬಿ-6 ಅಂಶಗಳು ಇರುತ್ತದೆ. ಲಾಭ ಏನು? ಡಯಾಬಿಟಿಸ್: ದ್ರಾಕ್ಷಿ ಸಿಹಿ ಆಗಿರುವುದರಿಂದ ಡಯಾಬಿಟಿಸ್ ಸಮಸ್ಯೆಯಿಂದ…
ಖಾರ್ಟೌಮ್: ಕಳೆದ ನಾಲ್ಕದೈದು ದಿನಗಳಿಂದ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ಸುಡಾನ್ ನಲ್ಲಿ ಯುದ್ಧ ನಡೆಯುತ್ತಿದೆ. ಈ ಆಂತರಿಕ ಸಂಘರ್ಷದಲ್ಲಿ ಸುಡಾನ್‌ನಲ್ಲಿ ಸುಮಾರು ನಾಲ್ಕು ಸಾವಿರ ಭಾರತೀಯರಿದ್ದು, ಅವರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕುಟುಂಬಸ್ಥರು ಕೂಡಲೇ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಾಲ್ಕು ಸಾವಿರ ಜನರಲ್ಲಿ 1,200ಕ್ಕೂ ಹೆಚ್ಚು ಜನರು ಒಂದೂವರೆ ಶತಮಾನದಿಂದಲೂ ಅಲ್ಲಿಯೇ ನೆಲೆಸಿದ್ದಾರೆ. ಅಲ್ಲಿನ ಆರ್ಥಿಕತೆಯಲ್ಲಿ ಇವರ ಪಾಲು ದೊಡ್ಡದಿದೆ. ‘ನನ್ನ ತಂದೆ ಮುಂಬೈನಿಂದ ವ್ಯವಹಾರ ನಿಮಿತ್ತ ಸುಡಾನ್‌ಗೆ ತೆರಳಿದ್ದರು. ವಾಪಸ್ ಮರಳುವಾಗ ವಿಮಾನ ರದ್ದಾಗಿರುವುದಾಗಿ ತಿಳಿಸಿದ್ದರು. ಕೆಲಕಾಲ ನನ್ನ ಅಪ್ಪ ಸೇರಿದಂತೆ ಅಲ್ಲಿದ್ದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿತ್ತು ಎಂದು ಹೇಳಿದ್ದರು. ಬಳಿಕ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿದ್ದಾರೆ. ಅದಾದ ನಂತರ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಪುತ್ರಿ ಮಾನ್ಸಿ ಸೇಟ್ ತಿಳಿಸಿದ್ದಾರೆ. ‘ಅಪ್ಪನಿಗೆ ಈಗ 63 ವರ್ಷ. ಅವರ ಆರೋಗ್ಯ ಸ್ಥಿತಿ ನನ್ನಲ್ಲಿ…
ಜಿನೀವಾ: ಕೋವಿಡ್ ಸಾಂಕ್ರಾಮಿಕ ರೋಗವು ಇನ್ನೂ ಹೆಚ್ಚು ಭೀಕರ ಸ್ಥೀತಿಯಲ್ಲಿದ್ದು, ಊಹಿಸಲು ಅಸಾಧ್ಯವಾದ ಮತ್ತು ತ್ವರಿತ ರೂಪಾಂತರಿ ಸ್ಥಿತಿಯಲ್ಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕೋವಿಡ್‌ನಿಂದ ಕಳೆದ 28 ದಿನಗಳಲ್ಲಿ ವಿಶ್ವದಾದ್ಯಂತ 30 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 23 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕೋವಿಡ್ ಪರೀಕ್ಷೆಯನ್ನು ತಗ್ಗಿಸಿರುವಾಗ ಇಷ್ಟೊಂದು ಪ್ರಕರಣಗಳು ದಾಖಲಾಗಿರುವುದು ಮತ್ತು ಸಾವುಗಳು ಸಂಭವಿಸಿರುವುದು ಗಮನಾರ್ಹ ಎಂದು ತಿಳಿಸಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಒಟ್ಟಾರೆ ತಗ್ಗುತ್ತಿರುವಾಗ, ಸಾವುಗಳು ಸಂಭವಿಸುತ್ತಿರುವುದು ಮತ್ತು ಬಹಳಷ್ಟು ಜನರು ಅನಾರೋಗ್ಯಕ್ಕೆ ಇನ್ನೂ ತುತ್ತಾಗುತ್ತಿರುವುದು ಮುಂದುವರಿದಿದೆ ಎಂದು ಡಬ್ಲ್ಯುಎಚ್‌ಒ ತುರ್ತು ವಿಭಾಗಗಳ ನಿರ್ದೇಶಕ ಮಿಖಾಯಿಲ್ ರಿಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕೋವಿಡ್ 19 ಅನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ಕೈಬಿಡಲಾಗದು ಎಂದು ರಿಯಾನ್ ಹೇಳಿದ್ದಾರೆ.
ಯೆಮೆನ್: ರಾಜಧಾನಿ ಸಹಾದಲ್ಲಿ ರಂಜಾನ್ ಆಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿದ್ದು, 85 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಸಾಕಷ್ಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ರಂಜಾನ್ ಆಚರಣೆ ಪ್ರಯುಕ್ತ ಆರ್ಥಿಕ ನೆರವು ನೀಡಲು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು, ಜನರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಹಾರಿಸಿದ್ದ ಗುಂಡು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡಿದ್ದು, ಏಕಾಏಕಿ ಜನ ಭಯಭೀತರಾಗಿದ್ದಾರೆ. ಭಯದಿಂದ ಓಡಿದ್ದು, ಕೆಳಗೆ ಬಿದ್ದವರನ್ನೂ ಗಮನಿಸದೆ ತುಳಿದು ಓಡಿದ್ದಾರೆ. ಘಟನೆಯಲ್ಲಿ 85ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. 13 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಡಳಿತದ ಸಹಾಯವಿಲ್ಲದೆ ವ್ಯಾಪಾರಿಗಳು ಕಾರ್ಯಕ್ರಮ ಆಯೋಜಿಸಿದ್ದು, ಆಯೋಜಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್: ಸಾಕಷ್ಟು ಬಿಗಿಭದ್ರತೆಯ ನಡುವೆಯೂ ಅಮೆರಿಕದ ಶ್ವೇತಭವನದ ಒಳಗೆ ಮಗುವೊಂದು ನುಸುಳಿರುವ ಘಟನೆ ವರದಿಯಾಗಿದೆ. ಅಮೆರಿಕ ಅಧ್ಯಕ್ಷರ ಸರ್ಕಾರಿ ನಿವಾಸವಾಗಿರುವ ಶ್ವೇತಭವನದ ಉತ್ತರದ ದಿಕ್ಕಿನಲ್ಲಿರುವ ಕಬ್ಬಿಣದ ತಡೆಬೇಲಿಯ ಬದಿಯಿಂದ ಮಗುವೊಂದು ನುಸುಳಿ ಶ್ವೇತ ಭವನಕ್ಕೆ ಹೋಗಿದೆ ಎನ್ನಲಾಗಿದೆ. ಮಗುವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಮಗುವನ್ನು ಹೊರಗೆತ್ತಿಕೊಂಡು ಹೋಗಿ ಮಗುವನ್ನು ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಶ್ವೇತಭವನದ ಗುಪ್ತಚರ ವಿಭಾಗದ ಮುಖ್ಯಸ್ಥ ಆಂಥೊನಿ ಗ್ಯುಗ್ಲಿಯೆಮಿಯನ್ನು ತಿಳಿಸಿದ್ದಾರೆ.
ನವದೆಹಲಿ: ಸಲಿಂಗ ವಿವಾಹಗಳು (Same-Sex Marriage) ನಗರ ಗಣ್ಯರ ಅಥವಾ ಶ್ರೀಮಂತರ ಪರಿಕಲ್ಪನೆಗಳಲ್ಲ (Elitist Concept) ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ ಚಂದ್ರಚೂಡ್ (D.Y Chandrachud) ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಸಲಿಂಗ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅವರು ಇಂತಹದ್ದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಲಿಂಗ ವಿವಾಹಗಳನ್ನು ಅಂಗೀಕರಿಸುವ ಅರ್ಜಿದಾರರು ನಗರ ಗಣ್ಯರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಾರೆ ಎಂದು ಕೇಂದ್ರ ಸರ್ಕಾರ (Central Government) ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್, ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಲೈಂಗಿಕ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗೆಂದು ಇದು ಸಲಿಂಗ ವಿವಾಹ ಪರಿಕಲ್ಪನೆಗಳು ಅಥವಾ ಬೇಡಿಕೆಗಳು ಎಂದು ತೋರಿಸಲು ಸರ್ಕಾರದ ಬಳಿ ಸೂಕ್ತ ಅಂಕಿ ಅಂಶಗಳ ದಾಖಲೆ ಇದೆ ಎಂಬ ಅರ್ಥವಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರವು ವ್ಯಕ್ತಿಯ ನಿಯಂತ್ರಣ ಹೊಂದಿರದ ಗುಣಲಕ್ಷಣದ ಆಧಾರದ ಮೇಲೆ ವ್ಯಕ್ತಿಯ…