ಚಾಮರಾಜನಗರ: 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು . ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಲಿ ಎಂದು ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಆರೋಗ್ಯ, ಐಶ್ವರ್ಯ, ನೆಮ್ಮದಿ ಎಲ್ಲವನ್ನೂ ದೇವರು ಕರುಣಿಸಲಿ. ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಬಡವರಿಗೆ ಸಿದ್ದು ನೆರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
Author: Prajatv Kannada
ಕಾಸರಗೋಡು: ಮೇಕಪ್ ಆರ್ಟಿಸ್ಟ್ ಒಬ್ಬಳು ಪ್ರಿಯಕರನಿಂದಲೇ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್ನಲ್ಲಿರುವ ಲಾಡ್ಜ್ ಒಂದರಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಉದ್ಮಾ ಪಂಚಾಯಿತಿಯ ಮುಕ್ಕುನೋಥ್ ನಿವಾಸಿ ಪಿ.ಬಿ. ದೇವಿಕಾ (34) ಎಂದು ಗುರುತಿಸಲಾಗಿದೆ. ಇನ್ನು ಹತ್ಯೆ ಮಾಡಿದ ಬಳಿಕ ಪ್ರಿಯಕರ ಸತೀಶ್ (36) ಲಾಡ್ಜ್ ರೂಮ್ ಅನ್ನು ಲಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಲಾಡ್ಜ್ ರೂಮ್ ಅನ್ನು ತೆರೆದಾಗ ದೇವಿಕಾ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ಎಂದು ಬಾಲಕೃಷ್ಣನ್ ನಾಯರ್ ಮಾಹಿತಿ ನೀಡಿದ್ದಾರೆ. ಆರೋಪಿ ಸತೀಶ್ ಮುಲ್ಲಿಯಾರ್ ಗ್ರಾಮ ಪಂಚಾಯಿತಿಯ ಬೊವಿಕನಮ್ ಮೂಲದ ನಿವಾಸಿ. ಈತ ಕನ್ಹಂಗಾಡ್ ಪಟ್ಟಣದಲ್ಲಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಈತನಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ದೇವಿಕಾಗೂ ಮದುವೆ ಆಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಡಿವೋರ್ಸ್ ನೀಡಿ ತನ್ನೊಂದಿಗೆ ಇರುವಂತೆ ದೇವಿಕಾ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ…
ಕರ್ನಾಟಕದ ಸಿಎಂ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಡ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲ್ಲಿದ್ದಾರೆ. ಇದರ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಪ್ರಶ್ನೆಯೊಂದು ಎದುರಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಸಿದ್ದು ಜೊತೆಗೆ ಪಕ್ಷದಲ್ಲಿ 135 ಶಾಸಕರು ಜಯಶೀಲರಾಗಿದ್ದಾರೆ. ಗೆದ್ದಂತಹ ಶಾಸಕರಲ್ಲಿ ಬಹುತೇಕ ಹಿರಿಯ ಶಾಸಕರೇ ಇದ್ದಾರೆ. ಆದ್ದರಿಂದ ಸಂಪುಟದಲ್ಲಿ ಅವರಿಗೆ ತಮ್ಮ ಸ್ಥಾನ ನಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಎಂ ಯಾರು? ಎಂಬುವುದಕ್ಕಿಂತ ಸನ್ನಿಗ್ದ್ನ ಪರಿಸ್ಥಿತಿ ಇದಾಗಿದೆ. ಹೈಕಮಾಂಡ್ ಅಧಿಕಾರವೇ ಅಂತಿಮ ತೀರ್ಮಾನವಾಗಿದ್ದು ಸ್ಥಾನ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯಬಣದಲ್ಲಿರುವ 10 ಶಾಸಕರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಣದ 10 ಶಾಸಕರಿಗೆ ಮಂತ್ರಿಗಿರಿ ಸಿಗಲಿರುವುದು ಬಹುತೇಕ ಖಚಿತವಾಗಿದ್ದು. ಉಳಿದ ಸ್ಥಾನಗಳನ್ನು ಯಾರಿಗೆ ನೀಡಬೇಕು? ಎನ್ನುವ ಪ್ರಶ್ನೆಗೆ ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಳ್ಳಲಿದೆ. ಇನ್ನೂ ಬೆಂಗಳೂರು ನಗರವನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿಯಾಗಿದೆ.…
ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಪ್ರಕರಣದಲ್ಲಿ ಹಲ್ಲೆ ನಡೆಸಲು ಪೊಲೀಸರ ಮೇಲೆ ಒತ್ತಡ ಹಾಕಿದ ವಿಚಾರವಾಗಿ ರಾಜಕೀಯ ಕೆಸರೆರೆಚಾಟ ಶರುವಾಗಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ದೌರ್ಜನ್ಯ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರೇ, ಬಿಜೆಪಿ ನಾಯಕರ ಒತ್ತಡದಿಂದಲೇ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇನ್ನು ಎರಡು ದಿನದಲ್ಲಿ ಒತ್ತಡ ಹಾಕಿದವರ ಹೆಸರು ಬಹಿರಂಗ ಪಡಿಸುವೆ ಎಂದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಈ ಮಧ್ಯೆ ಪುತ್ತೂರು ಡಿವೈಎಸ್ಪಿ ಜೊತೆಗೆ ಪಿಎಸ್ಐ, ಕಾನ್ಸ್ಟೇಬಲ್ ಅವರನ್ನು ಅಮಾನತು ಮಾಡಬೇಕು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ 307 ಕೇಸ್ ದಾಖಲಿಸುವಂತೆ ಬಜರಂಗದಳ ಒತ್ತಾಯ ಮಾಡಿದೆ. ಅಮಾನತು ಮಾಡದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ವಿಜಯಪುರ: ಕುಡಿದ ಅಮಲಿನಲ್ಲಿ ಚಾಲಕ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ್ದೂ ಅಕ್ಕಪಕ್ಕ ಬರುತ್ತಿದ್ದ ವಾಹನಗಳಿಗೂ ದಿಕ್ಕಿ ಹೊಡೆದ ಪರಿಣಾಮ ಇದರಿಂದ ಭಯಭೀತಳಾಗಿ ಕೋಪಗೊಂಡ ಮಹಿಳೆ ತನ್ನ ಕಾಲಲ್ಲಿರುವ ಚಪ್ಪಲಿಯಿಂದ ಚಾಲಕನಿಗೆ ಹೊಡೆದಿರುವ ಘಟನೆ ಗುರುವಾರ ತಡರಾತ್ರಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಬಳಿ ನಡೆದಿದೆ. ಮದ್ಯವ್ಯಸನಿಯಾಗಿದ್ದ ಚಾಲಕ ಕುಡಿದ ಮತ್ತಿನಲ್ಲಿ ಬೇಜವಾಬ್ದಾರಿತನದಿಂದ ಕಾರುಚಾಲನೆ ಮಾಡಿದ್ದೂ ಅನೇಕ ವಾಹನಗಳಿಗೂ ಡಿಕ್ಕಿಹೊಡೆದ್ ಪರಿಣಾಮ ಕರಳಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇದರಿಂದ ಮಹಿಳೆ ಆಕ್ರೋಶಕ್ಕೊಳಗಾಗಿ ಮದ್ಯ ಸೇವಿಸಿ ಕಾರು ಚಾಲನೆ ಮಾಡಿದ ಪರಿಣಾಮ ಚಾಲಕನಿಗೆ ಮಹಿಳೆ ಎಗ್ಗಾಮುಗ್ಗಾ ಥಳಿಸಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇನ್ನು ಕಾರಲಿದ್ದ ಮಹಿಳೆ ಚಾಲಕನ ವಿರುದ್ಧ ಸಂಚಾರಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದು ಸದ್ಯ ಕಾರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಡು ರಸ್ತೆಯಲ್ಲಿ ಬಿದ್ದ ವಿದ್ಯಾರ್ಥಿಯ ಮೇಲೆ ಲಾರಿ ಹರಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ನಡೆದಿದೆ. ಉಣಕಲ್ ಕ್ರಾಸ್ ಬಳಿ ಇರುವ ಪ್ರೇರಣಾ ಕಾಲೇಜು ವಿದ್ಯಾರ್ಥಿ ಧ್ರುವ ಜೈನ್ ಇಂದು ಮಧ್ಯಾಹ್ನ ಲಂಚ್ ಬ್ರೇಕ್ ಟೈಮ್ ನಲ್ಲಿ ಉಣಕಲ್ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ಕಾರು ದ್ರುವ ನಿಗೆ ಡಿಕ್ಕಿ ಹೊಡೆದ ಪರಿಣಾಮ ದ್ರುವ ನಡು ರಸ್ತೆಯಲ್ಲಿಯೇ ಬಿದ್ದಾಗ,ಹಿಂದೆ ಬರುತ್ತಿದ್ದ ಲಾರಿ ಧ್ರುವ ನ ಮೇಲೆ ಹರಿದ ಪರಿಣಾಮ ದ್ರುವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳೀಯರು ದ್ರುವನನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು ಕೂಡಾ ಕಿಮ್ಸ್ ವೈದ್ಯರು ವಿದ್ಯಾರ್ಥಿ ದ್ರುವ ಮೃತಪಟ್ಟಿದ್ದಾನೆ ಅಂತಾ ಹೇಳಿ ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ,ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಅಪಘಾತ ಮಾಡಿ ಪರಾರಿಯಾದ ಕಾರಿನ ಬಗ್ಗೆ…
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಇಂದು ಚನ್ನಪಟ್ಟಣದಲ್ಲಿ ಕೃತಜ್ಞತಾ ಸಭೆ ಏರ್ಪಡಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡು ಮೂರು ತಿಂಗಳಲ್ಲಿ ಅಕ್ಟೋಬರ್ ನವಂಬರ್ ಒಳಗೆ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು. ಈಗಿನ ಸರ್ಕಾರದ ನಾಟಕ ನೋಡುತ್ತಿದ್ದೀರಿ. ಈ ಸರ್ಕಾರದಿಂದ ಒಳ್ಳೆ ಆಡಳತದ ನಿರೀಕ್ಷೆ ಇಟ್ಟುಕೊಂಡಿಲ್ಲ. ನಾನು ಸ್ವಾಭಿಮಾನ ಕಳೆದುಕೊಂಡು ಮಂತ್ರಿಗಳ ಮುಂದೆ ನಿಲ್ಲಲು ಆಗಲ್ಲ. ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ಆಗೋ ರೀತಿ ನಡೆದುಕೊಳ್ಳಲು ನಾನು ತಯಾರಿಲ್ಲ. ಅಭಿವೃದ್ಧಿ ಹಣ ತರುತ್ತಿದೆ, ಆದ್ರೆ ಈ ಸರ್ಕಾರದಲ್ಲಿ ಹಣ ತಂದು ಅಭಿವೃದ್ಧಿ ಮಾಡ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಪಾರ್ಲಿಮೆಂಟ್ ಚುನಾವಣೆ ಬಳಿಕ ಏನು ಡವಲಪ್‌ಮೆಂಟ್ ಆಗುತ್ತೊ ನೋಡೋಣ ಎಂದರು. ಅಲ್ಲದೆ, ಮುಂದೆ ತಾ.ಪಂ, ಜಿಪಂ ಚುನಾವಣೆ ಬರುತ್ತೆ. ನನ್ನನ್ನು ಗೆಲ್ಲಿಸಿದಂತೆ ಎಲ್ಲಾ ಸ್ಥಾನಗಳನ್ನು ಗೆಲ್ಲುವಂತೆ ಹೋರಾಡ ಮಾಡೋಣ. ನಾನು ನಿಮ್ಮ ಜೊತೆ ಇರ್ತೇನೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ…
ಹಾಸನ: ನಾನು ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಂ ಭಾಂದವರನ್ನು ಅತಿ ಹೆಚ್ಚು ಪ್ರೀತಿಸಿ ಮತ್ತು ಗೌರವ ಕೊಡುವ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇದ್ದರೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಜೆ. ಗೌಡ ಹೇಳಿದ್ದಾರೆ. ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಳೆದ ಚುನಾವಣೆಯಲ್ಲಿ 63 ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದು, ಈ ಭಾರಿ ಕಳೆದ ಬಾರಿಗಿಂತ 16 ಸಾವಿರ ಹೆಚ್ಚು ಮತಕೊಟ್ಟು, ನಾನು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ. ನನ್ನ ಅಭಿವೃದ್ಧಿ ಕೆಲಸ, ಮಾಡ್ತಿರುವ ಸೇವೆ ಗುರುತಿಸಿದ್ದಾರೆ. ಆದ್ರೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು. ಆದರೆ ಜನರ ಆಶೀರ್ವಾದ ಪ್ರೀತಂಗೌಡ ಪರ ಇದೆ ಎನ್ನುವುದಕ್ಕೆ ಶೇ.25 ರಷ್ಟು ಮತ ನೀಡಿದ್ದಾರೆ ಎಂದರು. ಅಭಿಮಾನಿ ದೇವರುಗಳಿಗೆ ಅಭಾರಿ ಈ ಬಾರಿಯ ಚುನಾವಣೆಯಲ್ಲಿ ನನಗೆ 77, 300ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ, ಬಿಜೆಪಿ ಕಾರ್ಯಕರ್ತರುಗಳಿಗೆ, ಅಭಿಮಾನಿ ದೇವರುಗಳಿಗೆ, ಅಭಾರಿಯಾಗಿದ್ದೇನೆ, ನನ್ನ…
ನವದೆಹಲಿ: ಕೇರಳ ಸ್ಟೋರಿ (Kerala Story) ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿರುವ ಪಶ್ಚಿಮ ಬಂಗಾಳ (West Bengal) ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು ಈ ಆದೇಶ ನೀಡಿದೆ. ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ ತಮಿಳುನಾಡು (Tamil Nadu) ರಾಜ್ಯಕ್ಕೆ ಸೂಚಿಸಿದೆ. ವಿಚಾರಣೆ ನಡೆಸುವಾಗ ಪ್ರತಿ ಚಿತ್ರಮಂದಿರಕ್ಕೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಅಲ್ಲದೆ ಚಲನಚಿತ್ರ ನೋಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಚಲನಚಿತ್ರವು ಘಟನೆಗಳ ಕಾಲ್ಪನಿಕ ಆವೃತ್ತಿಯಾಗಿದೆ. 32 ಸಾವಿರ ಮಹಿಳೆಯರ ಮತಾಂತರದ ಅಂಕಿಅಂಶವನ್ನು ಖಚಿತಪಡಿಸಲು ಯಾವುದೇ ಅಧಿಕೃತ ದತ್ತಾಂಶಗಳಿಲ್ಲ ಎಂದು ಚಿತ್ರದ ವಿರುದ್ಧ ವಾದಿಸಲಾಗಿದೆ. ಇದನ್ನು ಸ್ಪಷ್ಟವಾಗಿ ಹೇಳುವ ಅಥವಾ ನಿರಾಕರಣೆಯ ಸ್ಪಷ್ಟತೆಯನ್ನು ಖಚಿತಪಡಿಸಬೇಕು ಎಂದು ನಿರ್ಮಾಪಕರಿಗೆ ನಿರ್ದೇಶನ ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣೀಕರಣಕ್ಕೆ ಸಂಬಂಧಿಸಿದ…
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ(FEMA) ಕ್ಕೆ ತಿದ್ದುಪಡಿ ತಂದ ನಂತರ `20% ಟಿಸಿಎಸ್’ ಎಂಬ ಪದ ಬಹಳ ಪ್ರಚಲಿತಕ್ಕೆ ಬಂದಿದೆ. ಟ್ವಿಟರ್ ನಲ್ಲಂತೂ ಬಹಳ ಟ್ರೆಂಡ್ ಆಗಿಬಿಟ್ಟಿದೆ. ಆರ್ ಬಿಐ ನ ಉದಾರೀಕೃತ ಹಣ ರವಾನೆ ಯೋಜನೆ(LRS) ಅಡಿ ಬರುವ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್(ICC) ಗಳ ಬಳಕೆಗೆ ಸಂಬಂಧಿಸಿ ಕೇಂದ್ರ ಸರಕಾರ ಈ ತಿದ್ದುಪಡಿಯನ್ನು ತಂದಿದೆ. 2023ರ ಜೂನ್ 1ರ ಬಳಿಕ ಈ ಕ್ರೆಡಿಟ್ ಕಾರ್ಡಿನಡಿ ಮಾಡುವ ವ್ಯವಹಾರಕ್ಕೆ 20 % ತೆರಿಗೆ ಕಟ್ಟಲೇ ಬೇಕು. ಈ ಬಗ್ಗೆ ಗ್ರಾಹಕರಲ್ಲಿಯೂ ಸಣ್ಣ ಮಟ್ಟಿನ ಗೊಂದಲವಿದೆ. ಹಾಗಿದ್ದರೆ ನಿಜವಾಗಿಯೂ ಈ 20% ಟಿಸಿಎಸ್ ಅಂದರೇನು? ಇದು ಭಾರತೀಯರ ವಿದೇಶ ಪ್ರವಾಸದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ತಿಳಿದುಕೊಳ್ಳೋಣ. ಮಂಗಳವಾರದಂದು ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆಯ 7 ನಿಯಮಗಳ ತಿದ್ದುಪಡಿಯನ್ನು ಮಾಡಿತು. ಇದರ ಪ್ರಕಾರ ವಿದೇಶದಲ್ಲಿ ಕ್ರೆಡಿಟ್…