ಬೆಳಗಾವಿ: ಸಚಿವ ಸತೀಶ್ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯವರು ಯಾರೆ ಆಗಲಿ ಅದಕ್ಕೆ ಬೆಂಬಲ ಇದೆ. ಸಚಿವ ಸತೀಶ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಬೆಂಬಲ ಸೂಚಿಸಿದರು. ಮುಂದುವರೆದು, ಎಲ್ಲರಿಗೂ ಅಧಿಕಾರ ಬೇಕಾಗಿದೆ. ಸನ್ಯಾಸಿ ಇದ್ದವರು ಯಾರು ರಾಜಕಾರಣಕ್ಕೆ ಬರುತ್ತಿರಲಿಲ್ಲ, ಆದರೆ ಸದ್ಯ ಸನ್ಯಾಸಿಗಳು ರಾಜಕಾರಣಿಗೆ ಬರುತ್ತಿದ್ದಾರೆ ಎಂದರು. ನನಗೆ ಯಾವುದೇ ಅನುದಾನದ ಕೊರತೆ ಇಲ್ಲ, ಒಂದೂವರೆ ವರ್ಷದಲ್ಲಿ 2 ಸಾವಿರ ಕೋಟಿ ಅಷ್ಟು ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅಗತ್ಯ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಲಕ್ಷ್ಮಣ್ ಸವದಿ ಹೇಳಿದರು .ಮುಡಾ ಪ್ರಕರಣ 20 ವರ್ಷಗಳ ಹಿಂದೆ ಆಗಿರುವಂತದ್ದು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾವುದೇ ಆದೇಶ ಮಾಡಿಲ್ಲ, ತಮ್ಮ ಪತ್ನಿಗೆ ನಿವೇಶನ ಬೇಕಂತ ಎಲ್ಲಿಯೂ…
Author: Prajatv Kannada
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತುಗಳಿವೆ ಎಂದು ಕೋರ್ಟ್‌ಗೆ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಮೇಲಿನ ಭೀಕರ ಹಲ್ಲೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬಗ್ಗೆ ಮಾಹಿತಿ ಇದೆ https://youtu.be/pU9Zz072c8s?si=bcmQxVBNBnQTo4dK ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ.ಮರಣೋತ್ತರ ಪರೀಕ್ಷೆ ವೇಳೆ 39 ಕಡೆ ಗಾಯಗಳು ಪತ್ತೆಯಾಗಿವೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆಯಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಇದೆ. ವೃಷಣಕ್ಕೆ ಹಾನಿ ಹಾಗೂ ಕರೆಂಟ್ ಶಾಕ್ ಕೊಟ್ಟು ಗ್ಯಾಂಗ್ ಕೊಲೆ ಮಾಡಿದೆ. ಆರೋಪಿಗಳು ಅತಿ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ
ಬೆಂಗಳೂರು:- ರಾಮೇಶ್ವರಂ ಕೆಫೆ ಸ್ಫೋಟ ಕೇಸ್ ಗೆ ಸಂಬಧಪಟ್ಟಂತೆ ಹೈಕೋರ್ಟ್ ನಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಆವರು ಕ್ಷಮೆಯಾಚಿಸಿದ್ದಾರೆ. https://youtu.be/pU9Zz072c8s?si=fPq5WjoqV1-lTo4Q ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಉಗ್ರ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ಕಿಡಿಕಾರಿದ್ದರು. ಇದೀಗ ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ತಮಿಳುನಾಡಿನ ಜನರ ಕ್ಷಮೆಯಾಚಿಸಿದ್ದಾರೆ. ಈ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ಸೆಪ್ಟೆಂಬರ್ 3 ರಂದು ನಡೆಯಿತು. ಶೋಭಾ ಪರ ವಾದ ಮಂಡಿಸಿದ ವಕೀಲರು, ಸಚಿವರ ಹೇಳಿಕೆಗೆ ಸಂಬಂಧಿಸಿ ತಮಿಳುನಾಡು ಜನರ ಕ್ಷಮೆಯಾಚಿಸುವುದಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ತಮಿಳುನಾಡಿನ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರದಿಂದ ಸೂಕ್ತ ಸೂಚನೆ ಪಡೆದ ನಂತರ ತಿಳಿಸುವೆ ಎಂದು ಹೇಳಿದ್ದಾರೆ. ತಮಿಳುನಾಡಿನ ಇತಿಹಾಸ, ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಜನರ…
ಬೆಂಗಳೂರು:- ಶಿಕ್ಷಕರ ದಿನಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಶಿಕ್ಷಕರ ಪಟ್ಟಿ ರಿಲೀಸ್ ಆಗಿದೆ. https://youtu.be/2bidQ2gqIWA?si=UwRg69tNAMUS-4-6 ಚಿಕ್ಕೋಡಿ ಉಳ್ಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ, ಕಲಬುರಗಿ ಜಿಲ್ಲೆ ಭೂಸಣಗಿಯ ಮಲ್ಲಿಕಾರ್ಜುನ ಎಸ್. ಸಿರಸಿಗಿ, ದಾವಣಗೆರೆ ಜಿಲ್ಲೆ ಹಿಂಡಸಘಟ್ಟ ಕ್ಯಾಂಪ್‌ನ ಬಿ. ಅರುಣ್‌ಕುಮಾರ್, ಮೈಸೂರು ಜಿಲ್ಲೆ ಹಿನಕಲ್‌ನ ಕೆ.ಎಸ್. ಮಧುಸೂದನ್, ಬೆಳಗಾವಿ ಜಿಲ್ಲೆ ಅಂಬೇವಾಡಿಯ ಅಸ್ಮಾ ಇಸ್ಮಾಯಿಲ್, ದಕ್ಷಿಣ ಕನ್ನಡದ ನೀರ್ಕೆರೆ ಮೂಡಬಿದ್ರಿಯ ಕೆ. ಯಮುನಾ, ಹಾವೇರಿ ಜಿಲ್ಲೆಯ ಜಮೀರ್ ಅಬ್ದುಲ್, ಬೆಂಗಳೂರು ದಕ್ಷಿಣ ಜಿಲ್ಲೆಯ ಚಂದಾಪುರದ ಜಿ. ರಂಗನಾಥ, ಚಿಕ್ಕಬಳ್ಳಾಪುರ ಜಿಲ್ಲೆಯ ಇನಮಿಂಚೇನಹಳ್ಳಿಯ ಸುಶೀಲಮ್ಮ, ಮಧುಗಿರಿಯ ಬಸವನಹಳ್ಳಿಯ ಎಸ್.ವಿ. ರಮೇಶ್, ಧಾರವಾಡ ಜಿಲ್ಲೆ ಹಳೇಹುಬ್ಬಳ್ಳಿಯ ಹನುಮಂತಪ್ಪ ಎಂ. ಕುಂದರಗಿ, ಚಿತ್ರದುರ್ಗ ಜಿಲ್ಲೆ ಹೊಸಹಟ್ಟಿಯ ಆರ್.ಟಿ. ಪರಮೇಶ್ವರಪ್ಪ, ಶಿರಸಿ ಜೋಗೇಶ್ವರ ಹಳ್ಳದ ರಾಮಚಂದ್ರ ಶೇಷಾಜಪ್ಪ ಕಲಾಲ, ಶಿವಮೊಗ್ಗ ಗುತ್ಯಪ್ಪ ಕಾಲೊನಿಯ ಎಂ. ಭಾಗೀರಥಿ, ವಿಜಯನಗರ ಜಿಲ್ಲೆ ಹಿರೇಕೊಳಚಿಯ ಎಲ್. ಮಧುನಾಯ್ಕ, ರಾಮನಗರ ಜಿಲ್ಲೆ ಅರಳಾಳುಸಂದ್ರದ ಪಿ. ಸುರೇಶ, ಯಾದಗಿರಿ…
ಬೆಂಗಳೂರು:- BJP ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆತಿರುವ ಹಿನ್ನೆಲೆ, ಪಕ್ಷದ ಕಾರ್ಯಕರ್ತರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಟಾರ್ಗೆಟ್ ಕೊಟ್ಟಿದ್ದಾರೆ. https://youtu.be/LkDK089c_JA?si=noOJy-L9DBOj9TPS ಈ ಬಾರಿ ಎಷ್ಟು ಮತ ಬಿಜೆಪಿಗೆ ಬಂದಿದೆ ಅದರಲ್ಲಿ ಶೇ.75 ರಷ್ಟು ಜನರು ಸದಸ್ಯರಾಗಬೇಕು ಎಂದು ಹೇಳಿದರು. ಬಿಜೆಪಿಯಲ್ಲಿ ಉಚಿತವಾಗಿ ಸದಸ್ಯತ್ವ ಮಾಡಿಕೊಳ್ಳುತ್ತದೆ. ಬಿಜೆಪಿ ಜೀವ ಇರುವುದೇ ಕಾರ್ಯಕರ್ತರಲ್ಲಿ ಎಂದರು. ಕಾಂಗ್ರೆಸ್ನವರಿಗೆ ಸದಸ್ಯರು ಎಷ್ಟಿದ್ದಾರೆ ಎಂಬುದು ಮುಖ್ಯ ಅಲ್ಲ, ಕುಟುಂಬ ಇದೆಯೋ ಇಲ್ಲವೋ ಎನ್ನುವುದೇ ಮುಖ್ಯ ಅವರಿಗೆ. ರಾಹುಲ್ ಗಾಂಧಿ ದೇಶ ಬಿಟ್ಟು ಹೋದರೆ ಏನು ಕಥೆ? ಅವರದ್ದು ಲೀಡರ್ ಬೇಸ್ ಪಕ್ಷ. ಕಾಂಗ್ರೆಸ್ನವರು 1 ರೂ. ನೀಡಿ ಸದಸ್ಯತ್ವ ಮಾಡಿಕೊಳ್ಳುತ್ತಿದ್ದರು. ಹೆಚ್ಚು ಸದಸ್ಯತ್ವ ಆಗಿದೆ ಎಂದು ತೋರಿಸಲು ಈ ತರಹ ಮಾಡುತ್ತಿದ್ದರು ಎಂದು ಹೇಳಿದರು.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಕಾವು ಜೋರಾಗಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಧ್ಯೆ ಭಾರಿ ಪೈಪೋಟಿ ನಡೆಯುತ್ತಿದೆ. ಇಬ್ಬರಲ್ಲಿ ಯಾರು ಗದ್ದುಗೆ ಏರುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಈ ಮಧ್ಯೆ ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಪ್ರಚಾರ ಆರಂಭಿಸಿದ್ದಾರೆ. ಭಾರತ ಮೂಲ ಇರುವ ಕಮಲಾ ಪರ ಮತಯಾಚನೆಗೆ ಅಭಿಯಾನ ಆರಂಭಿಸಿದ್ದಾರೆ. ಅಮೆರಿಕವನ್ನು ಮುನ್ನಡೆಸುವ ಭಾರತೀಯ ಪರಂಪರೆಯ ಮೊದಲ ವ್ಯಕ್ತಿಯಾಗಿ ಕಮಲಾ ಅವರನ್ನು ಆಯ್ಕೆ ಮಾಡುವ ಮೂಲಕ ಯುಎಸ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಇತಿಹಾಸವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಪ್ರಚಾರ ಕೈಗೊಂಡ ತಂಡ ಹೇಳಿಕೊಂಡಿದೆ. ‘ಇದೇ ಮೊದಲು ಬಾರಿಗೆ ಭಾರತ ಮೂಲದ ತಾಯಿಯನ್ನು ಹೊಂದಿರುವ ಅಭ್ಯರ್ಥಿ ಚುನಾವಣಾ ಕಣದಲ್ಲಿರುವುದು. ಅವರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪಡೆದಿದ್ದಾರೆ ಹಾಗೂ ಕಲಿತಿದ್ದಾರೆ. ಕಮಲಾ ಎಂಬ ಹೆಸರಿನವರು ಈ ದೇಶದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸುವುದು ಯುಎಸ್ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಹೀಗಾಗಿ ನಾವು ಭಾರತೀಯ ಅಮೆರಿಕನ್ನರು…
ಟೆಕ್ಸಾಸ್ ನಲ್ಲಿ ಐದು ವಾಹನಗಳು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಜೀವ ದಹನವಾಗಿದ್ದಾರೆ. ಮೃತರು ಕಾರ್‌ಪೂಲಿಂಗ್ ಆಯಪ್ ಮೂಲಕ ಸಂಪರ್ಕ ಹೊಂದಿದ್ದು ಅರ್ಕಾನ್ಸಾಸ್‌ನ ಬೆಂಟೊನ್‌ವಿಲ್ಲೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ SUV ಕಾರು ಹೊತ್ತಿ ಉರಿದಿದ್ದು, ಪರಿಣಾಮ ಕಾರಿನಲ್ಲಿದ್ದವರು ಸುಟ್ಟು ಕರಕಲಾಗಿದ್ದಾರೆ. ಮೃತರ ಗುರುತುಗಳನ್ನು ಖಚಿತಪಡಿಸಲು ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ಮೃತರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಓರಂಪತಿ ಮತ್ತು ಅವರ ಸ್ನೇಹಿತ ಶೇಕ್ ಡಲ್ಲಾಸ್‌ನಲ್ಲಿರುವ ತನ್ನ ಸೋದರಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ಲೋಕೇಶ್ ಪಾಲಾಚಾರ್ಲ ಪತ್ನಿಯನ್ನು ಭೇಟಿಯಾಗಲು ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ದರ್ಶಿನಿ ವಾಸುದೇವನ್, ಬೆಂಟನ್‌ವಿಲ್ಲೆಯಲ್ಲಿರುವ ತನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಹೋಗುತ್ತಿದ್ದರು. ಓರಂಪತಿ ತಂದೆ ಸುಭಾಷ್ ಚಂದ್ರ ರೆಡ್ಡಿ ಅವರು ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು…
ದಕ್ಷಿಣ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಇದೀಗ ರಣಭೀಕರ ಪ್ರವಾಹ ಮತ್ತು ಭೂಕುಸಿತ ತಡೆಯಲು ವಿಫಲರಾದ ಸುಮಾರು 30 ಅಧಿಕಾರಿಗಳನ್ನು ಗಲ್ಲಿಗೇರಿಸ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ. ಉತ್ತರ ಕೊರಿಯಾದ ಸುರಿದ ಭಾರೀ ಮಳೆ ಪ್ರವಾಹದಲ್ಲಿ ಸುಮಾರು 4000 ಜನರು ಸಾವನ್ನಪ್ಪಿದ್ದರು. ಉತ್ತರ ಕೊರಿಯಾದ ಚೋಸನ್ ಟಿವಿ ವರದಿ ಪ್ರಕಾರ, ಇತ್ತೀಚೆಗಿನ ಪ್ರವಾಹದಲ್ಲಿ ಜನರು ಜೀವಕಳೆದುಕೊಂಡಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಷ್ಟವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಕಠಿನ ಶಿಕ್ಷೆ ನೀಡುವುದಾಗಿ ಕಿಮ್ ಜಾಂಗ್ ಘೋಷಿಸಿರುವುದಾಗಿ ತಿಳಿಸಿದೆ. ಪ್ರವಾಹ, ಭೂಕುಸಿತ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿ ಹೊಣೆಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಕಳೆದ ತಿಂಗಳಾಂತ್ಯದಲ್ಲಿ 30 ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 6 ವರ್ಷಗಳ ಬಳಿಕ ಸಿಂಗಾಪುರಕ್ಕೆ ಭೇಟಿ ನೀಡಿದ್ದಾರೆ. ಬ್ರೂನೆಯಲ್ಲಿ ತಮ್ಮ ಎರಡು ದಿನಗಳ ಪ್ರವಾಸವನ್ನು ಮುಗಿಸಿದ ನಂತರ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಚಾಂಗಿ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಅಧಿಕೃತ ಸ್ವಾಗತ ನೀಡಲಾಯಿತು. ವಾಂಗ್ ಅವರನ್ನು ಭೇಟಿ ಮಾಡುವುದರ ಹೊರತಾಗಿ, ನರೇಂದ್ರ ಮೋದಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಹಿರಿಯ ಸಚಿವರಾದ ಲೀ ಸೀನ್ ಲೂಂಗ್ ಮತ್ತು ಹಿರಿಯ ಸಚಿವ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ವಾಂಗ್ ಮತ್ತು ಲೀ ಮೋದಿಯವರಿಗೆ ಪ್ರತ್ಯೇಕ ಊಟದ ಮೂಲಕ ಆತಿಥ್ಯ ನೀಡಲಿದ್ದಾರೆ. ‘ಸಿಂಗಾಪೂರ್‌ಗೆ ಬಂದಿಳಿದಿದೆ. ಭಾರತ-ಸಿಂಗಾಪುರದ ಸ್ನೇಹವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಸಭೆಗಳನ್ನು ಎದುರು ನೋಡುತ್ತಿದ್ದೇವೆ. ಭಾರತದ ಸುಧಾರಣೆಗಳು ಮತ್ತು ನಮ್ಮ ಯುವ ಶಕ್ತಿಯ ಪ್ರತಿಭೆಯು ನಮ್ಮ ರಾಷ್ಟ್ರವನ್ನು ಆದರ್ಶ ಹೂಡಿಕೆಯ ತಾಣವನ್ನಾಗಿ ಮಾಡುತ್ತದೆ. ನಾವು ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಎದುರು ನೋಡುತ್ತಿದ್ದೇವೆ’ ಎಂದು ನರೇಂದ್ರ ಮೋದಿ ಎಕ್ಸ್ನಲ್ಲಿ…
ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಸದ್ಯದಲ್ಲೇ ಅಮ್ಮನಾಗುತ್ತಿದ್ದಾರೆ. ಮೊದಲ ಮಗುವಿನ ಸ್ವಾಗತಕ್ಕೆ ರೆಡಿಯಾಗಿರೋದ ದೀಪಿಕಾ ಪಡುಕೋಣೆ ಇದೇ ಖುಷಿಯಲ್ಲಿ ಭರ್ಜರಿಯಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಲು ದೀಪಿಕಾ-ರಣವೀರ್ ಕಾಯ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಮದುವೆಯಾದ ಆರು ವರ್ಷಗಳ ಬಳಿಕ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಮಗುವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ದೀಪಿಕಾ ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ. ದೀಪಿಕಾ ಪಡುಕೋಣೆ ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ದೀಪಿಕಾ ಕೆಲವೊಂದು ಬೇಬಿ ಬಂಪ್ ಫೋಟೋ ಗಳನ್ನು ಹಂಚಿಕೊಂಡಿದ್ದರು. ಆದರೆ ಈ ಭಾರಿ ನಟಿ ಶೇರ್ ಮಾಡಿರುವ ಬೇಬಿ ಬಂಪ್ ಫೋಟೋಗಳು ಸಖತ್ ಡಿಫರೆಂಟ್ ಆಗಿದ್ದು ಮತ್ತಷ್ಟು ಸುಂದರವಾಗಿದೆ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಬ್ಲ್ಯಾಕ್ ಥೀಮ್ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ತೊಟ್ಟ ದೀಪಿಕಾ ಪಡುಕೋಣೆ…