ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಘಳಿಸಿದ್ದಾರೆ. ಸಾಲು ಸಾಲು ಚಿತ್ರಗಳು ಹಿಟ್ ಆದ ಹಿನ್ನೆಲೆಯಲ್ಲಿ 2020ರಲ್ಲಿ ಗೂಗಲ್ ನ್ಯಾಷನಲ್ ಕ್ರಶ್ ಟ್ರೆಂಡಿಂಗ್ ಪಟ್ಟವನ್ನು ರಶ್ಮಿಕಾಗೆ ನೀಡಿತ್ತು. ಇದೀಗ ಆ ಪಟ್ಟವನ್ನು ಮತ್ತೋರ್ವ ನಟಿ ಕಿತ್ತುಕೊಂಡಿದ್ದಾರೆ. ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಮೃಣಾಲ್ ಭಾಗಿಯಾಗಿದ್ದಾರೆ. ಕಾನ್ ಫೆಸ್ಟಿವೆಲ್ ನಲ್ಲಿ ಭಾಗಿಯಾದ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಮೃಣಾಲ್ ಗೆ ನ್ಯಾಷನಲ್ ಕ್ರಶ್ ಎಂದು ಕರೆದಿದ್ದಾರೆ. ಅದು ಟ್ರೆಂಡ್ ಕೂಡ ಆಗಿದೆ. ಹೀಗಾಗಿ ರಶ್ಮಿಕಾ ಹೆಸರಿನಲ್ಲಿದ್ದ ಆ ಪಟ್ಟ ಇದೀಗ ಮೃಣಾಲ್ ಪಾಲಾಗಿದೆ. ಟಾಲಿವುಡ್ ನ ಸೀತಾ ರಾಮಂ ಸಿನಿಮಾದ ಮೂಲಕ ಗಮನ ಸೆಳೆದವರು ಮೃಣಾಲ್ ಮೊದಲ ಚಿತ್ರದಲ್ಲೆ , ಸಾಕಷ್ಟು ಖ್ಯಾತಿ ಘಳಿಸಿದ್ದರು. ಈ ಸಿನಿಮಾದಲ್ಲಿನ ನಟನೆಗೆ ಬಹುತೇಕರು ಫಿದಾ ಆಗಿದ್ದರು. ಆ ಸಿನಿಮಾನೇ ಇಂದು ಕಾನ್ ಚಿತ್ರೋತ್ಸವಕ್ಕೆ ಹೋಗುವಂತೆ ಮಾಡಿದೆ. ಅಲ್ಲದೇ, ಮೃಣಾಲ್…
Author: Prajatv Kannada
ಝೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ‘ಜೊತೆ ಜೊತೆಯಲಿ’ ಧಾರವಾಹಿ ಅಂತ್ಯವಾಗಿದೆ. ಅನು ಸಿರಿಮನೆ ಪಾತ್ರದ ಮೂಲಕ ಮನೆ ಮಾತಾದ ನಟಿ ಮೇಘಾ ಶೆಟ್ಟಿ ಇದೀಗ ಧಾರವಾಹಿ ನಿಲ್ಲುತ್ತಿರುವ ಕುರಿತು ಪ್ರತಿಕ್ರಿಯೆನೀಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಬಳಿಕ ಮುಂದೇನು.? ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ. ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಸೀರಿಯಲ್ ಕಥೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಆರ್ಯ- ಅನು ಸಿರಿಮನೆ ಲವ್ ಸ್ಟೋರಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಈ ಶುಕ್ರವಾರ (ಮೇ 19)ಕ್ಕೆ ಸೀರಿಯಲ್ ಅಂತ್ಯವಾಗುತ್ತಿದೆ. ಈ ಬಗ್ಗೆ ಮೇಘಾ ಶೆಟ್ಟಿ ಮಾತನಾಡಿದ್ದಾರೆ. ‘ಜೊತೆ ಜೊತೆಯಲಿ’ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ನಾನೇ, ಕೊನೆಯ ಶಾಟ್ ಕೂಡ ನನ್ನದೆ. ಈ ಎರಡರ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಯಾರೂ ಪರಿಚಯವಿಲ್ಲದೇ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿಗಿನ ನಂಟನ್ನು ಮುಗಿಸುತ್ತಿದ್ದೇನೆ. ನಿರ್ದೇಶಕ ಜಗದೀಶ್, ಎಪಿಸೋಡ್ ನಿರ್ದೇಶಕರು ಸೇರಿದಂತೆ ಇಡೀ…
ಖ್ಯಾತ ನಟ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಎಂಟ್ರಿಕೊಡ್ತಿದ್ದಾರೆ. ಈಗಾಗಲೇ ನಟಿ ರಮ್ಯಾ, ನಟರಾದ ಡಾಲಿ ಧನಂಜಯ್, ಪ್ರೇಮ್, ಮಂಡ್ಯ ರಮೇಶ್ ಸೇರಿದಂತೆ ಹಲವು ಸಾಧಕರ ಕುರ್ಚಿಯನ್ನ ಅಲಂಕರಿಸಿದ್ದಾರೆ. ಈ ವಾರ ನಾಗೇಂದ್ರ ಪ್ರಸಾದ್ ಅತಿಥಿಯಾಗಿ ಭಾಗಿಯಾಗಿದ್ದಾರೆ. ಮಂಡ್ಯ ಜಿಲ್ಲೆಯವರಾದ ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕ ಕಳೆದಿದ್ದು ಗೀತ ಸಾಹಿತಿಯಾಗಿ ಖ್ಯಾತಿ ಘಳಿಸಿದ್ದಾರೆ. 2000ರಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಗೀತ ರಚನೆ ಮಾಡಿದ್ದ ನಾಗೇಂದ್ರ ಪ್ರಸಾದ್ ಆ ಬಳಿಕ ಸಾಲು ಸಾಲು ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ನೀಡಿದ್ದಾರೆ. ಸದ್ಯ ಕಾರ್ಯಕ್ರಮ ಪ್ರೋಮೋ ಕೂಡ ರಿವೀಲ್ ಆಗಿದೆ. ನಾನು ಯಾವ ಉದ್ಯೋಗ ಬಯಸಿದ್ದೆನೋ ಅದೇ ಉದ್ಯೋಗ ನನಗೆ ಸಿಕ್ಕಿದ್ದು ಇದೇ ನನ್ನ ಗೆಲುವು ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ . ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್‌ಗೆ…
ಮಹಾನಟಿ ಸಿನಿಮಾದ ಮೂಲಕ ಖ್ಯಾತಿ ಘಳಿಸಿರುವ ನಟಿ ಕೀರ್ತಿ ಸುರೇಶ್ ಸದ್ಯ ಸೌತ್ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ನಾಯಕಿಯಾಗುತ್ತಿರುವ ಕೀರ್ತಿ ಸುರೇಶ್ ಇದೀಗ ತಮ್ಮ ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ್ದಾರೆ. ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಹೊತ್ತಿನಲ್ಲೇ ಕೀರ್ತಿ ಸುರೇಶ್ ಮದುವೆ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ. ದಳಪತಿ ವಿಜಯ್ ಜೊತೆ ಕೀರ್ತಿ ಸುರೇಶ್ ಡೇಟಿಂಗ್ ಮಾಡುತ್ತಿದ್ದು ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಈಗ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಕೀರ್ತಿ ಸುರೇಶ್ ಉದ್ಯಮಿಯ ಪ್ರೀತಿಯಲಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಹದೊಂದು ಚರ್ಚೆಗೆ ಕಾರಣವಾಗಿದೆ. ಈತನ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದು, ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ…
ಟಾಲಿವುಡ್ ಯಂಗ್ ಹೀರೋ ವರುಣ್ ತೇಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಾಕಷ್ಟು ಸಮಯದಿಂದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ವರುಣ್ ತೇಜ್ ಫ್ಯಾನ್ಸ್ ಗೆ ಶುಭ ಸುದ್ದಿ ನೀಡಿದ್ದು ಸದ್ಯದಲ್ಲೇ ಲಾವಣ್ಯ ಜೊತೆ ಹಸೆಮಣೆ ಏರುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶ್ರೀಜಾ- ನಿಹಾರಿಕಾ ಇಬ್ಬರ ಡಿವೋರ್ಸ್ ಆಗಿರುವ ನೋವು ಮೆಗಾ ಫ್ಯಾಮಿಲಿಗೆ ಕಾಡುತ್ತಿದೆ. ಈ ಮಧ್ಯೆ ನಿಹಾರಿಕಾ ಸೋದರ ವರುಣ್ ತೇಜ್ ಮದುವೆ ಮಾಡಲು ಕುಟುಂಬಸ್ಥರು ನಿರ್ಧಾರಿಸಿದ್ದಾರೆ. ಇತ್ತೀಚಿಗೆ ಚಿರಂಜೀವಿ ಸಹೋದರ ನಾಗ ಬಾಬು ಪುತ್ರ ವರುಣ್ ತೇಜ್ ಮದುವೆ ಬಗ್ಗೆ ಮಾತನಾಡಿದ್ದರು. ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತವಾಗಿ ಹೇಳೋದಾಗಿ ತಿಳಿಸಿದ್ದರು. ಇದೀಗ ಮತ್ತೆ ಈ ಸುದ್ದಿಗೆ ಪುಷ್ಟಿ ಸಿಕ್ಕಿದೆ. ನಟಿ ಲಾವಣ್ಯ ತ್ರಿಪಾಠಿ ಜೊತೆ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ವರುಣ್- ಲಾವಣ್ಯ ಪ್ರೀತಿಸುತ್ತಿದ್ದು, ಇಬ್ಬರ ಪ್ರೀತಿಗೆ ಎರಡು…
ದೆಹಲಿ: ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ (DK Shivakumar) ಅವರು ಕೊನೆಗೂ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ (swearing-in ceremony) ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಕರ್ನಾಟಕದ ರಾಜ್ಯಪಾಲರಿಗೆ (governor) ಕಳೆದ ರಾತ್ರಿ ತಾವೇ ಖುದ್ದಾಗಿ ಪತ್ರ ಬರೆದಿರುವುದಾಗಿ ಶಿವಕುಮಾರ್ ಹೇಳಿದರು. ಉಪಮುಖ್ಯಮಂತ್ರಿ ಸ್ಥಾನ ನೀಡಿರುವ ಬಗ್ಗೆ ತೃಪ್ತಿ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಅವರು ಆ ಪ್ರಶ್ನೆಗೆ ಉತ್ತರಿಸುವ ಬದಲು, ಜನರು ನಮಗೆ ದೊಡ್ಡ ಮ್ಯಾಂಡೇಟ್ ನೀಡಿದ್ದಾರೆ, ಅವರ ಆಸೆ ಆಶೋತ್ತರಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳಾದ ಜಪಾನ್, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾಕ್ಕೆ ಇದೇ ತಿಂಗಳ 19 ರಿಂದ 24 ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಗ್ರೂಪ್ ಆಫ್ ಸೆವೆನ್ ಜಿ – 7 ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ವಾಡ್ ಸೇರಿದಂತೆ ಮೂರು ಪ್ರಮುಖ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಆರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಜಪಾನ್ ಅಧ್ಯಕ್ಷ ಕಿಶಿದಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಆ ದೇಶಕ್ಕೆ ಪ್ರಯಾಣಿಸುತ್ತಿದ್ದು, ತಮ್ಮ ಪ್ರವಾಸದ ಮೊದಲ ಹಂತದಲ್ಲಿ, ಪ್ರಧಾನಿ ಅವರು ಮೇ 19 ರಿಂದ 21 ರವರೆಗೆ ಜಪಾನಿನ ನಗರವಾದ ಹಿರೋಷಿಮಾಕ್ಕೆ ಭೇಟಿ ನೀಡಲಿದ್ದು, ಜಿ-7 ಮುಂದುವರಿದ ಆರ್ಥಿಕತೆಗಳ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ. ಈ ಸಭೆಯಲ್ಲಿ ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುವ…
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ.. ಕರ್ನಾಟಕ ಗೆದ್ದಾಕ್ಷಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದರ್ಥವಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ತನ್ನ ಸಾಧನೆಯ ಪೂರ್ವಭಾವಿಯಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ವಿಜಯವನ್ನು ತಪ್ಪಾಗಿ ಗ್ರಹಿಸಬಾರದು ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. IPAC ಸಂಸ್ಥಾಪಕರೂ ಕೂಡ ಆಗಿರುವ ಪ್ರಶಾಂತ್ ಕಿಶೋರ್ ತಮ್ಮ ತವರು ರಾಜ್ಯವಾದ ಬಿಹಾರದಲ್ಲಿ ಪ್ರಾರಂಭಿಸಿದ ರಾಜಕೀಯ ಅಭಿಯಾನವಾದ ‘ಜನ್ ಸೂರಾಜ್’ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದು, 2013 ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಸಹ ಅದು 2014 ರ ಸಂಸತ್ತಿನ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸೋಲು ಕಂಡಿತ್ತು. ಒಂದು ವರ್ಷದ ಹಿಂದೆ ಮೂರು ಪ್ರಮುಖ ರಾಜ್ಯಗಳಲ್ಲಿ ಗೆದ್ದ ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ ಹಳೆಯ ಪಕ್ಷವು ಸೋತಿತ್ತು ಎಂದು ಹೇಳಿದ್ದಾರೆ.ಕರ್ನಾಟಕದಲ್ಲಿ ಕಾಂಗ್ರೆಸ್‌ನ ಯಶಸ್ಸಿಗೆ ನಾನು ಅಭಿನಂದಿಸುತ್ತೇನೆ. ಆದರೆ ಲೋಕಸಭೆ ಚುನಾವಣೆಯಲ್ಲಿ…
ರಾಮನಗರ: ಚುನಾವಣೆಯ ಪ್ರಚಾರದ ಹಿನ್ನೆಲೆ ಬಿಜೆಪಿ ಮತದಾರರಿಗೆ ಹಣದ ಆಮಿಷವೊಡ್ಡಿದಕ್ಕಾಗಿಯೇ ಇಂದು ಜೆಡಿಎಸ್ ಸೋಲಲು ಕಾರಣ ಎಂದು ಪರೋಕ್ಷವಾಗಿಯೇ ಹೇಳುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‍ಗೆ ಹೀನಾಯ ಸೋಲು ವಿಚಾರದ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಮನಸ್ಥಿತಿಯನ್ನು ಹೊರದುಮ್ಮಿದ್ದಾರೆ. ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡುತ್ತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಈಡೇರಿಸ್ತಾರ? ಎಂಬ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದರು. ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ. ಎಲ್ಲಾ ಲೆಕ್ಕಾಚಾರ ಮಾಡಿಯೇ ಸ್ಕೀಂ ಮಾಡಿರುತ್ತಾರೆ. ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕ್ತಿದ್ದಾರೆ. ಹಾಗೇ ಕೆಲಕಾಲ ನೋಡೋಣ ಮುಂದೆ ಏನ್ ಮಾಡ್ತಾರೆ ಅಂತ ೆನ್ನುವ ಮೂಲಕ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸವಲಾಕುವ ರೀತಿ ಮಾತನಾಡಿದ್ದಾರೆ.
ರಾಮನಗರ: 2023 ಚುನಾವಣ ಕಣದಲ್ಲಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲಿ (Channapatna Constituency) ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ . ಕಾಂಗ್ರೆಸ್‌ನವರು ಎಲ್ಲರೂ ಮಲಗಿರುವ ಮಧ್ಯರಾತ್ರಿಯಂದು ಗ್ರಾಮಸ್ಥರಿಗೆ 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಹಣದ ಆಮಿಷವೊಡ್ಡಿ ಮತ ಪಡೆದು ಅವರನ್ನ ದಿಕ್ಕುತಪ್ಪಿಸಿದ್ದಾರೆ. ಈ ರೀತಿಯ ಕುತಂತ್ರದಿಂದ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy)ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನನ್ನ ತಂದೆ ನಿಮ್ಮನ್ನೆಲ್ಲ ನಂಬಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು ನೀವು ಅವರ ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆಯೂ ಕೂಡ ನಿಮ್ಮ ಸಮ್ಮುಖದಲ್ಲಿ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಕೈ ಬಿಡದೆ ಗೆಲ್ಲಿಸಿದರು. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈಹಿಡಿದಿದ್ದಾರೆ. ಕುಮಾರಣ್ಣನ (HD Kumaraswamy) ಮೇಲೆ ಜನರ ಪ್ರೀತಿ ಕಂಡು ನಾನೇ ನಿಬ್ಬೆರಗಾದೆ. ಇಡೀ ರಾಮನಗರ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗೆ ಹೋಲಿಸಿಕೊಂಡ್ರೆ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಈ ನಮ್ಮ ಚನ್ನಪಟ್ಟಣದಲ್ಲೆ. ನಾನು…