ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಿ ದೊಡ್ಡ ವ್ಯಕ್ತಿ ಮಾಡುತ್ತೇವೆ ಅಂದರು. ಇದನ್ನು ಕೇಳಿಸಿಕೊಂಡ ಕೆಲವರು ನನಗೆ ಬಗಣಿಗೂಟ ಇಟ್ಟರು ಎಂದು ಮಾಜಿ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಇವತ್ತಿಂದ ನಿಮ್ಮ ಪೆನ್ನು ಪೇಪರ್ ಕೆಲಸ ಮಾಡಲಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕಿತ್ತು ಹಾಕಲಿ ಎಂದು ಚಾಮರಾಜನಗರ ಕ್ಷೇತ್ರ ಸೋಲಿನ ಕುರಿತು ಸೋಮಣ್ಣ ಪರೋಕ್ಷವಾಗಿ ಒಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಷೇತ್ರಕ್ಕೆ ಅವನು ಮೊದಲು ಬಂದಾಗಲೇ ಒಳಕ್ಕೆ ಬಿಡಬಾರದಿತ್ತು. ಮಠಗಳಿಗೆ ಅನುದಾನ ನೀಡಿ ಅದರಲ್ಲೇ ಕಮಿಷನ್ ಪಡೆದ. ನನ್ನ ವಿರುದ್ಧ ಜಾತಿ ಎತ್ತಿಕಟ್ಟಿದ, ನನ್ನ ಮಗ ಇಲ್ಲಿಗೆ ಬರುತ್ತಾನೆ ಎಂದು ಕಥೆ ಕಟ್ಟಿದ. ನನ್ನ ವಿರುದ್ಧ ಅಪಪ್ರಚಾರ ಮಾಡಿದ. ಅವನ ಮಾತು ಕೇಳಿಕೊಂಡು ನನ್ನ ವಿರುದ್ಧ ಕೆಲವರು ಕುತಂತ್ರ ಮಾಡಿದರು. ಅವನಿಗೆ ಯಾರು ಹೇಳಿ ಕೊಟ್ಟರು ಎಂದು ನನಗೆ ಗೊತ್ತು. ಯಥಾರಾಜ…
Author: Prajatv Kannada
ನವದೆಹಲಿ : ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಇಂದು ಅಥವಾ ನಾಳೆ ಸಿಎಂ ಆಯ್ಕೆ ಆಗಲಿದೆ. ಸಿಎಂ ಹುದ್ದೆ ಆಯ್ಕೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತೊಂದು ಪಟ್ಟು ಹಿಡಿದಿದ್ದಾರೆ. ಈ ಮೂಲಕ ಮಾಡಲು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರೇ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಹೌದು. ಮಲ್ಲಿಕಾರ್ಜುನ ಖರ್ಗೆ ಮೂಲಕ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರಲು ಡಿ.ಕೆ ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ರಾಹುಲ್ ಗಾಂಧಿ (Rahul Gandhi) ಜೊತೆಗಿನ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಖರ್ಗೆ ನಿವಾಸಕ್ಕೆ ಡಿಕೆಶಿ ಆಗಮಿಸಿ ದ್ದಾರೆ. ರಾಹುಲ್ ಗಾಂಧಿಗೆ ಪರಿಸ್ಥಿತಿ ಮನವರಿಕೆ ಮಾಡುವಂತೆ ಖರ್ಗೆಗೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಇದನ್ನು ಅರ್ಥ ಮಾಡಿಸಿ ಎಂದು ಮನವಿ ಮಾಡಿಕೊಂಡಿರುವ ಅವರು, ನೀವು ಸಿಎಂ ಆಗಿ ಇಲ್ಲ ಪರಿಸ್ಥಿತಿ ಅರ್ಥ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಈಗ ಖರ್ಗೆಯನ್ನ ಡಿಕೆಶಿ ಮನವೊಲಿಸ್ತಾರಾ? ಅಥವಾ ಡಿಕೆಶಿಯನ್ನ ಖರ್ಗೆ…
ಬೆಂಗಳೂರು: ಶೀಘ್ರದಲ್ಲೇ ಸಿಬಿಐ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಳ್ಳುವೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಅಧಿಕಾರವನ್ನು ಶೀಘ್ರದಲ್ಲಿಯೇ ಹಸ್ತಾಂತರ ಮಾಡುತ್ತೇನೆ. ಕರ್ನಾಟಕ ಡಿಜಿ, ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಣೆಯಿಂದ ಹೊರಬರುತ್ತಿದ್ದೇನೆ. ಇವು ಕರ್ನಾಟಕ ಡಿಜಿ ಆಯಂಡ್ ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದು ಕೊನೆಯ ಟ್ವೀಟ್ ಆಗಿವೆ ಎಂದು ಬರೆದುಕೊಂಡಿದ್ದಾರೆ. 2020ರಲ್ಲಿ ಈ ಖಾತೆಯ ನಿರ್ವಹಣೆಯನ್ನು ಪ್ರಾರಂಭಿಸಿದ್ದೆ. ಸಾಕಷ್ಟು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. 1.6 ಲಕ್ಷ ಜನ ಈ ಖಾತೆಯನ್ನ ಅನುಸರಿಸುತ್ತಿರುವುದು ತುಂಬಾ ಖುಷಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಕರ್ನಾಟಕ ಪೊಲೀಸರಿಗೆ ಸಂಬಂಧಿಸಿದ ಅಧಿಕೃತ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಗಳಿಗಾಗಿ ತುಂಬಾ ಧನ್ಯವಾದಗಳು. ನಾನು ನನ್ನ ವೈಯಕ್ತಿಕ ಟ್ವಿಟರ್ ಅಕೌಂಟ್ ಬಳಸುವುದನ್ನು ಮುಂದುವರಿಸುತ್ತೇನೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಬೆಂಗಳೂರು: ಸಿಎಂ ಸ್ಥಾನ ಸಿದ್ದರಾಮಯ್ಯಗೆ ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಅನುಭವ ಇದೆ. ಕಳೆದ ಬಾರಿಯಂತೆ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ. ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ. ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ. ಡಿಕೆ ಶಿವಕುಮಾರ್ ಡಿಸಿಎಂ ಇರಬಹುದು, ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಲೋಕಸಭೆ ಚುನಾವಣೆ ಕೂಡ ಮಾಡ್ತೇವೆ. ನಾನೂ ಕೂಡ ಡಿಸಿಎಂ ಕ್ಲೇಮ್ ಮಾಡ್ತೇನೆ. ಬೇರೆ ಸಮುದಾಯಕ್ಕೆ ಡಿಸಿಎಂ ಕೊಟ್ಟರೆ ಕ್ಲೇಮ್ ಮಾಡ್ತೀನಿ. ವೈಯಕ್ತಿಕವಾಗಿ ಡಿಸಿಎಂ ಬೇಡ, ಸಚಿವನಾಗಿಯೇ ಇರ್ತೀನಿ. ಡಿಕೆ ಶಿವಕುಮಾರ್ ಕೆಲಸ ಕೊಡುಗೆ ಬಹಳ ಇದೆ. ಸಮಾಧಾನಕರ ರೀತಿಯಲ್ಲೇ ಸಂಧಾನ ಆಗಿದೆ ಅವರ ಮಧ್ಯೆ. ಒಬ್ಬರೇ ಸಿಎಂ–ಡಿಸಿಎಂ ಇದ್ದರೆ ಒಳ್ಳೆಯದು ಎಂದರು
ಬೆಂಗಳೂರು: ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ್ತೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ರಾಜ್ಯದಲ್ಲಿ ಇಡೀ ಬಿಜೆಪಿ ಸೋಲುವಂತಾಯಿತು. ಬಿಜೆಪಿ ಪಕ್ಷದ ಎಲ್ಲರೂ ನನ್ನ ವಿರುದ್ಧ ನಿಂತರೂ, ಅದರ ಫಲವಾಗಿ ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಿದೆ. ನಾನು ಬಿಜೆಪಿ ಪಕ್ಷ ಬಿಟ್ಟು ಬಂದಿದ್ದು, ಮುಂದೆ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ್ತೆ ಹೋಗುವುದಿಲ್ಲ. ಕಾಂಗ್ರೆಸ್‍ನಲ್ಲೇ ಮುಂದುವರಿಯುತ್ತೇನೆ. ನಾನು ಪಕ್ಷ ಬಿಟ್ಟು ಹೊರಟಾಗ ಮಾತನಾಡಿಸಬೇಕೆಂಬ ಸಣ್ಣ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು. ಚುನಾವಣೆ ಫಲಿತಾಂಶ ಕಳೆದು ನಾನು ಬೆಂಗಳೂರಿಗೆ ಬಂದ ಮೇಲೆ ಸಾಕಷ್ಟು ಕಾಂಗ್ರೆಸ್ ನಾಯಕರು ಮನೆಗೆ ಬಂದು ಮಾತನಾಡಿಸಿ ಹೋಗಿದ್ದಾರೆ. ಡಾ.ಜಿ.ಪರಮೇಶ್ವರ್ ಮಾತನಾಡಿಸಿ ನೀವು ಪಕ್ಷಕ್ಕೆ ಬಂದ ಮೇಲೆ ಒಳ್ಳೆಯದಾಗಿದೆ ಎಂದಿದ್ದರು. ನಾನು ಬಂದ ಮೇಲೆ ಲಿಂಗಾಯತರ ಮತಗಳು ಕೂಡ ಬಂದಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಶುರು ಮಾಡಿದ್ದ ‘ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ’ಗೆ ಗ್ರಹಣ ಹಿಡಿದಿದೆ. ಬಿಬಿಎಂಪಿಯ 8 ವಲಯಗಳಲ್ಲೂ ಜಾರಿಗೆ ತರಲು ಉದ್ದೇಶಿಸಿದ್ದ ಪಾವತಿ ಪಾರ್ಕಿಂಗ್ ಯೋಜನೆಗೂ ಮುಹೂರ್ತ ಕೂಡಿ ಬಂದಿಲ್ಲ! ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ವಾಣಿಜ್ಯ ಪ್ರದೇಶಗಳಾದ ಎಂ.ಜಿ.ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರಬಾ ರಸ್ತೆ, ರಿಚ್ಮಂಡ್ ರಸ್ತೆ, ಮ್ಯೂಸಿಯಂ ರಸ್ತೆ, ವಿಠಲ್‌ಮಲ್ಯ ರಸ್ತೆ ಸೇರಿದಂತೆ 85 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಈ ಸಂಬಂಧ ‘ಸೆಂಟ್ರಲ್ ಪಾರ್ಕಿಂಗ್ ಸವೀರ್‍ಸ್’ ಎಂಬ ಸಂಸ್ಥೆಯೊಂದಿಗೆ ಪಾಲಿಕೆಯು 10 ವರ್ಷಗಳ ಅವಧಿಗೆ ಒಡಂಬಡಿಕೆ ಸಹ ಮಾಡಿಕೊಂಡಿದೆ. ಇದರಿಂದ ವಾರ್ಷಿಕ 31.56 ಕೋಟಿ ರೂ. ವರಮಾನ ನಿರೀಕ್ಷಿಸಲಾಗಿತ್ತು. ಸೆಂಟ್ರಲ್ ಪಾರ್ಕಿಂಗ್ ಸವೀರ್‍ಸ್ ಸಂಸ್ಥೆಯು 2020ರ ಸೆಪ್ಟಂಬರ್ 19ರಂದು ಎಂ.ಜಿ.ರಸ್ತೆ ಸೇರಿದಂತೆ 10 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು, ಶುಲ್ಕ ವಸೂಲಿ ಆರಂಭಿಸಿತು. ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ…
ಬೆಂಗಳೂರು: ಸಿದ್ದರಾಮಯ್ಯ ಅಭಿಮಾನಿ ಸತೀಶ್ ಸಿದ್ದರಾಮಯ್ಯ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಉತ್ತಮ ನಾಯಕ. ಅವರ ಸೇವೆ, ರಾಜ್ಯದಲ್ಲಿ ಜಾರಿಗೊಳಿಸಿರುವ ಯೋಜನೆಯೇ ನನಗೆ ಪ್ರೇರಣೆ. ಎರಡೂವರೆ ವರ್ಷದ ಹಿಂದೆ ಟ್ಯಾಟ್ಯೂ ಹಾಕಿಸಿಕೊಂಡಿದ್ದೆ. ಟ್ಯಾಟ್ಯೂ ನೋಡಿ ಸಿದ್ದರಾಮಯ್ಯ ಸರ್ ಬೈದ್ರು. ಹೇಯ್ ಏನೊ ಇದು, ಹಿಂಗೆಲ್ಲ ಹಾಕಿಸಿಕೊಳ್ಳಬೇಡ ಅಂದ್ರು. ಎರಡು ಏಟು ನನ್ನ ಭುಜದ ಮೇಲೆ ಹೊಡೆದ್ರು. ನಮ್ಮ ಮನೆಯವರು ಸ್ನೇಹಿತರು ಎಲ್ಲರೂ ಖುಷಿ ಪಟ್ರು. ಮತ್ತೆ ಸಿಎಂ ಆದ್ರೆ ಹಲವು ಹಲವು ಯೋಜನೆಗಳನ್ನ ಜಾರಿಗೆ ತರುತ್ತಾರೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕು ಎಂದು ಅಭಿಮಾನಿ ಸತೀಶ್ ಖುಷಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸೋಮವಾರ ಸಿದ್ದರಾಮಯ್ಯನವರ (Siddaramaiah) ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಗುರುವಾರ ಮಧ್ಯಾಹ್ನ 3:30ಕ್ಕೆ ಸಿದ್ದರಾಮಯ್ಯ ಮತ್ತು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಅಧಿಕಾರಿಗಳು ಸಿದ್ಧತೆಗಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳ ಮುಂದೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನ ಬೆಂಬಲಿತ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆಯಿದೆ. 2013 ರಲ್ಲೂ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣವಚನ ಸ್ವೀಕರಿಸಿ 5 ವರ್ಷ ಅಧಿಕಾರ ನಡೆಸಿದ್ದರು. ಈ ಕಾರಣಕ್ಕೆ ಎರಡನೇ ಬಾರಿ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣ ವಚನ ನಡೆಸಲಿದ್ದಾರೆ.
ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಎರಡು ಪ್ರಮುಖ ಖಾತೆಗಳಿಗೆ ಡಿಕೆಶಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇಂಧನ ಮತ್ತು ನೀರಾವರಿ ಮೇಲೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.