Author: Prajatv Kannada

ನವದೆಹಲಿ: ಸಲಿಂಗ ವಿವಾಹ (Same Sex Marriages) ವಿಚಾರ ಸಂಸತ್ತಿನ ವ್ಯಾಪಿಗೆ ಬರುವ ಹಿನ್ನೆಲೆ ಅದಕ್ಕೆ ಮಾನ್ಯತೆ ನೀಡುವ ಬಗ್ಗೆ ಸಂಸತ್ತು ನಿರ್ಧರಿಸಬೇಕು, ಇದರಲ್ಲಿ ಸುಪ್ರೀಂಕೋರ್ಟ್ (Supreme Court) ಮಧ್ಯಪ್ರವೇಶ ಮಾಡಬಾರದು ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಒಂದು ವೇಳೆ ವಿಚಾರಣೆ ನಡೆಸುವುದಾದರೆ ಅರ್ಜಿ ಸಿಂಧುತ್ವದ ಬಗ್ಗೆ ಮೊದಲು ವಿಚಾರಣೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. ಸಲಿಂಗ ವಿವಾಹಗಳ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭವಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ. ಇಂದು ವಿಚಾರಣೆ ವೇಳೆ ವಾದ ಆರಂಭಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ ಮಧ್ಯಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಲಿಂಗ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದರು.  ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಐ ಡಿ.ವೈ ಚಂದ್ರಚೂಡ್ ಮೊದಲು ನಾವು ಅರ್ಜಿದಾರರ ವಾದವನ್ನು ಆಲಿಸುತ್ತೇವೆ. ಆ ಬಳಿಕ…

Read More

ನವದೆಹಲಿ :ಉತ್ತರ ಪ್ರದೇಶದ ವಾರಣಸಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ವೈದ್ಯರು ಮಹದಾಶ್ಚರ್ಯ ಎನಿಸುವಂಥ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸರುವ ಬಿಎಚ್‌ಯು ವೈದ್ಯರು 14 ದಿನಗಳ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳನ್ನು ಹೊರತೆಗೆದಿದ್ದಾರೆ. ಅಂದಾಜು ಮೂರು ಗಂಟೆಗಳ ಕಾಲ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಏಳು ವೈದ್ಯರ ತಂಡ ಭಾಗಿಯಾಗಿತ್ತು. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಮಗು ಹುಟ್ಟುವಾಗ 3.3 ಕೆಜಿ ತೂಕವಿತ್ತು. ಆದರೆ, ಶಸ್ತ್ರಚಿಕಿತ್ಸೆ ನಡೆದ ಬಳಿಕ ಮಗು 2.8 ಕೆಜಿ ತೂಕವಿದೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಡಾ. ಶೇತ್‌ ಕಚುಪ್‌, ಇಲ್ಲಿನ ಸ್ಥಳೀಯ ಮೌ ಜಿಲ್ಲೆಯ ನಿವಾಸಿಗಳಾಗಿರುವ ದಂಪತಿಗಳು ಇತ್ತೀಚೆಗೆ ತಮ್ಮ 10 ದಿನದ ಮಗುವಿನೊಂದಿಗೆ ಬಿಎಚ್‌ಯುಗೆ ಬಂದಿದ್ದರು. ಈ ಮಗುವಿನ ಹಿಟ್ಟೆ ಊದಿಕೊಂಡಿತ್ತಲ್ಲದೆ, ಉಸಿರಾಡಲು ಕಷ್ಟಪಡುತ್ತಿತ್ತು. ಆ ಬಳಿಕ ಮಗುವಿನ ಹೊಟ್ಟೆಯ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲಾಯಿತು. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಸಿಟಿ ಸ್ಕ್ಯಾನ್‌ ಕೂಡ ಮಾಡಲಾಯಿತು.…

Read More

ಅಹ್ಮದಾಬಾದ್: ಇಲ್ಲೊಬ್ಬ ಪಾನಿಪುರಿ ಪ್ರಿಯ  ಬಸ್  ಚಾಲಕ ಪಾನಿಪುರಿ ತಿನ್ನುವುದಕ್ಕಾಗಿಯೇ ಬಸ್‌ನ್ನು ರಸ್ತೆ ಪಕ್ಕಾ ನಿಲ್ಲಿಸಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾನೆ.  ಗುಜರಾತ್‌ನ ಅದಲಾಜ್ ಎಂಬಲ್ಲಿ ಈ ಘಟನೆ ನಡೆದಿದೆ.  ಕರ್ತವ್ಯದಲ್ಲಿರುವಾಗಲೇ ಬಿಆರ್‌ಟಿಎಸ್ ಬಸ್ ಚಾಲಕನಿಗೆ ಪಾನಿಪುರಿ ತಿನ್ನುವ ಉತ್ಕಟ ಆಸೆಯಾಗಿದ್ದು, ಇದಕ್ಕಾಗಿ ಆತ ತನ್ನ ಕೆಲಸದ ಬಗ್ಗೆಯೂ ಯೋಚಿಸದೇ, ಬಸ್‌ ಪೂರ್ತಿ ತುಂಬಿದ್ದ ಜನರನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ರೆಸಿಡೆನ್ಶಿಯಲ್ ಸೊಸೈಟಿಯೊಂದರ ಮುಂದೆ ಬಸ್ ನಿಲ್ಲಿಸಿದ ಆತ ಸೀದಾ ಹೋಗಿ ಪಾನಿಪುರಿ ವಾಲಾನ ಮುಂದೆ ನಿಂತಿದ್ದಾನೆ. 10 ನಿಮಿಷಗಳಲ್ಲಿ ಆತ ವಾಪಾಸ್ ಬಂದಿದ್ದರೂ, ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಪಾನಿಪುರಿ ತಿನ್ನಲು ಹೋದ ಆತನ ವರ್ತನೆ ಬಗ್ಗೆ ಸಿಟ್ಟಿಗೆದ್ದ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ, ಪರಿಣಾಮ ಆತನಿಗೆ ಅಮಾನತಿನ ಶಿಕ್ಷೆಯಾಗಿದೆ.  ಕಳೆದ ಈ ಘಟನೆ ನಡೆದಿದ್ದು,  ಈತ ಪಾನಿಪುರಿ ತಿನ್ನುತ್ತಿರುವುದನ್ನು ಯಾರೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಆತನಿಗೆ ಅಮಾನತಿನ ಶಿಕ್ಷೆ ನೀಡಿದ್ದಾರೆ. ಹೀಗೆ…

Read More

ಬಳ್ಳಾರಿ: ಐದು ಸಲ ಶಾಸಕ, ಒಮ್ಮೆ ಸಂಸದರಾಗಿ ಆಯ್ಕೆ ಆಗಿರುವ ಬಿ.ಶ್ರೀರಾಮುಲು ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಅವರು ಮಾತ್ರವಲ್ಲದೆ ಅವರ ಪತ್ನಿ ಹಾಗೂ ಮಕ್ಕಳಿಬ್ಬರೂ ಕೋಟ್ಯಧಿಪತಿ ಎಂಬುದು ಈ ವೇಳೆ ಬಹಿರಂಗಗೊಂಡಿದೆ. ಶ್ರೀರಾಮುಲು 47 ಕೋಟಿ ರೂ. ಒಡೆಯರಾಗಿದ್ದರೆ, ಅವರ ಪತ್ನಿ ಬಿ.ಭಾಗ್ಯಲಕ್ಷ್ಮಿ, ಮಕ್ಕಳಾದ ಬಿ.ದೀಕ್ಷಿತಾ, ಬಿ.ಧನುಶ್ ಕೂಡ ಕೋಟ್ಯಧಿಪತಿ. ರಾಮುಲು ಅವರ ಚರಾಸ್ತಿ 6.91 ಕೋಟಿ ರೂ., ಸ್ಥಿರಾಸ್ತಿ 39.65 ಕೋಟಿ ರೂ. ಆಗಿದ್ದು, ಪತ್ನಿ ಭಾಗ್ಯಲಕ್ಷ್ಮಿ ಹೆಸರಿನಲ್ಲಿ ಚರಾಸ್ತಿ 1.31 ಕೋಟಿ ರೂ. ಸ್ಥಿರಾಸ್ತಿ 20.29 ಕೋಟಿ ರೂ. ಇದೆ. ಮಗಳು ದೀಕ್ಷಿತಾ 2.95 ಕೋಟಿ ರೂ., ಮಗ ಧನುಶ್ 1.30 ಕೋಟಿ ರೂ., ಮಗಳು 27.99 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. 1.20 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು, 75.26 ಲಕ್ಷ ರೂ. ಮೌಲ್ಯದ ಬೆಂಜ್ ಕಾರು, 38.81 ಲಕ್ಷ ರೂ. ಮೌಲ್ಯದ ಬಸ್‌ ಶ್ರೀರಾಮುಲು ಹೊಂದಿದ್ದಾರೆ. ರಾಮುಲು…

Read More

ತುಮಕೂರು: ಜಿ.ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಕಿಡಿಗೇಟಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಕೊರಟಗೆರೆಯ ಮಿನಿ ವಿಧಾನಸೌಧದ ಬಳಿ ಈ ಗಟನೆ ನಡೆದಿದ್ದು, ಈ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಹಿಳಾ ಪೋಲಿಸ್‌ ಸಿಬ್ಬಂದಿಗೆ ಗಂಭಿರಗಾಯವಾಗಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೇಬಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಠಿಚಾರ್ಜ್​​ ಮಾಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುಖಂಡರು ಆ್ಯಪಲ್​ ಹಾರ ಹಾಕಿದ್ದರು. ಈ ವೇಳೆ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ಕಾರ್ಯಕರ್ತರ ನಡುವೆ ತಳ್ಳಾಟ ಉಂಟಾಗಿದೆ. ಹಾಗಾಗಿ ಲಾಠಿ ಪ್ರಹಾರ ನಡೆಸಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದಾರೆ.

Read More

ಬೆಳಗಾವಿ: 2018ರ ವಿಧಾನಸಭೆ ಚುನಾವಣೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಲಕ್ಷ್ಮೀ ಹೆಬ್ಬಾಳಕರ್ ಹಸಿರು ಸೀರೆ ಧರಿಸಿದ್ದರು. ಈಗ ತಮ್ಮ ನಾಮಪತ್ರ ಸಲ್ಲಿಸುವಾಗಲೂ ಅದೇ ಹಸಿರು ಸೀರೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಿಂಚಿದ್ದು ವಿಶೇಷವಾಗಿತ್ತು. ಈ ಹಸಿರು ಸೀರೆಯನ್ನು ಅವರ ತಾಯಿ ಗಿರಿಜಾ ಅವರು ನೀಡಿದ್ದಾರೆ. ಈ ಸೀರೆ ಶುಭ ಸಂಕೇತವಾಗಿರುವುದರಿದ ಹೆಬ್ಬಾಳಕರ್ ಅವರು ಇದನ್ನೇ ಧರಿಸಿ ನಾಮಪತ್ರ ಸಲ್ಲಿಸಿದರು. ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನೀಡಿದ ಆಶೀರ್ವಾದ ಹೂ ಸಹಿತ ಡಬ್ಬಿಯಲ್ಲಿ ತಂದಿದ್ದರು. ಈ ಡಬ್ಬಿಯನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪ್ರತಿ ನಾಮಪತ್ರ ಸಲ್ಲಿಸುವಾಗಲೂ ಹೆಬ್ಬಾಳಕರ್ ದೇವಿಯ ಹೂ ತರುವುದು ವಿಶೇಷ.

Read More

ಮೈಸೂರು: ವರುಣಾ ಕ್ಷೇತ್ರದಿಂದ (Varuna Constituency) ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಬೆಳಗ್ಗೆ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಿಗೂ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದಾರೆ. ಬಳಿಕ ನಂಜಗೂಡಿನಲ್ಲಿ (Nanjangud) ನಡೆದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನಗೆ ಕೊನೆಯ ಚುನಾವಣೆ, ಹಾಗಾಗಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ, ಆಮೇಲೆ ಯತೀಂದ್ರ, ಧವನ್ ರಾಕೇಶ್ ಇದ್ದಾರೆ. ಧವನ್‌ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಓದು ಮುಗಿಸಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್‌ ಮೇಲೆ ಇದ್ದ ಪ್ರೀತಿಯನ್ನ ಅವನ ಮಗನ ಮೇಲೂ ತೋರಿಸುತ್ತಿದ್ದೀರಿ ಅದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಬಿಜೆಪಿ (BJP) ಅವರು ಬೆಂಗಳೂರಿನ ನಿವಾಸಿ ಸೋಮಣ್ಣ (V Somanna) ಅವರನ್ನ ಕಣಕ್ಕಿಳಿಸಿದೆ.…

Read More

ಬಾಗಲಕೋಟೆ : ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದೇನೆ. ಉತ್ತರ ಕರ್ನಾಟಕದಲ್ಲಂತೂ ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಮಹತ್ವ ದೊರಕುತ್ತಿದ್ದು, ಈ ಬಾರಿ ಕರ್ನಾಟಕ ರಾಜ್ಯದ ಜನತೆ ಆಪ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು. ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ತೇರದಾಳ ಕ್ಷೇತ್ರದ ಆಪ್‌ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಕಟ್ಟಕಡೆಯ ಮತದಾರ ಆಮ್ ಆದ್ಮಿ ಪಕ್ಷದ ವಿಶ್ವಾಸ ಹಾಗು ದೆಹಲಿಯಲ್ಲಿ ಮಾಡಿದ ಕಾರ್ಯಗಳಿಗೆ ಆಶೀರ್ವದಿಸಿ ಸರ್ಕಾರ ಮಾಡುವದರ ಜೊತೆಗೆ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ್ದಾರೆ.ಇದೇ ಮಾದರಿ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು. ಸರ್ಕಾರ ರೂಪಿಸಲು ಯಾವದೇ ತಂತ್ರಗಾರಿಕೆ ಬೇಕಿಲ್ಲ. ಪ್ರಾಮಾಣಿಕ ಹಾಗು ಜನತೆಗೆ ಉದ್ಯೋಗ ಸೃಷ್ಟಿಸುವದರೊಂದಿಗೆ ರೈತರಿಗೆ ಒಳಿತಾಗುವ ಕಾರ್ಯದಲ್ಲಿ ತೊಡಗುವಲ್ಲಿ ಆಪ್ ನಿಸ್ಸೀಮವಿದೆ. ಇದೊಂದು ವಿಶ್ವಾಸದಿಂದ ಸರ್ಕಾರ ನಿಶ್ಚಿತವಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದು, ಹೊಸ ಪ್ರಯೋಗದಲ್ಲಿ ವಿನೂತನ ಸಾಧನೆ ಆಪ್ ಮಾಡಲಿದೆ…

Read More

ಶಿವಮೊಗ್ಗ: ಶಿಕಾರಪುರ ವಿಧಾನಸಭಾ ಕ್ಷೇತ್ರ (Shikaripur Assembly Constituency) ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಅವರು ಇಂದು (ಏ.19) ರಂದು ನಾಮಪತ್ರ ಸಲ್ಲಿಸಲು ಬಿಎಸ್​ ಯಡಿಯೂರಪ್ಪ (BS Yediyurappa) ಅವರೊಂದಿಗೆ ಲಕ್ಕಿ ಅಂಬಾಸಿಡರ್​ ಕಾರಿನಲ್ಲಿ ಹೋಗಿದ್ದು ವಿಶೇಷವಾಗಿತ್ತು. ಬಿವೈ ವಿಜಯೇಂದ್ರ ಅವರು ಈ ಅಂಬಾಸಿಡರ್ (Ambassador) ಕಾರಿನಲ್ಲಿ ಹೋಗಲು ಕಾರಣವೂ ಇದೆ. ಬಿಎಸ್​ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಇದೇ ಅಂಬಾಸಿಡರ್ ಕಾರನ್ನು ಬಳಸಿದ್ದರು. ಈ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್​ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ​ಕಾರನ್ನು ಬಳಸುತ್ತಿದ್ದರು. ಈ ಕಾರು ಬಿಎಸ್​ ಯಡಿಯೂರಪ್ಪ ಅವರಗೆ ಲಕ್ಕಿ ಕಾರ್ ಆಗಿದೆ. ಈ ಹಿನ್ನೆಲೆ ಪುತ್ರನ ನಾಮಪತ್ರಿಕೆ ಸಲ್ಲಿಕೆಗೆ ಹೋಗುವಾಗಲೂ ಲಕ್ಕಿ ಕಾರನ್ನೇ ಬಳಸಿದ್ದಾರೆ. ಇನ್ನು ಬಿಎಸ್​ ಯಡಿಯೂರಪ್ಪ ಅವರು ಈ ಬಾರಿ ಚುನಾಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ತಮ್ಮ ಕ್ಷೇತ್ರವನ್ನು ಶಿಕಾರಿಪುರವನ್ನು ಪತ್ರ, ಬಿವೈ ವಿಜಯೇಂದ್ರ ಅವರಿಗೆ ಬಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆ ಈ…

Read More

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದ್ದು ಘಟಾನುಘಟಿ ನಾಯಕರು ಆಯಾ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜು ನಾಯಕ್ ಅವರು ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಬಾರೀ ಜನ ಬೆಂಬಲದೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಭಾಗಿಯಾಗಿದ್ರು. ಶ್ರೀ ರಾಜು ನಾಯಕ್ ಅವರಿಗೆ ಬೆಂಬಲವಾಗಿ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಉಪಸ್ಥಿತರಿದ್ದು ಅವರ ನೇತೃತ್ವದಲ್ಲೇ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಕೂಡ ಉತ್ಸಾದಿಂದ ಭಾಗಿಯಾಗಿ ಜೆಡಿಎಸ್ ಅಭ್ಯರ್ಥಿ ರಾಜು ನಾಯಕ್ ಗೆ ಬೆಂಬಲ ಸೂಚಿಸಿದರು.

Read More