ಸಾಕಷ್ಟು ಸಮಯದ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿದ್ದಾರೆ. ತೀರಾ ಅಪರೂಪಕ್ಕೆ ಎನ್ನುವಂತೆ ಸಿನಿಮಾಗಳನ್ನು ಮಾಡುವ ರಾಧಿಕಾ, ಈ ಬಾರಿ ಪ್ಯಾನ್ ಇಂಡಿಯಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಸಹಿ ಮಾಡಲು ತಮ್ಮ ಸಹೋದರ ಕಾರಣ ಎಂದು ಹೇಳಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದ್ದು ಈ ಚಿತ್ರಕ್ಕೆ ರಾಧಿಕಾ ಕುಮಾಸ್ವಾಮಿ ಸಹೋದರ ಬಂಡವಾಳ ಹೂಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸಲು ರಾಧಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಜಾಗ್ರತ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಜೋಡಿಯಾಗಿ ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
Author: Prajatv Kannada
ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಕಳೆದ ಕೆಲ ತಿಂಗಳುಗಳಿಂದ ತಮ್ಮ ರಿಲೇಷನ್ ಶಿಪ್ ಕುರಿತಾಗಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇಬ್ಬರು ತಮ್ಮ ಸಂಬಂಧದ ಕುರಿತು ಬಹಿರಂಗವಾಗಿಯೇ ಮಾತನಾಡುತ್ತಿದ್ದು ಈ ಮಧ್ಯೆ ತಮ್ಮದೇ ರಿಯಲ್ ಲೈಫ್ ಸ್ಟೋರಿಯನ್ನ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಸಿಕ್ಸ್ತ್ ಸೆನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ‘ಆಕಾಶ ಬಿದ್ದರೂ, ಭೂಮಿ ಬಾಯ್ತೆರೆದರೂ ಒಟ್ಟಿಗೆ ಇರ್ತೆವೆ’ ಎಂದು ಹೇಳಿಕೊಂಡಿದ್ದಾರೆ. ಪ್ರೀತಿಯಿಂದ ಪವಿತ್ರಾ ಲೋಕೇಶ್ ಅವರನ್ನು ತಾವು ‘ಅಮ್ಮು’ ಎಂದು ಕರೆಯುವುದಾಗಿ ನರೇಶ್ ತಿಳಿಸಿದ್ದಾರೆ. ಈ ಮೂಲಕ ತಾವು ಇಬ್ಬರೂ ರಿಲೇಶನ್ ಶಿಪ್ ನಲ್ಲಿ ಇರುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಪವಿತ್ರಾ ಲೋಕೇಶ್ ಜೊತೆಗಿನ ಸ್ನೇಹಕ್ಕೆ ನರೇಶ್ ತಮ್ಮದೇ ಆದಂತಹ ವ್ಯಾಖ್ಯಾನ ನೀಡಿದ್ದರು. ತಮ್ಮ ಲವ್ ಸ್ಟೋರಿ ಆಧರಿಸಿದ ‘ಮತ್ತೆ ಮದುವೆ’ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ…
ಖ್ಯಾತ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ಕರ್ನಾಟಕ ಸರಕಾರ 2018ರಲ್ಲಿ ಡಾ. ರಾಜ್ ಕುಮಾರ್ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ ಪ್ರಶಸ್ತಿ ಘೋಷಣೆಯಾಗಿ ಐದು ವರ್ಷ ಕಳೆದರೂ, ಇದುವರೆಗೂ ಪ್ರಶಸ್ತಿ ಪ್ರದಾನ ಮಾಡಿಲ್ಲ. ಈ ಕುರಿತು ಶ್ರೀನಿವಾಸ್ ಮೂರ್ತಿ ಬೇಸರ ಹೊರ ಹಾಕಿದ್ದಾರೆ. ‘ಪ್ರಶಸ್ತಿಯನ್ನು ಇದುವರೆಗೂ ಕೊಟ್ಟಿಲ್ಲ. 2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ವರ್ಷಗಳ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು. ಆದರೆ, ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು?’ ಎಂದು ಪ್ರಶ್ನೆ ಮಾಡಿದ್ದಾರೆ. ಶ್ರೀನಿವಾಸಮೂರ್ತಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 50 ವರ್ಷಗಳಾಗಿವೆ. ಅವರ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಹೇಮಾವತಿ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಯೋಗಾನರಸಿಂಹ ಅವರ ನಾಟಕದ ಕಂಪೆನಿಯಲ್ಲಿ ಪಾತ್ರ ಮಾಡುತ್ತಿದ್ದರು. ನಂತರ ಅವರದ್ದೇ ಆದ…
ಸ್ಯಾಂಡಲ್ ವುಡ್ ನ ಖ್ಯಾತ ನಟ ಅಜಯ್ ರಾವ್ ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಯುದ್ಧಕಾಂಡ ಎಂದು ಟೈಟಲ್ ಇಡಲಾಗಿದ್ದು ಕೆಜಿಎಫ್ ಚಿತ್ರದಲ್ಲಿ ಯಶ್ ತಾಯಿಯಾಗಿ ನಟಿಸುವ ಮೂಲಕ ಖ್ಯಾತಿ ಘಳಿಸಿದ ನಟಿ ಅರ್ಚನಾ ಜೋಯಿಸ್ ಅಜಯ್ ರಾವ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ.…
ಕರಾವಳಿ ಬೆಡಗಿ ನಟಿ ಕೃತಿ ಶೆಟ್ಟಿ ಕಸ್ಟಡಿ ಸಿನಿಮಾದಲ್ಲಿ ನಾಗಚೈತನ್ಯಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಕೃತಿ ಶೆಟ್ಟಿ ಸಮಂತಾರಂತೆ ತಾವು ಐಟಂ ಡ್ಯಾನ್ಸ್ ಮಾಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇತ್ತೀಚೆಗೆ ಸ್ಟಾರ್ ನಟಿಯರು ಕೂಡ ಐಟಂ ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಿದ್ದಾರೆ. ತಮನ್ನಾ, ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಸಮಂತಾ ಸೇರಿದಂತೆ ಹಲವು ಐಟಂ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಅದರಲ್ಲೂ ಪುಷ್ಪ ಸಿನಿಮಾದಲ್ಲಿ ಸಮಂತಾ ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದರು. ಇದೀಗ ‘ಕಸ್ಟಡಿ’ ಚಿತ್ರದ ಮೂಲಕ ಸದ್ದು ಮಾಡ್ತಿರುವ ಕೃತಿಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ಉ ಅಂಟಾವಾ ಮಾವ ಹಾಡಿನ ಆಫರ್? ನಿಮಗೆ ಸಿಕ್ಕಿದ್ದರೆ ಒಪ್ಪಿಕೊಳ್ಳುತ್ತಿದ್ರಾ ಎಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಅವರು ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ನಾನು ಅಂಥ ಪಾತ್ರ ಒಪ್ಪಿಕೊಳ್ಳಲ್ಲ. ಆ ರೀತಿ ಪಾತ್ರದಲ್ಲಿ ನಟಿಸಲು ನನಗೆ ಕಷ್ಟ ಆಗುತ್ತದೆ ಎಂದು…
ಕೆಲವರು ರೆಸ್ಟೋರೆಂಟ್‌ಗೆ ಹೋದಾಗ ಊಟಕ್ಕೂ ಮೊದಲು ಸೂಪ್ ಕುಡಿಯುವ ಅಭ್ಯಾಸವಿರುತ್ತೆ. ಸೂಪ್ ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚುತ್ತೆ. ಹೀಗಾಗಿ ಊಟಕ್ಕೂ ಮೊದಲು ಸೂಪ್ ಕುಡಿಯುವುದು ಒಳ್ಳೆಯ ಅಭ್ಯಾಸವೇ ಸರಿ. ಸೂಪ್‌ಗಳಲ್ಲಿ ಅನೇಕ ರೀತಿಯ ಸೂಪ್‌ಗಳಿರುತ್ತವೆ. ಇವತ್ತಿನ ರೆಸಿಪಿಯಲ್ಲಿ ಕಾರ್ನ್ ಸೂಪ್ (Corn Soup) ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತಿದ್ದೇನೆ. ಹಾಗಿದ್ದರೆ ಇದನ್ನು ಯಾವ ರೀತಿ ಮಾಡುವುದು ಎಂದು ತಿಳಿಯೋಣ ಬನ್ನಿ. ಬೇಕಾಗುವ ಪದಾರ್ಥಗಳು: ಸ್ವೀಟ್ ಕಾರ್ನ್ – ಅರ್ಧ ಕಪ್ ಸಣ್ಣಗೆ ಹೆಚ್ಚಿದ ಶುಂಠಿ- 1 ಚಮಚ ಸಣ್ಣಗೆ ಹೆಚ್ಚಿದ ಕ್ಯಾರೆಟ್- ಕಾಲು ಕಪ್ ಹೆಚ್ಚಿದ ಸ್ಪ್ರಿಂಗ್ ಆನಿಯನ್- 5 ಚಮಚ ಜೋಳದ ಹಿಟ್ಟು- 1 ಚಮಚ ಬ್ಲ್ಯಾಕ್ ಪೆಪ್ಪರ್- ಕಾಲು ಚಮಚ ವಿನೇಗರ್- 1 ಚಮಚ ಬೆಣ್ಣೆ- 2 ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ- 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು…
ಲಂಡನ್: ಮೇ 23 ರಂದು ಲಂಡನ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಮೈಸೂರಿನ ಹುಲಿ ಎಂದೇ ಖ್ಯಾತರಾದ ಟಿಪ್ಪು ಸುಲ್ತಾನ್ ಗೆ ಸೇರಿದ ಅಮೂಲ್ಯವಾದ ಚಿನ್ನಾಭರಣದ ಖಡ್ಗ ಹರಾಜಿಗೆ ಇಡಲಾಗಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಟಿಪ್ಪು ಸುಲ್ತಾನ್ ಈ ಖಡ್ಗವನ್ನು ತನ್ನ ಶಯ್ಯ ಕೋಣೆಗಳಲ್ಲಿ ಇಡುತ್ತಿದ್ದು, ಇತಿಹಾಸದ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ಶ್ರೀಮಂತ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ಖಡ್ಗವನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ನ ಚಿನ್ನದ ಕತ್ತಿ ಹರಾಜಿಗೆ ಬರಲಿದ್ದು, ಸದ್ಯಕ್ಕೆ ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಉಕ್ಕಿನ ಖಡ್ಗದ ಮೇಲಿನ ಚಿನ್ನದ ಹಿಡಿಕೆಯನ್ನು ರಾಜಸ್ಥಾನದ ಬುಡಕಟ್ಟು ಜನಾಂಗದ ರಾಜರ ಆಯುಧದ ಕಲೆಯಿಂದ ಕೆತ್ತನೆ ಮಾಡಲಾಗಿದೆ. ಕೋಫ್ಟಗರಿ ಅಲಂಕಾರಿಕ ಕುಸುರಿ ಕೆಲಸವೆಂದು ಗುರುತಿಸಲಾಗಿದೆ. 1782 ರಲ್ಲಿ ತನ್ನ ತಂದೆಯ ಮರಣದ ನಂತರ ಅಧಿಕಾರಕ್ಕೆ ಏರಿದ ಟಿಪ್ಪುವಿನ ವಶದಲ್ಲಿ ಆ ಖಡ್ಗವಿತ್ತು. ರಾಜನು 1782 ರಿಂದ 1799 ರವರೆಗೆ ಇದನ್ನು ತನ್ನ ಸುಪರ್ದಿಯಲ್ಲಿ ಹೊಂದಿದ್ದನೆಂದು ಇತಿಹಾಸ…
ಮೋಚಾ ಚಂಡಮಾರುತದ ಕಾರಣ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಜನತೆ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಈ ಮಧ್ಯೆ ಮತ್ತೊಂದು ಅಪಾಯಕಾರಿ ಚಂಡಮಾರುತ ಬರಲಿದೆ ಎಂದು ಫ್ರೆಂಡ್ಸ್ ಆಫ್ ದಿ ಅರ್ಥ್ ನ ಸುಂದರರಾಜನ್ ಮಾಹಿತಿ ನೀಡಿದ್ದಾರೆ. ಮೇ 8 ರಂದು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿತು. ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಕಡಿಮೆ ಒತ್ತಡದ ಪ್ರದೇಶದಲ್ಲಿ ಇದು ಬಲಗೊಂಡು ಕೆಲ ದಿನಗಳ ಹಿಂದೆ ವಾಯುವ್ಯ ದಿಕ್ಕಿನತ್ತ ಸಾಗಿತ್ತು. ಮೇ 10 ರಂದು ಬೆಳಿಗ್ಗೆ ಅಂಡಮಾನ್‌ನ ಪೋರ್ಟ್ ಬ್ಲೇರ್‌ನಿಂದ 520 ಕಿ.ಮೀ ದೂರದಲ್ಲಿ ರೂಪಗೊಂಡ ಈ ಚಂಡಮಾರುತ ಉತ್ತರ-ವಾಯವ್ಯ ದಿಕ್ಕಿನಲ್ಲಿ ಚಲಿಸಿ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಈ ಚಂಡಮಾರುತಕ್ಕೆ ಯೆಮನ್‌ನ ‘ಮೋಚಾ’ ಎಂದು ಹೆಸರಿಡಲಾಗಿದೆ. ಈ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದ್ದು, ಮಧ್ಯರಾತ್ರಿಯ ವೇಳೆಗೆ ತೀವ್ರ ಚಂಡಮಾರುತವಾಗಿ ಬಲಗೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಚಂಡಮಾರುತ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪುಗೊಂಡು ಬಂಗಾಳಕೊಲ್ಲಿಯ ಮಧ್ಯಭಾಗವನ್ನು ದಾಟಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವೆ ಗಂಟೆಗೆ…
ಲಾಹೋರ್: ದೇಶದ್ರೋಹ ಆರೋಪ ಹೊರಿಸಿ ನನ್ನನ್ನು ಮುಂದಿನ 10 ವರ್ಷಗಳ ಕಾಲ ಜೈಲಿನಲ್ಲಿರಿಸಲು ಸೇನೆಯು ತಂತ್ರ ರೂಪಿಸಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ. ಮೋಸಗಾರರ ಷಡ್ಯಂತ್ರಗಳ ವಿರುದ್ಧ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವುದುಆಗಿ ಖಾನ್ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಈಚೆಗೆ ಜಾಮೀನು ನೀಡಿದ್ದ ಇಸ್ಲಾಮಾಬಾದ್ ಹೈಕೋರ್ಟ್, ಸೋಮವಾರ ಲಾಹೋರ್ ಹೈಕೋರ್ಟ್‌ಗೆ ಹಾಜರಾಗಲು ಸೂಚಿಸಿತ್ತು. ಅದರಂತೆ ಅವರು ಕೋರ್ಟ್‌ಗೆ ಹಾಜರಾಗಿದ್ದಾರೆ. ‘ಈಗ ಸಂಪೂರ್ಣ ಲಂಡನ್ ತಂತ್ರ ಬಹಿರಂಗಗೊಂಡಿದೆ. ನಾನು ಜೈಲಿನೊಳಗೆ ಇರುವಾಗ ಹಿಂಸಾಚಾರ ನೆಪದಲ್ಲಿ ಅವರು ನ್ಯಾಯಾಧೀಶರ, ತೀರ್ಪುಗಾರರ ಮತ್ತು ದಂಡನೆ ವಿಧಿಸು ವವರ ಪಾತ್ರ ನಿರ್ವಹಿಸಿದ್ದಾರೆ. ಬುಶ್ರಾ (ಇಮ್ರಾನ್ ಖಾನ್ ಪತ್ನಿ) ಅವರನ್ನು ಜೈಲಿಗೆ ಹಾಕಿ ನನಗೆ ಹಿಂಸೆ ನೀಡಲು ಈಗ ತಂತ್ರ ಹೆಣೆಯಲಾಗುತ್ತಿದೆ’ ಎಂದು ಇಮ್ರಾನ್ ಹೇಳಿದ್ದಾರೆ. ಲಾಹೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡರ ಸಭೆ ನಡೆಸಿದ ಬಳಿಕ ಖಾನ್ ಅವರು ಟ್ವೀಟ್…
ಗುವಾಹಟಿ : ಅಕ್ರಮ ಮದ್ರಸಾಗಳ ಬಂದ್, ಬಾಲ್ಯವಿವಾಹಕ್ಕೆ ಕಡಿವಾಣದ ಬೆನ್ನಲ್ಲೇ, ಬಹುಪತ್ನಿತ್ವ ತಡೆಗೆ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಬಹುದೇ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ನಾಲ್ವರು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಮೂಲಕ ಇಂಥ ಕಾಯ್ದೆ ರಚನೆಗೆ ಮುಂದಾದ ಮೊದಲ ರಾಜ್ಯ ಎನ್ನಿಸಿಕೊಂಡಿದೆ. ಈ ಸಮಿತಿಯು ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯಾ) ಕಾಯ್ದೆ, 1937 ಮತ್ತು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಪರಿಶೀಲಿಸಿ ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಈ ವರದಿ ಸಿದ್ಧಪಡಿಸುವ ವೇಳೆ ಸಮಿತಿಯು ಮುಸ್ಲಿಂ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಸರ್ಕಾರ ರಚಿಸಿದ ಸಮಿತಿಯಲ್ಲಿ ನ್ಯಾ.ರುಮಿ ಫುಕಾನ್, ಅಸ್ಸಾಂ ಅಡ್ವೋಕೇಟ್ ಜನರಲ್ ದೇಬಜಿತ್ ಸೈಕಿಯಾ, ಅಸ್ಸಾಂ ಹೆಚ್ಚುವರಿ ಅಡ್ವೋಕೇಟ್ ಜನರಲ್ ನಳಿನ್ ಕೊಹ್ಲಿ ಮತ್ತು ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ ನೇಕಿಬುರ್ ಝಮಾನ್…