ಚಿಕ್ಕಮಗಳೂರು: ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ (BJP Worker) 100 ಅಡಿ ಎತ್ತರದ ಟವರ್ (Tower) ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಘಟನೆ ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸಪಡುತ್ತಿದ್ದಾರೆ. ಟಿವಿಯವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ರಂಗಪ್ಪ ಹಠಕಟ್ಟಿದ್ದಾನೆ. ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಮುಂದೆ ಆಗುತ್ತದೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನು ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನನ್ನನು ಏಳುವರೆ ವರ್ಷದ ಹಿಂದೆ ಕರೆದರು. ನೋಡೋದಕ್ಕೆ ಒಳ್ಳೆಯ ಆಳು. ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್…
Author: Prajatv Kannada
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರಿದ ಬಳಿಕ ಪಕ್ಷದಲ್ಲಿ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಮುಂದಾಗಿದ್ದಾರೆ. ಬಿಜೆಪಿ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ದೊಡ್ಡ ಹೊಡೆತ ಕೊಡಲು ಮುಂದಾಗಿರುವ ಶೆಟ್ಟರ್ ನಡೆಗೆ ಬಿಜೆಪಿ ವಲಯದಲ್ಲಿ ಗಲಿಬಿಲಿ ಶುರುವಾಗಿದ್ದು, ಇದಕ್ಕೆ ಮುಲಾಮು ಹಚ್ಚಲು ನಡ್ಡಾ ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈಗಾಗಲೇ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿರುವ ಅವರು ಮುನಿಸಿಕೊಂಡಿರುವ ಲಿಂಗಾಯತ ಸಮುದಾಯದ ಅಸಮಾಧಾನವನ್ನ ಶಮನಮಾಡಲು ಹೊಸದೊಂದು ತಂತ್ರಕ್ಕೆ ಮುಂದಾಗಿದ್ದಾರೆ. ನಗರದಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲಿರುವ ಅವರು ವಿವಿಧ ವಿಷಯಗಳ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಹುಬ್ಬಳ್ಳಿ (Hubballi), ಧಾರವಾಡ (Dharwad) ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಬಿವಿಬಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಉದ್ಯಮಿಗಳು, ಶಿಕ್ಷಕರ ಸಂಘಟನೆ ಹಾಗೂ ಯುವಕರೊಂದಿಗೆ ನಡ್ಡಾ ಸಂವಾದ ನಡೆಸಿದ್ದಾರೆ. ಹಾಗೂ ನಗರದ ಖಾಸಗಿ ಹೊಟೇಲ್…
ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ಇಲ್ಲಿ ಈವರೆಗೆ ಗೆದ್ದಿರುವುದು ನೀತಿ ರಾಜಕಾರಣವೇ ಎಂದು ಬಿಜೆಪಿ (BJP) ಅಭ್ಯರ್ಥಿ ಶಾಸಕ ಸಿ.ಟಿ.ರವಿ (C.T.Ravi) ಹೇಳಿದ್ದಾರೆ. ನಗರದ ಪ್ರೆಸ್ ಕ್ಲಬ್‌ನಲ್ಲಿ (Press Club) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ (Election) ಕೆಲವರು ಜಾತಿ ಹೆಸರಲ್ಲಿ ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡುತ್ತಿದ್ದಾರೆ. ಅದು ಫಲಿಸುವುದಿಲ್ಲ. ಇಲ್ಲಿ ಈವರೆಗೆ ಅಭಿವೃದ್ಧಿ ಪರ ಹಾಗೂ ಸಿದ್ಧಾಂತಕ್ಕೆ ಬದ್ಧವಾದ ರಾಜಕಾರಣ ಮಾಡಿದ್ದೇನೆ. ಜಾತಿ ಮತ್ತು ಪಕ್ಷ ಕೇಳದೆ ನನ್ನ ಕೈಯಲ್ಲಾದ ಒಳ್ಳೆಯ ಕೆಲಸ ಮಾಡಿದ್ದೇನೆ. ಈಗಿನ ವಾತಾವರಣದಲ್ಲಿ ಜಿಲ್ಲೆಯಲ್ಲಿ ಐದಕ್ಕೆ ಐದೂ ಕ್ಷೇತ್ರದಲ್ಲೂ ಬಿಜೆಪಿ ಉತ್ತಮ ಅಂತರದಿಂದಲೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಸಣ್ಣ ಜಾತಿ ಮತ್ತು ಜನಾಂಗಗಳಿಗೂ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ್ಯತೆ ಕೊಡುವ ಕೆಲಸ ನಮ್ಮ ಕ್ಷೇತ್ರದಲ್ಲಿ ಮಾಡಿದ್ದೇವೆ. ನಿಗಮ ಮಂಡಳಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಇದೇ ಮಾದರಿಯನ್ನು ಅನುಸರಿಸುವಂತೆ ನಾವು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ.…
ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿಎನ್ ರವಿಕುಮಾರ್ ಪರ 14ನೇ ವಾರ್ಡಿನ ಜೆಡಿಎಸ್ ಮುಖಂಡರು ಹಾಗು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿಯ ಪಕ್ಷಗಳು ವಿವಿಧ ರೀತಿಯಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಪರ ನಗರದಲ್ಲಿ ಪ್ರಚಾರ ಜೋರಾಗಿದ್ದು, ಮಹಿಳಾ ಮುಖಂಡರಾದ ಸುಷ್ಮಾ ಶ್ರೀನಿವಾಸ್ 14 ನೇ ವಾರ್ಡಿನಲ್ಲಿ ಮತ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಅವರು ಬಿ ಎನ್ ರವಿಕುಮಾರ್ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ, ಕಳೆದ ಬಾರಿ ಸೋತರೂ ತಮ್ಮ ಸೇವೆಯನ್ನು ಮುಂದುವರೆಸಿ ಮತ ಕ್ಷೇತ್ರದ ಅನೇಕರಿಗೆ ಕಷ್ಟದಲ್ಲಿ ನೆರವಾಗುವ ಮೂಲಕ ಮನೆ ಮಾತಾಗಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ಸೇವೆ ಮಾಡಲು ಮತ್ತಷ್ಟು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಬಡವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜೆಡಿಎಸ್…
ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಠೇವಣಿ (Deposite) ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದು, ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಒಂದೊಂದು ರೂ. ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಪಕ್ಷೇತರ ಅಭ್ಯರ್ಥಿ (Independent Candidate) ಹೆಸರು ಯಂಕಪ್ಪ. ಇವರು ಕಳೆದ ಒಂದು ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ (Beg) ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು. ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು…
ಧಾರವಾಡ: ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಕೋಟೂರು ಗ್ರಾಮದ ಪ್ರವೀಣ್ ಕಮ್ಮಾರ ಹತ್ಯೆ ವಿಷಯನ್ನು ನಾನು ಸರಳವಾಗಿ ಬಿಡುವುದಿಲ್ಲ. ಅಧಿಕಾರಿಗಳು ನಿಸ್ಪಕ್ಷಪಾತವಾಗಿ ಕೆಲಸ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಅಧಿಕಾರಿಗಳು ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕ ಅಮೃತ ದೇಸಾಯಿ ಎಚ್ಚರಿಕೆ ನೀಡಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಪ್ರವೀಣ್ ಒಳ್ಳೆಯ ಕಾರ್ಯಕರ್ತನಾಗಿದ್ದ. ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಆತ ಅತ್ಯಂತ ಹುರುಪಿನಿಂದ ಪಾಲ್ಗೊಂಡು ಜನರನ್ನು ಕರೆದುಕೊಂಡು ಬಂದಿದ್ದ. ಇಂದು ಬೆಳಗಿನಜಾವ 6 ಗಂಟೆ ಸುಮಾರಿಗೆ ಆತನ ಹತ್ಯೆ ಆದ ವಿಷಯ ಕೇಳಿ ಮನಸ್ಸಿಗೆ ಬಹಳ ಬೇಸರ ಆಯ್ತು. ನನ್ನ ಮನಸ್ಸು ಕೂಡ ಭಾರವಾಯ್ತು. ಪ್ರವೀಣ್ ಕಮ್ಮಾರನಿಗೆ ಇಂತಹ ಸಂದರ್ಭ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದರು. ಅಪಾರ ಯುವಕ ಬೆಂಬಲ ಹೊಂದಿದ್ದ ಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಆ ಕುಟುಂಬ ಜೊತೆ ನಾನಿರುತ್ತೇನೆ. ಇದರಿಂದ ನಮ್ಮ ಕಾರ್ಯಕರ್ತರು ಹೆದರುವುದು ಬೇಡ. ನಿಮ್ಮೊಂದಿಗೆ ನಾನಿದ್ದೇನೆ. ಪ್ರವೀಣ್ ಕಮ್ಮಾರನ…
ಧಾರವಾಡ: ಬಿಜೆಪಿ (BJP) ಧಾರವಾಡ ಜಿಲ್ಲಾ ಯುವ ಮೋರ್ಚಾ (Yuva Morcha) ಉಪಾಧ್ಯಕ್ಷನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಪ್ರವೀಣ ಕಮ್ಮಾರ (Pravena Kammara) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತಡ ರಾತ್ರಿ ಪ್ರವೀಣ ಕಮ್ಮಾರನ ಹೊಟ್ಟೆಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಶಿವಮೊಗ್ಗ :ಯಾರೇ ಅದರೂ ನೀತಿ ಸಂಹಿತೆ ಅನ್ವಯಿಸುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗಕ್ಕೆ ಬಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರ ಹೆಲಿಕಾಪ್ಟರ್ನ್ನು ಕೂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಇವತ್ತು ಅವರು ವಿವಿಧ ಕಾರ್ಯಕ್ರಮ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹೆಲಿಕಾಪ್ಟರ್ನಲ್ಲಿಬಂದಿಳಿಯುತ್ತಿದಂತೆ , ಚುನಾವಣಾ ನೀತಿ ಸಂಹಿತೆಯ ಪ್ರೋಟೋಕಾಲ್ ಪ್ರಕಾರ, ಅಧಿಕಾರಿಗಳು ತಪಾಸಣೆ ನಡೆಸಿದ್ರು. ಇನ್ನೂ ಈ ವೇಳೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಪಕ್ಷ ಬಿಟ್ಟು ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು. ಅವರ ಆರೋಪಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಬಿಎಸ್ವೈ ಘೋಷಣೆ ಮಾಡುತ್ತಾರಾ ಅಭ್ಯರ್ಥಿ ಇನ್ನೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬು ಇನ್ನೂ ಸಹ ನಿಕ್ಕಿಯಾಗಿಲ್ಲ. ಅದೇ ಹೊತ್ತಿನಲ್ಲಿ ಶಿವಮೊಗ್ಗ ನಗರಕ್ಕೆ ಬಿ.ಎಸ್.ಯಡಿಯೂರಪ್ಪನವರ ಎಂಟ್ರಿಯಾಗಿದ್ದು, ಸ್ಥಳೀಯ ಮುಖಂಡರ ಜೊತೆ ಮಾಜಿ ಸಿಎಂ ಮಾತುಕತೆ ನಡೆಸ್ತಿದ್ಧಾರೆ. ಅವರ ಮೂಲಕವೇ ಹೈಕಮಾಂಡ್ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವ…
ಉಡುಪಿ: ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಘೋಷಿಸಿದ್ದಾರೆ. ಮುತಾಲಿಕ್ ಅವರ ಅಫಿಡವಿಟ್‌ನಲ್ಲಿ ಕಾಸಿಗಿಂತ ಕೇಸೇ ಜಾಸ್ತಿಯಿರುವ ಮಾಹಿತಿ ಬಹಿರಂಗಗೊಂಡಿದೆ. ಪ್ರಮೋದ್ ಮತಾಲಿಕ್ ಬಳಿ ಸ್ಥಿರಾಸ್ತಿ, ವಾಹನ, ಸಾಲ ಇಲ್ಲ. ಮುತಾಲಿಕ್ ಕೈಯಲ್ಲಿ 10,500 ರೂ. ನಗದು, ಎರಡು ಬ್ಯಾಂಕುಗಳಲ್ಲಿ 2,63,500 ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ. ರಾಜ್ಯದ 7 ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಕೇಸು ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ ಕೇಸ್‌ಗಳು ದಾಖಲಾಗಿದೆ ಎಂದು ಆಯೋಗಕ್ಕೆ (Election Commission) ತಿಳಿಸಿದ್ದಾರೆ.
ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.ಬಿಜೆಪಿಯ ನಡೆಯನ್ನು ಕಾಯುತ್ತಿದ್ದ ಆಯನೂರು ಮಂಜುನಾಥ್ ಅಂತಿಮವಾಗಿ ತಮ್ಮ ವಿಧಾನ ಪರಿಷತ್ ಸದಸ್ಯಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇವತ್ತು ಬೆಳ್ಳಂಬೆಳಗ್ಗ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದ ಅವರು, ಇವತ್ತು ಹುಬ್ಬಳ್ಳಿಗೆ ತೆರಳಿ ಅಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ಧಾರೆ. ಕೆ.ಎಸ್.ಈಶ್ವರಪ್ಪ ಹಾಗೂ ಕೆಇ ಕಾಂತೇಶ್ ವಿರುದ್ಧದ ಸ್ಪರ್ಧೆಗೆ ಅಣಿಯಾದ ಆಯನೂರು ಮಂಜುನಾಥ್ ಕೊನೆಕ್ಷಣದವರೆಗೂ ಬಿಜೆಪಿ ಟಿಕೆಟ್ ಯಾರಿಗೆ ಘೋಷಣೆಯಾಗಲಿದೆ ಎಂಬುದನ್ನ ಕಾದು ನೋಡಿದ್ಧಾರೆ. ಆದರೆ ಹೈಕಮಾಂಡ್ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡದೇ ಕುತೂಹಲದಲ್ಲಿ ಇರಿಸಿದೆ. ಹೀಗಾಗಿ ಅಂತಿಮವಾಗಿ ಚುನಾವಣಾ ಅಖಾಡಕ್ಕೆ ಎಂಟ್ರಿ ತೆಗೆದುಕೊಳ್ಳಲು ಮುಂದಾಗಿರುವ ಆಯನೂರು ಮಂಜುನಾಥ್ ಇವತ್ತು ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿ ಯವರನ್ನ ಭೇಟಿಯಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.