ಹಾವೇರಿ: ಕಿಚ್ಚ ಸುದೀಪ್ (Kiccha Sudeep) ಹಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪರವಾಗಿ ಮತ್ತು ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಬೊಮ್ಮಾಯಿ ಮಾಮಾ ತಮಗೆ ಈ ಹಿಂದೆ ಮಾಡಿದ ಸಹಾಯಕ್ಕಾಗಿ ಅವರ ಪರ ಅಖಾಡಕ್ಕೆ ಇಳಿಯುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದರು. ತಾವು ಮಾತು ಕೊಟ್ಟಂತೆ ಇಂದಿನಿಂದ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲಿದ್ದಾರಂತೆ. ಸದ್ಯ ಬೊಮ್ಮಾಯಿ ಪರವಾಗಿ ಪ್ರಚಾರಕ್ಕೆ ಹೋಗುವ ಕಿಚ್ಚ ಮುಂದಿನ ದಿನಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಬೊಮ್ಮಾಯಿ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಅದರಲ್ಲೂ ಸುದೀಪ್ ಅವರ ಆತ್ಮೀಯರ ಪರವಾಗಿಯೇ ಅವರು ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಿಗ್ಗಾವಿಗೆ ಹೋಗುವುದಕ್ಕಾಗಿ ಹೆಲಿಕಾಪ್ಟ್ ಸಿದ್ಧವಾಗಿದೆ ಎನ್ನುವ ಮಾಹಿತಿ ಇದ್ದು, ಬೆಂಗಳೂರಿನಿಂದ ಅವರು ನೇರವಾಗಿ ಶಿಗ್ಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ರೋಡ್ ಶೋನಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.
Author: Prajatv Kannada
ಬಾಗಲಕೋಟೆ: ಬಿಜೆಪಿ ತೊರೆದಿರುವ ನಾಯಕರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಮುಧೋಳದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ ವಿಷಯಕ್ಕೆ ಪ್ರತಿಕ್ರಿಯಿಸಿದರು. `ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ ಕಾರಣ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಪಕ್ಷದಲ್ಲಿ ಯಾರಿಗೂ ಟಿಕೆಟ್ ತಪ್ಪಿಸಿಲ್ಲö, ಹೈಕಮಾಂಡ್ ನಾಯಕರು ಎಲ್ಲ ಅಂಶ ಗಮನದಲ್ಲಿರಿಸಿ ಟಿಕೆಟ್ ನೀಡಿದ್ದಾರೆ. ಬಿಜೆಪಿ ಕೆಲವೇ ಜನರ ಕಪಿ ಮುಷ್ಠಿಯಲ್ಲಿ ಇಲ್ಲ, ರಾಷ್ಟ್ರೀಯ ಪಕ್ಷವಾಗಿದೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ, ರಾಜ್ಯದಲ್ಲಿ ಮತ್ತೊಮ್ಮೆ ಅಕಾರಕ್ಕೆ ಬರಲಿದೆ’ ಎಂದು ಹೇಳಿದರು. ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರ ಮೇಲೆ ಪ್ರೀತಿಯಾಗಿದೆ. ಲಿಂಗಾಯತ ಸಮಾಜವನ್ನು ಒಡೆಯಲು ಹೊರಟಿದ್ದ ಕಾಂಗ್ರೆಸ್‌ನ ತಂತ್ರಗಾರಿಕೆ ಯಾರೂ ಮರೆತಿಲ್ಲ. ಪಂಚಮಸಾಲಿ ೨ಎ ಮೀಸಲಾತಿ ನೀಡಲು ಕಾಂಗ್ರೆಸ್ಸಿಗರು ವಿರೋಧಿಸಿದರು, 2009 ರಲ್ಲಿ 2ಎ ಮೀಸಲಾತಿ ಸೇರಿಸಬೇಕು ಎಂದಾಗ ವಿರೋಸಿ 2018ರಲ್ಲಿ ತಿರಸ್ಕಾರ ಮಾಡಿದರು. ಈಗ ನಾವು…
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿಲ್ಲ. ಈ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಲು ಆರಂಭವಾಗಿದೆ. ಇದಕ್ಕೆ ಕಾರಣ, ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಹೆಚ್ಡಿಎಫ್ಸಿ (HDFC) ಬ್ಯಾಂಕ್ ಖಾತೆ ತರೆದಿರುವುದು. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಚನ್ನಪಟ್ಟಣ ಅಭ್ಯರ್ಥಿಯಾಗಿದ್ದೇನೆ. ಚನ್ನಪಟ್ಟಣ (Channapatna) ಕ್ಷೇತ್ರದಿಂದ ನಾನು ಉಮೇದುವಾರಿಕೆ ಸಲ್ಲಿಸಿದ್ದೇನೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗುವುದಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದರು. ಚುನಾವಣೆವಂದಾರಗುಪ್ಪೆ ಬ್ರಾಂಚ್ನಲ್ಲಿ ಖಾತೆ ತೆರೆಯಲಾಗಿದೆ. ಆದರೆ ಆ ಬ್ರಾಂಚ್ ಮಂಡ್ಯಕ್ಕೆ ಸೇರುತ್ತದೆ. ಅದನ್ನೇ ಕಾಕ ತಾಳೀಯವಾಗಿ ಇದಕ್ಕೆ ಹೋಲಿಕೆ ಮಾಡಲಾಗುತ್ತಿದೆ ಎಂದರು. ಮತ್ತೆ ಸಂಸದೆ ಸುಮಲತಾ (Sumalatha Ambarish) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ನಾನು ಅವರ ಸಾವಲನ್ನ ನಿರಾಕರಣೆ ಮಾಡಿದ್ದೇನೆ ಎಂದರು. ನಾನು ಸುಮಲತಾ ಅವರಷ್ಟು ದೊಡ್ಡ ವ್ಯಕ್ತಿಯಲ್ಲ, ಅವರಷ್ಟು ವರ್ಚಸ್ಸು ಕೂಡ ಇಲ್ಲ. ಅವರಷ್ಟು ಮಂಡ್ಯ…
ಸೂರ್ಯೋದಯ: 06.05 AM, ಸೂರ್ಯಾಸ್ತ : 06.33 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ಕೃಷ್ಣ ಪಕ್ಷ, ವಸಂತ ಋತು, ಉತ್ತರಾಯಣ, ತಿಥಿ: ಇವತ್ತು ಚತುರ್ದಶಿ 11:23 AM ತನಕ ನಂತರ ಅಮವಾಸ್ಯೆ ನಕ್ಷತ್ರ: ಇವತ್ತು ಉತ್ತರಾ ಭಾದ್ರ 01:01 AM ತನಕ ನಂತರ ರೇವತಿ 11:53 PM ತನಕ ನಂತರ ಅಶ್ವಿನಿ ಯೋಗ: ಇವತ್ತು ವೈಧೃತಿ 03:26 PM ತನಕ ನಂತರ ವಿಷ್ಕುಂಭ ಕರಣ: ಇವತ್ತು ವಿಷ್ಟಿ 12:23 AM ತನಕ ನಂತರ ಶಕುನಿ 11:23 AM ತನಕ ನಂತರ ಚತುಷ್ಪಾದ 10:29 PM ತನಕ ನಂತರ ನಾಗವ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 09.36 PM to11.07 PM ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ: ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ…
ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿದ್ದ ಕಳ್ಳಿಯನ್ನು ಪೊಲೀಸರು( police) ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ(vaani vilas hospital) ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳ್ಳಿ ಅರೆಸ್ಟ್ ಆಗಿದ್ದು, ವಿವಿ ಪುರಂ ಪೊಲೀಸರಿಂದ ಬಂಧಿಸಲಾಗಿದೆ. ದಿವ್ಯ ರಶ್ಮಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಒಂದು ವಾರದ ಮಗು ಕಿಡ್ನಾಪ್ ಆದ ಬಳಿಕ ಮಗು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಬಳಿಕ ವಾಣಿ ವಿಲಾಸ ಆಸ್ಪತ್ರೆ, ಮೈಸೂರು ರಸ್ತೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿತ್ತು. ದಾರಿಯುದ್ದಕ್ಕೂ 600 ಸಿಸಿಟಿವಿಗಳನ್ನ ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಒಂದು ಕ್ಲೂ ಸಿಕ್ತು. ಆರೋಪಿ ಮಹಿಳೆ ಆಸ್ಪತ್ರೆಗೆ ಬಂದು ಮಗುವನ್ನು ಕದ್ದು ಆಕೆ ತನ್ನ ಮನೆಗೆ ತೆಗೆದುಕೊಂಡು ಹೋಗುವವರೆಗಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 600 ಸಿಸಿ ಕ್ಯಾಮರಾಗಳ ಪರಿಶೀಲನೆ ಬಳಿಕ ಕಿಡ್ನಾಪ್ ಆಗಿದ್ದ ಮಗುವಿನ ಸುಳಿವು ಸಿಕ್ಕಿದೆ. ದಿವ್ಯಾ ರಶ್ಮಿಗೆ ಮದುವೆಯಾಗಿದ್ದು ಗಂಡ…
ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ವಸಂತಪುರದಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾ ಅವರು, ಪ್ರತಿವಾರ, ಮೂರು ದಿನಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ಲೂಟಿ ಮಾಡಿ ಕೇಂದ್ರದ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ನೀಡುವ ಎಟಿಎಂ ಕೇಂದ್ರವಾಗಿ ಕರ್ನಾಟಕ ಮಾರ್ಪಟ್ಟಿದೆ’ ಎಂದರು. ಬೆಂಗಳೂರು ನಗರಕ್ಕೆ ಕಳಂಕತರುವ ಶಾಸಕರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ಮೊದಲಿಗರು. ಹದಿನೈದು ವರ್ಷದಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ’ ಎಂದು ಆರೋಪಿಸಿದರು. ನಯವಾಗಿ ಅಣ್ಣ, ಸಾಹುಕಾರ ಎಂದು ಕರೆದು ಮತದಾರರನ್ನು ವಂಚಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನ್ಯಾಯ, ಅಕ್ರಮ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ಪೊಲೀಸ್, ಬಿಬಿಎಂಪಿ, ಕಂದಾಯ ಅಧಿಕಾರಿಗಳ ಮೂಲಕ ಕಮಿಷನ್ ಪಡೆದಿದ್ದಾರೆ. ಸಾರ್ವಜನಿಕರು ಈ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್…
ಬೆಂಗಳೂರು: ಪದ್ಮನಾಭನಗರದಿಂದ ಸಂಸದ ಡಿಕೆ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ಮೇರೆಗೆ ಕೊನೇ ಕ್ಷಣದಲ್ಲಿ ಪದ್ಮನಾಭನಗರದ ಅಭ್ಯರ್ಥಿ ಬದಲಾವಣೆ ಆಗಿದ್ದು, ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಸುರೇಶ್ ಪದ್ಮನಾಭನಗರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಆರ್.ಅಶೋಕ್ ಅವರ ಸ್ವ ಕ್ಷೇತ್ರದಲ್ಲೇ ಅವರನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಡಿ.ಕೆ.ಸುರೇಶ್ ಅವರನ್ನು ಅಖಾಡಕ್ಕಿಳಿಸಿದೆ. ಇನ್ನೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಆರ್.ಅಶೋಕ್ ಕ್ಷೇತ್ರ ಪದ್ಮನಾಭನಗರ ಹೈವೋಲ್ಟೇಜ್ ಅಖಾಡವಾಗಿ ಮಾರ್ಪಟ್ಟಿದೆ. ಆರ್. ಅಶೋಕ್ ವಿರುದ್ಧ ಇದೀಗ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುತ್ತಿದೆ.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 68ನೇ ಮಹಾಲಕ್ಷ್ಮಿಪುರ ವಾರ್ಡಿನ ಬಿಬಿಎಂಪಿ 1ನೇ ಮುಖ್ಯ ರಸ್ತೆಗಳ ಬಳಿ ಇರುವ ಮನೆ ಮನೆಗೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಯನ್ನು ನೆನೆದು ಗೋಪಾಲಯ್ಯನವರಿಗೆ ಮತ ನೀಡಿ ಎಂದು ಹೇಮಲತಾ ಗೋಪಾಲಯ್ಯ ಅವರು, ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರ ಪರವಾಗಿ ಮತಯಾಚನೆ ನಡೆಸಿದರು. ಬೆಂಗಳೂರು: ಏ.19. ಮಾನ್ಯ ಸಚಿವರು ಕ್ಷೇತ್ರದಲ್ಲಿ ಮಾಡಿದಂತಹ ಉತ್ತಮ ಕೆಲಸಗಳಾದ ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಸರ್ಕಾರಿ ಶಾಲೆಗಳ ನಿರ್ಮಾಣ, ನಮ್ಮ ಕ್ಲಿನಿಕ್, ಮಹಾನಗರ ಪಾಲಿಕೆಗಳ ಶಾಲೆಗಳು, ವಿವಿಧ ಕ್ರೀಡಾ ಮೈದಾನಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮತಯಾಚನೆ ಮಾಡಿದರು. ಕ್ಷೇತ್ರದ ಜನರಿಂದ ಸಚಿವರಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ದೊರೆಯಿತು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಬಾರಿ ಮತ್ತೊಮ್ಮೆ ಗೋಪಾಲಣ್ಣ ಅವರನ್ನು ಗೆಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮಾಜಿ ಉಪಮೇಯರ್ ಎಸ್.ಹರೀಶ್, ಡಾ.ಮಂಜುನಾಥ್ ಗೌಡ, ರೈಲು ನಾರಾಯಣ್, ಶಿವಾನಂದಮೂರ್ತಿ, ವಾರ್ಡ್…
ಬೆಂಗಳೂರು: ಕರ್ನಾಟಕ 2023 ರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿದೆ. ಈ ಮಧ್ಯೆಯೇ ಕುರುಡು ಕಾಂಚಾಣದ ಕುಣಿತ ಜೋರಾಗಿಯೇ ನಡೆಯುತ್ತಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಕೆ.ಜಿ ಚಿನ್ನದ ಜೊತೆಗೆ 46 ಕೆ.ಜಿ ಬೆಳ್ಳಿಯನ್ನ ವಿವೇಕ್ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು 5 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ, ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಈಚರ್ ವಾಹದಲ್ಲಿ ಇದನ್ನ ಸಾಗಿಸಲಾಗುತ್ತಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲಿಸರು ಚಿನ್ನ ಬೆಳ್ಳಿ ಸಮೇತ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ವಿವೇಕ್ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.
ದೊಡ್ಡಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಚುನಾವಣಾ ನಾಮಪತ್ರ ಸಲ್ಲಿಸಿದರು.ಇದಕ್ಕೆ ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಸಾಥ್ ನೀಡಿದರು. ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿ, ಅಲ್ಲಿಂದ ಬಸ್ ನಿಲ್ದಾಣ, ವಿವೇಕಾನಂದ ರಸ್ತೆ, ರುಮಾಲೆ ಚೌಕದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರೆದ ವಾಹನದಲ್ಲಿ ಆಗಮಿಸಿದರು. ತಾಲೂಕು ಕಚೇರಿ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ದೊಡ್ಡಬಳ್ಳಾಪುರದ ಅಭಿವೃದ್ಧಿಗಾಗಿ ಯುವ ನಾಯಕ ಧೀರಜ್ ಮುನಿರಾಜು ಅವರಿಗೆ ಜನ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರದಂತೆ ರಾಜ್ಯದಲ್ಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಧೀರಜ್ ಶಾಸಕರಾದರೆ ರೈತರು, ಕಾರ್ಮಿಕರು, ದೀನ ದಲಿತರು ಹಾಗೂ ನೇಕಾರರ ಪರ ವಿಧಾನಸಭೆಯಲ್ಲಿ ದನಿ ಎತ್ತಲಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಇದೇ ಉತ್ಸಾಹದಿಂದ ಬೂತ್ ಮಟ್ಟದಲ್ಲಿ ಶಕ್ತಿ ಪ್ರದರ್ಶಿಸಬೇಕು. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಅತ್ಯಧಿಕ…