ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತ ಏಣಿಕೆ ಈಗಾಗಲೇ ನಡೆಯುತ್ತಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಅಭ್ಯರ್ಥಿಗಳು ರೆಸಾರ್ಟ್‍ಗೆ ಹೊರಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ‘ಕೈ’ ನಾಯಕರಿಗೆ ಆಪರೇಷನ್ ಭಯ ಕಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನಡೆ ಸಾಧಿಸಿರುವ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ 2 ಹೋಟೆಲ್‍ಗಳನ್ನು ಬುಕ್ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಸದ್ದು ಮಾಡುತ್ತಿದೆ. 2023ರ ಕರ್ನಾಟಕ ಚುನಾವಣೆಯ ಮತ ಎಣಿಕೆಯಲ್ಲಿ ಕೈ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ದೆಹಲಿಯ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಡ್ರಮ್ ಬಾರಿಸಿ ಸಂಭ್ರಮಿಸಿದ್ದಾರೆ.
Author: Prajatv Kannada
Bellari Election Result Live: ಬಳ್ಳಾರಿಯಲ್ಲಿ ಕಾಂಗ್ರೆಸ್ ಮುನ್ನಡೆ ಬಳ್ಳಾರಿ ಬಳ್ಳಾರಿ ಗ್ರಾಮೀಣ ಎಂಟು ಸುತ್ತು ಮುಕ್ತಾಯ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ – 47,930 ಬಿಜೆಪಿ ಅಭ್ಯರ್ಥಿ ಶ್ರೀರಾಮುಲು – 27,767 ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ 20,163 ಮುನ್ನಡೆ ಬಳ್ಳಾರಿ ನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ – 6115 ಕೆಆರ್ಪಿಪಿ ಅಭ್ಯರ್ಥಿ ಲಕ್ಷ್ಮೀ ಅರಣ – 10, 483 ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ -14138 ಕಾಂಗ್ರೆಸ್ 3700 ಮತಗಳಿಂದ ಕಾಂಗ್ರೆಸ್ ಮುನ್ನಡೆ ಶಿರಗುಪ್ಪ 5ನೇ ಸುತ್ತಲಿನ ಮತ ಎಣಿಕೆ ಮುಕ್ತಾಯ ಕಾಂಗ್ರೆಸ್ ಅಭ್ಯರ್ಥಿ ಬಿ ಎಂ ನಾಗರಾಜ -27129 ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ – 1625 ಕಾಂಗ್ರೆಸ್ ಅಭ್ಯರ್ಥಿ ಬಿ ಎಂ ನಾಗರಾಜ ಮುನ್ನಡೆ – 10872
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ 224 ಕ್ಷೇತ್ರಗಳಲ್ಲಿ 223ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ಬಿಜೆಪಿ 224ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ. ಮುನ್ನಡೆ – ಬಿಜೆಪಿ: 72 ಕಾಂಗ್ರೆಸ್ : 119 ಜೆಡಿಎಸ್: 25 ಇತರೆ 08 ಬೆಳಗ್ಗೆ 11 ಗಂಟೆವರೆಗೆ ನಡೆದ ಮತ ಮಣಿಕೆ ಪ್ರಕ್ರಿಯೆ ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಹಾಗೂ ಫಲಿತಾಂಶದ ನಿಖರವಾದ ಇಂಚಿಂಚೂ ಮಾಹಿತಿ, ಲೈವ್ ಅಪ್ ಡೇಟ್ ಗಾಗಿ prajaatvkannadanews ಫಾಲೋ ಮಾಡಿ
ಮಂಗಳೂರು: ವಿಧಾನಸಭಾ ಚುನಾವಣೆಯ ಮತ ಎಣಿಕೆ (Karnataka Election Results) ನಡೆಯುತ್ತಿದ್ದು, ಯಾವ ಪಕ್ಷ ಈ ಬಾರಿ ಅಧಿಕಾರದ ಗದ್ದುಗೆ ಏರಬಹುದು ಎಂಬ ಕುತೂಹಲ ಮೂಡಿದೆ. ಈ ನಡುವೆ ಮಂಗಳೂರು (Mangaluru) ಕಾಂಗ್ರೆಸ್ (Congress) ಅಭ್ಯರ್ಥಿ ಯುಟಿ ಖಾದರ್ (UT Khader) ಬಹುಮತದ ನಿರೀಕ್ಷೆಯಲ್ಲಿ ಮಕ್ಕಳೊಂದಿಗೆ ತಾವು ಮಕ್ಕಳಾಗಿ ಕ್ರಿಕೆಟ್ (Cricket) ಆಡಿದ್ದಾರೆ. ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ಗೆಲುವು ಕಂಡಿರುವ UT ಖಾದರ್ ಈ ಬಾರಿಯೂ ಬಹುಮತದಿಂದ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದಾರೆ. ಉಲ್ಲಾಳದ ಭಾರತ್ ಗ್ರೌಂಡ್‌ನಲ್ಲಿ ಯುಟಿ ಖಾದರ್ ರಿಲ್ಯಾಕ್ಸ್ ಆಗಿ ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಾ ರಿಸಲ್ಟ್ ಬರುವ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ
ವಿಜಯಪುರ: ಮುದ್ದೇಬಿಹಾಳ – 4ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 1396 ದೇವರಹಿಪ್ಪರಗಿ – 5ನೇ ಸುತ್ತು – ಜೆಡಿಎಸ್ ಮುನ್ನಡೆ – 4686 ಬಸವನಬಾಗೇವಾಡಿ – 3ನೇ ಸುತ್ತು – ಜೆಡಿಎಸ್ ಮುನ್ನಡೆ – 1136 ಬಬಲೇಶ್ವರ – 4ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 3873 ವಿಜಯಪುರ ನಗರ – 2ನೇ ಸುತ್ತು – ಬಿಜೆಪಿ ಮುನ್ನಡೆ – 9132 ನಾಗಠಾಣ – 3ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 6783 ಇಂಡಿ – 5ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 4048 ಸಿಂದಗಿ – 6ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 37
ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದ್ರೆ ಬೊಮ್ಮಾಯಿ ಸಿಎಂ ಸ್ಥಾನದಿಂದ ಹಿಂದಕ್ಕೆ !: ಏನದು ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ. ಈ ಮಧ್ಯೆ ಸಧ್ಯದ ಟ್ರೆಂಡ್ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷವೂ ಹಿನ್ನಡೆ ಸಾಧಿಸಿದೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾಂವಿಧಾನಿಕವಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮುಂದುವರಿದಿದ್ದಾರೆ. ಆದರೆ ಆರಂಭಿಕ ಟ್ರೆಂಡ್ ನೋಡಿದರೆ ಅವರ ಪಕ್ಷ ಸೋಲಿನತ್ತ ಮುಖಮಾಡಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಪಟ್ಟದಿಂದ ವಿಮುಖರಾಗಬೇಕಾಗುತ್ತದೆ. ಹಾಗಾದರೆ ಆ ಪ್ರಕ್ರಿಯೆ ಹೇಗೆ ನಡೆಯಬಹುದು ಅಂದರೆ… ಮೊದಲಿಗೆ ಸದ್ಯದ ಮುನ್ನೆಡೆಯಲ್ಲಿರುವಂತೆ ಇಂದು ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಪಕ್ಷವೇ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ/ ಗೆಲುವು ಸಾಧಿಸುವಂತಾದರೆ ಸಿಎಂ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸ್ವಯಂ ಪ್ರೇರಿತರಾಗಿ…
ಹೊಸದಿಲ್ಲಿ: ಸಚಿನ್ ತೆಂಡುಲ್ಕರ್‌ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯುವುದು ನನಗೆ “ಭಾವನಾತ್ಮಕ ಕ್ಷಣ” ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಸಚಿನ್ ತಮ್ಮ ವೃತ್ತಿಜೀವನವನ್ನು 49 ಏಕದಿನ ಶತಕಗಳೊಂದಿಗೆ ಕೊನೆಗೊಳಿಸಿದಾಗ ಯಾರಾದರೂ “ಲಿಟಲ್ ಮಾಸ್ಟರ್”ಗೆ ಹತ್ತಿರವಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಇದೀಗ 34 ವರ್ಷದ ಕೊಹ್ಲಿ 274 ಏಕದಿನ ಪಂದ್ಯಗಳಿಂದ 46 ಶತಕಗಳನ್ನು ಬಾರಿಸಿದ್ದಾರೆ. ಮತ್ತು ಅವರ ಬಾಲ್ಯದ ಆರಾಧ್ಯ ಆಟಗಾರನ ಸಾಧನೆ ಸರಿಗಟ್ಟಲು ಅವರಿಗೆ ಇನ್ನೂ ಮೂರು ಶತಕಗಳ ಅಗತ್ಯವಿದೆ..
ಸದಾ ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕುವ ನಟ ಚೇತನ್ ಇದೀಗ ಕಂಬನಿ ಮಿಡಿದಿದ್ದಾರೆ. ತಾವು ಹಿಂದುತ್ವದ ಕುರಿತು ಪೋಸ್ಟ್ ಮಾಡಿ ಜೈಲು ಸೇರಿದ್ದ ಸಂದರ್ಭದಲ್ಲಿ ಜೈಲಿನಲ್ಲಿ ಪರಿಚಯವಾದ ಸ್ನೇಹಿತನ ನಿಧನವನ್ನು ನೆನೆಪು ಕಣ್ಣಿರಿಟ್ಟಿದ್ದಾರೆ. ಜೈಲಿನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಪರಿಚಯಿಸಿ, ಆ ಗೆಳೆಯನ ದುಃಖದ ವಾರ್ತೆಯನ್ನು ನಟ ಚೇತನ್ ಹಂಚಿಕೊಂಡಿದ್ದಾರೆ. ಈ ಮೂಲಕ ಚೇತನ್ ತಮ್ಮ ಮಾನವೀಯ ಮತ್ತೊಂದು ಗುಣವನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ. ನಟ ಚೇತನ್ ಜೈಲಿನಲ್ಲಿದ್ದಾಗ ಪರಿಚಯವಾದವರು ಶಾಂತಪ್ಪ ನಿಧನರಾಗಿದ್ದಾರೆ. ಶಾಂತಪ್ಪ ಹಾಡುಗಾರರಾಗಿದ್ದು, ಅದರಲ್ಲೂ ಒಳಿತು ಮಾಡು ಮನುಸ ಗೀತೆಯನ್ನು ಸೊಗಸಾಗಿ ಹಾಡುತ್ತಿದ್ದರಂತೆ. ಚೇತನ್ ಆ ಹಾಡುಗಳನ್ನು ಕೇಳುತ್ತಾ ದಿನಗಳನ್ನು ಕಳೆಯುತ್ತಿದ್ದರಂತೆ. ಇಂದು ಶಾಂತಪ್ಪ ಇಲ್ಲವಾಗಿದ್ದಾರೆ ಎನ್ನುವ ದುಃಖವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶಾಂತಪ್ಪನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಇಂದು ದುಃಖದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಾರದಲ್ಲಿ ನನ್ನ ಆತ್ಮೀಯ ಗೆಳೆಯನಾಗಿದ್ದ ಶಾಂತಪ್ಪ (35) ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ…
ನಮಗೆ ಸ್ವಲ್ಪ ಹುಷಾರಿಲ್ಲ ಅಥವಾ ದೊಡ್ಡಾ ಆರೋಗ್ಯದ ಸಮಸ್ಯೆ ಬಂತು ಅಂದ್ರೆ ಸಾಕು ಮೊದ್ಲು ಆಸ್ಪತ್ರೆ ಕಡೆ ಮುಖ ಮಾಡ್ತಿವಿ ನಂತರ ಅಲ್ಲಿಯ ವೈದ್ಯರನ್ನ ದೇವರಂತೆ ಕಾಣುತ್ತೀವಿ . ಆದ್ರೆ ವೈದ್ಯರ ನಂತರ ಬರುವ ನರ್ಸ್ ಗಳು? ದುರದೃಷ್ಟವಶಾತ್, ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ವ್ಯಕ್ತಿಗಳು ವೈದ್ಯರು ಎಂದು ಅನೇಕ ಜನರು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಗೆ ಜವಾಬ್ದಾರರಾಗಿರುವ ನಮ್ಮ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ದಾದಿಯರು ಅಂದರೇ ನರ್ಸ್ ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆಧುನಿಕ ನರ್ಸಿಂಗ್ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಮೇ 12 ರಂದು ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಇದು ಆರೋಗ್ಯ ಸೇವಾ ಉದ್ಯಮದಲ್ಲಿ ದಾದಿಯರು ವಹಿಸುವ ನಿರ್ಣಾಯಕ ಪಾತ್ರವಾಗಿರುತ್ತೆ, ವೈದ್ಯರೊಂದಿಗೆ ಅವರ ಮಹತ್ವವನ್ನು ಎತ್ತಿ ತೋರಿಸುತ್ತದೆ. ವಿಶ್ವಾದ್ಯಂತ ದಾದಿಯರಿಗೆ ಸಮಾನ ಗೌರವವನ್ನು ತೋರಿಸುವ ಪ್ರಾಮುಖ್ಯತೆಯನ್ನು ಈ ದಿನವು ಒತ್ತಿ ಹೇಳುತ್ತದೆ ಮತ್ತು ಈ ಧೈರ್ಯಶಾಲಿ…
ಟಾಷ್ಕೆಂಟ್: ಈ ಭಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಮೂರು ಕಂಚಿನ ಪದಕಗಳಿಗೆ ಸಮಾಧಾನಪಟ್ಟುಕೊಂಡಿದೆ. ಭಾರತದ ಮೊಹಮ್ಮದ್ ಹುಸ್ಸಮುದ್ದೀನ್, ದೀಪಕ್ ಕುಮಾರ್ ಭೋರಿಯಾ ಮತ್ತು ನಿಶಾಂತ್ ದೇವ್ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಇದೇ ಮೊದಲ ಭಾರಿಗೆ ವಿಶ್ವ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧೆಗೆ ಇಳಿದ ಮೊಹಮ್ಮದ್ ಹುಸ್ಸಮುದ್ದೀನ್ ಗಾಯಾಳಾಗಿ ಸೈಮಿಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್ ಫೈನಲ್ ದಾಟಿದ ಸಾಧನೆಯಿಂದಾಗಿ ಅವರಿಗೆ ಕಂಚಿನ ಪದಕ ಲಭಿಸಿತು. 29 ವರ್ಷದ, ನಿಜಾಮಾಬಾದ್ ಮೂಲದ ಬಾಕ್ಸರ್ ಹುಸ್ಸಮುದ್ದೀನ್ ಸೆಮಿಫೈನಲ್‌ನಲ್ಲಿ (57 ಕೆಜಿ ವಿಭಾಗ) ಕ್ಯೂಬಾದ ಸೈದೆಲ್ ಹೋರ್ಟ ರಾಡ್ರಿಗೆಝ್ ಡೆಲ್ ರೇ ಅವರನ್ನು ಎದುರಿಸಬೇಕಿತ್ತು. ಆದರೆ ಕ್ವಾರ್ಟರ್ ಫೈನಲ್ ವೇಳೆ ಕಾಡಿದ ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಮುಂದೆ ಸ್ಪರ್ಧಿಸದಂತೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಅವರಿಗೆ ಸೂಚನೆ ನೀಡಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ದೀಪಕ್ ಭೋರಿಯಾ (51 ಕೆಜಿ) ಫ್ರಾನ್ಸ್‌ನ ಬಿಲಾಲ್ ಬೆನ್ನಮ ವಿರುದ್ಧ 3-4 ಅಂತರದ ಸೋಲುಂಡರು. ನಿಶಾಂತ್ ದೇವ್ (71…