ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಜಯನಗರ ಕಾಂಗ್ರೆಸ್ ಸೌಮ್ಯಾರೆಡ್ಡಿ ಹಿನ್ನಡೆ. ಮಹದೇವಪುರ ಬಿಜೆಪಿಯ ಮಂಜುಳಾ ಮುನ್ನಡೆ. ಶಿವಾಜಿನಗರ ಕಾಂಗ್ರೆಸ್ ರಿಜ್ವಾನ್ ಮುನ್ನಡೆ. ಪದ್ಮನಾಭನಗರ ಬಿಜೆಪಿ ಆರ್.ಅಶೋಕ್ ಮುನ್ನಡೆ. ರಾಜ್ಯಾದ್ಯಂತ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ವಿಧಾನಸಭಾ ಚುನಾವಣಾ ಮತದಾನಕ್ಕಿಂತ ಒಂದು ವಾರದಿಂದ ಮೊಲದೇ 80 ವರ್ಷ ಮೇಲ್ಪಟ್ಟ ವೃದ್ಧರು, ಪೊಲೀಸರು, ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಈಗ ಮೊದಲು ಅಂಚೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 91, ಕಾಂಗ್ರೆಸ್ 100, ಜೆಡಿಎಸ್ 18 ಹಾಗೂ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ರಾಜ್ಯಾದ್ಯಂತ ಮತ ಎಣಿಕೆ ಆರಂಭ: 100ಕ್ಕೂ ಅಧಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.
Author: Prajatv Kannada
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ. 10 ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದ ರಾಜ್ಯದ 34 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಾಧಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಎಂ ಬಸವರಾಜ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ. ನಿಪ್ಪಾಣಿ ಬಿಜೆಪಿ ಶಶಿಕಲಾ ಜೊಲ್ಲೆ ಹಿನ್ನಡೆಯಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ ಹಿನ್ನಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿಗೆ ಹಿನ್ನಡೆಯಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಹಿನ್ನಡೆಯಾಗಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಹಿನ್ನಡೆಯಾಗಿದೆ.
Belagavi Assembly Election Result Live: ಅಥಣಿ, ಯಮಕನಮರಡಿಯಲ್ಲಿ ಕಾಂಗ್ರೆಸ್ ಮುನ್ನಡೆ ಬೆಳಗಾವಿ: ಹೈವೋಲ್ಟೇಜ್ ಕ್ಷೇತ್ರವಾಗಿ ಅಥಣಿಯಲ್ಲಿ 4ನೇ ಸುತ್ತಿನ ಮತ ಎಣಿಕೆಯಲ್ಲಿ ಲಕ್ಷ್ಮಣ್ ಸವದಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ – 9849, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 22765 ಮತಗಳನ್ನು ಪಡೆದಿದ್ದಾರೆ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 8 ನೇ ಸುತ್ತಿನಲ್ಲೂ ಸತೀಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಬಸವರಾಜ ಹುಂದ್ರಿ – 6894 ಮತಗಳು ಕಾಂಗ್ರೆಸ್ ಸತೀಶ್ ಜಾರಕಿಹೊಳಿಗೆ 36404 ಮತಗಳು ಜೆಡಿಎಸ್ ಮಾರುತಿ ಅಷ್ಟಗಿಗೆ 10515 ಮತಗಳು
ಉಡುಪಿ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಮತಎಣಿಕೆಯ ಕಾರ್ಯ ಆರಂಭವಾಗಿದೆ.ಉಡುಪಿಯ ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ಒಬ್ಬರು ಮತಎಣಿಕೆ ಕೇಂದ್ರದೊಳಗೆ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಹೋಗಿರುವ ಘಟನೆ ವರದಿಯಾಗಿದೆ. ಆತ, ತನ್ನ ಬಲಗಾಲಿಗೆ ಮೊಬೈಲ್ ಕಟ್ಟಿಕೊಟ್ಟಿದ್ದ. ಪಂಚೆ ಸುತ್ತಿಕೊಂಡಿದ್ದರಿಂದ ಮೊಬೈಲ್ ಕಾಣುವುದಿಲ್ಲ ಎಂಬುದು ಆತನ ಲೆಕ್ಕಾಚಾರವಾಗಿತ್ತು. ಆದರೆ, ಪ್ರವೇಶದ್ವಾರದಲ್ಲಿ ಎಲ್ಲರನ್ನು ತಪಾಸಣೆ ಮಾಡುವಾಗ ಪೊಲೀಸರ ಕೈಗೆ ಆತನ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನ ಮೊಬೈಲ್ ಕಸಿದುಕೊಂಡು ಆತನನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಇದರ ನಡುವೆಯೇ ಮಂಗಳೂರಿನಲ್ಲಿ ಸ್ಟ್ರಾಂಗ್ ರೂಂ (ಮತಪೆಟ್ಟಿಗೆ ಇಟ್ಟಿರುವ ಕೋಣೆ) ಕೊಠಡಿ ಓಪನ್ ಆಗದೇ ಅಧಿಕಾರಿಗಳಿಗೆ ಇರುಸು ಮುರುಸು ಉಂಟಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರಿನ ಸುರತ್ಕಲ್ ಕಾಲೇಜಿನಲ್ಲಿ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಗಿತ್ತು. ಇಂದು ಬೆಳಗ್ಗೆ ಅಧಿಕಾರಿಗಳು ಆಗಮಿಸಿ, ಸ್ಟ್ರಾಂಗ್ ರೂಂ ಬಾಗಿಲು ತೆರೆಯಲು ಯತ್ನಿಸಿದಾಗ ಬಾಗಿಲು ಓಪನ್ ಆಗಿರಲಿಲ್ಲ! ಸ್ಟ್ರಾಂಗ್ ರೂಂಗೆ ಮೂರು ಕೀಲಿಕೈಗಳಿದ್ದವು. ಆ ಮೂರನ್ನು ಬಳಸಿದರೂ ಲಾಕ್ ಓಪನ್ ಆಗಲೇ ಇಲ್ಲ.…
ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ.. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
Chikkamagaluru Assembly Election Result Live: ಚಿಕ್ಕಮಗಳೂರು ಬಿಜೆಪಿ ಸಿಟಿ ರವಿ ಹಿನ್ನಡೆ ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಹಿನ್ನಡೆ
ವಿ. ಸೋಮಣ್ಣಗೆ 4 ಸಾವಿರ ಮತಗಳ ಹಿನ್ನಡೆ ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ 4 ಸಾವಿರ ಮತಗಳ ಹಿನ್ನಡೆ
ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಹಿನ್ನೆಡೆ ಸಾಧಿಸಿದ್ದು, 9 ಸಾವಿರ ಮತಗಳ ಅಂತರಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ಅವರು ಮುನ್ನಡೆಯಲ್ಲಿದ್ದಾರೆ. ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 5,30,85,566 ಪೈಕಿ 3,88,51,807 ಮತದಾರರಿಂದ ಹಕ್ಕು ಚಲಾವಣೆ ಮಾಡಿದ್ದರು. 2,66,82,156 ಪೈಕಿ 1,96,58,398 ಪುರುಷರು, 2,63,98,483 ಪೈಕಿ 1,91,92,372 ಮಹಿಳೆಯರು, 4,927 ಪೈಕಿ 1,037 ಮಂಗಳಮುಖಿಯರು ಹಕ್ಕು ಚಲಾಯಿಸಿದ್ದರು. ರಾಜ್ಯದ 224 ಕ್ಷೇತ್ರಗಳಲ್ಲಿ ಶೇಕಡಾ 73.19ರಷ್ಟು ಮತದಾನವಾಗಿತ್ತು.
Chennagiri Assembly Election Live: ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ ಮುನ್ನಡೆ ದಾವಣಗೆರೆ: ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ ಮುನ್ನಡೆ
ಸೂರ್ಯೋದಯ: 05.55 AM, ಸೂರ್ಯಾಸ್ತ : 06.37 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ವೈಶಾಖ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಅಷ್ಟಮಿ 06:50 AM ತನಕ ನಂತರ ನವಮಿ ನಕ್ಷತ್ರ: ಇವತ್ತು ಧನಿಷ್ಠ 11:35 AM ತನಕ ನಂತರ ಶತಭಿಷ ಯೋಗ: ಇವತ್ತು ಬ್ರಹ್ಮ 09:23 AM ತನಕ ನಂತರ ಇಂದ್ರ ಕರಣ: ಇವತ್ತು ಕೌಲವ 06:50 AM ತನಕ ನಂತರ ತೈತಲೆ 05:45 PM ತನಕ ನಂತರ ಗರಜ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: -ಇಲ್ಲ ಅಭಿಜಿತ್ ಮುಹುರ್ತ: ಬೆಳಗ್ಗೆ.11:46 ನಿಂದ ಮ.12:38 ವರೆಗೂ ಮೇಷ ರಾಶಿ: ನೀವು ಇಂದು ಮಾತಾ-ಪಿತೃಗಳಿಗೆ ಬೆಲೆಬಾಳುವ ಆಭರಣ ಖರೀದಿಸುವಿರಿ, ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ…