Author: Prajatv Kannada

Gangawati Assembly Election Result Live: ಗಂಗಾವತಿಯಲ್ಲಿ ಜನಾರ್ದನರೆಡ್ಡಿಗೆ ಮುನ್ನಡೆ ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ ಜನಾರ್ದನರೆಡ್ಡಿಗೆ ಮುನ್ನಡೆ

Read More

Karnataka Election Results 2023 Live: ಚನ್ನಪಟ್ಟಣದಲ್ಲಿ ಜೆಡಿಎಸ್​ನ ಕುಮಾರಸ್ವಾಮಿ ಮುನ್ನಡೆ ರಾಮನಗರ: ಚನ್ನಪಟ್ಟಣದಲ್ಲಿ ಜೆಡಿಎಸ್​ನ ಕುಮಾರಸ್ವಾಮಿ ಮುನ್ನಡೆ

Read More

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ 224 ಕ್ಷೇತ್ರಗಳಲ್ಲಿ 223ರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದ್ದರೆ, ಬಿಜೆಪಿ 224ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ. ಮುನ್ನಡೆ –  ಬಿಜೆಪಿ: 64 ಕಾಂಗ್ರೆಸ್ : 96 ಜೆಡಿಎಸ್: 19 ಇತರೆ 02 ಬೆಳಗ್ಗೆ 9 ಗಂಟೆವರೆಗೆ ನಡೆದ ಮತ ಮಣಿಕೆ ಪ್ರಕ್ರಿಯೆ ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಹಾಗೂ ಫಲಿತಾಂಶದ ನಿಖರವಾದ ಇಂಚಿಂಚೂ ಮಾಹಿತಿ, ಲೈವ್ ಅಪ್ ಡೇಟ್ ಗಾಗಿ  prajaatvkannadanews ಫಾಲೋ ಮಾಡಿ

Read More

ರಾಮನಗರದಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ​ಗೆ ಮುನ್ನಡೆ ಹಾಸನದಲ್ಲಿ ಬಿಜೆಪಿಯ ಪ್ರೀತಂಗೌಡ ಹಿನ್ನಡೆ, ಹಾಸನದಲ್ಲಿ ಜೆಡಿಎಸ್​ನ ಸ್ವರೂಪ್​ಗೆ ಮುನ್ನಡೆ, ಶಿರಹಟ್ಟಿ ಬಿಜೆಪಿಯ ಡಾ.ಚಂದ್ರು ಲಮಾಣಿಗೆ ಮುನ್ನಡೆ ಅರಕಲಗೂಡಿನಲ್ಲಿ ಜೆಡಿಎಸ್​ನ ಎ.ಮಂಜು ಮುನ್ನಡೆ

Read More

ತುಮಕೂರು: ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾಧುಸ್ವಾಮಿಗೆ ಮುನ್ನಡೆ ತಿಪಟೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮುನ್ನಡೆ ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಮುನ್ನಡೆ ಕುಣಿಗಲ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಡಾ.ರಂಗನಾಥ್​​ ಮುನ್ನಡೆ ತುಮಕೂರು ನಗರದಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ ಮುನ್ನಡೆ ತುಮಕೂರು ಗ್ರಾಮಾಂತರ ಬಿಜೆಪಿ ಸುರೇಶ್ ಗೌಡ ಮುನ್ನಡೆ. ಕೊರಟಗೆರೆ ಕಾಂಗ್ರೆಸ್ ನ ಪರಮೇಶ್ವರ್ ಮುನ್ನಡೆ. ಗುಬ್ಬಿ ಬಿಜೆಪಿ ದಿಲೀಪ್ ಕುಮಾರ್ ಮುನ್ನಡೆ. ಶಿರಾ ಕಾಂಗ್ರೆಸ್ ನ ಟಿ.ಬಿ. ಜಯಚಂದ್ರ ಮುನ್ನಡೆ. ಪಾವಗಡ ಜೆಡಿಎಸ್ ನ ತಿಮ್ಮರಾಯಪ್ಪ ಮುನ್ನಡೆ. ಮಧುಗಿರಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಮುನ್ನಡೆ.

Read More

ಬೆಂಗಳೂರು: ಚುನಾವಣಾ ಫಲಿತಾಂಶ (Karnataka Election Results) ಮುನ್ನಾ ದಿನ ಬಿಜೆಪಿ ನಾಯಕರು (BJP Leaders) ರಿಲ್ಯಾಕ್ಸ್ ಮೂಡ್‌ನಲ್ಲಿದ್ದು ನಿನ್ನೆ ಸಂಜೆ ಹೋಟೆಲಿನಲ್ಲಿ ದೋಸೆ ಸವಿದಿದ್ದಾರೆ. ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಆರ್‌ ಅಶೋಕ್‌,  ಲೆಹರ್‌ ಸಿಂಗ್‌, ರವಿಕುಮಾರ್‌ ಸೇರಿದಂತೆ ಬಿಜೆಪಿ ನಾಯಕರು ದೋಸೆ ತಿಂದಿದ್ದಾರೆ. ನಿನ್ನೆ ಸಂಜೆ ಅಧ್ಯಕ್ಷ ಜೆಪಿ ನಡ್ಡಾ ಜತೆ ಯಡಿಯೂರಪ್ಪ (Yediyurappa) ದೂರವಾಣಿ ಮಾತುಕತೆ ನಡೆಸಿದ್ದು ಬಿಜೆಪಿಗೆ ಬಹುಮತ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಸಂಜೆ ನಾಯಕರ ಜೊತೆ ಸಭೆ ನಡೆದ ಬಳಿಕ ನಡ್ಡಾ ಜತೆ ಮಾತುಕತೆ ನಡೆಸಿದ ಬಿಎಸ್‌ವೈ ಈ ಬಾರಿ 115-120 ಸ್ಥಾನ ಗೆಲ್ಲುತ್ತೇವೆ. ಗೆಲ್ಲಬಹುದಾದ ನಾಲ್ವರು ಪಕ್ಷೇತರರ ಸಂಪರ್ಕದಲ್ಲೂ ನಾವಿದ್ದೇವೆ ಎಂದು ತಿಳಿಸಿದ್ದಾರೆ.

Read More

ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡುತ್ತಾರೆ. ಬೆಂಗಳೂರು ದಕ್ಷಿಣ 7 ಕ್ಷೇತ್ರಗಳ ಅಂಚೆ ಮತದಾನ ಆರಂಭವಾಗಿದೆ. ಶಿವಾಜಿನಗರ, ರಾಜಾಜಿನಗರ ಹಾಗೂ ಚಿಕ್ಕಪೇಟೆಯಲ್ಲಿ ಅಂಚೆ ಮತ ಎಣಿಕೆ ಶುರುವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಮೇ.10 ರಂದು 224 ವಿಧಾಸಭೆಗಳಿಗೆ ಮತದಾನ (Voting) ನಡೆದಿದ್ದು ಇಂದು ಮತ ಎಣಿಕೆ (Vote Counting) ಆರಂಭವಾಗಲಿದೆ. ಇನ್ನು ಸರ್ಕಾರ ರಚನೆಗೆ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ತುದಿಗಾಲಿನಲ್ಲಿ ನಿಂತಿದ್ದು, ಈ ಬಾರಿ ನಾವು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸದಲ್ಲಿವೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 310,  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 567,  ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 385, ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 746,  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1610,  ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ 497, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 474 ಅಂಚೆ ಮತದಾನವಾಗಿದೆ. ಒಟ್ಟು 4589 ಅಂಚೆ ಮತಗಳು ಎಣಿಕೆಯಾಗಲಿವೆ.

Read More

ಬೆಂಗಳೂರು: ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು. ಚುನಾವಣಾ ಸಮೀಕ್ಷೆ (Election Polls) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದೊಂದು ಸಣ್ಣ ಪಕ್ಷ ನೀವೇ 12-13 ಕೊಟ್ಟಿದ್ದೀರಾ. ಹೇಗೆ ಅತಂತ್ರ, ಎಲ್ಲಿಂದ ಬರುತ್ತೆ- ನೀವು ಹೇಳಿದ್ದು ನಾನು ನೋಡ್ತಾ ಇದ್ದೇನೆ. ಕಾಂಗ್ರೆಸ್ (Congress), ಬಿಜೆಪಿಯವರು (BJP) ಸೂಟ್ ಹೋಲಿಸಿಕೊಂಡು ಓಡಾಡ್ತಾ ಇದ್ದಾರೆ. ನನ್ನದು ಸಣ್ಣ ಪಕ್ಷ, 12-20 ರಲ್ಲಿ ಇಟ್ಟಿದ್ದೀರಾ, ನನ್ನ ಕೇಳಿದ್ರೆ ಏನ್ ಹೇಳೋದು ಎಂದು ಗರಂ ಆದರು. ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. 20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಜನಗಳಿಗೆ ಒಂದು ಅವಕಾಶ ಕೇಳಿದ್ದೆ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು. ಜನ ಏನ್ ತೀರ್ಮಾನ ತಗೊಂಡಿದ್ದಾರೆ ನೋಡೊಣ ಬನ್ನಿ. ಸಿದ್ದರಾಮಯ್ಯ, ಯಡಿಯೂರಪ್ಪ ಕ್ಲಿಯರ್ ಮೆಜಾರೀಟಿ ಅಂದಿದ್ದಾರೆ, ಅವರಿಗ್ಯಾಕೆ ನನ್ನ ಅವಶ್ಯಕತೆ? ಈಗ ಇವಿಎಂ (EVM) ಚೇಂಜ್ ಆಯಿತಾ ಎಂದು ವ್ಯಂಗ್ಯವಾಡಿದರು.

Read More

ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡುತ್ತಾರೆ. ಬೆಂಗಳೂರು ದಕ್ಷಿಣ 7 ಕ್ಷೇತ್ರಗಳ ಅಂಚೆ ಮತದಾನ ಆರಂಭವಾಗಿದೆ. ಶಿವಾಜಿನಗರ, ರಾಜಾಜಿನಗರ ಹಾಗೂ ಚಿಕ್ಕಪೇಟೆಯಲ್ಲಿ ಅಂಚೆ ಮತ ಎಣಿಕೆ ಶುರುವಾಗಿದೆ. ಅಂಚೆ ಮತ ಎಣಿಕೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಾ. ಅಶ್ವತ್ಥ್​ ನಾರಾಯಣ ಮುನ್ನಡೆಯಿದ್ದಾರೆ.

Read More