Author: Prajatv Kannada

ಮುಂಬೈ: ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಸಮಾರಂಭಕ್ಕೆ (Maharashtra Bhushan Award Event) ಬಂದಿದ್ದ 11 ಮಂದಿ ಬಿಸಿಲಿನ ತಾಪಮಾನಕ್ಕೆ ಸಾವನ್ನಪ್ಪಿದ ಘಟನೆ ನಡೆದಿದೆ. ನವಿ ಮುಂಬೈನಲ್ಲಿ ಸರ್ಕಾರದಿಂದ ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde) ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಜನರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಆಡಿಯೋ ಹಾಗೂ ವೀಡಿಯೋ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಪ್ರೇಕ್ಷಕರಿಗೆ ಯಾವುದೇ ರೀತಿಯ ಆಸನ ವ್ಯವಸ್ಥೆಯಾಗಲಿ ಹಾಗೂ ಶೆಡ್‍ಗಳ ವ್ಯವಸ್ಥೆಯೂ ಇರಲಿಲ್ಲ. ಇವೆಲ್ಲದರ ಮಧ್ಯೆ ದಿನದ ತಾಪಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಬಿಸಿಲಿನ ಝಳ ತಾಳಲಾರದೇ ಕಾರ್ಯಕ್ರಮದಲ್ಲಿ ನೆರೆದಿದ್ದ 11 ಮಂದಿ ಸಾವನ್ನಪ್ಪಿದ್ದು,…

Read More

IPL 2023 RCB vs CSK Playing XI: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 24ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕಾಗಿ ಆರ್ಸಿಬಿ ತಂಡದಲ್ಲಿ ಒಂದು ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಉತ್ತಮ ಪ್ರದರ್ಶನ ನೀಡಿ 23 ರನ್ಗಳ ಜಯ ಸಾಧಿಸಿತ್ತು. ಆದರೆ ಇದೀಗ ತಂಡಕ್ಕೆ ಜೋಶ್ ಹ್ಯಾಝಲ್ವುಡ್ ಅವರ ಆಗಮನವಾಗಿದ್ದು, ಹೀಗಾಗಿ ಓರ್ವ ಬೌಲರ್ ಹೊರಗುಳಿಯಬೇಕಾಗುತ್ತದೆ. ಇಲ್ಲಿ ವಿದೇಶಿ ವೇಗಿಯಾಗಿ ತಂಡದಲ್ಲಿ ವೇಯ್ನ್ ಪಾರ್ನೆಲ್ ಇದ್ದು, ಸೌತ್ ಆಫ್ರಿಕಾ ಬೌಲರ್ನನ್ನು ತಂಡದಿಂದ ಕೈ ಬಿಟ್ಟು ಜೋಶ್ ಹ್ಯಾಝಲ್ವುಡ್ಗೆ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ. ಇದರ ಹೊರತಾಗಿ ಬೇರೆ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ. RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್,…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಹೈವೋಲ್ಟೇಜ್ ಐಪಿಎಲ್ ಪಂದ್ಯ ನಡೆಯಲಿದ್ದು, ಚನೈ  ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ಹೀಗಾಗಿ ಉಭಯ ತಂಡಗಳ ಅಭಿಮಾನಿಗಳು ಹೆಚ್ಚೆಚ್ಚು ಕ್ರೀಡಾಂಗಣದಲ್ಲಿ ಕಿಕ್ಕಿರಿಯಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ಬದಲಿ ಸಂಚಾರ ಮಾರ್ಗವನ್ನು ತಿಳಿಸಿದ್ದಾರೆ. ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀಧಿ ರಸ್ತೆ, ಟ್ರಿನಿಟಿ ಜೆಎನ್, ಲ್ಯಾವೆಲ್ಲೆ ರಸ್ತೆ, ವಿಟ್ಟಲ್ ಮಲ್ಯ ರಾಡ್ ಮತ್ತು ನೃಪತುಂಗ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಇನ್ನೂ ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಕಿಂಗ್ಸ್ ರಸ್ತೆ, ಬಿಆರ್​ಬಿ ಮೈದಾನ, ಕಂಠೀರವ ಕ್ರೀಡಾಂಗಣ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಓಲ್ಡ್​ ಕೆಜಿಯಡಿ ಬಿಲ್ಡಿಂಗ್ ಸಮೀಪ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ…

Read More

ಮುಂಬೈ: ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೊನೆಗೂ ಮರಿ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಪ್ಲೇಯಿಂಗ್ XI ಸ್ಥಾನ ಲಭಿಸಿತು. ಇದರಿಂದ ಸಂತೋಷಗೊಂಡ ಕ್ರಿಕೆಟ್ ದೇವರು, ತಮ್ಮ ಪುತ್ರನ ಕ್ರಿಕೆಟ್ ಜೀವನಕ್ಕೆ ಶುಭ ಹಾರೈಸಿದ್ದಾರೆ. 2021ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ.ಗಳಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಮರಿ ತೆಂಡೂಲ್ಕರ್‌ಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. 2022 ರಲ್ಲೂ 30 ಲಕ್ಷ ನೀಡಿ ತಂಡದಲ್ಲಿ ಉಳಿಸಿಕೊಂಡರೂ ಅವಕಾಶ ಸಿಗದೆ ಬೆಂಚ್ ಕಾದಿದ್ದ ಎಡಗೈ ವೇಗಿಗೆ, ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕೆಕೆಆರ್ ವಿರುದ್ಧ ಪಂದ್ಯದಲ್ಲಿಆಡುವ ಅವಕಾಶ ಲಭಿಸಿತು. 5 ಬಾರಿ ಚಾಂಪಿಯನ್ಸ್ ನಾಯಕ ರೋಹಿತ್ ಶರ್ಮಾ , ಅರ್ಜುನ್ ತೆಂಡೂಲ್ಕರ್‌ಗೆ ಕ್ಯಾಪ್ ನೀಡಿದರು. ಈ ಕ್ಷಣಕ್ಕೆ ಸಚಿನ್ ತೆಂಡೂಲ್ಕರ್ ಹಾಗೂ ಕುಟುಂಬದವರು ಸಾಕ್ಷಿಯಾದರು. ಪವರ್‌ಪ್ಲೇನಲ್ಲಿ ಮರಿ ತೆಂಡೂಲ್ಕರ್ 2…

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್ನಿಂದ ಕೂಡಿರುತ್ತದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಆರ್ಸಿಬಿಗೆ ಹಾಗೂ ಎಂ.ಎಸ್. ಧೋನಿ ಅಭಿಮಾನಿಗಳು ಸಿಎಸ್ಕೆಗೆ ಬೆಂಬಲ ಸೂಚಿಸುತ್ತಾರೆ. ಇಂದು (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ (RCB) ಹಾಗೂ ಸಿಎಸ್ಕೆ ಸೆಣೆಸಲಿವೆ. ಆರ್ಸಿಬಿಗೆ ಹೋಂ ಪಿಚ್ ಆಗಿರುವುದರಿಂದ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿದೆ. ಇನ್ನು, ಹೋಂ ಗ್ರೌಂಡ್ನಲ್ಲಿ ಬೆಂಗಳೂರು ತಂಡವನ್ನು ಸೋಲಿಸಬೇಕು ಎಂಬ ನಿರೀಕ್ಷೆಯಲ್ಲಿ ಚೆನ್ನೈ ತಂಡ ಇದೆ. ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಪಿಚ್ ರಿಪೋರ್ಟ್ ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟ್ಸಮನ್ಗಳಿಗೆ ಸಹಕಾರಿ ಆಗಿದೆ. ಹೀಗಾಗಿ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು. ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲೋದು ಕೂಡ ತುಂಬಾನೇ ಮುಖ್ಯ. ಹವಾಮಾನ ಹೇಗಿರಲಿದೆ? ಬೆಂಗಳೂರಿನಲ್ಲಿ ನಡೆದ ಸಾಕಷ್ಟು ಐಪಿಎಲ್ ಮ್ಯಾಚ್ಗೆ ವರುಣ ಅಡ್ಡಿ ಮಾಡಿದ್ದಾನೆ.…

Read More

ಇಂಫಾಲ್: ರಾಜಸ್ಥಾನದ ಮೂಲದ 19ರ ಹರೆಯದ ನಂದಿನಿ ಗುಪ್ತಾ (Nandini Gupta) ಅವರು ಈ ಬಾರಿಯ ʻಫೆಮಿನಾ ಮಿಸ್ ಇಂಡಿಯಾ 2023ʼ (Femina Miss India 2023) ಕಿರೀಟ ಧರಿಸಿದ್ದಾರೆ. ದೆಹಲಿ ಮೂಲದ ಶ್ರೇಯಾ ಪೂಂಜಾ (Shreya Poonja) ಅವರು ಮೊದಲ ರನ್ನರ್ ಅಪ್ ಆಗಿದ್ದರೆ, ಮಣಿಪುರ ಮೂಲದ ತೌನೊಜಮ್ ಸ್ಟ್ರೆಲಾ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ಭಾಜನರಾಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಿಸ್ ಇಂಡಿಯಾ ಆಯೋಜಕರು ಮಾಹಿತಿ ಹಂಚಿಕೊಂಡಿದ್ದು, ‘ಈ ಎಲ್ಲ ಮಹಿಳೆಯರು ತುಂಬಾ ಪವರ್‌ಫುಲ್ ಆದ ದನಿ ಹೊಂದಿದ್ದಾರೆ. ಅವರು ನಂಬುವ ಎಲ್ಲಾ ವಿಚಾರಗಳನ್ನ ಸಾಕಾರಗೊಳಿಸಲು ಈ ವೇದಿಕೆಯನ್ನು ಅವರು ಬಳಸಿಕೊಂಡಿದ್ದಾರೆ ಅನ್ನೋದು ನಮಗೆ ಖಚಿತವಾಗಿದೆ. ಈ ಸ್ಥಾನಗಳಿಗೆ ಅವರು ಬರಲು ಪಟ್ಟ ಶ್ರಮವನ್ನ ನಾವು ನೋಡಿದ್ದೇವೆ. ಇವರೆಲ್ಲರಿಗೂ ಶುಭಾಶಯಗಳು. ಇದು ಸಂಭ್ರಮವನ್ನು ಸೆಲೆಬ್ರೇಟ್ ಮಾಡುವ ಸಮಯ.. ಎಂದು ಬರೆದುಕೊಂಡಿದೆ. ಯಾರಿದು ನಂದಿನಿ ಗುಪ್ತಾ? ನಂದಿನಿ ಮೂಲತಃ ರಾಜಸ್ಥಾನದ ಕೋಟ ನಗರದವರು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಂದಿನಿ, ಬ್ಯುಸಿನೆಸ್…

Read More

ದುಬೈ: ದುಬೈನ (Dubai) ದೇರಾ ಬುರ್ಜ್ ಮುರಾರ್ ಪ್ರದೇಶದ ಅಪಾರ್ಟ್‌ ಮೆಂಟ್‌ ನಲ್ಲಿ (Apartment) ನಡೆದ ಬೆಂಕಿ ಅವಘಡದಲ್ಲಿ ನಾಲ್ವರು ಭಾರತೀಯರು (Indians) ಸೇರಿದಂತೆ 16 ಮಂದಿ ಜನರು ಸಾವನ್ನಪ್ಪಿದ್ದಾರೆ. ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ಸಮೀಪವಿರುವ ಕಟ್ಟಡದ 4ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಕೇರಳ ಮತ್ತು ತಮಿಳುನಾಡಿನ ತಲಾ ಇಬ್ಬರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ (Kerala) ಮೂಲದ ರಿಜೇಶ್ (38) ಮತ್ತು ಅವರ ಪತ್ನಿ ಜಿಶಿ (32) ಹಾಗೂ ಇನ್ನಿಬ್ಬರು ತಮಿಳುನಾಡು (Tamil nadu) ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂಡ್ ಎಂದು ಗುರುತಿಸಲಾಗಿದೆ. ಮೃತರು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ದಂಪತಿ ಹಾಗೂ ತಮಿಳುನಾಡಿನ ಇಬ್ಬರು ವ್ಯಕ್ತಿಗಳಾಗಿದ್ದರು. ಜೊತೆಗೆ 3 ಪಾಕಿಸ್ತಾನಿ ಸೋದರಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆಯೂ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿ ಶಾಮಕ ದಳವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತು. ಈ ವೇಳೆ 10ಕ್ಕೂ ಹೆಚ್ಚು ಜನರಿಗೆ ಗಂಭೀರ…

Read More

ಖಾರ್ಟೂಮ್: ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಗುಂಡಿನ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಜನ ವಸತಿ ಪ್ರದೇಶದ ಮೇಲೆ ಗುಂಡಿನ ದಾಳಿ ನಡೆದಿದ್ದು ಈಗಾಗಲೇ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಕನ್ನಡದ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದ್ದು ಸಹಾಯ ಮಾಡುವಂತೆ ಮನವಿ ಮಾಡಿದೆ. ದಾವಣಗೆರೆ ಜಿಲ್ಲೆಯ ಎಂಟು ಮಂದಿ ಸೇರಿ ಒಟ್ಟು ಕರ್ನಾಟಕದ 31 ಜನರು ವಾಸವಾಗಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಇದರಿಂದಾಗಿ ಕನ್ನಡಿಗರು ನೀರು ಆಹಾರ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಖಾರ್ಟೂಮ್ ನಗರದಲ್ಲಿ ಒಂದೇ ಮನೆಯಲ್ಲಿ ಕರ್ನಾಟಕದ ಸುಮಾರು 31 ಜನ‌ ವಾಸವಾಗಿದ್ದಾರೆ. ಕಖೆದ ಐದು ವರ್ಷಗಳ ಹಿಂದೆ ದಾವಣಗೆರೆ, ಶಿವಮೊಗ್ಗ ಹಾಗೂ‌ ಮೈಸೂರಿನಿಂದ ‌ಕೂಲಿ ಕೆಲಸಕ್ಕಾಗಿ ತೆರಳಿದ್ದು ಇವರು ಇದೀಗ ಜೀವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಗಿಡಮೂಲಿಕೆ ಔಷಧಿಗಳ ಮಾರಾಟಕ್ಕೆ ಹಾಗೂ ಕೂಲಿ ಕೆಲಸಕ್ಕಾಗಿ ಸೂಡಾನ್ ಗೆ ತೆರಳಿದ್ದ ಕಾರ್ಮಿಕರು…

Read More

ಲೂಸಿಯಾ ಪವನ್ ನಿರ್ದೇಶನದ, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಧೂಮಂ ಸಿನಿಮಾದ ಫಸ್ಟ್ ಲುಕ್ ಇಂದು ಬೆಳಗ್ಗೆ 10.45ಕ್ಕೆ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಲೂಸಿಯಾ ಪವನ್ ನಿರ್ದೇಶನದ ಧೂಮಂ ಸಿನಿಮಾದ ಮಲಯಾಳಂ ಚಿತ್ರವಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷವಾಗಿದೆ. ಚಿತ್ರದಲ್ಲಿ ಖ್ಯಾತ ನಟ ಫಾಹದ್ ಫಾಸಿಲ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ  ನಟಿಸುತ್ತಿದ್ದಾರೆ. ಧೂಮಂ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದು ತಿಳಿಸಿದೆ. ಧೂಮಂ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Read More

2007ರಲ್ಲಿ ತೆರೆಕಂಡ ದುನಿಯಾ ವಿಜಯ್ ನಟನೆಯ ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಲೂಸ್ ಮಾದ ಯೋಗಿ ಇದೀಗ  ಐವತ್ತನೇ ಸಿನಿಮಾದ ಹೊಸ್ತಿಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಯೋಗಿ ನಟನೆಯ 50ನೇ ಸಿನಿಮಾದ ಮುಹೂರ್ತ ನಡೆದಿದ್ದು ಚಿತ್ರಕ್ಕೆ ರೋಸಿ ಎಂದು ಟೈಟಲ್ ಇಡಲಾಗಿದೆ. ಆದರೆ ಯೋಗಿ ನಟನೆಯ ಸಿನಿಮಾಗೆ ರೋಸಿ ಟೈಟಲ್ ಸಿಗುವುದು ಅನುಮಾನವಾಗಿದೆ. ಅರ್ಜುನ್ ಜನ್ಯ ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ ಶೀರ್ಷಿಕೆಯನ್ನು  ಈಗಾಗಲೇ ನೋಂದಾಯಿಸಲಾಗಿದೆ. ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಲಾಗಿದೆ. ಆದರೆ ಇದೀಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದ್ದು, ಹೀಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45 ಶೀರ್ಷಿಕೆ ನೀಡಲಾಗಿದೆ.…

Read More