ಬೆಳಗಾವಿ: ನಮ್ಮ ಲೆಕ್ಕದಲ್ಲಿ ಬಹುಮತದ ಕೊರತೆ ಆಗಲ್ಲ. ಆದರೂ ಜೆಡಿಎಸ್ (JDS) ಬೆಂಬಲ ಕೊಟ್ರೆ ಒಳ್ಳೆಯದಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ತಿಳಿಸಿದರು. ಮೈತ್ರಿಗೆ ನಾವು ಸಿದ್ಧ ಎಂಬ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸರ್ಕಾರದ ಆಡಳಿತ ಮಾಡಲು ಒಳ್ಳೆಯದಾಗುತ್ತದೆ. ದೇವೇಗೌಡರದ್ದು (HD Devegowda) ಕುಮಾರಸ್ವಾಮಿಯವರದ್ದು ಸಲಹೆ ಇದ್ದರೆ ಒಳ್ಳೆಯದು. ಬಿಜೆಪಿಯವರು ಆಪರೇಷನ್ ಕಮಲ ಮಾಡುವುದು ಅವರ ಹಗಲುಗನಸಾಗಿದೆ. ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟು ಬರಲ್ಲ ಎಂದು ಹೇಳಿದರು ಬಿಜೆಪಿ (BJP) ವಿರೋಧಿ ಅಲೆ, ಬೆಲೆ ಏರಿಕೆ, 4 ವರ್ಷದಿಂದ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ವಿಶೇಷವಾಗಿ 40 ಪರ್ಸೆಂಟ್ ಸರ್ಕಾದ ಇಡೀ ವಿಶ್ವದಲ್ಲೇ ಫೇಮಸ್ ಆಯ್ತು. ರಾಷ್ಟ್ರೀಯ ವಾಹಿನಿಗಳಲ್ಲೂ ಸಹ 40 ಪರ್ಸೆಂಟ್ ಸರ್ಕಾರ ಅಂತಾ ಹೇಳುತ್ತಾರೆ. ನಮ್ಮ ನಾಯಕರು ಕಲೆಕ್ಟೀವ್ ಆಗಿ ಪ್ರಚಾರ ಮಾಡಿದರು. ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ (Siddaramaiah) ಎಲ್ಲರೂ ತಮ್ಮ ತಮ್ಮ…
Author: Prajatv Kannada
ರಾಮನಗರ: : ಕಪ್ ಈಗಲೂ ಅವರದ್ದೇ, ಮುಂದಕ್ಕೆ ನಮ್ಮದು ಎಂದು ಡಿ.ಕೆ ಸುರೇಶ್ (DK Suresh) ಹೇಳಿದ್ದಾರೆ. ಕಪ್ (Cup) ನಮ್ದೆ ಎಂಬ ಸಚಿವ ಆರ್ ಅಶೋಕ್ (R Ashok) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಈ ರೀತಿಯಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಎಲ್ಲವನ್ನೂ ಸುರ್ಜೇವಾಲ ಹೇಳುತ್ತಾರೆ ಎಂದು ತಿಳಿಸಿದರು ಅಶೋಕ್ ಹೇಳಿದ್ದೇನು..?: ಗುರುವಾರ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಚಿವ ಆರ್. ಅಶೋಕ್, ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ. ಕಳೆದ ಬಾರಿ ಮೈತ್ರಿ ಸರ್ಕಾರ ಬಂತು. ನಂತರ ಅದು ಬಿದ್ದು ಹೋಯ್ತು. ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು. ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಪ್ರಮೇಯ ಬರೋದೇ ಇಲ್ಲ. ರಿಸಲ್ಟ್ ಬಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ. ನಮಗೆ ವಿಶ್ವಾಸ ಇದೆ. ನಾವೇ ಸರ್ಕಾರ ಮಾಡುತ್ತೇವೆ. ನಮ್ಮ…
ತುಮಕೂರು: ಆ ಬಾಲಕಿ ಹೆಸರು ಜೀವಿತಾ ಮೊನ್ನೆಯಷ್ಟೆ ಪಿಯುಸಿ ಮುಗಿಸಿದ್ದಾಳೆ. ಪಿಯುಸಿ ಮುಗಿಸಿ ಊರಿನಲ್ಲಿದ್ದ ಈಕೆಗೆ ಯುವಕನೋರ್ವ ಪ್ರೀತಿ ಮಾಡುತ್ತಿದ್ದನಂತೆ. ಜೊತೆಗೆ ಪ್ರೀತಿ ಮಾಡು ಎಂದು ಪದೇ ಪದೇ ಪೀಡಿಸುತ್ತಿದ್ದನಂತೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಪ್ರೀಯಕರ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೌದು ತುಮಕೂರು(Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ಪೂಜಾರಿಯಾಗಿರುವ ವಿನಯ್, ಗ್ರಾಮದ ಅಪ್ರಾಪ್ತ ಬಾಲಕಿಯಾಗಿರುವ ಜೀವಿತಾಳನ್ನ ಒಂದು ವರ್ಷದಿಂದ ಲವ್ ಮಾಡುತ್ತಿದ್ದನಂತೆ. ಹೀಗಾಗಿ ನಿನ್ನೆ(ಮೇ.11) ಬೆಳಿಗ್ಗೆ ‘ನಾನು ನಿನ್ನ ಇಷ್ಟಪಡ್ತಿನಿ, ನೀನು ನನ್ನ ಪ್ರೀತಿಸು ಎಂದು ಹಿಂಸೆ ನೀಡಿದ್ದನಂತೆ. ಆಗ ಹುಡುಗಿ ಬೇಡ ಎಂದು ನಿರಾಕರಿಸಿದ್ದಕ್ಕೆ ಕಪಾಳಕ್ಕೆ ಹೊಡೆದನಂತೆ. ಬಳಿಕ ಅಲ್ಲಿಂದ ಏನಾದರೂ ಮಾಡ್ತಾನೆಂದು ತಪ್ಪಿಸಿಕೊಂಡು ಓಡಿದಾಗ ಹಿಂಬಾಲಿಸಿ ಬಂದು ಅಟ್ಯಾಕ್ ಮಾಡಿದ್ದಾನಂತೆ. ಇನ್ನು ಅಟ್ಯಾಕ್ ಮಾಡಿದ ಕೂಡಲೇ ಮನೆಯವರು ಗಮನಿಸಿ, ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ…
ಹಾಸನ: ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಸ್ವತಂತ್ರ ಸರ್ಕಾರದ ಲೆಕ್ಕಾಚಾರದಲ್ಲಿ ಮುಳುಗಿದ್ರೆ, ದಳಪತಿಗಳು ಮಾತ್ರ ಅತಂತ್ರ ಫಲಿತಾಂಶದ ಕನವರಿಕೆಯಲ್ಲಿದ್ದಾರೆ. ಈ ಬಾರಿಯೂ ಕುಮಾರಸ್ವಾಮಿಯೇ ಕಿಂಗ್ ಮೇಕರ್, ಕುಮಾರಸ್ವಾಮಿ ನೇತೃತ್ವ ಇಲ್ಲದೆ ಸರ್ಕಾರವೇ ರಚನೆ ಆಗಲ್ಲ ಎಂದು ಮೀಸೆ ತಿರುವುತಿದ್ದು, ಹೊಸ ರಾಜಕೀಯ ಅಂಕ ಗಣಿತ ಪಠಿಸುತ್ತಿದ್ದಾರೆ. ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. Video Player 00:00 00:14 ಇದರ ನಡುವೆ ಮನೆಯಲ್ಲಿ ಕೂತು ಹೆಚ್.ಡಿ.ದೇವೇಗೌಡರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಬೇರೆ ಪಕ್ಷದವ್ರು ಜೆಡಿಎಸ್ ಅಭ್ಯರ್ಥಿ ಸಂಪರ್ಕಿಸುವ ಭೀತಿ ಹಿನ್ನೆಲೆ ಗೆಲ್ಲುವ ಅಭ್ಯರ್ಥಿಗಳಿಗೆ ಫೋನ್ ಕಾಲ್ ಮಾಡಿ ಚರ್ಚೆ ನಡೆಸಿದ್ದಾರೆ. ಫಲಿತಾಂಶದ ಬಗ್ಗೆ ಮಾತುಕತೆ ನಡೆಸಿದ್ದಾರೆ. ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಗೌಡರು ಕಸರತ್ತು ನಡೆಸುತ್ತಿದ್ದಾರೆ.
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ (Karnataka Election)ಪ್ರಯುಕ್ತ ಎರಡು ದಿನ ಮದ್ಯ ನಿಷೇಧ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ. ಚುನಾವಣೆ ಹಿನ್ನೆಲೆ ಎರಡು ದಿನ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ಪ್ರತಿ ದಿನ 12,500 ಮದ್ಯದ ಅಂಗಡಿಗಳಿಂದ ₹80 ರಿಂದ ₹90 ಕೋಟಿ ರೂ. ಆದಾಯವಾಗುತ್ತಿತ್ತು. ಎರಡು ದಿನ ಅಂಗಡಿ ಬಂದ್ ಮಾಡಿದ್ದರಿಂದ ಕೇವಲ ಸರ್ಕಾರಕ್ಕೆ ಮಾತ್ರವಲ್ಲದೇ ಬಾರ್ ಮಾಲೀಕರಿಗೂ ನಷ್ಟ ಆಗಿದೆ. ಒಂದು ಬಾರ್ಗೆ ದಿನಕ್ಕೆ ₹1.5 ಲಕ್ಷಕ್ಕೂ ಅಧಿಕ ಆದಾಯ ಬರುತ್ತೆ. ಒಂದು ಎಂಆರ್ಪಿ ಶಾಪ್ಗೆ 3 ಲಕ್ಷ ಆದಾಯ ಬರುತ್ತೆ. ಎರಡು ದಿನದಲ್ಲಿ 12,500 ಮಧ್ಯದಂಗಡಿಗಳಿಂದ ಒಟ್ಟು 200 ಕೋಟಿಗೂ ಅಧಿಕ ಬಿಸಿನೆಸ್ ಆಗುತ್ತಿತ್ತು. ಆದರೆ ಎರಡು ದಿನ ಬಂದ್ ಆಗಿ ಒಟ್ಟು 350 ಕೋಟಿ ರೂಪಾಯಿ ಬಿಸನೆಸ್ ಲಾಸ್ ಆಗಿದೆ. ಮೇ 13ರಂದು ಮತ ಎಣಿಕೆ ಹಿನ್ನೆಲೆ ಇಂದು ರಾತ್ರಿಯಿಂದ ಮತ್ತೆ ಒಂದು…
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಈ ನಡುವೆ ಮತದಾನ ಮುಗಿಯುತ್ತಿ ದ್ದಂತೆಯೇ ಚಿಗಿತುಕೊಂಡಿರುವ ಬೆಟ್ಟಿಂಗ್ ದಂಧೆ ವೇಗವನ್ನು ಪಡೆದುಕೊಂಡಿದೆ. ಈ ಸಂಬಂಧ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ (Joint Commissioner Sharanappa)ಅವರು, ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿರುವ ಹಿನ್ನಲೆ ಸಿಸಿಬಿಯಿಂದ ಈಗಾಗಲೇ ಸಾಕಷ್ಟು ಮಾಹಿತಿ ಕೆಲೆ ಹಾಕಲಾಗಿದೆ. ಆದ್ರೆ ಯಾರೂ ಕೂಡ ಬಂದು ದೂರು ನೀಡಿಲ್ಲ. ಫೇಕ್ ಆನ್ ಲೈನ್ ಆಪ್ ಗಳ ಮೂಲಕ ಬೆಟ್ಟಿಂಗ್ ಆಡ್ತಾ ಇದ್ದಾರೆ. ಬಗ್ಗೆ ಸಾಕಷ್ಟು ಮಾಹಿತಿ ಈಗಾಗಲೇ ಬಂದಿದೆ. ಆದ್ರೂ ಪೊಲೀಸರು ಮೋಸ ಹೋದವರನ್ನು ಸಂಪರ್ಕ ಮಾಡ್ತಾ ಇದ್ದಾರೆ. ಅವರಿಂದ ದೂರು ಪಡೆದು ತನಿಖೆ ಮಾಡಲು ಮುಂದಾಗ್ತಾ ಇದ್ದಾರೆ. ಆದ್ರೆ ಇದುವರೆಗೂ ಮೋಸ ಹೋದವರು ಯಾರೂ ದೂರು ನೀಡಿಲ್ಲ ಎಂದರು. ಇನ್ನೂ ಇದೇ ವೇಳೆ ನಾಳೆ ನಡೆಯುವ ಮತ ಎಣಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ನಾಳೆ ಚುನಾವಣಾ ಮತಎಣಿಕೆ ಹಿನ್ನಲೆ, CRPF, BSF, KSRP ಹಾಗೂ ಸ್ಥಳೀಯ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಬಿಜೆಪಿ(BJP) ಮುಖಂಡ ಎನ್.ರವಿಕುಮಾರ್ ಹೇಳಿದ್ದಾರೆ. ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಾವು ಏನೇ ಹೇಳಿದರೂ ನಾಳೆ ರಿಸಲ್ಟ್ನಲ್ಲಿ ವಾಸ್ತವ ಗೊತ್ತಾಗಲಿದೆ. ನಾವು 105-120ರವರೆಗೆ ತಲುಪುತ್ತೇವೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ 15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡ್ರೆ 105ಕ್ಕಿಂತ ಹೆಚ್ಚು ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಎನ್ ರವಿಕುಮಾರ್ ಅವರು ಭವಿಷ್ಯ ನುಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ ಪದ್ಮಜೀತ ನಾಡಗೌಡ ಪಾಟೀಲ ತಮ್ಮ ನಿವಾಸದಲ್ಲಿಂದು ಚುನಾವಣೆ ಗದ್ದಲದಿಂದ ಮುಕ್ತರಾಗಿ ಅವರ ಮಗನ ಜೊತೆ ಕ್ರಿಕೆಟ್ ಆಡುತ್ತಾ ಸಮಯ ಕಳೆದರು. ತೇರದಾಳ ಮತಕ್ಷೇತ್ರದ ಮತದಾರರು ಮತ್ತು ಪೋಲಿಂಗ್ ಏಜೆಂಟರು ಚುನಾವಣೆಯ ಕುರಿತು ಕ್ಷೇತ್ರದ ವಿವಿಧ ಬುತಗಳಲ್ಲಿ ಬಂದ ಮತದಾರ ಭಾರಿ ರೆಸ್ಪಾನ್ಸ್ ಬಗ್ಗೆ ಚರ್ಚೆ ನಡೆಸಿದ್ದ ಡಾ ಪದ್ಮಜೀತ ನಾಡಗೌಡ ಪಾಟೀಲ. ಕಳೆದ ಹಲವು ದಿನಗಳಿಂದ ಚುನಾವಣೆಯಲ್ಲಿ ಬಿಜಿ ಆಗಿದ್ದ ಡಾ ಪದ್ಮಜೀತ ನಾಡಗೌಡ ಪಾಟೀಲ ಅವರ ಧರ್ಮಪತ್ನಿ ಚುನಾವಣೆ ಪ್ರಚಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದರು.. ಯುವ ಮತದಾರ ಒಲವು ಅವರು ಕೊಟ್ಟ ಸಹಕಾರ ಬಗ್ಗೆ ಜೊತೆ ಚರ್ಚೆ ನಡೆಸಿದ್ದರು. ಡಾ ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ ಈ ಬಾರಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಕಾಶ ಕುಂಬಾರ, ಬಾಗಲಕೋಟೆ
ಮೈಸೂರು: ರಾಜ್ಯದ ಮತದಾರರು ರಾಜಕೀಯ ಪಕ್ಷಗಳ ಭವಿಷ್ಯ ಬರೆದಾಗಿದೆ. ಕದನ ಕಲಿಗಳ ಹಣೆ ಬರಹ ಮತಯಂತ್ರದಲ್ಲಿ ಸುಭದ್ರವಾಗಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ತೀವ್ರ ಕುತೂಹಲ ಕೆರಳಿಸಿವೆ. ಮತದಾನ ಮುಗೀತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಬೆಟ್ಟಿಂಗ್ ಬಜಾರ್ನಲ್ಲಿ ಬಾಜಿ ಆಟ ಜೋರಾಗೇ ನಡೆಯುತ್ತಿದ್ದು, ಕಾರ್ಯಕರ್ತರು ಕೈಯಲ್ಲಿ ಕಂತೆ ಕಂತೆ ಹಣ ಹಿಡಿದು ಎದುರಾಳಿಗಳಿಗೆ ಸವಾಲು ಹಾಕುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಸದ್ದು ಮಾಡಿರುವ ವರುಣಾ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರೆ, ಇತ್ತ ಸೋಮಣ್ಣ ಗೆಲ್ಲಲಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಲ್ಲದೇ ಸೋಮಣ್ಣ ಪರ ಬೆಟ್ಟಿಂಗ್ ಸಹ ಜೋರಾಗಿದೆ. ಸಿದ್ದರಾಮಯ್ಯ ವಿರುದ್ದ ಸೋಮಣ್ಣ 25 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಆಹ್ವಾನ ನೀಡಿದ್ದಾರೆ. 3,300 ಚದರಡಿ ನಿವೇಶನ ಅಗ್ರಿಮೆಂಟ್ ಮಾಡಿಕೊಡುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಯ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಬೆನ್ನಲ್ಲೇ ಇದೀಗ ಕೈ ನಾಯಕರಲ್ಲೀಗ ಸಿಎಂ ರೇಸ್ ಆರಂಭವಾಗಿದೆ. ಇನ್ನು ದಲಿತ ಸಿಎಂ ಮತ್ತೆ ಸದ್ದು ಮಾಡುತ್ತಿದ್ದು ಪ್ರಿಯಾಂಕ್ ಖರ್ಗೆಯವರನ್ನು ಸಿಎಂ ಮಾಡಬೇಕು ಅಂತಾ ಪೆÇೀಸ್ಟರ್ ವಾರ್ ಆರಂಭವಾಗಿದೆ. ಹೌದು. ಚುನಾವಣೋತ್ತರ ಸಮೀಕ್ಷೆ (Exit Poll) ಗಳಲ್ಲಿ ಕಾಂಗ್ರೆಸ್‍ಗೆ ಬಹುಮತದ ಸುಳಿವು ಸಿಗುತ್ತಿದ್ದಂತೆ ಪಕ್ಷದಲ್ಲಿ ಆಂತರಿಕವಾಗಿ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆಗೆ ಈಗ ಪರಮೇಶ್ವರ್ ಕೂಡ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ನೋಡಿದ್ದಾರೆ. ಅತ್ತ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ. ಕಾಂಗ್ರೆಸ್ (Congress) ನಾಯಕರು ಹಾಕಿರುವ ಪೋಸ್ಟ್ ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಮುಂದಿನ ಸಿಎಂ. ಇದು ಅಪ್ಪನ ಕನಸಲ್ಲ, ಕೋಟ್ಯಂತರ ಕನ್ನಡಿಗರ ಕನಸು. ಪ್ರಿಯಾಂಕ್ ಖರ್ಗೆ ಅವರಿಗೆ ಅರ್ಹತೆ, ಸಾಮರ್ಥ್ಯ, ಯೋಗ್ಯತೆ, ಜ್ಞಾನ, ಬದ್ಧತೆ ಹಾಗೂ ಕನ್ನಡಿಗರ ಆಶೀರ್ವಾದವಿದೆ. ಹೀಗಾಗಿ ಮುಂದಿನ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಅಂತಾ…