ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಬಹುಮತ ಬರುವ ಎಲ್ಲಾ ಲಕ್ಷಣ ಕಾಣುತ್ತಿದೆ, ಮತ್ತೆ ನಾವೇ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿಗೆ ಬಹುಮತ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಗ್ರೌಂಡ್ ರಿಪೋರ್ಟ್ ತಂದಿದ್ದೇವೆ. ನಮಗೆ ಮ್ಯಾಜಿಕ್ ನಂಬರ್(magic number) ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮೈತ್ರಿ ಸರ್ಕಾರ ರಚಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಕೇಂದ್ರದ ನಾಯಕರಿಗೆ ನಾನೇ ವಾಸ್ತವ ಸ್ಥಿತಿಯನ್ನು ತಿಳಿಸಿದ್ದೇನೆ. ಕೇಂದ್ರದ ನಾಯಕರಿಗೂ ಬಹುಮತ ಬರುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
Author: Prajatv Kannada
ಬೆಂಗಳೂರು: ‘ನಾನು ಪಕ್ಷಕ್ಕೆ ಶ್ರಮ ಪಟ್ಟಿದ್ದೀನಿ, ರೆಸಾರ್ಟ್ ರಾಜಕಾರಣ ಮುಗಿದಿದೆ. ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ದಿನೇಶ್ ಗುಂಡೂರಾವ್(Dinesh Gundu Rao) ಆಗಲ್ಲವೆಂದು ಬಿಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು. ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಟ್ಟಿದ್ರು, ಆಗ ನನಗೆ ಸೋನಿಯ ಗಾಂಧಿಯವರು ಜವಾಬ್ದಾರಿ ಕೊಟ್ಟರು. ಈಗ ಹಿರಿಯರು ಕಿರಿಯರು ಎಲ್ಲರೂ ನಮಗೆ ಈಗ ಸಹಕಾರ ಕೊಡ್ತಾರೆ, ಉತ್ತಮವಾದ ಸರ್ಕಾರ ಕೊಡ್ತೀವಿ ಎಂದರು. ಎಕ್ಸಿಟ್ ಪೋಲ್ ಸರ್ವೇ ಕುರಿತು ಮಾತನಾಡಿದ ಅವರು ‘ ಈ ಬಗ್ಗೆ ನಂಬಿಕೆ ಇಲ್ಲ, ನನ್ನ ನಂಬಿಕೆ 141 ಸೀಟು, ಎಕ್ಸಿಟ್ ಪೋಲ್ ಸ್ಯಾಂಪಲ್ ಸಂಖ್ಯೆ ಕಡಿಮೆ ಇದ್ದು, ನಮ್ಮ ಸ್ಯಾಂಪಲ್ ಸಂಖ್ಯೆ ಜಾಸ್ತಿ ಇದೆ. ಇನ್ನೂ ಹೆಚ್ಚಿನ ಸಂಖ್ಯೆ ಬರಲಿದ್ದು, ನಿಚ್ಚಳವಾದ ಬಹುಮತ ಕಾಂಗ್ರೆಸ್ಗೆ ಬರುತ್ತದೆ. ಇದು ನನ್ನ ಅಚಲವಾದ ನಂಬಿಕೆ. ಬಿಜೆಪಿಯವರು ಎಷ್ಟೇ ದುಡ್ಡು…
ಕೋಲ್ಕತ್ತಾ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭಿಕ ಯಶಸ್ವಿ ಜೈಸ್ವಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 47 ಎಸೆತಗಳಲ್ಲಿ ಅಜೇಯ 98* ರನ್ ಸಿಡಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 9 ವಿಕೆಟ್ ಭರ್ಜರಿ ಜಯ ತಂದುಕೊಟ್ಟರು. ಪಂದ್ಯದ ಮೊದಲನೇ ಎಸೆತದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 13 ಎಸೆತಗಳಲ್ಲೇ ವೇಗದ ಅರ್ಧಶತಕ ಸಿಡಿಸಿ ಯಶಸ್ವಿ ಜೈಸ್ವಾಲ್, ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದರು. ಜೊತೆಗೆ ಒಂದೇ ಓವರ್‌ನಲ್ಲಿ 26 ರನ್ ಸಿಸಿಡುವ ಮೂಲಕ ಪೃಥ್ವಿ ಶಾ ಅವರ ಸುದೀರ್ಘ ಕಾಲದ ದಾಖಲೆಯನ್ನು ಮುರಿದು ಗಮನ ಸೆಳೆದರು ಹಾಗೂ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ…
ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ರಾಜಸ್ಥಾನ್ ರಾಯಲ್ಸ್ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಗುರುವಾರ ರಾತ್ರಿ ಕೆಕೆಆರ್ ನೀಡಿದ್ದ 150 ರನ್ ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಮೂಲಕ ಈ ಹಿಂದೆ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಕೆ.ಎಲ್ ರಾಹುಲ್ ದಾಖಲೆಯನ್ನು ಮುರಿದರು. ಅಂತಿಮವಾಗಿ 47 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ ಅಜೇಯ 98 ರನ್ ಸಿಡಿಸಿದರು. ಆ ಮೂಲಕ ಇನ್ನೂ 41 ಎಸೆತಗಳು ಬಾಕಿ ಇರುವಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ 9 ವಿಕೆಟ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪ್ರಭಾಸ್ ಮತ್ತು ಕೃತಿ ಸನೂನ್ ನಟನೆಯ ‘ಆದಿಪುರುಷ’ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತದೆ. ಟ್ರೈಲರ್ ರಿಲೀಸ್ ಆದಾಗ ಹಾಗೂ ಪೋಸ್ಟರ್ ಬಿಡುಗಡೆ ಆದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಿತ್ರದ ಮೇಲಿತ್ತು. ಇದೀಗ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಹೊತ್ತಲ್ಲೇ ಚಿತ್ರತಂಡದ ಮೇಲೆ ದೂರು ದಾಖಲಾಗಿದೆ. ಸಂಜಯ್ ತಿವಾರಿ ಎಂಬುವವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ನಿರ್ಮಾಪಕರು ಮತ್ತು ಕಲಾವಿದರು ಗಂಭೀರ ತಪ್ಪುಗಳನ್ನು ಮಾಡಿದ್ಧಾರೆ. ಈ ತಪ್ಪುಗಳು ನಾಳೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಅಲ್ಲದೇ, ಒಂದು ವರ್ಗದ ಜನರ ಧಾರ್ಮಿಕ ಭಾವನೆಗೂ ನೋವನ್ನುಂಟು ಮಾಡಬಹುದು. ಹಾಗಾಗಿ ಸಿನಿಮಾದಲ್ಲಿ ಅಂತಹ ತಪ್ಪುಗಳು ಕಾಣದಂತೆ ನಿರ್ದೇಶನ ನೀಡಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. `ಆದಿಪುರುಷ್’ ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ…
ಮದುವೆ ಹಾಗೂ ಲವ್ ವಿಷಯಕ್ಕೆ ಕಳೆದ ಕೆಲ ತಿಂಗಳಿನಿಂದ ಸಖತ್ ಸದ್ದು ಮಾಡುತ್ತಿದ್ದ ಟಾಲಿವುಡ್ ನಟ ನರೇಶ್ ಹಾಗೂ ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಮತ್ತೆ ಮದುವೆ ಸಿನಿಮಾದ ಕುರಿತು ಸುದ್ದಿಯಾಗ್ತಿದ್ದಾರೆ. ತಮ್ಮ ಲವ್ ಸ್ಟೋರಿಯನ್ನು ಹೇಳುವುದಕ್ಕಾಗಿಯೇ ನರೇಶ್ ಸಿನಿಮಾ ಮಾಡಿದ್ದು, ಮಾಜಿ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು 15 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಮದುವೆ ಸಿನಿಮಾಗೆ ನರೇಶ್ 15 ಕೋಟಿ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ತಾವೇಕೆ ಪವಿತ್ರಾ ಲೋಕೇಶ್ ಹಿಂದೆ ಬಿದ್ದೆ ಎನ್ನುವ ಕುರಿತು ಕಥೆಯನ್ನು ನರೇಶ್ ಹೇಳಿದ್ದಾರಂತೆ. ನಿನ್ನೆಯಷ್ಟೇ ಮತ್ತೆ ಮದುವೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ತಮ್ಮ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಪವಿತ್ರಾ…
ಸಾಸಿವೆ ಎಣ್ಣೆಯು ಸಾಸಿವೆ ಸಸ್ಯಗಳ ಬೀಜಗಳಿಂದ ಬರುತ್ತದೆ. ಇದು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಹೃದಯರಕ್ತನಾಳದ ಕಾಯಿಲೆಯ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಎಣ್ಣೆಯಿಂದ ಅಡುಗೆ ಮಾಡುವುದು ಗಂಭೀರ ಅಪಾಯವನ್ನು ಉಂಟುಮಾಡಬಹುದು, ವಿಶೇಷವಾಗಿ ಮಕ್ಕಳಿಗೆ. ಜನರು ಸಾಸಿವೆ ಎಣ್ಣೆಯನ್ನು ಅಡುಗೆ ಮತ್ತು ಪರ್ಯಾಯ ಔಷಧದಲ್ಲಿ ದೀರ್ಘಕಾಲ ಬಳಸಿದ್ದಾರೆ. ಇದು ಏಷ್ಯನ್, ಮುಖ್ಯವಾಗಿ ಭಾರತೀಯ, ಪಾಕಪದ್ಧತಿಗಳಲ್ಲಿ ಸಾಮಾನ್ಯವಾಗಿದೆ. ಎಣ್ಣೆಯ ಬಲವಾದ ರುಚಿಯು ಹಾರ್ಸ್ರಡೈಶ್ ಮತ್ತು ವಾಸಾಬಿಯಲ್ಲಿ ಇರುವ ಸಂಯುಕ್ತದಿಂದ ಬರುತ್ತದೆ. ಸಾಸಿವೆ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತವನ್ನು ಸಹ ಹೊಂದಿದೆ. ಆದಾಗ್ಯೂ, ಸಾಸಿವೆ ಎಣ್ಣೆಯ ಬಳಕೆಯು ವಿವಾದಾಸ್ಪದವಾಗಿದೆ ಮತ್ತು ಸಂಭಾವ್ಯ ಅಪಾಯಗಳು ತುಂಬಾ ದೊಡ್ಡದಾಗಿದೆ, ಆಹಾರ ಮತ್ತು ಔಷಧ ಆಡಳಿತ (FDA) ಅಡುಗೆಯಲ್ಲಿ ಅದರ ಬಳಕೆಯನ್ನು ನಿಷೇಧಿಸಿದೆ. ಹೃದಯರಕ್ತನಾಳದ ಪ್ರಯೋಜನಗಳು ಸಾಸಿವೆ ಎಣ್ಣೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಮೊನೊಸಾಚುರೇಟೆಡ್…
ಇಸ್ಲಾಮಾಬಾದ್: ನಿಧಾನವಾಗಿ ಹೃದಯಾಘಾತವಾಗಲಿ ಎಂದು ನನಗೆ ಚುಚ್ಚು ಮದ್ದನ್ನು ನೀಡಿದ್ದರು. ಜೊತೆಗೆ ವಾಶ್ ರೂಂ ಅನ್ನು ಬಳಸಲು ಅನುಮತಿ ನೀಡಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಇಮ್ರಾನ್ ಖಾನ್ ವಕೀಲರು ಪ್ರತಿಕ್ರಿಯಿಸಿದ್ದು, ಇಮ್ರಾನ್ ಖಾನ್ ಬಿಡುಗಡೆ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದೇವೆ. ಈ ವೇಳೆ ಇಮ್ರಾನ್ ಖಾನ್ ಎದೆ ನೋವಿನ ಬಗ್ಗೆ ತಿಳಿಸಿದ್ದಾರೆ ಎಂದಿದ್ದಾರೆ. ಇಮ್ರಾನ್ ಖಾನ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೇ ನಿಧಾನವಾಗಿ ಹೃದಯಾಘಾತವಾಗಲು ಊಟದಲ್ಲಿ ಇನ್ಸುಲಿನ್ ಅನ್ನು ನೀಡಲಾಗಿದೆ. ಇಮ್ರಾನ್ ಖಾನ್‍ನನ್ನು ಕೊಲ್ಲುವ ಯತ್ನ ನಡೆಯುತ್ತಿದೆ. ಅವರಿಗೆ ಮಲುಗಲು ಬಿಡುತ್ತಿಲ್ಲ. ಶೌಚಾಲಯ ಹಾಗೂ ಹಾಸಿಗೆ ಇಲ್ಲದ ಕೊಳಕು ಕೊಣೆಯಲ್ಲಿ ಇರಿಸಲಾಗಿತ್ತು. ಅವರಿಗೆ ತಿನ್ನಲು ಏನನ್ನು ನೀಡಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದ ವೇಳೆ ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಪಾಕಿಸ್ತಾನ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ದೇಶದ ವಿವಿಧ ರಸ್ತೆಗಳಲ್ಲಿ ವಾಹನಗಳು, ಕಟ್ಟಡಗಳು ಮತ್ತು ಕೆಲಸದ ಸ್ಥಳಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು ಇದೀಗ ಸರ್ಕಾರದ ವಿರುದ್ಧ 6 ಸೇನಾ ಅಧಿಕಾರಿಗಳು ತಿರುಗಿ ಬಿದಿದ್ದಾರೆ. ಇಮ್ರಾನ್ ಅವರ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಬೀದಿಗಳನ್ನು ಧ್ವಂಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನೆಯಲ್ಲೂ ಉಗ್ರ ಬಂಡಾಯ ಭುಗಿಲೆದ್ದಿದೆ. ಆರು ಹಿರಿಯ ಸೇನಾ ಅಧಿಕಾರಿಗಳು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮತ್ತು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸೇನೆಯ ಮೇಜರ್ ಆದಿಲ್ ರಾಜಾ (ನಿವೃತ್ತ) ಟ್ವೀಟ್‌ನಲ್ಲಿ ಸೇನೆಯ ಆರು ಲೆಫ್ಟಿನೆಂಟ್ ಜನರಲ್‌ಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಸರ್ಕಾರ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (PDM) ಅನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ ಎಂದು…
ಮುಂಬೈ: ಓದುವ ಸಮಯದಲ್ಲಿ ಮೊಬೈಲ್ (Phone) ಯಾಕೆ ಹೆಚ್ಚು ಬಳಸುತ್ತೀಯಾ ಎಂದು ತಂದೆ (Father) ಕೇಳಿದ್ದಕ್ಕೆ ಹುಡುಗಿಯೊಬ್ಬಳು (Girl) ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ. ಪುಣೆಯ ಘೋಡೆಗಾಂವ್‍ನಲ್ಲಿ 19 ವರ್ಷದ ಹುಡುಗಿ ಓದುತ್ತಿರುವಾಗ ಫೋನ್‍ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಗದರಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಹುಡುಗಿಯು ಟೆರೇಸ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಕುರಿತು ಘೋಡೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತಳ ತಂದೆ ಉದ್ಯಮಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾಳೆ. ಒಬ್ಬಳೆ ಮಗಳಾಗಿದ್ದು, ಈಕೆ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.