ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಹಕ್ಕುಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮುಖಂಡರು ಮಾಡಿದ್ದಾರೆ ಎಂದು ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನ ಕಂಠೀರವನಗರದಲ್ಲಿ ಮೂರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಹಕ್ಕುಪತ್ರಗಳ ನೊಂದಣಿ, ಬಡಾವಣೆಯ ಅಭಿವೃದ್ಧಿ, ಮನೆಗಳನ್ನು ಕಟ್ಟುವುದಕ್ಕೆ ಅಂದಿನ ಸರ್ಕಾರದಲ್ಲಿ ಡಾ.ಅಂಬರೀಶ್ ರವರು ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಇಡೀ ಕ್ಷೇತ್ರಕ್ಕೆ 400 ಮನೆಗಳನ್ನು ತರಲಾಗಿದೆ ಎಂದರು. ನಾನು ಶಾಸಕನಾದ ಮೇಲೆ 2015 -16 ರಿಂದ ಒಟ್ಟು ಕ್ಷೇತ್ರಕ್ಕೆ 665 ಮನೆಗಳನ್ನು 4 ಮತ್ತು 5 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಿ ಎಂದು ಆದೇಶ ಪ್ರತಿಯನ್ನು ನೀಡಿ ಬಡವರು ಮನೆಯನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಲಾಗಿದೆ ಎಂದರು.ಕೋವಿಡ್ ಬಂದಂತಹ ಸಂದರ್ಭದಲ್ಲಿ ಜೊತೆಯಲ್ಲಿರುವ ಎಲ್ಲಾ ಮುಖಂಡರುಗಳು ಧೈರ್ಯದಿಂದ ಕೆಲಸವನ್ನು ನಿರ್ವಹಿಸಿದರು ಎಂದರು. ಕಷ್ಟದಲ್ಲಿರುವಂತಹ ಬಡ ಕುಟುಂಬಗಳು, ಕಂಠೀರವನಗರ, ಪರಿಮಳನಗರ ಹಾಗೂ ಕ್ಷೇತ್ರದ…
Author: Prajatv Kannada
ಬೆಂಗಳೂರು: ಸಾಕಷ್ಟು ರಾಜಕೀಯ ಹೈಡ್ರಾಮಾಗಳ ನಡುವೆ ಕೊನೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ (Congress) ನಾಯಕರ ಸಮ್ಮುಖದಲ್ಲಿ ‘ಕೈ’ ಹಿಡಿದರು. ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ಕಾಂಗ್ರೆಸ್ ಸೇರಿದರು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಶೆಟ್ಟರ್‌ಗೆ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್ ನೀಡದ್ದಕ್ಕೆ ಶೆಟ್ಟರ್ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಠ ಬಿಡಲಿಲ್ಲ. ಕೊನೆಗೆ ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಬೆಂಗಳೂರಿಗೆ ಆಗಮಿಸಿದ್ದ ಶೆಟ್ಟರ್‌ರನ್ನು ಕಾಂಗ್ರೆಸ್ ನಾಯಕರು ತಡರಾತ್ರಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಕಾಂಗ್ರೆಸ್ ಸೇರುವಂತೆ ಮನವೊಲಿಸಿದರು. ಈ ಎಲ್ಲಾ ಬೆಳವಣಿಗೆಯು ಶೆಟ್ಟರ್ ಕಾಂಗ್ರೆಸ್ ಸೇರುವುದು ಪಕ್ಕಾ ಎಂಬಂತಿತ್ತು. ಸೋಮವಾರ ಬೆಳಗ್ಗೆ ಲಿಂಗಾಯತ ಸಮುದಾಯದ ನಾಯಕರೇ ಆಗ…
ಬೈರುತ್ (ಎಎಫ್‌ಪಿ): ಯುದ್ಧಪೀಡಿತ ಸಿರಿಯಾದ ಕೇಂದ್ರ ನಗರ ಹಮಾದ ಪೂರ್ವ ಮರುಭೂಮಿಯಲ್ಲಿ ಭಾನುವಾರ ಶಂಕಿತ ಐ.ಎಸ್ ಉಗ್ರರ ಗಂಪು ನಡೆಸಿರುವ ಭೀಕರ ದಾಳಿಯಲ್ಲಿ 31 ಜನರು ಮೃತಪಟ್ಟಿರುವ ಕುರಿತು ವರದಿಯಾಗಿದೆ. ಮೃತರಲ್ಲಿ ಸಿರಿಯಾ ಸರ್ಕಾರದ 12 ಸೈನಿಕರು ಸೇರಿದ್ದಾರೆ ಎಂದು ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ‘ಸನಾ (ಎಸ್‌ಎಎನ್‌ಎ)’ ವರದಿ ಮಾಡಿದೆ. ಪ್ರತ್ಯೇಕ ಘಟನೆಯಲ್ಲಿ ಜಿಹಾದಿ ಉಗ್ರರು ಕುರಿ ಕಾಯುವ ನಾಲ್ವರನ್ನು ಕೊಂದು, ಇಬ್ಬರನ್ನು ಅಪಹರಿಸಿದ್ದಾರೆ ಎಂದೂ ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ಸಂಸ್ಥೆಯೊಂದು ವರದಿಯಲ್ಲಿ ಉಲ್ಲೇಖಿಸಿದೆ.
ವಾಷಿಂಗ್ಟನ್: ಫೆಡ್‌ಎಕ್ಸ್ ಕಂಪನಿ ಸಿಇಒ, ಭಾರತೀಯ ಮೂಲದ ಅಮೆರಿಕ ಉದ್ಯಮಿ ರಾಜ್ ಸುಬ್ರಹ್ಮಣಿಯಮ್‌ಗೆ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯಾಗಿದ್ದು ಈ ಭಾರಿ ಪ್ರಶಸ್ತಿಗೆ ಸುಬ್ರಹ್ಮಣಿಯಮ್ ಆಯ್ಕೆಯಾಗಿದ್ದಾರೆ. ಸುಬ್ರಹ್ಮಣಿಯಮ್ ಅವರಿಗೆ ಅಮೆರಿಕದಲ್ಲಿನ ಇಂಡಿಯಾ ಹೌಸ್‌ನಲ್ಲಿ ಭಾರತದ ಅಮೆರಿಕ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಈ ವರ್ಷಾರಂಭದಲ್ಲೇ ಸುಬ್ರಹ್ಮಣಿಯಮ್ ಈ ಗೌರವವನ್ನು ಭಾರತಕ್ಕೆ ಬಂದು ಪಡೆದುಕೊಳ್ಳಬೇಕಾಗಿತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಮೆರಿಕದಲ್ಲಿನ ಇಂಡಿಯಾ ಹೌಸ್‌ನಲ್ಲಿ ಇದೀಗ ಪ್ರಶಸ್ತಿಯನ್ನು ನೀಡಲಾಗಿದೆ. ಈ ವೇಳೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹಾಜರಿದ್ದರು.
ಮುಂಬೈ: ಮಹಾರಾಷ್ಟ್ರ ಭೂಷಣ 2022′ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 8 ಮಂದಿ ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟಿದ್ದು, 36ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯ ಸರ್ಕಾರದಿಂದ ಮಹಾರಾಷ್ಟ್ರ ಭೂಷಣ 2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಸುಧಾರಕ ಅಪ್ಪಾ ಸಾಹೇಬ್ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದು ಈ ವೇಳೆ ಬಿಸಿಲಿನ ತಾಪ ತಾಳಲಾರದೆ 8 ಮಂದಿ ಕಾರ್ಯಕ್ರಮದಲ್ಲೇ ಮೃತಪಟ್ಟಿದ್ದಾರೆ. ದುರಂತದ ಸುದ್ದಿ ತಿಳಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು. ಬಿಸಿಲಿನ ಝಳದಿಂದ 7-8 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಿಂಧೆ ನಂತರ ಮಾಧ್ಯಮದವರಿಗೆ ತಿಳಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ ಅವರು ಇತರ ರೋಗಿಗಳ ಆರೋಗ್ಯ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ…
ನೆಲ್ಲೂರು: ನೆಲ್ಲೂರಿನಲ್ಲಿ (Nellore) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನಲ್ಲಿ ಬಿ. ಟೆಕ್ ಓದುತ್ತಿದ್ದ ಯುವತಿ ಗರ್ಭಪಾತಕ್ಕೆ ಒಳಗಾಗಿ ತರಗತಿಯ ಕೊಠಡಿಯಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಮರ್ರಿಪಾಡು ಮಂಡಲದ 19 ವರ್ಷದ ಯುವತಿ ನೆಲ್ಲೂರಿನಲ್ಲಿ ಬಿ. ಟೆಕ್ ದ್ವಿತೀಯ ವರ್ಷ ಓದುತ್ತಿದ್ದಳು (B Tech student). ಇದೇ ತಿಂಗಳ 11ರಂದು ತನ್ನ ಸಹಪಾಠಿಗಳೆಲ್ಲ ಹೊರಗಡೆ ಇರುವಾಗ… ತಾನು ಒಬ್ಬಳು ಮಾತ್ರ ತರಗತಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದೇ ಇದ್ದ ಕಾರಣ ಸ್ನೇಹಿತೆಯರು ಬಾಗಿಲು ಒಡೆದು ನೋಡಿದಾಗ ಯುವತಿ ತೀವ್ರ ರಕ್ತಸ್ರಾವವಾಗಿ ತರಗತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ (Abortion). ಇನ್ನೂ ಆಘಾತಕಾರಿ ಸಂಗತಿಯೆಂದರೆ ಆ ವಿದ್ಯಾರ್ಥಿನಿಯ ಪಕ್ಕದಲ್ಲಿ 6 ತಿಂಗಳ ಭ್ರೂಣವಿತ್ತು! ಕೂಡಲೇ ಸಹಪಾಠಿಗಳೆಲ್ಲ ಸೇರಿ ತಾಯಿ ಹಾಗೂ ಭ್ರೂಣವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಾಯಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಾಹಿತಿ ಪಡೆದ ನೆಲ್ಲೂರು…
ಬೆಂಗಳೂರು: ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಲಿದ್ದಾರೆ. ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಅವರು ನಂಜನಗೂಡು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು ಸಚಿವ ವಿ.ಸೋಮಣ್ಣಗೆ ಸಿಎಂ ಬೊಮ್ಮಾಯಿ ಸಾಥ್ ನೀಡಲಿದ್ದಾರೆ. ಸೋಮಣ್ಣ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದು ನಂಜನಗೂಡು ಪಟ್ಟಣದಲ್ಲಿ ಬಿಜೆಪಿಯಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಿಸಿಲಿನ ತಾಪಮಾನ ಏರಿಕೆಯಾಗುವಂತೆ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಮುಖ ಮೂರು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿವೆ. ಟಿಕೆಟ್ ಕೈ ತಪ್ಪಿದಕ್ಕೆ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಇದರಲ್ಲಿ ಬಿಜೆಪಿಯ ಘಟಾನುಘಟಿ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಒಬ್ಬರು. ಈಗಾಗಲೆ ಶೆಟ್ಟರ್ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಬೀದರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೀದರ್ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಭಾಲ್ಕಿ, ಹುಮ್ನಾಬಾದ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಬೀದರ್ಗೆ ರಾಹುಲ್ ಆಗಮಿಸಲಿದ್ದು, ಬೀದರ್ ಏರ್ಬೇಸ್ನಿಂದ ಭಾಲ್ಕಿ ಪಟ್ಟಣಕ್ಕೆ ತೆರಳಲಿ ಭಾಲ್ಕಿ ಪಟ್ಟಣದಲ್ಲಿ ನಡೆಯುವ ಜನಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹುಮ್ನಾಬಾದ್ನಲ್ಲಿ ನಡೆಯುವ ಸಮಾವೇಶದಲ್ಲೂ ಭಾಗಿಯಾಗಲಿದ್ದಾರೆ. ಹುಮ್ನಾಬಾದ್ನಿಂದ ಹೆಲಿಕಾಪ್ಟರ್ ಮೂಲಕ ಬೀದರ್ಗೆ ಪ್ರಯಾಣಿಸಿ ಬೀದರ್ ಏರ್ಬೇಸ್ನಿಂದ ದೆಹಲಿಗೆ ತೆರಳಲಿದ್ದಾರೆ.
ಕಾರವಾರ: ಪುಲಕೇಶಿ ನಗರದ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ (Akhanda Srinivas Murthy) ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್‌ನ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ನಾಳೆ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಕ್ಕಪಕ್ಕದ ಕ್ಷೇತ್ರದ ನಾಯಕರು ಹೇಳಿದರು ಅಂತಾ ನನಗೆ ಟಿಕೆಟ್ ತಪ್ಪಿಸಿದರು. ಕೆಜೆ ಹಳ್ಳಿ ಡಿಜೆಹಳ್ಳಿ ಗಲಾಟೆಯಾದ್ರೂ ನಾವೆಲ್ಲಾ ಅಣ್ಣತಮ್ಮಂದಿರಂತೆ ಇದ್ದೆವು. ಆದ್ರೆ ಬೆಂಕಿ ಹಚ್ಚಿ ಜೈಲಿಗೆ ಹೋಗಿಬಂದ ನಾಯಕರೇ ನನಗೆ ಟಿಕೆಟ್ ತಪ್ಪಿಸಿದ್ದಾರೆ. ನನ್ನ ತಂದೆ 40 ವರ್ಷ ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾಗಿದ್ದವರು. ಹಾಗಾಗಿ ಹಿರಿಯ ನಾಯಕರ ಮೇಲೆ ನನಗಿನ್ನೂ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಕೋಲಾರ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ. ಅವರಂತಹ ಪ್ರಾಮಾಣಿಕ ವ್ಯಕ್ತಿ ರಾಜಕಾರಣದಲ್ಲಿ ಇರಬೇಕು ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಶೆಟ್ಟರ್ ಒಬ್ಬ ಪ್ರಾಮಾಣಿಕ ವ್ಯಕ್ತಿ, ಸಿಎಂ ಆಗಿದ್ದವರು. ಶೆಟ್ಟರ್ ಅಂತಹ ನಾಯಕರು ರಾಜಕಾರಣದಲ್ಲಿ ಇರಬೇಕು. ಬಿಜೆಪಿಯಲ್ಲಿರುವವರು ಅಂಧ ಭಕ್ತರು, ಡೋಂಗಿಗಳು ಎಂದು ಹೇಳಿದರು. ಶೆಟ್ಟರ್ ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ, ಅವರು ನಮ್ಮ ಪಕ್ಷಕ್ಕೆ ಬಂದರೆ ಶಕ್ತಿ ಬರುತ್ತೆ ಎಂದು ಹೇಳಿದರು.