ಮೈಸೂರು: ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದ ಪುನರ್ ವಿನ್ಯಾಸ ಕಾರ್ಯವು ಭರದಿಂದ ಸಾಗಿದ್ದು, ತಿಂಗಳಾಂತ್ಯಕ್ಕೆ ಹೊಸ ರೂಪ ಪಡೆಯುವುದಲ್ಲದೇ ಮೈಸೂರಿನ 2ನೇ ದೊಡ್ಡ ರೈಲ್ವೆ ನಿಲ್ದಾಣ ಎನಿಸಿಕೊಳ್ಳಲಿದೆ. ಸೌತ್ ವೆಸ್ಟರ್ನ್ ರೈಲ್ವೆ ಮೈಸೂರು ವಿಭಾಗವು ಅಂದಾಜು 28 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಅಶೋಕಪುರಂ ಪ್ಲಾಟ್ ಫಾರಂ ರಿ ಮಾಡಲಿಂಗ್ ವರ್ಕ್ ಕೈಗೆತ್ತುಕೊಂಡಿದೆ. ಈಗಾಗಲೆ ಹೊಸ ಲೈನ್, ಫ್ಲಾಟ್ ಫಾರಂ, ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಕಾರ್ಯವೂ ಸೇರಿದಂತೆ ಬಹುತೇಕ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. ಏಪ್ರಿಲ್ 30 ರೊಳಗೆ ನವೀಕೃತ ಅಶೋಕಪುರಂ ನಿಲ್ದಾಣವು ಹಾಲಿ 3 ಪ್ಲಾಟ್‌ಫಾರಂನಿಂದ 5 ಪ್ಲಾಟ್‌ಫಾರಂ ಹೊಂದಿರುವ ನಗರದ ಮತ್ತೊಂದು ದೊಡ್ಡ ನಿಲ್ದಾಣವಾಗಿ ಬಳಕೆಗೆ ಲಭ್ಯವಾಗಲಿದೆ ಎಂದು ಎಡಿಆರ್‌ಎಂ ವಿಜಯ ವಿಜಯ ಕರ್ನಾಟಕಕ್ಕೆ ತಿಳಿಸಿದರು. ಅಂತೆಯೇ ಸದ್ಯ ಮೈಸೂರಿನಲ್ಲಿ ರಾಜರೇ ನಿರ್ಮಿಸಿದ ರೈಲ್ವೆ ನಿಲ್ದಾಣದಲ್ಲಿ ಐದು ಪ್ಲಾಟ್‌ಫಾರಂಗಳಿವೆ. ಅಶೋಕ ಪುರಂ ನಿಲ್ದಾಣದಲ್ಲಿಈವರೆಗೆ ಮೂರು ಪ್ಲಾಟ್ ಫಾರಂ ಇದ್ದವು. ಇದೀಗ ಹೆಚ್ಚುವರಿಯಾಗಿ ಎರಡು ಹಳಿ ಹಾಗೂ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ.…
Author: Prajatv Kannada
ಹಾವೇರಿ : ಅಮುಲ್ ಹಾಲಿನ ವಿವಾದದ ಬಳಿಕ ಈಗ ಗುಜರಾತ್ ಮೆಣಸು ಮಾರುಕಟ್ಟೆಯಲ್ಲಿ ಗದ್ದಲ ಸೃಷ್ಟಿಸಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶದ ಪ್ರಸ್ತಾವನೆ ಸಿಕ್ಕಾಪಟ್ಟೆ ರಾಜಕೀಯ ಗದ್ದಲ ಸೃಷ್ಟಿಸಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಸಮಯದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ರಾಜ್ಯದ ನಂದಿನಿ ಬ್ರ್ಯಾಂಡ್ ಗೆ ಸಡ್ಡು ಹೊಡೆಯಲು ಅಮುಲ್ ಮುಂದಾಗಿದೆ ಎಂದು ‘ಬಾಯ್ಕಾಟ್ ಅಮುಲ್, ಸೇವ್ ನಂದಿನಿ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಭಿಯಾನ ಪ್ರಾರಂಭಿಸಿದ್ದರು. ಈಗ ಗುಜರಾತಿ ಮೆಣಸಿನ ತಳಿ ‘ಪುಷ್ಪ’ ರಾಜ್ಯದ ಬ್ಯಾಡಗಿ ಮೆಣಸಿನ ತಳಿಗೆ ಪೈಪೋಟಿ ನೀಡಲು ಮುಂದಾಗಿದೆ. ‘ಲಾಲಿ’ ಎಂಬ ಹೆಸರಿನಿಂದ ಕೂಡ ಕರೆಯಲ್ಪಡುವ ‘ಪುಷ್ಪ’ ಏಷ್ಯಾದಲ್ಲಿ ಅತೀದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬ್ಯಾಡಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೂಲಗಳ ಪ್ರಕಾರ ಕನಿಷ್ಠ 20 ಸಾವಿರ ಕ್ವಿಂಟಾಲ್ ಗುಜರಾತಿ ಮೆಣಸು ಇತ್ತೀಚಿನ ಕೆಲವು ತಿಂಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ…
ಬೆಂಗಳೂರು: ಶಾಸಕ ಸ್ಥಾನ ರಾಜೀನಾಮೆ ನೀಡಿ ಬಿಜೆಪಿ ತೊರೆಯಲು ಮುಂದಾಗಿರುವ ಜಗದೀಶ್ ಶೆಟ್ಟರ್ (Jagadish Shetter) ಅವರನ್ನು ಕಾಂಗ್ರೆಸ್‌ನತ್ತ ಸೆಳೆಯಲು ʼಕೈʼ ನಾಯಕರು ಯತ್ನಿಸಿದ್ದಾರೆ. ಭಾನುವಾರ ರಾತ್ರಿ ನಗರದ ಸ್ಕೈ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ಶೆಟ್ಟರ್ ಭೇಟಿಯಾದ ಕಾಂಗ್ರೆಸ್ (Congress) ನಾಯಕರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಕೇಂದ್ರದಿಂದ ಸ್ಪರ್ಧೆ ಮಾಡುವಂತೆ ಆಫರ್ ಕೂಡ ನೀಡಿದ್ದಾರೆ. ರಿಚ್ಮಂಡ್ ಟೌನ್‌ನ ಎಸ್‌ಎಸ್ ಮಲ್ಲಿಕಾರ್ಜುನ್ ಫ್ಲ್ಯಾಟ್‌ನಲ್ಲಿ ಶೆಟ್ಟರ್ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ 2 ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಜಮೀರ್ ಅಹ್ಮದ್ ಕೂಡ ಇದ್ದರು. ಮೊದಲು ಜಗದೀಶ್ ಶೆಟ್ಟರ್ ಷರತ್ತುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸುರ್ಜೇವಾಲ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ನೀಡಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಹತ್ವದ ಪಾತ್ರದ ಬಗ್ಗೆ ಸಹ ಚರ್ಚೆ ನಡೆಸಿದರು. ಆ ಮೂಲಕ ಮುಂದೆ…
ಬೆಂಗಳೂರು: ಚುನಾವಣೆ (Election) ಹೊತ್ತಲ್ಲಿ ಅಮುಲ್ (Amul) ಮತ್ತು ನಂದಿನಿ (Nandini) ವಿಲೀನ ವಿವಾದ ಕಾವು ಪಡೆದಿದ್ದ ಬೆನ್ನಲ್ಲೇ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಬೆಂಗಳೂರಿನ (Bengaluru) ನಂದಿನಿ ಔಟ್‌ಲೆಟ್‌ನಲ್ಲಿ ನಂದಿನಿ ಐಸ್‌ಕ್ರೀಮ್ (Ice Cream) ಹಾಗೂ ಸಿಹಿಯನ್ನು ಸೇವಿಸಿ ಆನಂದಿಸಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಟ್ವೀಟ್ ಕೂಡಾ ಮಾಡಿದ್ದಾರೆ. ಭಾನುವಾರ ಕೋಲಾರದಲ್ಲಿ (Kolar) ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿ (J.P.Nagar) ಪೌರ ಕಾರ್ಮಿಕ ಹಾಗೂ ಬೀದಿ ಬದಿ ವ್ಯಾಪಾರಿಗಳೊಂದಿಗೆ ನಗರದ ಆರ್.ವಿ ಡೆಂಟಲ್ ಕಾಲೇಜ್‌ನಲ್ಲಿ ರಾಹುಲ್ ಗಾಂಧಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಹಾಗೂ ವೇಣುಗೋಪಾಲ್ ಅವರೊಂದಿಗೆ ನಂದಿನಿ ಐಸ್‌ಕ್ರೀಮ್ ಸವಿದು ಖುಷಿಪಟ್ಟಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು ಬೂತ್ ಮಾಲೀಕರಿಗೆ 1 ಸಾವಿರ ಹಣವನ್ನು ನೀಡಿದ್ದಾರೆ. ನಂದಿನಿ-ಅಮುಲ್ ವಿವಾದ…
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯಾಕೆ ಪಕ್ಷ ಬಿಟ್ಟರೋ ಗೊತ್ತಿಲ್ಲ. ಅವರು ತುಂಬಾ ಲೇಟಾಗಿ ಹೋಗ್ತಿದ್ದಾರೆ, ಆರಾಮಾಗಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸೊದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ ಬೇಕು?, ಅವರಿಗೇನು ಈಗ 27 ವರ್ಷವೇ? 67 ವರ್ಷವಾಗಿದೆ. ಅಲ್ಲಿ ಧೂಳು ಹೊಡೆಯೋಕೆ ಕೂಡ ಇವರನ್ನು ಬಳಸಿಕೊಳ್ಳಲ್ಲ ಎಂದು ಸಚಿವ ಮುನಿರತ್ನ ಟಾಂಗ್ ಕೊಟ್ಟರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಪಡೆದಿದ್ದೇನೆ. ಇಂದು ನಾಮಪತ್ರ ಸಲ್ಲಿಸುತ್ತೇನೆ. ನನ್ನನ್ನು ಗುರುತಿಸಿ ಟಿಕೆಟ್ ನೀಡಿದ ನಮ್ಮ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಶೆಟ್ಟರ್ಗೆ ಸ್ಪೀಕರ್ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ, ಮುಖ್ಯಮಂತ್ರಿ ಸ್ಥಾನ ಸೇರಿ ಎಲ್ಲ ಸ್ಥಾನಗಳನ್ನೂ ಕೊಟ್ಟಿದೆ. ಎಲ್ಲೋ ನೆಮ್ಮದಿಯಾಗಿ ಪಕ್ಷದ ಕೆಲಸ…
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕ್ಕಲಂ ’22 ಬೆಟ್’ ಹೆಸರಿನ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ತನಿಖೆ ಆರಂಭಿಸಿದೆ. ಮೆಕ್ಕಲಂಗೆ ಬೆಟ್ಟಿಂಗ್ ಸಂಸ್ಥೆ ಜೊತೆಗಿನ ಸಂಬಂಧ ಹಾಗೂ ಮಂಡಳಿಯ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಮೆಕ್ಕಲಂ ಉಲ್ಲಂಘಿಸಿದ್ದಾರೆಯೇ ಎಂದು ಇಸಿಬಿ ಪರಿಶೀಲನೆ ನಡೆಸುತ್ತಿದೆ. ಇನ್ನು ಇದೆಲ್ಲದರ ನಡುವೆಯೇ, ಬ್ರೆಂಡನ್ ಮೆಕ್ಕಲಂ ಅವರ ವಿರುದ್ದ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್ ಮಾಜಿ ನಾಯಕ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಐಪಿಎಲ್‌ಗೆ ಸಂಬಂಧಿಸಿದ ಬೆಟ್ಟಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬ್ರೂಕ್ ಶತಕಕ್ಕೆ ಬೆಚ್ಚಿದ ನೈಟ್ರೈಡರ್ಸ್! ಕೋಲ್ಕತಾ: ಕೊನೆ ಕ್ಷಣದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಕಳೆದೆರಡು ಪಂದ್ಯಗಳನ್ನು ತನ್ನದಾಗಿಸಿಕೊಂಡಿದ್ದ ಕೋಲ್ಕತಾ ಈ ಬಾರಿ ಅದೇ ಸಾಹಸ ಪ್ರದರ್ಶಿಸುವಲ್ಲಿ ವಿಫಲವಾಯಿತು. ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಮತ್ತೊಮ್ಮೆ ಸ್ಪೋಟಕ ಆಟವಾಡಿದರೂ ಶುಕ್ರವಾರ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 23 ರನ್ಗಳ ಸೋಲಿನಿಂದ ತಪ್ಪಿಸಲು…
ಬೆಂಗಳೂರು : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹಲವು ಯುವ ಪ್ರತಿಭೆಗಳು ಮಿಂಚು ಹರಿಸುತ್ತಿದ್ದು, ಬಿಸಿಸಿಐನ ಆಯ್ಕೆಗಾರರ ಗಮನ ಸೆಳೆಯಲು ಹೊರಟಿದ್ದಾರೆ. ಕೆಕೆಆರ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ರಿಂಕು ಸಿಂಗ್ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, ಡಿಫೆಂಡಿಂಗ್ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಅಂತಿಮ ಓವರ್ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 5 ಭರ್ಜರಿ ಸಿಕ್ಸರ್ ಗಳನ್ನು ಬಾರಿಸಿ ಅಂತಿಮ ಎಸೆತದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಯುವ ಎಡಗೈ ಆಟಗಾರನ ಈ ಸ್ಫೋಟಕ ಆಟವನ್ನು ಆರ್ ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಗುಜರಾತ್ ಟೈಟನ್ಸ್ ನೀಡಿದ 205 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಗೆ ಅಂತಿಮ ಓವರ್ ನಲ್ಲಿ ಪಂದ್ಯ ಗೆಲ್ಲಲು 29 ರನ್ ಗಳ ಅಸಾಧಾರಣ ಗುರಿ ಇತ್ತು. ಟೈಟನ್ಸ್ ವೇಗಿ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಸಿಂಗಲ್ ತೆಗೆದುಕೊಂಡು ರಿಂಕು ಸಿಂಗ್ ಗೆ ಸ್ಟ್ರೆಕ್…
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಈಗಾಗ್ಲೆ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ನಿರಂಜನ್ ನಟನೆಯ ‘ಹಂಟರ್’ ಚಿತ್ರದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ‘ಹಂಟರ್’ ಸಿನಿಮಾದ ಕುರಿತು ಮಾತನಾಡಿದ್ದಾರೆ. ನಮ್ಮ ತ್ರಿವಿಕ್ರಮ್ ಸಿನಿಮಾಸ್ ಲಾಂಛನದಲ್ಲಿ ‘ಹಂಟರ್’ ಸಿನಿಮಾ ನಿರ್ಮಾಣವಾಗುತ್ತಿದೆ. ನಿರಂಜನ್ ಸುಧೀಂದ್ರ ಈ ಚಿತ್ರದ ನಾಯಕ. ಸೌಮ್ಯ ಮೆನನ್ ನಾಯಕಿ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್, ಸಾಧುಕೋಕಿಲ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಪ್ಪತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ ತಿಳಿಸಿದರು. ಸೀಜರ್ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಹಂಟರ್. ಇದೊಂದು ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್. ಈ ಚಿತ್ರಕ್ಕಾಗಿ ಎಪ್ಪತ್ತೈದು ಕೆಜಿ ತೂಕವಿದ್ದ ನಿರಂಜನ್, ಮತ್ತಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಗಣೇಶ್ ಮಾಸ್ಟರ್…
ನಟಿ ಮೇಘನಾ ರಾಜ್ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದು ಸದ್ಯ ‘ತತ್ಸಮ ತದ್ಭವ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಈ ಮೂಲಕ ಮೇಘನ ರಾಜ್ ಗ್ರ್ಯಾಂಡ್ ಕಂಬ್ಯಾಕ್ ಮಾಡ್ತಿದ್ದಾರೆ. ಸಿನಿಮಾದ ಕುರಿತು ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಮೇಘನಾ ರಾಜ್, ‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಮೇಘನರಾಜ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪ್ರಜ್ವಲ್ ದೇವರಾಜ್, ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ…
ಕೆಜಿಎಫ್ ಚಾಪ್ಟರ್ 2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಯಶ್ ನಟನೆಯ ಮುಂದಿನ ಸಿನಿಮಾದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಲಿರುವ ಯಾವ ಚಿತ್ರವೂ ಸಹ ಘೋಷಣೆಯಾಗಿಲ್ಲ. ನಿನ್ನೆಗೆ ( ಏಪ್ರಿಲ್ 14 ) ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡು ಒಂದು ವರ್ಷ ಕಳೆದಿದ್ದು, ಚಿತ್ರದ ಮೊದಲ ವರ್ಷದ ವಾರ್ಷಿಕೋತ್ಸವದ ಆಚರಣೆ ನಡೆದರೂ ಸಹ ಯಶ್ ನಟನೆಯ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ತಿಳಿದುಬಂದಿಲ್ಲ. ಯಶ್ ನಟನೆಯ ಮುಂದಿನ ಚಿತ್ರದ ಬಗ್ಗೆ ಹಲವು ದಿನಗಳಿಂದಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇದೆ. ಯಶ್ ತಮ್ಮ ಮುಂದಿನ ಚಿತ್ರವನ್ನು ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ, ತೆಲುಗು ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರಂತೆ, ತಮಿಳಿನ ನಿರ್ದೇಶಕರು…