2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಈಗಾಗ್ಲೆ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ತಮ್ಮ-ತಮ್ಮ ಪಕ್ಷದ ಪರವಾಗಿ ತಾರಾ ಪ್ರಚಾರಕರನ್ನು ಸೆಳೆಯುವ ತಂತ್ರವೂ ನಡೆಯುತ್ತಿದೆ. ಇದೀಗ ಖ್ಯಾತ ನಿರ್ದೇಶಕ, ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ರಾಜಕೀಯ ಪಕ್ಷವೊಂದು ಚುನಾವಣಾ ಟಿಕೆಟ್ ನೀಡುವುದಾಗಿ ಹೇಳಿದ್ದು, ಆದರೆ ಚುನಾವಣೆಗೆ ಸ್ಪರ್ಧಿಸಲು ನಾಗತಿಹಳ್ಳಿ ಚಂದ್ರಶೇಖರ್ ನಿರಾಕರಿಸಿದ್ದಾಗಿ ಚಂದ್ರಶೇಖರ್ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ”ನನಗೂ ಒಂದು ಪಕ್ಷದಿಂದ ಚುನಾವಣಾ ಟಿಕೆಟ್ ಕೊಡುವುದಕ್ಕೆ ಬಂದಿದ್ದರು. ನಮ್ಮೂರಿನಲ್ಲಿ ನಾನು ಮಾಡಿದ ಕೆಲಸ ನೋಡಿ ಮೆಚ್ಚಿ ಟಿಕೆಟ್ ನೀಡುವುದಾಗಿ ಹೇಳಿದರು. ಆದರೆ ಅದನ್ನು ನಾನು ನಿರಾಕರಿಸಿದ್ದೇನೆ, ಎಚ್ಚೆತ್ತ ಪ್ರಜೆಗಳಿಗಾಗಿ ಮಾಡಬೇಕಾದ ಕೆಲಸ ಬಹಳ ಇದೆ, ಚುನಾವಣೆ ಅಲ್ಲದೇ ಬೇರೆ ಬೇರೆ ಕೆಲಸಗಳಿವೆ, ಪ್ರಸ್ತುತ ರಾಜಕಾರಣ ನಾವು ಹತ್ತಿರ ಪ್ರವೇಶಿಸದಷ್ಟು ತುಂಬಾ ಭೀಕರವಾಗಿದೆ ಹಣ ಮತ್ತು ಜಾತಿ ಪ್ರಬಲವಾದ ಶಕ್ತಿ ಆಗಿವೆ, ಆ ಎರಡನ್ನೂ ಬಳಸದೇ ಇರುವ ಪರಿಸರ ಬಂದರೆ ನಮ್ಮಂಥವರು ಚುನಾವಣೆಗೆ ಬರಬಹುದು” ಎಂದಿದ್ದಾರೆ.…
Author: Prajatv Kannada
ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ ಕೂಡ ಕೂದಲು ಉದುರೋಕೆ ಶುರುವಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕೂದಲು ಉದುರತ್ತೆ. ಆದ್ರೆ ಕೂದಲು ಉದುರಿರುವ ಸ್ಥಳದಲ್ಲಿ ಮತ್ತೆ ಕೂದಲು ಬೆಳೆಯದಿದ್ದರೆ ಅದಕ್ಕೆ ಹೇರ್ ಫಾಲ್ ಸಮಸ್ಯೆ ಎನ್ನುತ್ತಾರೆ. ನಾವು ತಿಳಿಸುವ ಸುಲಭ ಹಾಗೂ ನೈಸರ್ಗಿಕ ಮದ್ದನ್ನು ಹಾಗೂ ಕೆಲವು ಆರೋಗ್ಯದ ಸಲಹೆಯನ್ನು ಪಾಲಿಸಿದರೆ ನೀವು ನಿಮ್ಮ ಹೇರ್ ಫಾಲ್ ಸಮಸ್ಯೆಯಿಂದ ಹೊರಬರಬಹುದು. ಹೌದು ಆ ಸುಲಭ, ನೈಸರ್ಗಿಕ ಸಲಹೆಗಳು ಇಲ್ಲಿವೆ ನೋಡಿ. ಯಾವೆಲ್ಲಾ ವಿಟಮಿನ್ಸ್ ಬರಿತ ಆಹಾರ ಸೇವಿಸಬೇಕು? …
ನಾನು ಸಾಯೋ ಮುಂಚೆ ತನ್ನ ಮೊಮ್ಮಕ್ಕಳ ಮದುವೆ ನೋಡಬೇಕು ಎಂಬುದು ಅಜ್ಜ ಅಜ್ಜಿಯಂದಿರ ಕನಸು. ಆ ಕನಸು ನನಸಾದರಂತೂ ಸಂಭ್ರಮ. ಹೌದು ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ನೇಪಾಳದ 96ರ ಇಳಿ ವಯಸ್ಸಿನ ವ್ಯಕ್ತಿ ತನ್ನ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ. Video Player 00:00 00:25 ಅಜ್ಜ ಸಖತ್ ಡಾನ್ಸ್ ಸ್ಟೆಪ್ ವಿಡಿಯೋದಲ್ಲಿ ಸರೆಯಾಗಿದ್ದು, ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ ಅಜ್ಜ ಸಾಂಪ್ರದಾಯಿಕ ನೇಪಾಳಿ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದು. age just a number ಅನ್ನುವ ಮಾತಿನಂತೆ ಯವಕರೇ ನಾಚುವಂತೆ ಸ್ಟೆಪ್ ಹಾಕಿದ್ದಾರೆ. ಮೊಮ್ಮಗನ ಮದುವೆಯಲ್ಲಿ 96ರ ವಯಸ್ಸಿನ ತಾತನ ಭರ್ಜರಿ ಡಾನ್ಸ್ ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಲೈಂಗಿಕ ಸಂಬಂಧದಿಂದ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಸೆಕ್ಸ್ ಬರೀ ಪರಾಕಾಷ್ಠೆಗೆ ಸೀಮಿತವಾಗಿಲ್ಲ. ಲೈಂಗಿಕ ಸಂಬಂಧ ಬೆಳೆಸುವುದ್ರಿಂದ ಹಾರ್ಮೋನ್ ಬದಲಾವಣೆ ಜೊತೆಗೆ ದೇಹದ ಮೇಲೆ ಅನೇಕ ಪರಿಣಾಮಗಳನ್ನು ನೀವು ಕಾಣಬಹುದು. ದೈಹಿಕ ಸಂಬಂಧ ಆರೋಗ್ಯವನ್ನು ಕಾಪಾಡುತ್ತದೆ. ಲೈಂಗಿಕ ಸಂಬಂಧ ದೇಹದ ಮೇಲೆ ತಾತ್ಕಾಲಿಕ ಹಾಗೂ ಶಾಶ್ವತ ಎರಡೂ ಪರಿಣಾಮವನ್ನು ಬೀರುತ್ತದೆ. ದೈಹಿಕ ಸಂಬಂಧದ ನಂತ್ರ ಮಹಿಳೆಯರ ದೇಹದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. ದೈಹಿಕ ಸಂಬಂಧ (Physical Relationship ) ದ ನಂತ್ರ ಮಹಿಳೆ ದೇಹದಲ್ಲಾಗುತ್ತೆ ಈ ಎಲ್ಲ ಬದಲಾವಣೆ : ಸಂತೋಷ (Happiness) ದಲ್ಲಿ ಹೆಚ್ಚಳ : ಲೈಂಗಿಕ ಸಂಬಂಧ ಸಿರೊಟೋನಿನ್, ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ನಂತಹವ ಎಲ್ಲಾ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. ಈ ಎಲ್ಲಾ ಹಾರ್ಮೋನುಗಳು ಲೈಂಗಿಕ ಕ್ರಿಯೆಯ ಮೊದಲು, ಲೈಂಗಿಕ ಕ್ರಿಯೆಯ ವೇಳೆ ಮತ್ತು ನಂತರ ನಮ್ಮ ದೇಹದಲ್ಲಿ ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ಮನಸ್ಸನ್ನು ಆವರಿಸುತ್ತವೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಆರಾಮದಾಯಕ ಮತ್ತು ಪ್ರೀತಿ ಮಹಿಳೆಯರಲ್ಲಿ ಹೆಚ್ಚಾಗುತ್ತದೆ. ನಿದ್ರೆ ಮತ್ತು ಅರೆ ನಿದ್ರಾವಸ್ಥೆಯ ಭಾವನೆ : ಮೊದಲೇ ಹೇಳಿದಂತೆ ಇದು ತಾತ್ಕಾಲಿಕ ಭಾವನೆಯಾಗಿದೆ. ಅಂದ್ರೆ ಲೈಂಗಿಕ ಸಂಬಂಧ ಬೆಳೆಸಿದ ನಂತರ…
ಭಾರತದಲ್ಲಿ ತಮಗಿಂತ ಹಿರಿಯ ವ್ಯಕ್ತಿಯನ್ನು ಅಣ್ಣಾ ಅಥವಾ ಅಕ್ಕಾ ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ ಹೀಗೆ ವರ್ಷಾನುಗಟ್ಟಲೆ ಒಬ್ಬರನ್ನು ಅಣ್ಣಾ ಎಂದು ಕರೆದು ಮತ್ತೆ ಅವರನ್ನೇ ಮದುವೆ (Marriage)ಯಾದರೆ ಹೇಗಿರಬೇಡ. ಇಲ್ಲಾಗಿದ್ದು ಅದೇ. ಯುವತಿಯ ಹೆಸರು ವಿನಿ. ಇವರು 8 ವರ್ಷಗಳವರೆಗೆ ಭಯ್ಯಾ (Brother) ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿದ್ದಾರೆ. ತನ್ನ ಕತೆಯನ್ನು ತಾನೇ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಅವರಿಬ್ಬರು ಸಂಬಂಧಿಕರು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) 5 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಈಗ ವೈರಲ್ ಆಗಿರುವ ವಿಡಿಯೋವನ್ನು ವಿನಿ ಮತ್ತು ಜೈ ಅವರ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ದಂಪತಿಗಳು (Couples) ಚಿಕ್ಕವರಿದ್ದಾಗ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು. ವಿನಿ ಅವರು ಜೈ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಬ್ಬರಿಗೂ ಈಗ ಮಗು ಕೂಡ ಇದೆ ಎಂದು ತಿಳಿಸಿದ್ದಾರೆ. ಮಗುವಿನ ಕೆಲವು ಚಿತ್ರಗಳು (Photos) ಸಹ ರೀಲ್‌ನಲ್ಲಿ ಗೋಚರಿಸುತ್ತವೆ.…
ನವದೆಹಲಿ: ಕೇಂದ್ರ ಸರ್ಕಾರ ರೈತರ ಮೇಲೆ ದಯೆ ತೋರುತ್ತಿದೆ. ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಇದುವರೆಗೂ 13 ಕಂತುಗಳಲ್ಲಿ ರೈತರ ಖಾತೆಗೆ ಹಣ ಜಮೆ ಆಗಿದೆ. ಈ ಯೋಜನೆಯಡಿ ವರ್ಷಕ್ಕೆ ಮೂರು ಕಂತುಗಳಲ್ಲಿ ರೂ.6 ಸಾವಿರ ಪಾವತಿಸಲಾಗುತ್ತಿದೆ. ಪ್ರತಿ ಕಂತಿನಲ್ಲಿ 2 ಸಾವಿರ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಫೆ.26ರಂದು 13ನೇ ಕಂತಿನ ಹಣ ಬಿಡುಗಡೆಯಾಗಿದೆ. ಈ ಯೋಜನೆಯಡಿ ದೇಶಾದ್ಯಂತ 9 ಕೋಟಿ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಏಪ್ರಿಲ್-ಜುಲೈ ವೇಳೆಗೆ 14ನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ. ಈ ಯೋಜನೆಯ ಮೊದಲು ರೈತರಿಗೆ ಇನ್ನೊಂದು ಲಾಭ ಸಿಗಬಹುದು. ಹೊಸ ಕೃಷಿ ಉದ್ಯಮ ಆರಂಭಿಸಲು ಕೇಂದ್ರ ಸರಕಾರ ರೈತರಿಗೆ 15 ಲಕ್ಷ ರೂ. ಪ್ರಧಾನ ಮಂತ್ರಿ ಕಿಸಾನ್ ಎಫ್‌ಪಿಒ ಯೋಜನೆಯನ್ನು ಕೃಷಿ ಸಂಬಂಧಿತ ವ್ಯವಹಾರಕ್ಕಾಗಿ ಮಾತ್ರ ಪ್ರಾರಂಭಿಸಲಾಗಿದೆ. ಈ…
ನವದೆಹಲಿ: ಪತಿ ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ 37 ವರ್ಷದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.ಭಾನುವಾರದಂದು ಹೆಂಡತಿ ಪತಿಗೆ ಫೋನ್ ಮಾಡಿದ್ದಾರೆ. ಆದರೆ ಪತಿ ಕಾಲ್ ರಿಸೀವ್ ಮಾಡಿಲ್ಲ ಎಂದು ನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಗೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 15 ದಿನಗಳ ನಂತರ ಪತಿ ಅಮೆರಿಕಗೆ ಹೋಗಿ ನೆಲೆಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ: ಶಿವಶರಣರ ನಾಡು, ಹಲವು ಐತಿಹಾಸಿಕ ತಾಣಗಳ ಬೀಡು ಶಿಕಾರಿಪುರ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠಿತ ಕ್ಷೇತ್ರವೆನಿಸಿಕೊಂಡಿದೆ. ಪಕ್ಕದ ಸೊರಬ ಕ್ಷೇತ್ರ ಮಾಜಿ ಸಿಎಂ ಎಸ್.ಬಂಗಾರಪ್ಪ ಕುಟುಂಬದ ಹಿಡಿತದಲ್ಲೆಉಳಿದಿರುವಂತೆ ಶಿಕಾರಿಪುರ ಸಹ 40 ವರ್ಷಗಳಲ್ಲಿಒಮ್ಮೆ ಹೊರತಾಗಿ ನಿರಂತರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹಿಡಿತದಲ್ಲೇ ಉಳಿದಿದೆ. ರಾಜ್ಯದಲ್ಲಿಅತಿಹೆಚ್ಚು ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕ್ಷೇತ್ರದ ಮತದಾರರು ಯಡಿಯೂರಪ್ಪರಿಗೆ ನೀಡಿದರು. ಒಂದು ಕಾಲದಲ್ಲಿ ರಾಜ್ಯದ ಭತ್ತದ ಕಣಜ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅತ್ಯುತ್ತಮ ಗುಣಮಟ್ಟದ ಭತ್ತ ಬೆಳೆಯುತ್ತಿದ್ದ ಕಾರಣ ಶಿಕಾರಿಪುರದ ಅಕ್ಕಿಗೆ ರಾಜ್ಯದೆಲ್ಲೆಡೆ ಭಾರಿ ಬೇಡಿಕೆ ಇತ್ತು. ಆದರೆ, ರೈತರು ಬೆಲೆಯ ಕಾರಣಕ್ಕೆ ಅಡಕೆ ಬೆನ್ನತ್ತಿ ಹೋಗಿದ್ದರಿಂದ ಹಚ್ಚ ಹಸಿರಾಗಿ ಕಾಣುತ್ತಿದ್ದ ಗದ್ದೆ ಬಯಲನ್ನು ಅಲ್ಲಲ್ಲಿಅಡಕೆ ತೋಟಗಳು ಆವರಿಸಿಕೊಂಡಿವೆ. ಮೆಕ್ಕೆಜೋಳ ಮತ್ತು ಶುಂಠಿ ಬೆಳೆ ಸಹ ಅಧಿಕವಾಗಿದೆ. ಕ್ಷೇತ್ರ ವ್ಯಾಪ್ತಿ- ಹೆಗ್ಗಳಿಕೆ ಕ್ಷೇತ್ರದ ವ್ಯಾಪ್ತಿ ಶಿಕಾರಿಪುರ ತಾಲೂಕಿಗಷ್ಟೆ ಸೀಮಿತಗೊಂಡಿದೆ. ಕ್ಷೇತ್ರದಲ್ಲಿ ವೀರಶೈವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಂಜಾರ, ವಾಲ್ಮೀಕಿ, ಕುರುಬರು, ಅಲ್ಪಸಂಖ್ಯಾತರು ಆನಂತರದ ಸ್ಥಾನದಲ್ಲಿಇದ್ದಾರೆ. ಸಾಗರ ಮತ್ತು ಸೊರಬ…
ತುಮಕೂರು ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದಾರೆ..ದಿನಕ್ಕೊಬ್ಬರಂತೆ ಆಕಾಂಕ್ಷಿತರು ಬಂಡಾಯದ ಬಾವುಟ ಹಾರಿಸುತ್ತಿದ್ದು,ಕುಣಿಗಲ್,ಗುಬ್ಬಿ,ತುಮಕೂರು ನಗರದ ಬಿಜೆಪಿ ಅಭ್ಯರ್ಥಿಗಳಿಗೆ ತಲೆಬಿಸಿಯಾಗಿದೆ..ಬಿಜೆಪಿಯ ಬಂಡಾಯವನ್ನ ಜೆಡಿಎಸ್ ಪಕ್ಷ ತಮ್ಮತ್ತ ಸೆಳೆದುಕೊಳ್ಳೋ ಮೂಲಕ ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದೆ.. ಬಿಜೆಪಿ ಅಭ್ಯರ್ಥಿಗಳ ಘೋಷಣೆ ದಿನದಿಂದಲೂ ತುಮಕೂರು ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿತರು ಬಿಜೆಪಿಗೆ ಬಂಡಾಯದ ಶಾಕ್ ನೀಡ್ತಿದ್ದಾರೆ..ತುಮಕೂರು ನಗರದ ಸೊಗಡು ಶಿವಣ್ಣ, ಕುಣಿಗಲ್ ನ ರಾಜೇಶ್ ಗೌಡ,ಮುದ್ದಹನುಮೇಗೌಡ,ಗುಬ್ಬಿಯ ಬೆಟ್ಟಸ್ವಾಮಿ ಹೀಗೆ ಸಾಲು ಸಾಲು ಹಿರಿಯ ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿ ಚುನಾವಣಾ ರಣಕಣದಲ್ಲಿ ತೊಡೆತಟ್ಟುತ್ತಿದ್ದಾರೆ.. ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ ಗೌಡ ಕೂಡ ಇಂದು ಬಂಡಾಯದ ಸಮರ ಸಾರಿದ್ದಾರೆ..ಕುಣಿಗಲ್ ನಲ್ಲಿ ನೂತನ ಕಚೇರಿ ತೆರದಿರೋ ರಾಜೇಶ್ ಗೌಡ,ತಮ್ಮ ಅಪಾರ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದಾರೆ..ಕಾಣದ ಕೈಗಳು ಹಾಗೂ ಪಕ್ಷದ ನಾಯಕರಿಂದ ಮೋಸವಾಗಿದ್ದು,19 ರಂದು ತಮ್ಮ ನಾಮಪತ್ರ ಸಲ್ಲಿಸೋದಾಗಿ ತಿಳಿಸಿದ್ದಾರೆ… ಇನ್ನೂ ಗುಬ್ಬಿ ಬಿಜೆಪಿ…
ಬೆಂಗಳೂರು : ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಬೆನ್ನಲ್ಲೆ ಸಚಿವ ಗೋವಿಂದ ಎಂ ಕಾರಜೋಳ ಮಾತನಾಡಿ, ರಾಜಕೀಯ ನಾಯಕರು ಅವಸರದ ನಿರ್ಧಾರ ಕೈಗೊಳ್ಳಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ವಿಧಾನ ಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ವಂಚನೆ ಗೊಳಲಾದ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ರಾಯಚೂರು ನಗರದಲ್ಲಿ ಸಚಿವ ಗೋವಿಂದ ಎಂ ಕಾರಜೋಳ ಮಾತನಾಡಿ, ಆತುರದ ನಿರ್ಧಾರದಿಂದ ನಮ್ಮ ಮೂಗನ್ನು ನಾವೇ ಕುಯ್ದುಕೊಂಡಂತೆ, ನೆಲೆ ಇಲ್ಲದ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿ ಹುಡುಕುತ್ತಿದೆ. ಹೀಗಾಗಿ ಬಿಜೆಪಿ ಟಿಕೆಟ್ ವಂಚಿತರ ಕೈ ಕಾಲು ಹಿಡಿದು ಅಭ್ಯರ್ಥಿಗಳನ್ನು ಕರೆದೊಯ್ಯುತ್ತಿದ್ದಾರೆ. ಅವಸರದ ನಿರ್ಧಾರ ಯಾವ ನಾಯಕರು ಮಾಡುವುದು ಬೇಡ. ಹೊಸಬರನ್ನ ತಯಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವ ಮೂಲಕ ರಾಜೀನಾಮೆ ತೆಗೆದುಕೊಂಡ ನಾಯಕರಿಗೆ ಸಚಿವ ಗೋವಿಂದ ಎಂ ಕಾರಜೋಳ ಖಡಕ್ ವಾರ್ನಿಂಗ್ ನೀಡಿದ್ದಾರೆ.