ಯಾದಗಿರಿ: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಭಿನ್ನಮತ, ಅಸಮಾಧಾನ ಸ್ಫೋಟಗೊಂಡಿದ್ದು, ರಾಜೀನಾಮೆ ಪರ್ವ ಆರಂಭವಾಗಿದೆ. ಲಕ್ಷ್ಮಣ ಸವದಿ (Laxman Savadi) ಸೇರಿದಂತೆ ಕೆಲವು ಹಿರಿಯ ನಾಯಕರು ಕಾಂಗ್ರೆಸ್, ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇದೀಗ ಮತ್ತೊಂದು ವಿಕೆಟ್ ಪತನಗೊಂಡಿದೆ. ಹೌದು, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ (Dr. AB Malaka Reddy) ಅವರು ಇಂದು ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ (JDS) ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ ನಂತರ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಯಾದಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಾಲಕರೆಡ್ಡಿ ಬೆಂಗಳೂರಿನಲ್ಲಿರುವ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡ ನಿವಾಸಕ್ಕೆ ತೆರಳಿ ಅವರಿಂದ ಬಿ ಫಾರ್ಮ್ ಪಡೆದಿದ್ದಾರೆ. ಶಹಾಪುರ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆ ಜೆಡಿಎಸ್ ಸೇರಿದ್ದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಕ್ಷೇತ್ರದ ಜೆಡಿಎಸ್…
Author: Prajatv Kannada
ಬಳ್ಳಾರಿ: ಕಂಪ್ಲಿಯ ಪುರಸಭೆಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಟಿ.ಹೆಚ್,ಸುರೇಶ್ ಬಾಬು ಅವರು ಚುನಾವಣಾಧಿಕಾರಿ ಡಾ.ಎನ್.ನಯನ ಅವರಿಗೆ ಶನಿವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಕುರುಗೋಡು ರಸ್ತೆಯಿಂದ ಬೈಕ್ ರ್ಯಾಲಿ ಮೂಲಕ ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಎತ್ತಿನಬಂಡಿಗಳ ಮೂಲಕ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳ ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಪುರಸಭೆ ಕಛೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು. ಸೂಚಕರಾಗಿ ವಿರೂಪಾಕ್ಷಿ, ಪಿ.ಬ್ರಹ್ಮಯ್ಯ, ಕಡೆಮನೆ ಪಂಪಾಪತಿ ಇದ್ದರು. ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ ಜನರ ಸಮಯಕ್ಕಾಗಿ ಕೇವಲ ನಾಮ್ ಕೆ ವಾಸ್ತೇ ನಾಯಕ ಬೇಕಾಗಿಲ್ಲ. ಸುರೇಶ್ ಬಾಬು ಕಾಮ್ ಕರನೆವಾಲಾ ನಾಯಕರಿದ್ದು ಜನರು ಈ ಬಾರಿ ಇವರನ್ನು ಕೈ ಹಿಡಿಯಲಿದ್ದಾರೆ ಎಂದು ಸಚಿವರು ಹಾಗೂ ಸುರೇಶ್ ಬಾಬು ಅವರ ಸೋದರಮಾವರಾದ ಬಿ.ಶ್ರೀರಾಮುಲು ಹೇಳಿದರು. ಕಂಪ್ಲಿಯಲ್ಲಿ ತಮ್ಮ ಸೋದರಳಿಯ ಟಿ.ಹೆಚ್.ಸುರೇಶ್ ಬಾಬು ನಾಮಪತ್ರ ಸಲ್ಲಿಕೆ ವೇಳೆ ಜೊತೆಗೆ ಇದ್ದು…
ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಇದ್ದರೂ ಸಚಿವರು ಶಾಸಕರು ರಾಜಕೀಯ ಮುಖಂಡರು ಏನಾದರು ಒಂದು ವಿವಾದದಲ್ಲಿ ಸಿಲುಕಿಕೊಳ್ಳೊದು ಕಾಮನ್ ಆಗಿ ಬಿಟ್ಟಿದೆ. ಅದೇ ರೀತಿ ಇಂದು ಮಾಜಿ ಸಚಿವ ಎಚ್. ಆಂಜನೇಯ ಕೂಡ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಅದು ಏನಂದರೆ ತಮ್ಮ ಫಾರ್ಮ್ ಹೌಸ್ ನಲ್ಲಿ ಹುಟ್ಟಿದಬ್ಬವನ್ನು ಆಚರಿಸುವಾಗ ತಲ್ವಾರ್ ನನ್ನು ಪ್ರದರ್ಶಿಸಿದ್ದಾರೆ, ಹಾಗಾಗಿ ಮಾಜಿ ಸಚಿವರು ನೀತಿ ಸಂಹಿತೆ ಉಲ್ಲಂಘನೆಗೆ ಗುರಿಯಾಗಿದ್ದಾರೆ. Video Player 00:00 00:34 ಚಿತ್ರದುರ್ಗ ನಗರದ ಹೊರವಲಯದ ಸೀಬಾರ ಗ್ರಾಮದಲ್ಲಿರುವ ಫಾರಂ ಹೌಸ್ ನಲ್ಲಿ ತಮ್ಮ ಕ್ಷೇತ್ರದ ನೂರಾರು ಅಭಿಮಾನಿಗಳ ಎದುರಲ್ಲೇ ತಲವಾರ್ ಹಿಡಿದು ಹುಟ್ಟಿದಬ್ಬ ಆಚರಣೆ. ಮಾಡಿಕೊಂಡರು. ಅನುಮತಿ ಪಡೆಯದೇ ಆಯೊಜಿಸಲಾಗಿದ್ದ ಹುಟ್ಟಿದಬ್ಬ ಆಚರಣೆಯಲ್ಲಿತಲ್ವಾರ್ ಪ್ರದರ್ಶಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ನೀಡಿರುವ ಆಫರ್‌ಗಳನ್ನೆಲ್ಲಾ ತಿರಸ್ಕರಿಸಿ ಚುನಾವಣೆಗೆ ಸ್ಪರ್ಧಿಸುವ ಬೇಡಿಕೆಯೊಂದನ್ನೆ ಮುಂದಿಟ್ಟಿದ್ದಾರೆ. ಶೆಟ್ಟರ್ ನಡೆ ಬಿಜೆಪಿಗೆ ನುಂಗಲಾರದ ತುಪ್ಪದಂತಾಗಿ ಪರಿಣಮಿಸಿದೆ. ಬಿಜೆಪಿಯ ಬೆಳವಣಿಗೆಯ ಲಾಭ ಪಡೆಯಲು ಸಜ್ಜಾಗಿರುವ ಕೈ ಪಡೆ ಶೆಟ್ಟರ್‌ಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲು ಸಜ್ಜಾಗಿದೆ. ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದಿರುವ ಜಗದೀಶ್ ಶೆಟ್ಟರ್ ಏಳನೆ ಬಾರಿ ಕೂಡ ಪಕ್ಷದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬೇರಿಯವರಿಗೆ ಅವಕಾಶ ಕೊಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಟಿಕೆಟ್ ಕೊಡಲಿ ಕೊಡದಿರಲಿ ಸ್ಪರ್ಧೆ ಖಚಿತ ಎಂದಿರುವ ಶೆಟ್ಟರ್ ಪಟ್ಟು ಸಡಿಲಿಸಿಲ್ಲ. ಹೀಗಾಗಿ ಶೆಟ್ಟರ್ ನಿವಾಸಕ್ಕೆ ದೌಡಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನವೊಲಿಸಲು ಯತ್ನಿಸಿದ್ದಾರೆ. ರಾಜ್ಯಪಾಲ ಮಾಡುವ ಆಫರ್ ನೀಡಿದ್ರು ಶೆಟ್ಟರ್ ಒಪ್ಪಿಲ್ಲ. ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಜಗದೀಶ್ ಶೆಟ್ಟರ್…
ಧಾರವಾಡ: 2023ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಕುರುಬ ಸಮಾಜಕ್ಕೆ ಅನ್ಯಾಯ ಮಾಡಿವೆ ಎಂದು ಎರಡೂ ಪಕ್ಷಗಳ ವಿರುದ್ಧ ಕುರುಬ ಸಮಾಜದ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ 15 ಹಾಗೂ ಕಾಂಗ್ರೆಸ್‌ನಿಂದ 20 ಟಿಕೆಟ್‌ನ್ನು ಹಾಲುಮತ ಸಮಾಜದ ಆಕಾಂಕ್ಷಿಗಳಿಗೆ ನೀಡಬೇಕು ಆದರೆ, ಯಾವುದೇ ಪಕ್ಷಗಳು ಹಾಲುಮತದ ಆಕಾಂಕ್ಷಿಗಳು ಸರಿಯಾಗಿ ಟಿಕೆಟ್ ಘೋಷಣೆ ಮಾಡುತ್ತಿಲ್ಲ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಕೆ.ಎಸ್.ಈಶ್ವರಪ್ಪನವರು ಅಂತವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವುದು ದುರದೃಷ್ಟಕರ ಈಶ್ವರಪ್ಪನವರಿಂದ ರಾಜೀನಾಮೆ ಪಡೆದುಕೊಳ್ಳದೇ ಅವರಿಗೆ ಇದೊಂದು ಬಾರಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಹಾಲುಮತದ ಯಾವುದೇ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡದೇ ಮೋಸ ಮಾಡಬಾರದು ಎಂದು ಮಠಾಧೀಶರು ಒತ್ತಾಯಿಸಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಹಾಲುಮತದ ಅಭ್ಯರ್ಥಿಗೆ ಬಿಜೆಪಿ ನೀಡಬೇಕು. ನವಲಗುಂದ ಕಾಂಗ್ರೆಸ್ ಟಿಕೆಟ್‌ನ್ನು ಹಾಲುಮತದ ಅಭ್ಯರ್ಥಿಗೆ ನೀಡದೇ ಮೋಸ ಮಾಡಲಾಗಿದೆ. ಟಿಕೆಟ್ ಘೋಷಣೆಗೆ ಇನ್ನೂ ಅವಕಾಶವಿದ್ದು, ತಮ್ಮ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ಘೋಷಣೆ…
ಕೋಲಾರ: ಬಿಜೆಪಿಯಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಹೂಡಿ ವಿಜಯ್ ಕುಮಾರ್ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಇಂದು ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮಾಲೂರಿನ ವೈಟ್ ಗಾರ್ಡನ್ ನಲ್ಲಿರುವ ಹೂಡಿ ವಿಜಯ್ ಕುಮಾರ್ ಅವರ ನಿವಾಸದಿಂದ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ಮಾಲಕ ಮೆರವಣಿಗೆ ಆರಂಭಿಸಿ, ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರು. ಬಳಿಕ ಮಾರೆಮ್ಮನ ದೇವಸ್ಥಾನದಲ್ಲಿ ಹೂಡಿ ವಿಜಯ್ ಕುಮಾರ್ ದಂಪತಿ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಬೆಂಬಲಿಗರ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪತ್ನಿ ಜೊತೆ ಹೂಡಿ ವಿಜಯ್ ಕುಮಾರ್ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ರೋಡ್ ಶೋನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಬೆಂಬಲಿಗರು ಭಾಗಿಯಾಗಿದ್ದು, ಇದು ಹೂಡಿ ವಿಜಯ್ ಕುಮಾರ್ ದಂಪತಿ ಅವರ ಶಕ್ತಿ ಪ್ರದರ್ಶನವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೂಡಿ ವಿಜಯ್ ಕುಮಾರ್ ಅವರು, ನನಗೆ ಬಿಜೆಪಿ ಪಕ್ಷದಲ್ಲಿ…
ಹಾವೇರಿ: ನೆಹರು ಓಲೇಕಾರ್ (Neharu Olekar) ನನ್ನ ಮೇಲೆ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಆದರೆ, ಓಲೇಕಾರ್ ಅವರು ನನ್ನ ಮೇಲಿರುವ ಆರೋಪಗಳ ಬಗ್ಗೆ ಮೊದಲು ಸ್ಪಷ್ಟೀಕರಣ ಕೊಡಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಓಲೇಕಾರ್ ವಿರುದ್ಧ ಕಿಡಿ ಕಾರಿದರು. ಶನಿವಾರ ಶಿಗ್ಗಾಂವಿಯ (Shiggavi) ತಹಶೀಲ್ದಾರ್ ಕಚೇರಿಯಲ್ಲಿ 2023ರ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹಲವಾರು ಬಾರಿ ಶಿಗ್ಗಾಂವಿ ಮತಕ್ಷೇತ್ರದ ಜನರು ಆಶೀರ್ವದಿಸಿ ಬೆಂಬಲಿಸಿದ್ದಾರೆ. ಈ ಬಾರಿಯೂ ಹಿಂದಿನ ದಾಖಲೆಯನ್ನು ಮುರಿದು, ಅತ್ಯಧಿಕ ಮತದಿಂದ ಗೆದ್ದು ಬರುವ ವಿಶ್ವಾಸವಿದೆ ಎಂದು ಹೇಳಿದರು. ಈ ತಾಲೂಕಿನ ಮತದಾರರು ಪ್ರಬುದ್ಧ ಹಾಗೂ ಜಾಗೃತ ಮತದಾರರಿದ್ದಾರೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಜನರು ಮತವನ್ನು ನೀಡಿದ್ದಾರೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಎಲ್ಲಾ ವರ್ಗಕ್ಕೂ…
ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಒಳ ಮೀಸಲಾತಿ ವಿರೋಧಿ ಹೋರಾಟ ಸಮಿತಿ ಶಿರಹಟ್ಟಿ ತಾಲೂಕಿನ ಭೂಮಿ ವಡ್ಡರ ಕೊರವ ಕೊರಚ ಹಾಗೂ ಇನ್ನಿತರೆ ಸಮಾಜಗಳ ಒಳ ಮೀಸಲಾತಿಯನ್ನು ಜಾರಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಹಿಂಮ್ ಪಡೆಯಬೇಕು ಎಂದು ಆದರಹಳ್ಳಿಯ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಂಜಾರ ಸಮುದಾಯದ ಮುಖಂಡರು. ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನು ಮಾಡಿರುವುದನ್ನು ರದ್ದುಪಡಿಸಬೇಕು ಹಾಗೂ ಒಳ ಮೀಸಲಾತಿ ವಿರೋಧಿಸಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಆದರಹಳ್ಳಿ ಗವಿಮಠದ ಕುಮಾರಸ್ವಾಮಿಜಿ ಯವರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು . ಈ ಸಮಯದಲ್ಲಿ ಬಂಜಾರ ಲಂಬಾಣಿ, ಭೂಮಿ ವಡ್ಡರ ಕೊರವ ಸಮಾಜದ ನೂರಾರು ಜನರು ಹಾಗೂ ಲಂಬಾಣಿ ಸಮಾಜದ ಯುವ ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ಬೆಳಗಾವಿ: ‘ಬಳು ಹೊಕ್ಕ ಮನೆ ಅಳು ಆಗುತ್ತಾ? ಯಾವತ್ತೂ ಅಂತಹ ಮನೆಯಲ್ಲಿ ಇರಬಾರದು. ಇದೇ ಕಾರಣದಿಂದ ಬಿಜೆಪಿ ಬಿಟ್ಟು ಬಂದಿದ್ದೇನೆ’ ಎಂದು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಜಿಲ್ಲೆ ಪ್ರವೇಶಿಸಿದ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದರು. ಶನಿವಾರ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ‘ಪೀಡೆ ತೊಲಗಿತು’ ಎನ್ನುವ ರಮೇಶ್ ಜಾರಕಿಹೋಳಿ ಮಾತಿನ ವಿಷಯವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ‘ಬಳು ಎನ್ನುವ ಹಕ್ಕಿ ಹೊಕ್ಕ ಮನೆ ತಕ್ಷಣ ಬಿಡಬೇಕು’ ಎನ್ನುವ ಸಂಪ್ರದಾಯ ನಮ್ಮಲ್ಲಿದೆ. ಅದೇ ರೀತಿ ರಮೇಶ್ ಜಾರಕಿಹೊಳಿ ಸೇರಿಕೊಂಡಿರುವ ಬಿಜೆಪಿಯಲ್ಲಿ ನಾನಿರಬಾರದು ಎನ್ನುವ ನಿರ್ಧಾರಕ್ಕೆ ಬಂದು ಕಾಂಗ್ರೆಸ್ ಪಕ್ಷ ಸೇರಿದ್ದಾಗಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕುಟುಕಿದರು. ಎರಡೂ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಮತಕ್ಷೇತ್ರದ ಚುನಾವಣೆಗೆವ ನಾಮಪತ್ರ ಸಲ್ಲಿಸುತ್ತೇನೆ ಎಂದ ಲಕ್ಷ್ಮಣ ಸವದಿ, ‘ಬಿಜೆಪಿಯಲ್ಲಿ ಈಗ ಸಿದ್ಧಾಂತಗಳು ಉಳಿದಿಲ್ಲ. ನನಗೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ವಾತಾವರಣವನ್ನು ಬಿಜೆಪಿ…
ಯಾದಗಿರಿ: ಕಾಂಗ್ರೆಸ್ (Congress) ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Baburao Chinchansur) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ. ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಚಿಂಚನಸೂರ್. ಇವರು ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ರಾತ್ರಿ 12:30 ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ಕಾರು ಹಾದುಹೋದ ಕಾರಣ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಹೀಗೆ ಆಗಿದೆ ಎನ್ನಲಾಗಿದೆ. ಕಾರು ಬಿದ್ದ ರಭಸಕ್ಕೆ ಚಿಂಚನಸೂರ್ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಗನ್‌ಮ್ಯಾನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಯಾದಗಿರಿ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಗೆ…