ಮಲಯಾಳಂನಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿಸಿದೆ. ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತು ಹೇಮಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಬಳಿಕ ಸಾಕಷ್ಟು ಮಂದಿಯ ತಲೆದಂಡವಾಗಿದೆ. ಹೇಮಾ ವರದಿಯಂತೆ ಇತರ ಭಾಷೆಗಳ ಚಿತ್ರರಂಗದಲ್ಲೂ ವರದಿಗಳು ಜಾರಿಯಾಗಬೇಕು ಎಂದು ಸಾಕಷ್ಟು ಮಂದಿ ಮಾತನಾಡಿದ್ದಾರೆ. ಇದೀಗ ನಟಿ ಶೃತಿ ಹರಿಹರನ್ ಕೂಡ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಲ್ಲೂ ಸಮಿತಿ ಆಗಬೇಕು ಎಂದಿದ್ದಾರೆ. ‘ಹೇಮಾ ಸಮಿತಿಯ ವರದಿ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತ ಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ’ ಎಂದು ಶೃತಿ ಹರಿಹರನ್ ಹೇಳಿದ್ದಾರೆ. ‘ಹೇಮಾ ವರದಿ ಮಲಯಾಳಂ ಚಿತ್ರರಂಗದ ಗೌರವ ಕಡಿಮೆ ಮಾಡುತ್ತಿದೆ, ಮಲಯಾಳಂ ಚಿತ್ರರಂಗದ ಘನತೆಗೆ…
Author: Prajatv Kannada
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನುಂಗಲಾರದ ತುತ್ತಾಗಿದೆ. ಹೊಸ ಜೈಲಿಗೆ ಅಡ್ಜಸ್ಟ್ ಆಗಲು ಪರದಾಡುತ್ತಿರುವ ದರ್ಶನ್ ಗೆ ಪೊಲೀಸ್ ಸಿಬ್ಬಂದಿ ಪದೇ ಪದೇ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರು ಪೊಲೀಸರು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಸುವ ತಯಾರಿ ನಡೆಸುತ್ತಿದ್ದು ಇದರ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತಮಗೆ ಟಿವಿ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಟಿವಿಯ ಅವಶ್ಯಕತೆ ಇದೆ ಎಂದಾದರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಹೈ-ಸೆಕ್ಯುರಿಟಿ ಸೆಲ್ಗೆ ಊಟ ನೀಡುವ ವೇಳೆ ಈ ಮಾತುಕತೆ ನಡೆದಿದೆ. ಅಚ್ಚರಿ ಏನೆಂದರೆ, ಟಿವಿ ವಿಚಾರ ತೆಗೆಯುತ್ತಿದಂತೆಯೇ ಅದರ ಸಹವಾಸವೇ ಬೇಡ ಎನ್ನುವ ರೀತಿ ದರ್ಶನ್ ಸೈಲೆಂಟ್ ಆದರು ಎಂಬ ಮಾಹಿತಿ ಸಿಕ್ಕಿದೆ. ದರ್ಶನ್ ಅವರು ಸದ್ಯಕ್ಕೆ ಟಿವಿ ಬೇಕು…
ಭಾರತದ ಬ್ಯಾಡ್ಮಿಂಟನ್ ಆಟಗಾರ, ಕನ್ನಡಿಗ ಸುಹಾಸ್ ಪುರುಷರ ಸಿಂಗಲ್ಸ್ ಎಸ್‌ಎಲ್ 4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಕನ್ನಡಿಗ ಸುಹಾಸ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಸತತ ಎರಡನೇ ಪದಕವಾಗಿದೆ. ಈ ಹಿಂದೆ 2020ರ ಪ್ಯಾರಾಲಿಂಪಿಕ್ಸ್‌ನಲ್ಲೂ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಲ್ಯೂಕಾಸ್ ಮಜೂರ್ ವಿರುದ್ಧ 0-2 (9-21, 13-21) ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ವಿಶ್ವ ನಂ.1 ಶ್ರೇಯಾಂಕದ ಸುಹಾಸ್ ಯತಿರಾಜ್ ಸತತ ಎರಡನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಅಂದರೆ 2020 ರ ಟೋಕಿಯೋ ಒಲಿಂಪಿಕ್ಸ್ನಲ್ಲೂ ಸುಹಾಸ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ…
ಪ್ರಸ್ತುತ ನಡೆಯುತ್ತಿರುವ ಡಿಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪ್ರಿಯಾಂಶ್ ಆರ್‌ಸಿಬಿ ಪರ ಆಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ಪರ ಕಣಕ್ಕಿಳಿಯುತ್ತಿರುವ ಪ್ರಿಯಾಂಶ್ ಆರ್ಯ ಕೇವಲ 9 ಪಂದ್ಯಗಳಿಂದ 602 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಭರ್ಜರಿ ಶತಕ ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಗುರುತಿಸಿಕೊಂಡಿರುವ ಯುವ ಎಡಗೈ ದಾಂಡಿಗ ಮುಂಬರುವ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಚಾನ್ಸ್ ಸಿಗುವುದನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಶ್, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಹೀಗಾಗಿ ನಾನು ಸಹ ಆರ್‌ಸಿಬಿ ಪರ ಆಡಲು ಬಯಸುತ್ತೇನೆ. ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ. ಆರ್‌ಸಿಬಿ ತಂಡವು ಈವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಈ ಕೊರತೆಯನ್ನು ನೀಗಿಸಬೇಕಿದೆ. ಅದಕ್ಕಾಗಿ ನಾನು ಬ್ಯಾಟಿಂಗ್ ಮೂಲಕ ನನ್ನಿಂದಾದ ನೆರವು ನೀಡಬಲ್ಲೆ. ಈ ಮೂಲಕ ಆರ್ಸಿಬಿಗೆ ಚೊಚ್ಚಲ…
ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಗಿಯುತ್ತಿದ್ದಂತೆಯೇ ರಚಿತಾ ರಾಮ್ ತಮ್ಮ ಫ್ಯಾನ್ಸ್ ಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ಹೊಸ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಝೈದ್ ಖಾನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ ರಾಮ್ ಇದೀಗ ಇನ್ನೊಂದು ನಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. `ಕಲ್ಟ್’ ಸಿನಿಮಾ ತಂಡಕ್ಕೆ ರಚಿತಾ ರಾಮ್ ಸೇರಿಕೊಂಡಿದ್ದಾರೆ. ಈ ವಿಚಾರ ಆಫಿಷಿಯಲ್ ಘೋಷಣೆಯಾಗಿದೆ. ಕಲ್ಟ್ ಇದು ಝೈದ್ ಖಾನ್ ಅಭಿನಯದ ಎರಡನೇ ಚಿತ್ರ. ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ಇದೀಗ ಕಲ್ಟ್ (Cult) ಶೀರ್ಷಿಕೆಯಡಿ ಚಿತ್ರ ಮಾಡುತ್ತಿದ್ದಾರೆ. ಝೈದ್‌ಗೆ ಜೋಡಿಯಾಗಿ ರಚಿತಾ ರಾಮ್ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ `ಕಲ್ಟ್’ ಚಿತ್ರ ಫಸ್ಟ್ ಲುಕ್…
ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ನ್ಯೂಜೆರ್ಸಿ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ಮಾಡುವ ಮೂಲಕ ಭಕ್ತಿ ಭಾವದಿಂದ ಶ್ರಾವಣ ಅಮಾವಾಸ್ಯೆ ಆಚರಿಸಲಾಯಿತು. ಹಲವಾರು ಭಕ್ತರು ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸಿ ಧನ್ಯರಾದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು.ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಕಾರ್ಯದರ್ಶಿಗಳಾದ ಪೂಜ್ಯ ಪ್ರಸನ್ನನಾಥ ಸ್ವಾಮೀಜಿಯವರು, ಮೈಸೂರು ಶಾಖೆಯ ಪೂಜ್ಯ ಸೋಮೇಶ್ವರನಾಥ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಲಾಯಿತು.
ಹೈದರಾಬಾದ್: ಕುಂಭದ್ರೋಣ ಮಳೆ ಮತ್ತು ಪ್ರವಾಹಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ತತ್ತರಿಸಿವೆ. ನದಿಗಳು ಉಕ್ಕೇರಿವೆ. ಜಲಾಶಯಗಳಲೆಲ್ಲಾ ಭರ್ತಿ ಆಗಿದ್ದು, ಅಪಾರ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ವಿಜಯವಾಡದಲ್ಲಿ ಪ್ರವಾಹದ ತೀವ್ರತೆ ಕಡಿಮೆ ಆಗಿದ್ದರೂ ತಗ್ಗುಪ್ರದೇಶಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ. 130ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಿಗ್ಬಂಧನ ಏರ್ಪಟ್ಟಿದ್ದು, ಬೋಟ್‌ಗಳ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯ ನಡೆದಿದೆ. 2.26 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ಈವರೆಗೂ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೆಹಬೂಬಾಬಾದ್ ಬಳಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನದಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಲಾಗಿದೆ. ರಾಯಪಾಡಿ ಎಂಬಲ್ಲಿ 300ಕ್ಕೂ ಹೆಚ್ಚು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಕೈಕೊಟ್ಟಿದೆ. ಹೆದ್ದಾರಿಗಳು ಕೂಡ ಸಂಪೂರ್ಣವಾಗಿ ಪ್ರವಾಹದಿಂದ ಮುಕ್ತವಾಗಲಿಲ್ಲ. ಇನ್ನು, ರೈಲ್ವೇ ಸೇವೆಗಳಲ್ಲಿ ಭಾರೀ ವ್ಯತ್ಯಯ ಆಗಿದೆ. ದಕ್ಷಿಣ ಮಧ್ಯೆ ರೈಲ್ವೇ ವಿಭಾಗದಲ್ಲಿ 432 ರೈಲುಗಳು ರದ್ದಾಗಿವೆ. 140 ರೈಲುಗಳ ಮಾರ್ಗ ಬದಲಿಸಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಬೆಳಗ್ಗೆ ನಾಲ್ಕು ಗಂಟೆ…
ಕೋಲ್ಕತ್ತಾ: ಕಳೆದ ತಿಂಗಳು ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ನನ್ನ ಕೇಂದ್ರೀಯ ತನಿಖಾ ದಳ ಬಂಧಿಸಿದೆ. ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ಸಂದೀಪ್ ಘೋಷ್ ಅವರನ್ನ ಬಂಧಿಸಿದೆ. ಸತತ 2 ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾಜಿ ಪ್ರಾಂಶುಪಾಲರ ಬಂಧನವಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡದಿಂದ ಸಿಬಿಐ ತನಿಖೆ ಹೊಣೆ ವಹಿಸಿಕೊಂಡಿತ್ತು. ಬಳಿಕ ಎಫ್‌ಐಆರ್ ದಾಖಲಿಸಿದ್ದ ಸಿಬಿಐ ಕಳೆದ 2 ವಾರಗಳಿಂದ 150ಕ್ಕೂ ಹೆಚ್ಚುಗಂಟೆಗಳ…
ಹುಬ್ಬಳ್ಳಿ:- ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್, ವಿಧಾನಸಭೆಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕೇಳಿರುವುದದು ಸತ್ಯ, ಅದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗುರುವುದಾಗಿ ಹೇಳಿ ಕಾಂಗ್ರೆಸ್ ಯಾವತ್ತಿಗೂ ಹೈಕಮಾಂಡ್ ಆಧಾರಿತ ಪಕ್ಷ, ಅದು ಹಾಕಿದ ಗೆರೆಯನ್ನು ಯಾರೂ ದಾಟುವುದಿಲ್ಲ ಎಂದು ಹೇಳಿದರು. ಉಪ ಚುನಾವಣೆ ನಡೆಯುವ ಎಲ್ಲ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದರು.
ಕೋಲಾರ: ಸರ್ಕಾರಿ ಮಹಿಳಾ ಕಾಲೇಜಿಗೆ ಐದು ಕೋಟಿ ಬಿಡುಗಡೆಯಾಗಿದೆ ಅದನ್ನು ಯೋಜನಾ ಬದ್ದವಾಗಿ ಬಳಸಿಕೊಂಡು ಕಟ್ಟಡಗಳನ್ನು ಕಟ್ಟದೇ ಬೇಕಾಬಿಟ್ಟಿ ಕಟ್ಟಲು ಹೋದರೆ ಮುಂದೆ ಜಾಗದ ಸಮಸ್ಯೆಯಾಗಲಿದ್ದು ಕೂಡಲೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವ್ರು ಅಧಿಕಾರಿಗಳಿಗೆ ಆದೇಶ ನೀಡಿದರು. ನಗರದಲ್ಲಿರುವ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕಾಲೇಜಿನಲ್ಲಿ ಜಾಗ ಇದೆ ಅಂತ ಹೇಗೆ ಬೇಕಾದರೆ ಹಾಗೇ ಕಟ್ಟಿಕೊಂಡು ಹೋದರೆ ಮುಂದೆ ವಿಧ್ಯಾರ್ಥಿಗಳು ತೊಂದರೆಯಾಗುತ್ತದೆ ಪ್ರಾಂಶುಪಾಲರು ಇದರ ಜವಾಬ್ದಾರಿ ವಹಿಸಿಕೊಂಡು ಮುಂದಾಲೋಚನೆ ವಹಿಸಬೇಕು ಚಿಕ್ಕ ಚಿಕ್ಕ ಕಬ್ಬಿಣ ಹಾಕಿ ಐದು ಅಂತಸ್ತು ಕಟ್ಟತ್ತೀವಿ ಅಂದರೆ ಅದು ಹೇಗೆ ಸಾಧ್ಯ ಮುಂದೆ ಒಂದು ಪ್ಲಾನ್ ಕೊಡತ್ತೇವೆ ಅಲ್ಲಿ ತನಕ ಕೆಲಸ ನಿಲ್ಲಿಸಿ ಎಂದು ಹೇಳಿದರು. ಬಾಲಕರ ಕಾಲೇಜಿನಲ್ಲೂ ಕಳಪೆ ಕಾಮಗಾರಿಯಾಗಿದೆ ಎಂದು ವರದಿಯಾಗಿದೆ ಕೂಡಲೇ ಎನ್.ಡಿ.ಟಿ ವತಿಯಿಂದ ಪರಿಶೀಲನೆ ನಡೆಸಿ ಯಾರು ಗುತ್ತಿಗೆದಾರರು ಯಾವ ಏಜೆನ್ಸಿ ಅಂತ ಕೂಡಲೇ ವರದಿ ಕೊಡಬೇಕು ಎಂದು ಆದೇಶ ನೀಡಿದರು…