ಭಾರತೀಯ ಸಿನಿಮಾ ರಂಗದ ಅದ್ಭುತ ನಟಿ ಸೌಂದರ್ಯ ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೆ ಅಸು ನೀಗಿದ್ದರು. 90ರ ದಶಕದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆಯ ಸಾವು ಇಂದಿಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಇದೀಗ ಸೌಂದರ್ಯ ಸಾವಿನ ಕುರಿತಾಗಿ ಸೌಂದರ್ಯ ಸ್ನೇಹಿತೆ ಪ್ರೇಮಾ ಭಾವುಕರಾಗಿದ್ದಾರೆ. 1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸೌಂದರ್ಯ ಅವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ಹಾಗೂ ಆಕೆಯ ಸಹೋಧರ ನಿಧನರಾದರು. ಇದೀಗ ಸೌಂದರ್ಯ ಅವರನ್ನು ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಸ್ಮರಿಸಿದ್ದಾರೆ. ಸೌಂದರ್ಯ- ಪ್ರೇಮಾ ಇಬ್ಬರೂ ಆತ್ಮೀಯ ಸ್ನೇಹಿತೆಯರಾಗಿದ್ದು, ಇಬ್ಬರು ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ- ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಾನು ನನ್ನ ಹೆಂಡ್ತೀರು, ಆಪ್ತಮಿತ್ರ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ನಮ್ಮ ನಡುವೆ ಒಡನಾಟ ಬೆಳೆಯಿತು. ರಾಮ ನವಮಿ…
Author: Prajatv Kannada
ಅಮೆರಿಕದ ಟೈಮ್ಸ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯ ಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ನಿರ್ದೇಶಕ ರಾಜಮೌಳಿ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೆಸರು ಕೂಡ ಸೇರಿಕೊಂಡಿದ್ದಾರೆ. ರಾಜಮೌಳಿ- ಶಾರುಖ್ ಖಾನ್ ತಮ್ಮದೇ ಆದ ಕ್ಷೇತ್ರದಲ್ಲಿ ಸಾಕಷ್ಟು ಸಕ್ಸಸ್ ಮಾಡಿದ್ದಾರೆ. ಅದರಲ್ಲೂ ನಿರ್ದೇಶದಕ ರಾಜಮೌಳಿ ಕಳೆದ ವರ್ಷ ರಿಲೀಸ್ ಆದ RRR ಸಿನಿಮಾದಿಂದ ದೇಶ, ವಿದೇಶದಲ್ಲೂ ಹೆಸರು ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ 2023ನೇ ಸಾಲಿನ ಪ್ರಭಾವಿಗಳ ಪಟ್ಟಿಯಲ್ಲಿ ರಾಜಮೌಳಿ- ಶಾರುಖ್ ಖಾನ್ ಹೆಸರು ಇರುವುದು ಭಾರತೀಯರಿಂದ ಹೆಮ್ಮೆಯ ವಿಷಯವಾಗಿದೆ.
ಟಾಲಿವುಡ್ ಬ್ಯೂಟಿ ನಟಿ ಸಮಂತಾ ರುತ್ ಪ್ರಭು ನಟನೆಯ ‘ಶಾಕುಂತಲಂ’ ಸಿನಿಮಾ ತೆರೆಕಂಡಿದ್ದು ಉತ್ತಮ ಒಪನಿಂಗ್ಸ್ ಪಡೆದುಕೊಂಡಿದೆ. ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಸಮಂತಾ ಕೊಂಚ ಚೇತರಿಸಿಕೊಂಡಿದ್ದು ಈ ಮಧ್ಯೆ ಸಿನಿಮಾ ರಿಲೀಸ್ ಮಾಡಲಾಗಿದೆ. ಸಮಂತಾ ಸಿನಿಮಾ ರಿಲೀಸ್ ಗೂ ಮುನ್ನಾ ದಿನ ನಟ ವಿಜಯ್ ದೇವರಕೊಂಡ ಸಿನಿಮಾಗೆ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ ಸಮಂತಾರನ್ನು ಹಾಡಿಹೊಗಳಿದ್ದಾರೆ. ಸಮಂತಾಗೆ ಸಿನಿಮಾ ಬಗೆಗಿರುವ ಪ್ರೀತಿಯನ್ನು ಮನಮುಟ್ಟುವಂತೆ ಬರೆದಿರುವ ದೇವರಕೊಂಡ, ‘ನೀನೊಬ್ಬ ನಿಜವಾದ ಹೋರಾಟಗಾರ್ತಿ’ ಎಂದಿದ್ದಾರೆ. ‘ಪ್ರತಿ ಶಾಟ್ ಇದ್ದಾಗಲೂ ಇದೇ ನನ್ನ ಕೊನೆಯ ಸಿನಿಮಾ ಎನ್ನುವಂತೆ ನಟಿಸುತ್ತೀರಿ’ ಎಂದು ಆಡಿದ ಮಾತು ಸಮಂತಾರ ವೃತ್ತಿಬದ್ಧತೆಗೆ ಸಾಕ್ಷಿಯಾಗಿದೆ. ‘ನೀವು ಯಾವಾಗಲೂ ಪ್ರೀತಿಯಿಂದ ತುಂಬಿರುತ್ತೀರಿ. ನೀವು ಅಂದುಕೊಂಡಿದ್ದನ್ನೇ ಮಾಡುತ್ತೀರಿ. ಸದಾ ಬೇರೆಯವರನ್ನು ಹುರಿದುಂಬಿಸುತ್ತೀರಿ. ಸದಾ ಉತ್ತಮವಾದದನ್ನೇ ಕೊಡುವ ನಿಮ್ಮ ಗುಣಕ್ಕೆ ಎಲ್ಲರೂ ಮನಸೋಲುತ್ತಾರೆ. ನಿಮ್ಮ ಶಾಕುಂತಲಂ ಸಿನಿಮಾ ಗೆಲ್ಲಲಿ’ ಎಂದು ಶುಭ ಹಾರೈಸಿದ್ದು, ವಿಜಯ್ ಟ್ವೀಟ್ ಗೆ ಸಮಂತಾ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ನಿಮ್ಮ…
ಏ.14ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಹೊಂಬಾಳೆ ಸಂಸ್ಥೆ ಕೆಜಿಎಫ್ ಪಾರ್ಟ್ 3 ಬರುವುದಾಗಿ ಘೋಷಿಸಿದೆ. ಈ ಸಂಭ್ರಮದಲ್ಲಿ ನಟಿ, ಯಶ್ ಪತ್ನಿ ರಾಧಿಕಾ ಪಂಡಿತ್ ರಾಕಿ ಜೊತೆಗಿನ ವಿಶೇಷ ವೀಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ರಾಧಿಕಾ ಕೆಜಿಎಫ್ 2 ಸೆಟ್‌ಗೆ ಆಗಮಿಸಿದ ಹಳೆಯ ವೀಡಿಯೋವನ್ನ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಪಾರ್ಟ್ 1 2018ರಲ್ಲಿ ತೆರೆಕಂಡಿತ್ತು. ಚಿತ್ರ ರಿಲೀಸ್ ಆದ ನಾಲ್ಕು ವರ್ಷಗಳ ಬಳಿಕ ಎರಡನೇ ಚಾಪ್ಟರ್ ಬಂತು. ಈ ಸಿನಿಮಾ ಕೆಲಸ ವಿಳಂಬ ಆಗಲು ಕೊವೀಡ್ ಕೂಡ ಕಾರಣ ಆಗಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರ ರಿಲೀಸ್ ಆಗಿ ಈ ಏ.14ಕ್ಕೆ ಒಂದು ವರ್ಷ ಪೂರೈಸಿದೆ. ರಾಕಿ ಭಾಯ್- ರೀನಾ ಜೋಡಿ, ಸಂಜಯ್ ದತ್- ರಾಕಿ ಕಾಳಗ, ರವೀನಾ ಟಂಡನ್ ನಟನೆ ಇವೆಲ್ಲವೂ ಸಿನಿಮಾಗೆ ಸಕ್ಸಸ್‌ಗೆ ಪ್ಲಸ್ ಆಗಿತ್ತು. ಹೊಂಬಾಳೆ ಸಂಸ್ಥೆ ಕೂಡ ಈ ಸಿನಿಮಾವನ್ನ ಅದ್ದೂರಿ…
ಬಾಲಿವುಡ್ ನಟಿ ಕಂಗನಾ ರಣಾವತ್ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದದ ಹೇಳಿಕೆಗಳ ಮೂಲಕವೇ ಸುದ್ದಿಯಾಗೋ ಕಂಗನಾ ಈ ಭಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತನ್ನ ಅಣ್ಣ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಎನ್ ಕೌಂಟರ್ ಕಾರಣದಿಂದಾಗಿ ಸಖತ್ ಸುದ್ದಿ ಆಗುತ್ತಿದ್ದಾರೆ. ಗ್ಯಾಂಗ್ ಸ್ಟರ್ ಗಳಿಗೆ ಸಿಂಹಸ್ವಪ್ನವಾಗಿರುವ ಯೋಗಿ ಆದಿತ್ಯನಾಥ್ ರೌಡಿಗಳ ಹೆಡೆಮೂರಿ ಕಟ್ಟಿ ಜೈಲಿಗೆ ಅಥವಾ ಸ್ಮಶಾನಕ್ಕೆ ಕಳುಹಿಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಉತ್ತರ ಪ್ರದೇಶವನ್ನು ರೌಡಿಗಳಿಂದ ಮುಕ್ತಗೊಳಿಸುತ್ತೇನೆ ಎಂದು ಹೊರಟಿರುವ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ಬಾಯ್ತುಂಬಾ ಹೊಗಳಿದ್ದಾರೆ. ಯೋಗಿ ಕೈಗೊಂಡಿರುವ ಈ ಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿರುವ ಕಂಗನಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರ. ಅವರನ್ನು ನನ್ನಷ್ಟು ಪ್ರೀತಿಸುವವರೂ ಯಾರೂ ಇಲ್ಲ’ ಎಂದಿದ್ದಾರೆ. ಇತ್ತೀಚೆಗೆ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಮಗ ಅಸದ್ ಮತ್ತು ಆತನ ಸಹಚರರನ್ನು ಉತ್ತರ ಪ್ರದೇಶದ…
ಕೋಲ್ಕತ್ತಾ: ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ (Harry Brook) ಅವರ ಸ್ಫೋಟಕ ಶತಕದಿಂದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ 23 ರನ್‌ಗಳ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 228 ರನ್ ಹೊಡೆಯಿತು. 229 ರನ್‌ಗಳ ಸವಾಲು ಪಡೆದ ಕೋಲ್ಕತ್ತಾ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಕೋಲ್ಕತ್ತಾ 30 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ನಾಯಕ ನಿತೀಶ್ ರಾಣಾ (Nitish Rana) ಮತ್ತು ರಿಂಕು ಸಿಂಗ್ (Rinku Singh) ಸ್ಫೋಟಕ ಆಟವಾಡಿದರು. ರಾಣಾ 75 ರನ್(41 ಎಸೆತ, 5 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು. ಕೊನೆಯವರೆಗೂ ಹೋರಾಡಿದ ರಿಂಕು ಔಟಾಗದೇ 58 ರನ್(31 ಎಸೆತ, 4 ಬೌಂಡರಿ, 4 ಸಿಕ್ಸರ್) ಚಚ್ಚಿದ್ದರು. ಕೊನೆಯ 24 ಎಸೆತದಲ್ಲಿ ಕೋಲ್ಕತ್ತಾ ಗೆಲ್ಲಲು 70 ರನ್‌ಗಳ ಅವಶ್ಯಕತೆಯಿತ್ತು.…
ಕಬ್ಜ ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಗುಡ್ ನ್ಯೂಸ್ ನೀಡುವುದಾಗಿ ಹೇಳಿದ್ದ ನಿರ್ದೇಶಕ ಆರ್ ಚಂದ್ರು ಕೊಟ್ಟ ಮಾತಿನಂತೆ ಶುಭ ಸುದ್ದಿ ನೀಡಿದ್ದಾರೆ. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಚಂದ್ರು, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇಂದಿನಿಂದ ‘ಕಬ್ಜ 2’ ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ಹೇಳುವ ಮೂಲಕ ಚಂದ್ರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರಲಿದ್ದು, ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದೆಯಂತೆ. ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದು, ಸದ್ಯ ಚಂದ್ರು ಕಥೆ ಬರೆಯುವುದರಲ್ಲಿ ತೊಡಗಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು…
ಪ್ರತಿ ಬಾರಿ ಮನೆಗೆ ಬ್ರೆಡ್ ತಂದಾಗ ಅದರಲ್ಲಿ ಕೆಲ ತುಂಡುಗಳು ಉಳಿದು ಹೋಗೋದು ಸರ್ವೇ ಸಾಮಾನ್ಯ. ಯಾವಾಗಲೂ ಸ್ಯಾಂಡ್‌ವಿಚ್ ತಿನ್ನೋದು ಬೋರ್ ಅಂತ ಎನಿಸಬಹುದು. ಹಾಗಿದ್ರೆ ಈಗ ಉಳಿದುಹೋಗಿರೋ ಬ್ರೆಡ್ ಅನ್ನು ಏನು ಮಾಡೋದು? ಹಾಳಾಗೋಕೂ ಮುನ್ನ ಬ್ರೆಡ್ ಅನ್ನು ಸುಮ್ನೆ ಎಸೆಯೋಕೆ ಯಾರಿಂದ್ಲೂ ಮನಸು ಬರಲ್ಲ. ಹಾಗಿದ್ರೆ ಉಳಿದು ಹೋಗಿರೋ ಬ್ರೆಡ್‌ನಿಂದ ಈ ರೆಸಿಪಿಯನ್ನು ನೀವು ಟ್ರೈ ಮಾಡ್ಬೋದು. ಉಳಿದುಹೋದ ಬ್ರೆಡ್‌ನಿಂದ ಈ ರುಚಿಕರ ವಡೆ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ. ಬೇಕಾಗುವ ಪದಾರ್ಥಗಳು: ರವೆ – 3 ಟೀಸ್ಪೂನ್ ಮೊಸರು – 1 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2 ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್ ಕತ್ತರಿಸಿದ ಕರಿಬೇವಿನ ಎಲೆ – ಕೆಲವು ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್ ಜೀರಿಗೆ – 2 ಟೀಸ್ಪೂನ್ ಉಪ್ಪು –…
ಬೀಜಿಂಗ್ : ‘ಉಕ್ರೇನ್- ರಷ್ಯಾ ಯುದ್ಧದಲ್ಲಿ ಉಭಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಚೀನಾ ಬಯಸುವುದಿಲ್ಲ’ ಎಂದು ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಲ್ಲಿ ಚೀನಾ, ಸೇನಾ ನೆರವು ನೀಡಬಹುದೆಂಬ ಪಶ್ಚಿಮದ ರಾಷ್ಟ್ರಗಳ ಕಳವಳಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ರಷ್ಯಾವನ್ನು ಆರ್ಥಿಕ ಮತ್ತು ರಾಜಕೀಯವಾಗಿ ಬೆಂಬಲಿಸುತ್ತಿದ್ದರೂ ಈ ಸಂಘರ್ಷದಲ್ಲಿ ಮಾತ್ರ ಚೀನಾ ತಟಸ್ಥ ನಿಲುವು ತಳೆದಿದೆ ಎಂದಿದ್ದಾರೆ. ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇನಾ ಮತ್ತು ನಾಗರಿಕ ಬಳಕೆಯ ವಸ್ತುಗಳ ರಫ್ತಿನಲ್ಲಿ ಚೀನಾ ವಿವೇಕ ಮತ್ತು ಜವಾಬ್ದಾರಿಯುತ ಮನೋಭಾವ ಅಳವಡಿಸಿಕೊಂಡಿದೆ. ಸಂಘರ್ಷದಲ್ಲಿ ತೊಡಗಿರುವ ಉಭಯ ರಾಷ್ಟ್ರಗಳಿಗೆ ಚೀನಾ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲ. ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಉಭಯ ಬಳಕೆಯ ವಸ್ತುಗಳ ರಫ್ತು ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತದೆ ಎಂದು ತಿಳಿಸಿದರು.
ಲಂಡನ್ : ಕೋವಿಡ್-19 ವೈರಸ್ ಪ್ರಾಣಿಗಳಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಚೀನಾದ ಕಾಯಿಲೆ ನಿಯಂತ್ರಣ ಮತ್ತು ನಿರ್ವಹಣೆ ಕೇಂದ್ರದ ಮಾಜಿ ಮುಖ್ಯಸ್ಥ ಜಾರ್ಜ್ ಗಾವ್ ತಿಳಿಸಿದ್ದಾರೆ. ‘ಸಾಂಕ್ರಾಮಿಕಕ್ಕೆ ಪೂರ್ವಸಿದ್ಧತೆ’ ವಿಷಯ ಕುರಿತಂತೆ ಲಂಡನ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೆಲವು ಪ್ರಾಣಿಗಳೇ ಸೋಂಕಿಗೆ ಕಾರಣ ಎಂದು ಈಗಲೂ ಜನರು ಯೋಚಿಸುತ್ತಾರೆ. ಆದರೆ ಯಾವ ಪ್ರಾಣಿಯಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ’. ‘ವೈರಸ್ ಮೂಲ ಯಾವುದು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಕುರಿತ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಚೀನಾ ಸರ್ಕಾರ ಘೋಷಿಸಿದೆ’ ಎಂದು ಹೇಳಿದರು. 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಸ್ ಪತ್ತೆಯಾದಾಗ ಜಾರ್ಜ್ ಗಾವ್ ಸಿಡಿಸಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.