ಫಿಶ್ ಫ್ರೈ ಅಂದ್ರೆ ಸಾಕು ನಾನ್‌ವೆಜ್ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಅದೇ ರುಚಿ ನೀಡುವ ಬಾಳೆಕಾಯಿ ರವಾ ಫ್ರೈ ಎಂದಾದರೂ ಕೇಳಿದ್ದೀರಾ ಅಥವಾ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಒಂದು ಸಲ ಟ್ರೈ ಮಾಡಿ ನೋಡಿ. ಅದರಲ್ಲೂ ಮಳೆ ಬರುವಾಗ ಜಿಡಿ ಜಿಡಿ ಮಳೆ ಸುರಿವಾಗ ಚಹಾದ ಜೊತೆ ಬಿಸಿ ಬಿಸಿಯಾಗಿ ಇದನ್ನು ತಿನ್ನುವ ಮಜನೇ ಬೇರೆ. ಹಾಗಾದ್ರೆ ಇದನ್ನ ಹೇಗೆ ಮಾಡೋದು ಅಂತ ನೋಡೋಣ ಬನ್ನಿ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು: ಬಾಳೆಕಾಯಿ – 2 ಅಚ್ಚಖಾರದ ಪುಡಿ – 2 ಚಮಚ ದನಿಯಾ ಪುಡಿ – ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ ನಿಂಬೆ ರಸ – ಒಂದು ಚಮಚ ಅಕ್ಕಿ ಹಿಟ್ಟು – ಅರ್ಧ ಚಮಚ ನೀರು – ಅಗತ್ಯಕ್ಕೆ ತಕ್ಕಷ್ಟು ಚಿರೋಟಿ ರವೆ – 1 ಕಪ್ ಅರಶಿಣ ಪುಡಿ – ಕಾಲು ಚಮಚ ಗರಂ ಮಸಾಲ – ಕಾಲು ಚಮಚ…
Author: Prajatv Kannada
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ದೇಶದ ಉನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ವಶಕ್ಕೆ ಎಂಟು ದಿನಗಳ ಕಾಲ ನೀಡಿ ಆದೇಶ ಹೊರಡಿಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ನ್ಯಾಯಾಲಯಕ್ಕೆ 10 ದಿನಗಳ ಕಸ್ಟಡಿ ನೀಡುವಂತೆ ನ್ಯಾಷನಲ್ ಅಕೌಂಟಬಿಲಿಟಿ (NAB) ಮನವಿ ಮಾಡಿತ್ತು. ನಿನ್ನೆ ಇಸ್ಲಾಮಾಬಾದ್’ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಖಾನ್ ಬಂಧಿಸಲಾಯಿತು. ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಶೇಷವಾಗಿ ಕರೆಯಲಾದ ನ್ಯಾಯಾಲಯದಲ್ಲಿ ಹಾಜರಾಗುವ ಮೊದಲು ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು. ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ಶೌಚಾಲಯವನ್ನ ಬಳಸಲು ಸಹ ಅವಕಾಶ ನೀಡಲಿಲ್ಲ ಎಂದು ಇಮ್ರಾನ್ ಖಾನ್ ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.
ಚೆನ್ನೈ: DMK ಫೈಲ್ಸ್ ರಿಲೀಸ್ ಮಾಡಿದ್ದು ಭ್ರಷ್ಟಾಚಾರದ ಆರೋಪ ಹೊರಿಸಿದ್ದ ರಾಜ್ಯ ಬಿಜೆಪಿ (BJP) ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ತಮಿಳುನಾಡು ಸರ್ಕಾರವು (Tamil Nadu Government) ಬುಧವಾರದಂದು ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಅಣ್ಣಾಮಲೈ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಮಾನಹಾನಿ ಪ್ರಚೋದನೆ ಮಾಡುತ್ತಿದ್ದಾರೆಂದು ಪಕ್ಷ ಆರೋಪಿಸಿದೆ. 2011ರಲ್ಲಿ ಚೆನ್ನೈ ಮೆಟ್ರೋ ಒಪ್ಪಂದವನ್ನು ಸರಿಪಡಿಸಲು MK ಸ್ಟಾಲಿನ್‌ಗೆ 200 ಕೋಟಿ ರೂ. ನೀಡಲಾಗಿದೆ ಎಂದು ಅಣ್ಣಾಮಲೈ ಇತ್ತೀಚೆಗೆ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ನಾಯಕರು 1.34 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವನ್ನೂ ಭ್ರಷ್ಟಾಚಾರದ ಮೂಲಕ ಗಳಿಸಿದ್ದಾರೆ ಅಲ್ಲದೇ ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರು ರಾಜ್ಯದಲ್ಲಿಯೇ ಹೂಡಿಕೆ ಮಾಡುತ್ತಿರುವ ದುಬೈ ಕಂಪನಿಯ ನಿರ್ದೇಶಕರು ಎಂದು ಅಣ್ಣಾಮಲೈ ಆರೋಪಿಸಿದ್ದರು. ಈ ಬಗ್ಗೆ ವಾಗ್ದಾಳಿ ನಡೆಸಿರುವ DMK ವಕ್ತಾರ ಟಿಕೆಎಸ್ ಇಳಂಗೋವನ್, ಅಣ್ಣಾಮಲೈ ಅವರಿಗೆ ತಕ್ಕ ಶಿಕ್ಷೆ ನೀಡುವುದೇ ಉತ್ತಮ ಕ್ರಮ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್…
ಬೀದರ್ (ಮೇ.10): ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ನಗರದ ಒಲ್ಡ್ ಸಿಟಿಯ (ಮನಿಯಾರ್ ತಾಲಿಮ್) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಕಟ್ಟಡದಲ್ಲಿನ ಮತಗಟ್ಟೆಯಲ್ಲಿ ಬುಧವಾರ ಸಂಜೆ ಧರ್ಮಪತ್ನಿ ನಳಿನಿ ಖಾಶೆಂಪುರ್ ರವರೊಟ್ಟಿಗೆ ಮತದಾನ (ಮತ ಚಲಾವಣೆ) ಮಾಡಿದರು.
ದಾವಣಗೆರೆ: ದಾವಣಗೆರೆಯ (Davanagere) ಬಹುತೇಕ ಕಡೆಗಳಲ್ಲಿ ಗುಡುಗು – ಮಿಂಚು ಸಹಿತ ತುಂತುರು ಮಳೆ (Rain) ಸುರಿದು ಮತದಾನ (Voting) ಪ್ರಕ್ರಿಯೆಗಳಿಗೆ ಸ್ವಲ್ಪ ಅಡಚಣೆ ಉಂಟಾಯಿತು. ದಾವಣಗೆರೆಯಲ್ಲಿ ಬೆಳಗ್ಗೆಯಿಂದ ಬಿಸಿಲಿದ್ದು, ಏಕಾಏಕಿ ಮಳೆ ಪ್ರಾರಂಭವಾಗಿದೆ. ಕಳೆದ 30 ನಿಮಿಷಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ತುಂತುರು ಮಳೆಯಿಂದ ಮತದಾನ ಮಾಡಲು ತೊಂದರೆಯಾಗುತ್ತಿದೆ. ಇದರ ಮಧ್ಯೆ ಜನರು ಮಳೆಯಲ್ಲಿಯೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಗುಡುಗು ಮಿಂಚು ಹೆಚ್ಚಾದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರುತ್ತಿಲ್ಲ. ಇನ್ನೇನು ಮತದಾನ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಸಮಯ ಸಮೀಪಿಸಿದ್ದು, ಮಳೆ ನಿಂತರೆ ಮತದಾನಕ್ಕೆ ಅನುಕೂಲವಾಗಲಿದೆ. ಒಂದು ವೇಳೆ ಮಳೆ ಹೆಚ್ಚಾದರೆ ಮತದಾನಕ್ಕೆ ಅಡ್ಡಿಯುಂಟಾಗುವ ಆತಂಕ ಹೆಚ್ಚಾಗಿದೆ
ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಅವಧಿ ಅಂತ್ಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. 224 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದೆ. ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.. ಹಲವು ಕಡೆಗಳಲ್ಲಿ ಇನ್ನೂ ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದು, ಚುನಾವಣಾ ಅಧಿಕಾರಿಗಳ ಅನುಮತಿ ನಂತರ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಅವಕಾಶ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುಲಾಗುವುದು ಎನ್ನಲಾಗಿದೆ. ಈ ಬಾರಿ ಕೂಡ ಬೆಂಗಳೂರಿನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಬೆಂಗಳೂರಿನ ಮತದಾರರ ನೈತಿಕತೆಯನ್ನು ಪ್ರಶ್ನೆ ಮಾಡುವಾಂತಾಗಿದೆ ಅಂತ ಹಲವು ಮಂದಿ ಪ್ರಶ್ನೆಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ ಇಂದು ಸಂಜೆ 5 ಗಂಟೆ ಹೊತ್ತಿಗೆ ಶೇ 70.69% ಮತದಾನವಾಗಿದೆ ಅಂತ ತಿಳಿಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಅಂತಿಮ ಮತದಾನದ ಶೇಕಡವಾರು ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿಯನ್ನು ನೀಡಲಿದ್ದಾರೆ. ಇಂದು…
ಮಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಮಾಡಿಕೊಟ್ಟಿದ್ದರು ಕೂಡ, ಕೆಲವು ಶತಾಯುಷಿಗಳು ಮತಗಟ್ಟೆಗೆ ಬಂದು, ಮತದಾನ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಗೌಡರ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ. ಮತಗಟ್ಟೆಯಲ್ಲೆ ಬಂದು ಮತದಾನ ಮಾಡಬೇಕೆಂದು ಇಚ್ಚೆ ಪಟ್ಟ ಶತಾಯುಷಿ ಕಮಲಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಅಲ್ಲದೇ, ತಾನು ಗಟ್ಟಿಮುಟ್ಟಾಗಿದ್ದೇನೆ, ನನಗೆ ಮನೆಯಲ್ಲೇ ಕುಳಿತು ಓಟ್ ಮಾಡುವ ಅವಶ್ಯಕತೆ ಇಲ್ಲ. ನಾನು ಮತಗಟ್ಟೆಗೇ ಬಂದು ಮತ ಚಲಾಯಿಸುತ್ತೇನೆ ಎಂದು ಹೇಳಿ, ಮತ ಚಲಾಯಿಸಿದ್ದಾರೆ.ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.ಮಕ್ಕಳಾದ ಶ್ರೀನಿವಾಸ್ ಗೌಡ ರು,ವೆಂಕಟೇಗೌಡ, ಮುಮ್ಮಗ ಕಶ್ವಿನ್ ಗೌಡ ಇದ್ದರು
ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಬರದಂತೆ ಪೊಲೀಸರಿಂದ ಜನರಿಗೆ ಅಡ್ಡಿ ಪಡಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅದರ ಭಾಗವಾಗಿ ಇಂದು ಪುಲಿಕೇಶಿ ನಗರದಲ್ಲಿ ಶುದ್ಧ ಕುಡಿಯುವ ನೀರು ತರಲು ಸ್ಥಳೀಯರು ಬಂದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ಮತಗಟ್ಟೆ ಇದೆ ಯಾರೂ ಬರಬೇಡಿ ಎಂದು ಪೋಲೀಸರು ಹೇಳುತ್ತಿದ್ದು, ಕುಡಿಯುವ ನೀರು ತಗೊಂಡ್ ಹೋಗಲು ಯಾಕೆ ಅಡ್ಡಿ ಪಡಿಸ್ತೀರಾ ಎಂದು ಜನರು ಗಲಾಟೆ ಮಾಡಿದ್ದಾರೆ. ಜನ ಸೇರುವಂತಿಲ್ಲ ಎಂದು ಪೋಲಿಸರು ಜನರಿಗೆ ತಿಳಿಹೇಳುವ ಪ್ರಯತ್ನ ನಡೆಸಿದರೂ ಸ್ಥಳೀಯರು ಪೊಲೀಸರ ನಡುವೆ ವಾಗ್ವಾದಕ್ಕೆ ಇಳಿದರು. ಕಡೆಗೆ ಗಾಡಿಗಳನ್ನು ದೂರ ನಿಲ್ಲಿಸಿ, ನೀರು ಹಿಡಿದುಕೊಂಡು ಹೋಗಲು ಪೊಲೀಸರು ವ್ಯವಸ್ಥೆ ಮಾಡಿಕೊಟ್ಟರು. ಅದರಂತೆ ಸ್ಥಳೀಯರು ನೀರು ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಂತೋಷ್ ಹೆಗಡೆ ಅವರು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ನನ್ನ ಪ್ರಜಾಪ್ರಭುತ್ವ ದ ಜವಾಬ್ದಾರಿ ನಿಭಾಯಿಸಿದ್ದೇನೆ. ಮತ ಹಾಕೋದ್ರಿಂದ ಏನಾಗುತ್ತೆ ಅನ್ನೋ ಭಾವನೆ ಕೆಲವರಲ್ಲಿ ಇದೆ. ಅದು ತಪ್ಪು. ಬಾಷೆ, ಜಾತಿ ಆಧಾರದಲ್ಲಿ ಯಾರೂ ಮತ ಹಾಕಬೇಡಿ. ನಾನು ಮತ ಹಾಕಿದ ಅಭ್ಯರ್ಥಿ ಕೆಲಸ ಮಾಡ್ತಾನಾ ಅಂತ ನೋಡಿ ಮತ ಹಾಕಿ. ಅಂತಹ ಅಭ್ಯರ್ಥಿ ಕಾಣದೇ ಇದ್ರೆ ನೋಟಾಗಾದ್ರೂ ಮತ ಹಾಕಿ. ಯುವಕರು ಚುನಾವಣೆಯ ಅಗತ್ಯ ಅರಿತು ಮತದಾನ ಮಾಡಿ ಎಂದು ಸಂತೋಷ್ ಹೆಗಡೆ ಅವರು ಮನವಿ ಮಾಡಿದ್ದಾರೆ. ಇನ್ನೂ 2023 ರ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಬೆಂಗಳೂರು: ನನ್ನ ಹೆಸರಲ್ಲಿ ಬೇರೆ ಯಾರೋ ವೋಟ್ ಮಾಡಿದ್ದಾರೆಂದು ಯುವಕ ಆಕ್ರೋಶ ಹೊರ ಹಾಕಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸಯ್ಯದ್ ಪಹಾದ್ ಪುಲಕೇಶಿ ವಿಧಾನಸಭಾ ಕ್ಷೇತ್ರದ ಮತದಾರನಾಗಿದ್ದು, ವೋಟ್ ತಪ್ಪಿರುವ ಹಿನ್ನೆಲೆ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಮತದಾನ ಮಾಡಲು ಮತಕೇಂದ್ರಕ್ಕೆ ಬಂದಾಗ, ನಿನ್ನ ಓಟ್ ಈಗಾಗಲೇ ಆಗಿದೆ ಎಂದು ಎಲೆಕ್ಷನ್ ಆಫೀಸರ್ ವಾಪಸ್ ಕಳಿಸಿದ್ದಾರೆ. ಇವರು ಯಾವ ರೀತಿ ಪರಿಶೀಲನೆ ಮಾಡ್ತಿದಾರೆ. ವೋಟರ್ ಐಡಿ, ವೋಟರ್ ಸ್ಲಿಪ್ ನನ್ನತ್ರ ಇದೇ. ನನ್ನ ಓಟ್ ನನಗೆ ಬೇಕು ಇದು ನನ್ನ ಹಕ್ಕು. ದಯವಿಟ್ಟು ನನಗೆ ಮತದಾನ ಮಾಡಲು ಅವಕಾಶ ಮಾಡಿ ಕೊಡಿ ಎಂದು ಯುವಕ ಆಕ್ರೋಶ ಹೊರ ಹಾಕಿದ್ದಾರೆ.