ಬೆಂಗಳೂರು: ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ ಆರು ಗಂಟೆಯವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. (Karnataka Assembly Election)ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ನೆ ಜಾರಿ ಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿಯುತ ಮತದಾನದ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಸಿಲಾಗಿದೆ. ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆ ಸಮಯದಲ್ಲಿ ಐದು ಜನರಿಗೆ ಮೇಲ್ಪಟ್ಟು ಗುಂಪು ಸೇರುವಂತಿಲ್ಲ, ಮತದಾನ ಕೇಂದ್ರದಲ್ಲಿ ಮತದಾರರು ಹೊರತುಪಡಿಸಿ ಉಳಿದವರು ಸೇರುವಂತಿಲ್ಲ, ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ನಡೆಸುವಂತಿಲ್ಲ, ಮನೆ ಮೆನೆಗೆ ತೆರಳಿ ಪ್ರಚಾರ ನಡೆಸಲು 10 ಜನರಿಗೆ ವಿನಾಯಿತಿಗೊಳಿಸಿ ಆದೇಶ ನೀಡಲಾಗಿದೆ. ಈ ಅವಧಿಯಲ್ಲಿ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಕಾರ್ಯಾಚರಣೆ ಅಧಿಕಾರಿಗಳಿಗೆ ಅನ್ವಹಿಸತಕ್ಕದಲ್ಲ ಎಂದು ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ.…
Author: Prajatv Kannada
ಬೆಂಗಳೂರು: ಬಂಗಾಲಕೊಲ್ಲಿಯಲ್ಲಿ ಸುಳಿಗಾಳಿ ಉಂಟಾದ ಪರಿಣಾಮ ನಾಳೆ (ಮೇ 10ರಂದು) ಚಂಡಮಾರುತ (Cyclone) ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ಬೆಂಗಳೂರು (Bangalore Rain) ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗಲಿದೆ (Karnataka Rain) ಎಂದು ಹವಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹವಮಾನ ಇಲಾಖೆ ತಜ್ಞ ಎ ಪ್ರಸಾದ್, ಗಾಳಿದಿಕ್ಕಿನಲ್ಲಿ ಸಮುದ್ರಮಟ್ಟದಿಂದ 1.5 ಕಿಲೋ ಮೀಟರ್ನಷ್ಟು ಸುಳಿ ಉಂಟಾಗಿದೆ. ಜೊತೆಗೆ ತೀವ್ರವಾದ ವಾಯುಭಾರ ಕುಸಿತವಾಗಿದೆ. ಇದರ ಪ್ರಭಾವದಿಂದಾಗಿ ನಾಳೆ ಚಂಡಮಾರುವಾಗುವ ಸಾಧ್ಯಾತೆ ಇದೆ ಎಂದು ಎಚ್ಚರಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದ ರಾಜ್ಯ – ರಾಜಧಾನಿಯಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದು (ಮೇ 9) ಕಾರವಳಿ ಭಾಗದ ಉತ್ತರ ಕನ್ನಡ, ದಕ್ಷಣ ಕನ್ನಡ ಜಿಲ್ಲೆಗಳಿಗೆ ಮಳೆ ಇದ್ದು, ಇಂದು ಎರಡು ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ನೀಡಿಲಾಗಿದೆ. ಇನ್ನು, ದಕ್ಷಣ ಒಳನಾಡಿನ ಕೊಡಗು, ಹಾಸನ್ , ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟು ಮೂರು ದಿನಗಳಿಗೆ ಯಲ್ಲೋ ಅಲರ್ಟ್…
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ (2nd PUC) ಪೂರಕ ಪರೀಕ್ಷೆ (Exam) ವೇಳಾಪಟ್ಟಿ ಪರಿಷ್ಕರಣೆಗೊಳಿಸಿದೆ. ಈ ಹಿಂದೆ ಬಿಡುಗಡೆಗೊಳಿಸಿದ್ದ ದಿನಾಂಕ ಬದಲಾವಣೆ ಮಾಡಿದ ಮಂಡಳಿಯು ಇದೀಗ ಹೊಸದಾಗಿ ಪ್ರಕಟಣೆಯನ್ನು ಹೊರಡಿಸಿದೆ. ಪರಿಷ್ಕೃತ ಪೂರಕ ಪರೀಕ್ಷೆ ವೇಳಾಪಟ್ಟಿಯ ಪ್ರಕಾರ ಮೇ 23 ರಿಂದ ಜೂನ್ 3 ವರೆಗೆ ಪರೀಕ್ಷೆ ನಿಗದಿಯಾಗಿದೆ. ಪರಿಷ್ಕೃತ ಪೂರಕ ಪರೀಕ್ಷೆ ವೇಳಾಪಟ್ಟಿ: ಮೇ 23- ಕನ್ನಡ, ಅರೇಬಿಕ್ ಮೇ 24- ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ. ಮೇ 25- ಇಂಗ್ಲೀಷ್ ಮೇ 26- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ. ಮೇ 27- ಇತಿಹಾಸ, ಸಂಖ್ಯಾಶಾಸ್ತ್ರ ಮೇ 29- ಹಿಂದಿ. ಮೇ 30- ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ ಮೇ 31- ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ ಜೂನ್ 1- ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ ಜೂನ್ 2- ತರ್ಕಶಾಸ್ತ್ರ, ಹಿಂದುಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ. ಜೂನ್ 3- ಅರ್ಥಶಾಸ್ತ್ರ, ಜೀವಶಾಸ್ತ್ರ
ಬೆಂಗಳೂರು: ಮತಗಟ್ಟೆ ತರಬೇತಿಯಲ್ಲಿ (polling booth training) ಉದ್ಧಟತನ ಆರೋಪ ಹಿನ್ನೆಲೆ ಮಹಿಳಾ ಇನ್ಸ್‍ಪೆಕ್ಟರ್ ಅಮಾನತು (suspended) ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯಿಂದ ಆದೇಶ ಹೊರಡಿಸಲಾಗಿದೆ. ಭವ್ಯಾ ಅಮಾನತುಗೊಳಗಾದ ಮಹಿಳಾ ಇನ್ಸ್‍ಪೆಕ್ಟರ್. ಮಂಗಳವಾರ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಇನ್ಸ್‍ಪೆಕ್ಟರ್ ಭವ್ಯ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ. ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ. ಆದರೆ ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ ಎಂದಿದ್ದಾರೆ.
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election)ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್‌ಗಳು ಘೋಷಣೆ ಮಾಡಿ ಕೊಂಡಿದ್ದರು. ಆದರೆ, ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗದಿಂದ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರ್ಜರಿ ಮತದಾನ ಜಾಗೃತಿ ಮೂಡಿಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಾಥ್ ನೀಡಲು ಹೋಟೆಲ್ ಮಾಲೀಕರ ಸಂಘವೂ ನಿರ್ಧರಿಸಿತ್ತು. ಬೆಂಗಳೂರಿನ ನಿಸರ್ಗ ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ ಹಾಗೂ ಊಟ ಕೊಡುವುದಾಗಿ ಘೋಷಣೆ ಮಾಡಿ ಸಿದ್ಧತೆಯನ್ನೂ ಮಾಡಿಕೊಂಡಿದ್ದವು. ಆದರೆ, ಕೊನೇ ಕ್ಷಣದಲ್ಲಿ ಬಿಬಿಎಂಪಿ ಯಾವುದೇ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಉಚಿತ ಊಟ, ತಿಂಡಿ ನೀಡದಂತೆ ನಿಷೇಧ ಜಾರಿಗೊಳಿಸಿ ಆದೇಶಿಸಿದೆ.…
ಬೆಂಗಳೂರು: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಬ್ಬಂದಿಯೊಬ್ಬರು ತನ್ನ ಪುಟ್ಟ ಕಂದಮ್ಮನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿ ಗಮನ ಸೆಳೆದರು. ಮಲ್ಲೇಶ್ವರಂ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ಈ ಮಹಿಳೆಯನ್ನು ನಿಯೋಜಿಸಲಾಗಿತ್ತು. ತನ್ನ ಪುಟ್ಟ ಕಂದಮ್ಮನೊಂದಿಗೆ ಮಹಿಳೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ಕರ್ತವ್ಯದ ಜವಾಬ್ದಾರಿ ಮೆರೆದಿದ್ದಾರೆ. ನಾಳೆ ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳುತ್ತಾರೆ. ನಾವು ಈಗಾಗ್ಲೇ ರೂಟ್ ಮ್ಯಾಪ್ ಫಿಕ್ಸ್…
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ(Karnataka Assembly Election) ಕೌಂಟ್ ಡೌನ್ ಶುರುವಾಗಿದ್ದು, ಹೀಗಾಗಿ ಪಟ್ಟಣಗಳಲ್ಲಿ ವಾಸಿಸಿರುವ ಜನರು ತಮ್ಮ ಹಕ್ಕು ಚಲಾಯಿಸಲು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು, ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಬಸ್ ದರ 800 ರೂ. ಇತ್ತು, ಈಗ 1800ಕ್ಕೆ ಏರಿಕೆಯಾಗಿದೆ. ಅದೇ ರೀತಿ 950ರೂ. ಇದ್ದ ಮಂಗಳೂರು ಟಿಕೆಟ್ ದರ ಇದೀಗ 2200ರೂ. ಆಗಿದೆ. ಶಿವಮೊಗ್ಗ 900ರಿಂದ 2160 ರೂ., ಉಡುಪಿ 900 ರಿಂದ 2200 ರೂ., ಬೆಳಗಾವಿ 1100 ರಿಂದ 2800 ರೂ., ಹಾಸನ 650 ರಿಂದ 2200 ರೂ., ಗೋವಾ 1100 ರಿಂದ 3500 ರೂ., ಚಿಕ್ಕಮಗಳೂರು 700 ರಿಂದ 1500 ರೂ., ಕಲಬುರಗಿ 1400 ರಿಂದ 2500 ರೂ. ಬಾಗಲಕೋಟೆ 1400 ರಿಂದ 2300 ರೂ., ಯಾದಗಿರಿ 1400 ರಿಂದ 1999 ರೂ., ಅಥಣಿ 1400…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್(DK Shivakumar) ಅವರು ಇಂದು ಹನುಮನ ದೇವಾಲಯಕ್ಕೆ ಭೇಟಿ ನೀಡಿದ್ದು, ಬಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿರುವ ಆಂಜನೇಯ ದೇವಾಸ್ಥಾನಕ್ಕೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್ ಅವರು, ಪೂಜೆ ಸಲ್ಲಿಸಿದರು. ಬಜರಂಗದಳ ನಿಷೇಧ(BajrangDal ban) ಮಾಡುವ ಭರವಸೆ ವಿಚಾರ ತಾರಕಕ್ಕೇರಿದ್ದು, ಈ ಬೆನ್ನಲ್ಲೇ ಆಂಜನೇಯನ ದರ್ಶನವನ್ನು(Darshan of Anjaneya) ಡಿಕೆಶಿ ಪಡೆದಿದ್ದಾರೆ. ಇನ್ನೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪೌರ ಕಾರ್ಮಿಕರನ್ನು ಡಿಕೆ ಶಿವಕುಮಾರ್(DK Shivakumar) ಭೇಟಿ ಮಾಡಿದ್ದು, ಕೆಲಸ ಖಾಯಂ ಗೊಳಿಸುವಂತೆ ಡಿಕೆಶಿ ಬಳಿ ಪೌರ ಕಾರ್ಮಿಕರು ಮನವಿ ಮಾಡಿದ್ದಾರೆ. ಈ ವೇಳೆ ಪೌರ ಕಾರ್ಮಿಕರ ಕೈ ಹಿಡಿದು ಡಿಕೆಶಿ ಆಶ್ವಾಸನೆ ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿಮ್ಗೆ ಖಾಯಂ ಗೊಳಿಸುತೇನೆ ಎಂದು ಪೌರಕಾರ್ಮಿಕರಿಗೆ ಆಶ್ವಾಸನೆ ಡಿಕೆಶಿ ಆಶ್ವಾಸನೆ ನೀಡಿದ್ದಾರೆ. ಇನ್ನೂ ಆಂಜನೇಯ ಸಮಾಜದ ಸೇವಕ. ಆಂಜನೇಯನ ಅನುಗ್ರಹ ನಮ್ಮ ಮೇಲೆ ಯಾವಾಗ್ಲೂ ಕೂಡ ಇರುತ್ತೆ. ಇಲ್ಲಿಂದ ಮೈಸೂರಿನವರೆಗೂ ಕೂಡ ಸುಮಾರು 25 ಆಂಜನೇಯ ದೇವಸ್ಥಾನಗಳಿವೆ.…
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Elections) ಬೆಂಗಳೂರು ಸೇರಿ ರಾಜ್ಯದಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅದರಂತೆ ಪೊಲೀಸ್ ಇಲಾಖೆಯಿಂದಲೂ ಸೂಕ್ತ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಅಲೋಕ್ ಕುಮಾರ್(Alok Kumar) ಮಾತನಾಡಿದ್ದು, ರಾಜ್ಯದೆಲ್ಲೆಡೆ 1 ಲಕ್ಷದ 56 ಸಾವಿರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ಕೈಗೊಳ್ಳಲಾಗಿದೆ. 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಲ್ಲಿನ ಪೊಲೀಸ್ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪೆನಿಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, ಆಯುಕ್ತರ ವ್ಯಾಪ್ತಿ ಹಾಗೂ ಜಿಲ್ಲಾ ಕೇಂದ್ರ ವ್ಯಾಪ್ತಿಯ ಜವಾಬ್ದಾರಿಯನ್ನು ಎಸ್ಪಿಗಳಿಗೆ ನೀಡಲಾಗಿದ್ದು, ಚುನಾವಣಾ ನಿಗಾವಹಿಸಲಿದ್ದಾರೆ. ಅದೇ ರೀತಿ, ಚುನಾವಣಾಭದ್ರತೆಗೆ 304 ಡಿವೈಎಸ್ಪಿಗಳು, 991 ಇನ್ಸ್‍ಪೆಕ್ಟರ್ ಗಳು, 2610 ಮಂದಿ ಸಬ್ ಇನ್ಸ್ ಪೆಕ್ಟರ್ ಗಳು, 5803 ಎಎಸ್ಸೈಗಳು 46,421 ಮುಖ್ಯಪೇದೆಗಳು, 27,990 ಮಂದಿಹೋಮ್ ಗಾರ್ಡ್‍ಗಳು ಸೇರಿದಂತೆ84,119 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ. ಹಾಗೇ, 8,500 ಪೊಲೀಸ್ ಅಧಿಕಾರಿ ಸಿಬ್ಬಂದಿಹಾಗೂ ಗೃಹ ಚುನಾವಣಾ ಕರ್ತವ್ಯಕ್ಕೆ ಪಡೆಯಲಾಗಿದೆ. ಇದರ…
ರಾಜ್ಯದಲ್ಲಿ ಸದ್ಯ ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ(Karnataka Assembly Elections 2023). ಆದ್ರೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮತ ಚಲಾಯಿಸುವುದೇ ದೊಡ್ಡ ಸವಾಲು. ನೀವು ಅನಿವಾಸಿ ಭಾರತೀಯರಾಗಿದ್ದರೆ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಯಸಿದರೆ, ಇನ್ನು ಚಿಂತಿಸಬೇಡಿ. ದಾಖಲಾತಿ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಸರಳವಾಗಿದೆ. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನೀವು ವಿದೇಶದಲ್ಲಿ ನೆಲೆಸಿರುವವರಾಗಿದ್ದರೆ ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಬಯಸಿದರೆ, ಚುನಾವಣಾ ಆಯೋಗವು (ECI) ನಿಮಗೊಂದು ಸಿಹಿ ಸುದ್ದಿ ನೀಡಿದೆ. ಇಸಿಐ ಪ್ರಕಾರ, ವಿದೇಶದಲ್ಲಿ ನೆಲೆಸಿರುವ ಮತ್ತು ಬೇರೆ ಯಾವುದೇ ದೇಶದ ಪ್ರಜೆಯಾಗಿಲ್ಲದ ಕೇವಲ ಭಾರತದಲ್ಲಿ ಮತದಾರರಾಗಲು ಅರ್ಹರಾಗಿರುವ ಭಾರತೀಯ ನಾಗರಿಕರು ಎನ್‌ಆರ್‌ಐ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಎನ್‌ಆರ್‌ಐ ಮತದಾರರಾಗಿ ನೋಂದಾಯಿಸುವುದು ಹೇಗೆ? ಮತದಾರನು ತನ್ನ ಪಾಸ್‌ಪೋರ್ಟ್‌ನಲ್ಲಿ ನಮೂದಿಸಲಾದ ಹೆಸರಿನ ಪ್ರಕಾರ ಎನ್‌ಆರ್‌ಐ ಅಡಿಯಲ್ಲಿ ಭಾರತದಲ್ಲಿನ ಮನೆ ಇರುವ…